ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎಷ್ಟು ಕಷ್ಟ ಬದುಕನ್ನು ಸ೦ಭಾಳಿಸುವುದು

ಮೂಲ: ನೋಷಿ ಗಿಲ್ಲಾನಿ(ಉರ್ದು)

ಕನ್ನಡಕ್ಕೆ: ಮೇಗರವಳ್ಳಿ ರಮೇಶ್

DopeDaydreamer — When I fill my soul with gratitude, my light...

ಎಷ್ಟು ಕಷ್ಟ ಬದುಕನ್ನು ಸ೦ಭಾಳಿಸುವುದು
ನಿನ್ನೊಡನೆ ಸ್ನೇಹ ಕುದುರಿಸುವಷ್ಟೇ!

ಸ೦ಪೂರ್ಣ ಹೊಸ ಕಥೆಯೆ ಇರಬಹುದು
ದಯವಿಟ್ಟು ವಿಷಯಕ್ಕೆ ಬಾ.

ಈ ನೆರಳುಗಳಲ್ಲಿ ನಾ ಮುಳುಗಬಹುದು
ದಯವಿಟ್ಟು ಬೆಳಗು ನಿನ್ನ ಕಣ್ಣ ದೀವಿಗೆಯ!

ನಿನ್ನ ದುಃಖವನ್ನರಿಯದೇ ಇದ್ದರೂ
ನೀ ದುಃಖಿಯಾದರೆ ಹೇಗನಿಸಬಹುದೆ೦ಬ ಕುತೂಹಲ ನನಗೆ.

ಹೃದಯ ಹಿ೦ಡಿ ಕೊಡ ಬೇಕು ರಕ್ತ!
ನೋಡು, ಬರೆಯ ಬೇಡ ಪದ್ಯ!

ಈ ಎಲ್ಲ ಅರ್ಥಗಳನ್ನುನಿರಾಕರಿಸುವುದು
ಎಷ್ಟು ಕಷ್ಟ ಗೊತ್ತ, ಈ ಆತ್ಮಕ್ಕೆ!

***********

ಮೇಗರವಳ್ಳಿ ರಮೇಶ್

About The Author

1 thought on “ಅನುವಾದ ಸಂಗಾತಿ”

Leave a Reply

You cannot copy content of this page

Scroll to Top