ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮಹಿಳಾದಿನದ ವಿಶೇಷ

ನಿಜರೂಪದ ಶಕ್ತಿಯರು ಪಾರ್ವತಿ ಸಪ್ನ ಬೀದಿ ಬೀದಿಗಳಲ್ಲಿ ಪಾಳು ಬಿದ್ದ ಮನೆಮಠಗಳಲ್ಲಿ…. ಹಾದಿ ಬದಿಯ ಪೊದೆಗಳಲ್ಲಿ ಬಂಜರು ನೆಲದ ಬಿರುಕುಗಳಲ್ಲಿ ಹಸಿರುಮರದ ನೆರಳುಗಳಲ್ಲಿ ಶಾಲೆಯ ಪವಿತ್ರ ಕೊಠಡಿಗಳಲ್ಲಿ ಕೇಕೆಗಳ ಸದ್ದು ಮುಗಿಲು ಮುಟ್ಟುವ ಉದ್ಯಾನವನಗಳಲ್ಲಿ ಕಗ್ಗತ್ತಲ ಭೀಕರ ರಾತ್ರಿಗಳಲ್ಲಿ ತಂಪೆರೆದ ಮುಸ್ಸಂಜೆಯ ಇರುಳಲ್ಲಿ ನೇಸರನ ಎದುರಲ್ಲಿ….. ಬೆಳದಿಂಗಳ ಬೆಳಕಲ್ಲಿ…. ಇಂದಿಗೂ ಹುಟ್ಟುತ್ತಿಹರು…. ಅದೆಷ್ಟೋ ನರರಾಕ್ಷಸರು…. ರಾವಣ, ದುರ್ಯೋಧನ, ದುಶ್ಯಾಸನರ ವಂಶಾವಳಿಗಳು ನೂರ ಎಂಟು ತಲೆಗಳಲ್ಲಿ…. ಹುಟ್ಟಿಗೂ ಹೆಸರಿಲ್ಲದೇ…. ಸಾವಿಗೂ ಬಿಡುವಿಲ್ಲದೇ…. ಕರುಳಬಳ್ಳಿಯ ಹೂವ ಅರಳುವ ಮುನ್ನ ಹಿಚುಕುವ ಕ್ರೂರ ಮನದ ಪಾತಕಿಗಳು ಹುಟ್ಟುತ್ತಲೇ….ಇದೆ… ರಾಕ್ಷಸ ಸಂತತಿಗಳು…. ಹುಟ್ಟುತ್ತಲೇ…..ಇದೆ ವಿಷಜಂತುಗಳು…… ಎಂದಾದರೂ ಹುಟ್ಟುವರೇ..? ರಾಕ್ಷಸನ ಮುಂಡವ ಚೆಂಡಾಡುವ ದುರ್ಗೆಯರು?? ವಿಷ ಜಂತುಗಳ ಎದೆ ಬಗೆಯುವ…ಕಾಳಿಯರು?? ಇನ್ನಾದರೂ ಹುಟ್ಟಲೀ ನಿಜರೂಪದ ಶಕ್ತಿಯರು…!! ********

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ಪ್ರಭಾವಿತ ಮಹಿಳೆ ಸಿಂಧು ಭಾರ್ಗವ್ ಕಷ್ಟಗಳ ಎದುರಿಸುತ ನಿಷ್ಠೆಯಲಿ ಜೀವನವ ಕಳೆಯುವ ಹೆತ್ತವ್ವ ನನಗೆ ಪ್ರಭಾವ ಬೀರಿದಳು ಹಿಡಿದ ಗುರಿಯ ಸಾಧಿಸಲು ಹಟದಿಂದ ಸಾಧನೆ ಮಾಡಿದ ಹಿರಿಯಕ್ಕ ನನಗೆ ಪ್ರಭಾವ ಬೀರಿದಳು ಗುರುಗಳ ಮಾರ್ಗದರ್ಶನದಲ್ಲಿ ವಿನಯದಿಂದ ವಿದ್ಯೆ ಕಲಿತು ಹಿರಿಯರ ಮೆಚ್ಚುಗೆ ಪಡೆದ ತಂಗಿ ನನಗೆ ಪ್ರಭಾವ ಬೀರಿದಳು ಇನ್ಫೋಸಿಸ್ ಸಂಸ್ಥೆಯ ಹುಟ್ಟುಹಾಕಿ ಸರಳ ಸಜ್ಜನಿಕೆಯಿಂದ ಸಂಸ್ಕೃತಿ, ಸೇವೆಯಲೇ ಬಾಳುವ ಸುಧಾ ಅಮ್ಮ ನನಗೆ ಪ್ರಭಾವ ಬೀರಿದರು ಹೆಣ್ಣು ಜಗಕೆ ಕಣ್ಣಾಗುವಳು ಒಳ ಕಂಗಳಿಂದ ನೋಡಿರಣ್ಣ ಅಹಂ ಇರುವ ಹೆಣ್ಣು ಎಂದಿಗೂ ಬೆಳಕಾಗಳಣ್ಣ, ಬಾಳು ಹೈರಾಣಾಗಿಸಲು ಹೆಣ್ಣೇ ಕಾರಣ ಬದುಕು ಬೆಳಗಿಸಲು ಅವಳೇ ಭೂಷಣ ತ್ಯಾಗ ಸಹನೆ ಹೊಳೆಯೋ ಎರಡು ಮುತ್ತುಗಳು ಅವಳ ಮನದ ಮುಕುಟದಲ್ಲಿ ಅರಳಿ ನಿಲ್ಲುತಿರುವುವು ಹೆಣ್ಣು ಮಗುವ ಹೊನ್ನಿನಂತೆ ಜೋಪಾನ ಮಾಡಿರಿ ತನ್ನತನವ ಮೆರೆದು ಬದುಕೋ ಅವಳಿಗೆ ಕೈಯ ಮುಗಿಯಿರಿ!! *****

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ನಾನೆಂದೂ ಓಡುವುದಿಲ್ಲ. ಚೈತ್ರ ಶಿವಯೋಗಿಮಠ ಒಂದ್ಹತ್ತು ಚಪಾತಿಯನು ತೀಡಿ ಕಾದ ಎಣ್ಣೆಯಲಿ ಸಾಸಿವೆ ಜೀರಿಗೆ ಚಟ ಪಟ ಎನಿಸಿ ಕರಿಬೇವು ಚೊರ್ ಎನಿಸಿ ಒಂದು ಪಲ್ಯ ಮಾಡಿ, ದೌಡಾಯಿಸಬೇಕಿದೆ ನನ್ನ ಕನಸುಗಳ ಬೆಂಬತ್ತಲು! ನಿಮ್ಮ ಉದರಕಾಗಿಯೇ ಮಾಡುವೀ ಮಹತ್ಕಾರ್ಯದಲಿ ಕೊಂಚ ಕೈ ಜೋಡಿಸಿ ತಪ್ಪೇನಿಲ್ಲ! ವಯಸ್ಸು ದೇಹಕ್ಕೆ ಹೊರತು ಮನಸ್ಸಿಗಲ್ಲ! ಒಂದೆರಡು ಸವಿಮಾತು ಒಂದು ಮುಗುಳುನಗೆ ಇವಿಷ್ಟೇ! ಬೀಳ್ಕೊಡಿ ನನ್ನನ್ನೂ ಒಂದು ದೊಡ್ಡ ದಿನ ನನ್ನ ಮುಂದಿದೆ! ಆಗೊಮ್ಮೆ ಈಗೊಮ್ಮೆ ಜೀನ್ಸ್ ಧರಿಸುವೆ! ತುಸು ತುಟಿಗೆ ಬಣ್ಣ ಹಚ್ಚಿ ಮುಂಗುರುಳ ತೀಡುವೆ ಅದಕ್ಕೂ ಗೊಣಗಬೇಡಿ “ಮಾರ್ಡರ್ನ್ ಮಾರಿ”ಎಂದು ಯಾಕೆಂದರೆ ನನಗೆ ಸೀರೆಯೇ ಇನ್ನೂ ಅಚ್ಚು ಮೆಚ್ಚು ನನಗೆ ಮಕ್ಕಳ ನೋಡಿಕೊಳ್ಳಲು ಕಿಂಚಿತ್ ಬೇಸರವಿಲ್ಲ! ಒಮ್ಮೊಮ್ಮೆ ನನಗಾಗಿ ಒಂದು ತಾಸು, ಒಂದೇ ಒಂದು ತಾಸು ಸಂಭಾಳಿಸಿ ಅವುಗಳನ್ನ ನನ್ನ ನೆಚ್ಚಿನ ಪುಸ್ತಕ ಹಿಡಿದು ಕಾಫೀ ಹೀರುವೆ! ಆಗೊಮ್ಮೆ ಈಗೊಮ್ಮೆ ಗೋಷ್ಠಿಗಳಿಗೆ ಹೋಗುವೆ, ಹೊಸ ವಿಚಾರಧಾರೆ ನನಗೂ ಹಿಡಿಸುವುದು. ಅನಾಯಾಸ ಮಹಿಳಾವಾದಿ, ಆ ವಾದಿ ಈ ವಾದಿಯೆಂದು ಮೂಲವ್ಯಾಧಿ ತರಿಸಿಕೊಳ್ಳಬೇಡಿ! ನನ್ನ ಬೇರುಗಳು ಗಟ್ಟಿಯಾಗೇ ಇವೆ! ಎಲ್ಲವನೂ ಸಂಭಾಳಿಸುವ ಶಕ್ತಿಯಿರುವ ನನ್ನ ಒಂದೇ ಕಡೆ ಸೀಮಿತಗೊಳಿಸಿ ಅಲ್ಲಿಗೆ ಅಂಟಿಸಲು ಪ್ರಯತ್ನಿಸದಿರಿ!! ಹಾಗಂತ ನನ್ನ ಜವಾಬ್ದಾರಿಗಳಿಂದ ನಾನೆಂದೂ ಓಡುವುದಿಲ್ಲ!! *********

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ಹಣತೆ ಹಚ್ಚುತ್ತಾಳೆ ಸುಮಂಗಳ ಮೂರ್ತಿ ಹಣತೆ ಹಚ್ಚುತ್ತಾಳೆ ಅವಳು ಪ್ರತಿದಿನವೂ,ತಿಂಗಳನಂತೆ ಮಬ್ಬುಗಟ್ಟಿದ ಕತ್ತಲನ್ನು ನಂದಿಸುವ ಸಲುವಾಗಿ ಹಣತೆ ಹಚ್ಚುತ್ತಾಳೆ ಅವಳು ಪ್ರತಿ ಕ್ಷಣವೂ,ಗೋವರ್ಧನ ಗಿರಿಯಂತೆ ಭರವಸೆಯ ಭತ್ತ ಅಂಕುರವಾಗುವ ಸಲುವಾಗಿ ಹಣತೆ ಹಚ್ಚುತ್ತಾಳೆ ಅವಳು ಪ್ರತಿ ಬೆಳಗೂ,ನೇಸರನ ನಗುವಂತೆ ಹೆಪ್ಪುಗಟ್ಟಿದ ನೋವನು ಕರಗಿಸುವ ಸಲುವಾಗಿ ಹಣತೆ ಹಚ್ಚುತ್ತಾಳೆ ಅವಳು ಪ್ರತಿ ಇರುಳೂ,ತಂಗಾಳಿಯಂತೆ ದಣಿದ ಮನಸ್ಸಿಗೆ ಮುಲಾಮಾಗುವ ಸಲುವಾಗಿ ಹಣತೆ ಹಚ್ಚುತ್ತಾಳೆ ಅವಳು ಪ್ರತಿ ಹೆಜ್ಜೆಗೂ,ಮಣ್ಣಿನ ಘಮದಂತೆ ಚಿತೆಗೆ ನೂಕಿದ ಚಿಂತನೆಯ ಹಾದಿಗೆ ದೀವಿಗೆಯಾಗುವ ಸಲುವಾಗಿ ಹಣತೆ ಹಚ್ಚುತ್ತಾಳೆ ಅವಳು ಪ್ರತಿ ಅಕ್ಷರದಲ್ಲೂ,ಜೀವಜಲದಂತೆ ಅರಿವಿನ ಹಸಿವಿಗೆ ಅನ್ನವಾಗುವ ಸಲುವಾಗಿ ಹಣತೆ ಹಚ್ಚುತ್ತಾಳೆ ಅವಳು ಪ್ರತಿ ಕನವರಿಕೆಯಲೂ,ತಾಯಿಯಂತೆ ಕುಟುಂಬದ ಘನತೆಯನ್ನು ಜೋಪಾನ ಮಾಡುವ ಸಲುವಾಗಿ ಹಣತೆ ಹಚ್ಚುತ್ತಾಳೆ ಅವಳು ಮಳೆ ಹನಿಗಳ ಚುಂಬನದಂತೆ ವಿಜ್ಞಾನದ ಬೆಳಕನು ಹರಡಿ ಮೌಢ್ಯದ ಕೊಳೆಯನು ತೊಳೆಯುವ ಸಲುವಾಗಿ ಹಣತೆ ಹಚ್ಚುತ್ತಾಳೆ ಅವಳು ನೆಲದವ್ವನ ಒಲವಂತೆ ಸಮಾನತೆಯ ಹರಿಸುವ ಸಲುವಾಗಿ ಹಣತೆ ಹಚ್ಚುತ್ತಾಳೆ ಅವಳು ಪ್ರೀತಿಯಿಂದ …… ಕರುಣೆಯಿಂದ…….. ಶಾಂತಿಯಿಂದ…….. ತಾನೇ ಸುಟ್ಟು ಕರಕಲಾದರೂ ಅರಿವಾಗದ ಅನಂತತೆಯಲಿ ಹಣತೆ ಹಚ್ಚುತ್ತಾಳೆ ಅವಳು! ಇಲ್ಲಿ ಎಲ್ಲವೂ ಬರಿದಾದರೂ ಹಣತೆಯ ಬೆಳಗು ಬೆರಗಾಗದೆ ಮೆರಗಾಗಲಿ ಎಂಬ ಧ್ಯೇಯದಿಂದ…. ಹಣತೆ ಹಚ್ಚುತ್ತಾಳೆ ಅವಳು! *******

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನ ವಿಶೇಷ

ಅವಳೆಂದರೆ.. ವಿನುತಾ ಹಂಚಿನಮನಿ ಬಿತ್ತಿರುವದ ಬೆಳೆಯುವ ಭೂಮಿ ಧರಣಿ ಕಸವಿರಲಿ ವಿಷವಿರಲಿ ಬೀಜದ ಭ್ರೂಣ ಅಂಕುರಿಸಲು ಒಡಲ ಕೊಡುವ ರಮಣಿ ಜೀವಜಲ ಎರೆಯುವ ಅಮೃತ ವರ್ಷಿಣಿ ಮೇಲು ಕೀಳೆನಿಸದೆ ಪಾಪ ತೊಳೆಯುವ ಜಾಹ್ನವಿ ತಪ್ಪುಗಳ ಒಪ್ಪಿ ಒಪ್ಪಿಕೊಳ್ಳುವ ಮಹಾಮಾಯಿ ಎಲ್ಲವನೂ ತನ್ನದಾಗಿಸಿಕೊಳ್ಳುವ ನೀಲಮಯಿ ಸೂರ್ಯ ಚಂದ್ರ ತಾರೆಯರಿಗೆ ಅಂಗಳವಾಗಿರುವ ಅನಂನ ಆಗಸದಂತ ವಿಶಾಲಮನದ ಪ್ರೇಮಮಯಿ ಕೆಡುಕ ಧಿಕ್ಕರಿಸಿ ಸುಡುವ ಮೋಹಿನಿ ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ ಕರುಣಾಮಯಿ ಅಸುರ ಮರ್ಧಿನಿ ಅಗ್ನಿ ಸ್ವರೂಪಿಣಿ ಜಗದ ಎಲ್ಲ ತೇಜಸ್ಸಿಗೆ ಕಾರಣೀಭೂತಳು ಚುಂಬಕ ಗುರುತ್ವ ಶಕ್ತಿಯ ಶಕ್ಕಿರೂಪಿಣಿ ಅವಳೆಂದರೆ ಸಾಕ್ಷಾತ್ ಪಂಚಭೂತಾಯಿ ರಕ್ತವ ಹಾಲಾಗಿಸಿ ಉಣಿಸುವಾಕಿ ಶಕ್ತಿಯ ಬೆವರಾಗಿಸಿ ಸೇವೆಗೈಯುವಾಕಿ ಮುಕ್ತ ಇಹ ಪರಕೆ ಬೇಕಿರುವಾಕಿ ಸೃಷ್ಟಿ ಕಾರ್ಯದಲಿ ಚತುರ್ಮುಖ ಬ್ರಹ್ಮನಂತೆ ಪೋಷಿಸುವಲ್ಲಿ ಕರುಣಾಳು ವಿಷ್ಣುವಿನಂತೆ ಕ್ಷಮಿಸುವಲ್ಲಿ ಸಹನಶೀಲೆ ಧರಿತ್ರಿಯಂತೆ ರವಿಚಂದ್ರರಿಂದ ಬೆಳಕ ಪಡೆದ ತಾರೆಗಳಂತಲ್ಲ ಅವಳ ವ್ಯಕ್ತಿತ್ವ ತನ್ನನು ತಾನು ಉರಿಸಿ ಬೆಳಗುವ ದೀಪ್ತಿ ********

ಮಹಿಳಾದಿನ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ನಾವು ನಿಮ್ಮ ಹಾಗಲ್ಲ ಸೌಜನ್ಯ ದತ್ತರಾಜ ಹೌದು ಖಂಡಿತಾ ನಾವು ನಿಮ್ಮ ಹಾಗಲ್ಲ ಪ್ರೀತಿಯಲ್ಲಿ ಸೋಲುವವರೂ ಸಂಸಾರವನ್ನು ಲೆಕ್ಕಾಚಾರದಲಿ ನಡೆಸುವವರು ನಾವು ಮನೆ ಒಳಗೆ ಮಹಾಭಾರತವೇ ನಡೆಯುತ್ತಿದ್ದರೂ ಮಂದಿ ಎದುರು ಮುಗುಳ್ನಗುವವರು ನಾವು ದೇಶ ದೇಶಾಂತರದ ರಾಜಕಾರಣಕ್ಕೂ ಮೊದಲು ಮನೆಮಂದಿಗಾಗಿ ಹೋರಾಡುವವರು ಬಡಿದಾಡುವವರು ನಾವು ದುಃಖವೆಷ್ಟೇ ಇದ್ದರೂ ತುಟಿಯ ರಂಗು ಕಣ್ಣಿನ ಕಾಡಿಗೆ ಕಡಿಮೆ ಆಗದಂತೆ ನೋಡಿಕೊಳ್ಳುವವರು ನಾವು ನಾವೇ ಶ್ರೇಷ್ಠವೆಂಬ ಹೆಮ್ಮೆ ನಮಗೆಂದಿಗೂ ಇಲ್ಲ ಆದರೂ ಹೆಣ್ತನದ ಸಂಭ್ರಮ ಅಷ್ಟು ಸುಲಭಕ್ಕೆ ದಕ್ಕುವಂತಹದ್ದಲ್ಲ ಹೌದು ಖಂಡಿತಾ ನಾವು ನಿಮ್ಮ ಹಾಗಲ್ಲ ********

