ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇನಿಯನೆಂದರೆ…

Man in Black Long-sleeved Shirt and Woman in Black Dress

ನಿರ್ಮಲಾ ಆರ್.

ಇನಿಯನೆಂದರೆ…

ಇರುಳಲಿ ನಗುವ ಚಂದಿರನು
ಬೆಳದಿಂಗಳಲಿ ನನ್ನೊಂದಿಗೆ ವಿಹರಿಸುವನು
ತಾರೆಗಳ ನಡುವಲಿ ಇರುವನು
ತಿಳಿ ಹಾಲಿನಂತಹ ಮನದವನು

ಇನಿಯನೆಂದರೆ…

ಆಗಸದಲಿ ