ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕರೋನ ದಿನಗಳು

Coronavirus in China. Novel coronavirus (2019-nCoV), people in white medical face mask. Concept of coronavirus quarantine vector illustration. Seamless pattern.

ರೇಶ್ಮಾ ಗುಳೇದಗುಡ್ಡಾಕರ್

ಕರೋನ ದಿನಗಳು

ತಿರುಗಾಟ ತಪ್ಪಿಸಿದೆ ಮನೆಯ
ಮಂತ್ರಾಲಯ ಮಾಡಿದೆ
ಊರೆಲ್ಲಾ ಲಾಕ್ ಡೌನ್ ಮಾಡಿದೆ
ಪ್ರಾಣಿ ಪಕ್ಷಿಗಳ ಸ್ವಂತಂತ್ರ ಹೆಚ್ಚಿಸಿದೆ

ಮೌನಕ್ಕೊಂದು ಅರ್ಥ ವಿದೆ ಎಂಬ
ಮಾತು ನಿಜವೆನ್ನಿಸಿದೆ
ಜನಜಂಗುಳಿಯಿಂದ ದೊರವಾಗಿ
ಅಂತರಂಗ ತೆರೆಯಲು ಅನುವು ಮಾಡಿದೆ

ಸಮಯದೊಂದಿಗೆ ಓಡುವ ನಮ್ಮನ್ನು
ಪ್ರೀತಿ ಪಾತ್ರರೊಡನೆ ಕಳೆಯಲು ಬಿಟ್ಟೆ
ನಮ್ಮಗಳ ಪರಿಚಯ ಮತ್ತೆ ನಮಗೆ
ಮಾಡಿಸಿದೆ

ನೋವಿನಲ್ಲೊ ನಗುವಿದೆ
ಆತಂಕದ ನೆರಳಿನಲ್ಲಿಯೂ ಬಲು
ರೋಮಾಚಕ ತಿರುವಿದೆ ಈ ಬದುಕಿನ
ಪಾಠ ಶಾಲೆ ಪ್ರತಿಯೊಬ್ಬರಿಗೊ ಉಚಿತವಿದೆ

ನಿನ್ನ ದೂರ ಮಾಡಲು ಹೋಗಿ
ನಮ್ಮವರಿಗೆ ಹತ್ತಿರವಾದೆವು
ಮೊಗೆದಷ್ಟು ನೆನಪುಗಳು ಗರಿ ಬಿಚ್ಚಿ
ನರ್ತಿಸಿದವು ವರ್ತಮಾನದ
ಕಟು ಸತ್ಯದ ಮುಂದೆ 

************

About The Author

Leave a Reply

You cannot copy content of this page

Scroll to Top