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ಬೆಳಕಿನ ರಂಗೋಲಿ ಅಂಜನಾ ಹೆಗಡೆ ಏಳಯ್ಯ ಹನುಮಂತ ಎಷ್ಟು ನಿದ್ರೆ…. ಬಚ್ಚಲೊಲೆಯ ಮಸಿಬೂದಿ ಟೂತ್ ಪೌಡರ್ ಆಗಿ ಹೊಳೆವ ಹಲ್ಲು ಕೊರಳಗುಂಟ ಸುತ್ತಿಕೊಂಡ ಲಕ್ಷ್ಮಿತಾಳಿ ಸೆರಗೊಳಗೆ ಸೇರಿಸುತ್ತಾ ದೇವರನ್ನೆಬ್ಬಿಸುತ್ತಾಳೆ ಅಜ್ಜಿ ಅವಳ ಗಂಟಲು ನಡುಗುವುದಿಲ್ಲ ಹೂ ಬಿಡಿಸುತ್ತಿದ್ದಾಳೆ ಅಮ್ಮ ಒಲೆಯ ಮೇಲೆ ಕುದಿವ ನೀರಿನ ಶಾಖ ಅವಳ ಎದೆಗೆ ಇಳಿಯುವುದಿಲ್ಲ ಜೀನ್ಸ್ ಪ್ಯಾಂಟ್ ಸರಿಪಡಿಸುತ್ತ ಮೊಮ್ಮಗಳು ಬಣ್ಣದ ರಂಗೋಲಿ ಬಿಡಿಸುತ್ತಿದ್ದಾಳೆ ಅವಳ ನಗು ಮಾಸುವುದಿಲ್ಲ ಮಾರುತಿ ಮಂದಿರದ ಎದುರು ಕೈ ಮುಗಿದು ನಿಂತವಳ ಕೆಂಪು ನೈಲ್ ಪೋಲಿಶ್ ಹೊಳೆಯುತ್ತಿದೆ ಕಣ್ಣುಮುಚ್ಚಿ ಪ್ರಸಾದಕ್ಕೆ ಕೈಚಾಚಿದ್ದಾಳೆ ನವಗ್ರಹಗಳ ಸುತ್ತುವ ನುಣುಪಾದ ಪಾದಗಳು ಹೈ ಹೀಲ್ಸ್ ಮರೆತಿವೆ “ಚಪ್ಪಲಿಗಳನ್ನು ಸ್ಟ್ಯಾಂಡ್ನಲ್ಲಿಯೇ ಬಿಡಿ” ಚಪ್ಪಲಿರಾಶಿಯ ಮಧ್ಯದಲ್ಲಿ ಚಿಲ್ಲರೆ ಎಣಿಸುವವ ತಣ್ಣಗೆ ಕುಳಿತಿದ್ದಾನೆ…. ಜಗವ ಕಾಯುವ ಗತ್ತಿನಲ್ಲಿ ರಾತ್ರಿಪಾಳಿಯ ಕೆಲಸ ಮುಗಿಸಿ ಮೇಕಪ್ ಅಳಿಸುತ್ತ ಅವಳು ಮೆಲ್ಲಗೆ ಗುನುಗುತ್ತಾಳೆ…. ಮೆರೋ ಮನ ರಾಮ ಹೀ ರಾಮ ರಟೆ ಪಕ್ಕ ಕೂತು ಕೀಬೋರ್ಡ್ ಮೇಲೆ ಕೈಯಾಡಿಸುವವ ನೆನಪಾಗಿ ಬಂದು ತಲೆ ಸವರಿದ್ದಾನೆ ಕನಸಿನ ರಂಗೋಲಿ…. ಕೆನ್ನೆಮೇಲೊಂದು ಕರುಳಿನೊಳಗೊಂದು ಬಣ್ಣಬಣ್ಣದ ಎಳೆ ಏಳು ರಾಮನ ಬಂಟ ಬೆಳಗಾಯಿತು…. *****

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ಹೆಣ್ಣು ಮಾಯೆಯಲ್ಲ ರೇಖಾ ವಿ.