ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮರಳಿ ಬಂದಿದೆ ಯುಗಾದಿ :-

Image result for images of bevu bella

ಹರೀಶ್ ಬಾಬು

ಹಣ್ಣೆಲೆ
ಉದುರಿ

ಚಿಗುರೆಲೆ
ಅರಳಿ

ನಗೆ ಬೀರಿವ ಪುಷ್ಪವರಳಿ

ನೂತನ ವರುಷ ಮರಳಿ

ಎಲ್ಲರ ತನು ಮನಗಳೊಡನೆ

ನಗೆಯಾ ಬೀರಿ ತಂದಿದೆ ಹರುಷ

ಯುಗ ಯುಗಾದಿ ಮರಳಿ

ಚೈತ್ರ ಮಾಸವ ತೆರಳಿ

ಬೇವು ಬೆಲ್ಲ ತಿನ್ನುತ್ತಾ

ಸಿಹಿ ಕಹಿಯಾ ಹೀರುತ್ತಾ

ದ್ವೇಷ ಮತ್ಸಾರ ತೊಲಗಿಸುತ್ತಾ

ಪ್ರೀತಿ
ಪ್ರೇಮವ ಹಂಚುತ್ತಾ

ನೂತನ ಯುಗದ ಆಗಮನದ ಸಂತೋಷ.

ದ್ವೇಷ ಅಸೂಯೆ ಮರೆಸಿ

ಎಲ್ಲರ ಮನದಲ್ಲಿ ಬಿತ್ತುತ್ತಿದೆ

ನೂತನ ಶೈಲಿಯಾ ಭಾವನೆಗಳ

ಕೂಡಿ ಬಾಳುವ ಭರವಸೆ ಬೆಳೆಸಿ

ಸೋದರತ್ವದ
ಜೀವನ ತಿಳಿಸಿ

ತಂದಿದೆ
ಮನದಲ್ಲಿ ನೂತನ ವರುಷ

ಚಿಗುರೆಲೆ
ಅರಳಿ ನಿಂತು

ತಂಪಾದ ಗಾಳಿ ಸೋಬನೆ ಹಾಡಿ

ಬಿಸಿಲ ತಾಪಕ್ಕೆ ತಂಪೆರೆದು

ಹೂಗಳು ಗಮಗಮ ಸುವಾಸನೆ ಬೀರಿ

ಬಯಲು ತುಂಬೆಲ್ಲಾ ಹಸಿರೇ ತಣಿಸಿ

ನೋಡುಗರ
ಮನಕ್ಕೆ ತಂದಿದೆ ಹರುಷ.

ಬಣ್ಣ ಬಣ್ಣದ ಉಡುಪುಗಳ ತೊಟ್ಟು

ರಂಗು ರಂಗಿನ ವಣ೯ಗಳ ಮನೆಗೆ
ಬಳಿದು

ತಳಿರು ತೋರಣಗಳಿಂದ ಬಾಗಿಲು ಸಿಂಗರಿಸಿ

ಚಿತ್ರ ವಿಚಿತ್ರದ ರಂಗೋಲಿ ಅಜಾರಕ್ಕೆ  ಹಾಕಿ

ಬೇವಿನೆಳೆ
ಮನೆ ಮೂಲೆ ಮೂಲ್ಗೆ ಸುಚ್ಚಿ

ಎಲ್ಲಿಲ್ಲದ
ಹಬ್ಬದ ಸಡಗರದ ಸಂತೋಷ .

ಹೋಳಿಗೆ
ತಿಂಡಿ ರುಚಿಯ ಸವಿಯುತ್ತಾ

ಬಗೆ ಬಗೆಯಾ ಭಾವನೆಗಳ ಅರಿಯುತ್ತಾ

ದುಡ್ಡಾಟ
ಕಿತ್ತಾಟ ತುಂಟಾಟ ಆಡುತ್ತಾ

ಕಷ್ಟ  ಸುಖಗಳನ್ನು
ವಿನಿಮಯಿಸುತ್ತಾ

ಸುಃಖ ದುಃಖಗಳನ್ನು ದೇವರ ಬಳಿ ಕೇಳುತ್ತಾ

ಇದುವೇ ನಮ್ಮೆಲ್ಲರ ಹಬ್ಬ  ದಿನಗಳ ಉಲ್ಲಾಸ

********

About The Author

Leave a Reply

You cannot copy content of this page

Scroll to Top