ಕಂಪ್ಲಿ ಹೆಣ್ಣು ಮಾಯೆಯಲ್ಲ ಹೆಣ್ಣು ನಿನ್ನ ಛಾಯೆಯೂ ಅಲ್ಲ ಹೆಣ್ಣು ಕಣ್ಣಿಗಬ್ಬವು ಅಲ್ಲ ಹೆಣ್ಣು ಕಾಮ ತೃಷೆಯೂ ಅಲ್ಲ ಹೆಣ್ಣು ಬರೀ ತಾಯಿಯಲ್ಲ ಹೆಣ್ಣು ಹೊನ್ನ ಆಶಿಸುವವಳಲ್ಲ ಹೆಣ್ಣು ಹಣದ ಬೆನ್ನು ಅಲ್ಲ ಹೆಣ್ಣು ಮಂದಾರ ಪುಷ್ಪವಲ್ಲ ಹೆಣ್ಣು ಚೆಂದದ ಗೊಂಬೆಯಲ್ಲ ಹೆಣ್ಣು ಮುನಿಯುವ ಮಾರಿಯಲ್ಲ ಹೆಣ್ಣು ನಿನ್ನ ಅಡಿಯಾಳು ಅಲ್ಲ ಹೆಣ್ಣು ನಿನ್ನ ಬದಲಿಸುವ ಕಣ್ಣು ಹೆಣ್ಣು ಶಕ್ತಿ ತುಂಬುವ ಆಂತಾಯ೯ ಶಕ್ತಿಯೊಂದು ಗಂಡಾದರೇ ಜಗದ್ಯುಕ್ತಿಯಾದವಳೇ ಹೆಣ್ಣು ***********

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ಮುಖವಾಡ ದಾಕ್ಷಾಯಣಿ ನಾಗರಾಜ ಮತ್ತೆ ಮುಸ್ಸಂಜೆಯಲಿ ಮುಸುಕಿನ ಗುದ್ದಾಟ ಆಗಷ್ಟೇ ಮುದ್ದೆಯಾದ ಹಾಸಿಗೆಯಲಿ ನಲುಗಿದ ಹೂಗಳ ಅಘ್ರಾಣಿಸಿ ತಡಕಾಡುತ್ತೇನೆ ಒಂದಷ್ಟಾದರೂ ನಿನ್ನ ಪ್ರೀತಿ ಘಮಲು ಉಳಿದಿದೆಯೇ ? ಪ್ರತಿಸಾರಿಯಂತೆಯೇ, ರವಷ್ಟು ಕೂಡ ಮುಲಾಜಿಲ್ಲದೆ ರಾಚುತ್ತದೆ ಮೂಗಿಗೆ ತುಸು ಕಾಮ ಮತ್ತಷ್ಟು ಗೆದ್ದೆನೆಂಬ ನಿನ್ನ ಅಹಂ,, ಜಾರಿದ ಕಣ್ಣಹನಿಗೆ ಜತನದಿಂದ ನಗುವಿನ ಮುಖವಾಡ ತೊಡಿಸಿಬಿಡುತ್ತೇನೆ ನೀನಿಲ್ಲದ ಮತ್ತೊಂದು ಮುಸ್ಸಂಜೆಯಲಿ ಮುಖವಾಡ ಕಳಚಿಟ್ಟು ನಿಂದಿಸುತ್ತೇನೆ ಹೇ ನಿರ್ದಯಿ ಬದುಕೇ ಅದೆಷ್ಟು ಮುಖವಾಡಗಳ ತೊಡಿಸುವೆ? ಜಾರಿಸುತ್ತಾ ಕಂಬನಿಗಳ ,,,, *******

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ವಿಪ್ಲವದ ಪತಂಗ ಶೃತಿ ಮೇಲುಸೀಮೆ ವಯಸ್ಸಿನ್ನೂ ಹದಿನಾಲ್ಕು ಎತ್ತ ನೋಡಿದರೂ ಹರಡಿರದ ಮೈ.. ಸಿನಿಮಾ ಮೋಡಿಯೋ ಹದಿವಯಸ್ಸಿನ ಮಂಕೋ ಆಗಿತ್ತಂತೆ ಪ್ರೇಮ.. ಶಾಲೆಗೆ ಬಿಟ್ಟು ಬಿಟ್ಟು ಬರೋ ಚಾಳಿ ಶುರುವಾಯಿತು ಶಾಲೆ ಹೋಗಲ್ಲ ಅನ್ನೋ ಖಯಾಲಿ.. ಬಂಧು ಒಬ್ಬನಿದ್ದನಂತೆ ಬಾಂಧವ್ಯ ಬೆಸೆಯಲು ಸಾಕಿತ್ತು ಇಷ್ಟು ಹೆತ್ತವರಿಗೆ ಊದಿಸಿದರು ವಾಲಗವ ಅಕ್ಷರದ ಬೆಲೆ ತಿಳಿಯದ ಹಿರೀಕರು ಯಾರಿಗೂ ಗೊತ್ತಾಗದಂತೆ ಮದುವೆ ಆಗಿಯೇ ಹೋಯಿತು ಕಗ್ಗತ್ತಲಲ್ಲಿ ತಿಳಿದೂ ತಿಳಿಯದೆ ಬಿದ್ದಿದ್ದಾಗಿತ್ತು ಸಂಸಾರದ ಸುಳಿಗೆ.. ಈಗೇನಿದ್ರೂ ದುಡಿತ ಬಿಡುವಿಲ್ಲದ ಗಳಿಗೆ.. ಹಸಿದ ಮೈ ನೀಡಿಸಿತ್ತು ಹದನ ಚಟದ ವಸ್ತುವಾಗಿದ್ದಳು ಅಡಿಗಡಿಗೆ.. ಬದುಕಿನ ನೊಗ ಎಳೆಯಬೇಕಿತ್ತು ಪುಸ್ತಕ ಹೋರುವ ಹೆಗಲಿಲಿ ಮೃದು ವದನ ಹೊದ್ದಿತ್ತು ಭಾರ ಅಗಸನ ಬಟ್ಟೆ ಕತ್ತೆಯ ಬೆನ್ನಿಗೆನ್ನುವಂತೆ ಆಡುವ ಕೂಸಿಗೆ ಕಾಡುವ ಕೂಸು, ಕೊಂಕಳಲ್ಲಿ ಇರುಳಿನಲಿ ಕೊರಳಲಿ ದಾರ ಕಟ್ಟಿದ ಕೈ, ಹಿಂದೆ ತಬ್ಬಿದ್ದ ಕೈ, ಸೀರೆ ಕೊಡಿಸಿದ್ದ ಕೈ, ಮುದ್ದು ಮಾಡಿ ತುತ್ತು ನೀಡಿದ ಕೈ, ಕುಡಿತಕ್ಕೆ ಬಿದ್ದ ಕೈ, ದುಡ್ಡು ತಾ ತವರಿಂದ ಎಂದು ಬೆನ್ನಿಗೆ ಬಾಸುಂಡೆ ನೀಡಿ ನಡುರಾತ್ರಿಯಲಿ ಹೊರಹಾಕಿತ್ತು.. ಕಿವಿಯಲಿ ಹರಡಿತ್ತು ಬುದ್ಧಿ ಮಾತಿನ ದನಿ ನಾ ಮಾಡಿದ್ದು ತಪ್ಪೆಂದು ಅರಿತ ಕಣ್ಣು, ಸಂತೈಸುತ್ತಿತ್ತು ಮನವನು ಆಗಿದ್ದಾಗಿದೆ ಒಡಲಲಿದ್ದ ಹೆಣ್ಣನಾದರು ತಿದ್ದಿ ಬೆಳೆಸೋಣವೆಂದು… ಗೊತ್ತಿದ್ದು ಗೊತ್ತಿದ್ದು ಮತ್ತೇ ಮತ್ತೇ ಕೂಪಕ್ಕೆ ತಳ್ಳದೆ ಇನ್ನಾದರೂ ತಿದ್ದಿ ನೆಡೆಯುತ ಪೆದ್ದು ಮುದ್ದು ಹೃದಯಕೆ ತಿಳಿ ಹೇಳುತಾ ಬೆಳೆಸೋಣ.. **********

ಮಹಿಳಾದಿನದ ವಿಶೇಷ Read Post »

You cannot copy content of this page

Scroll to Top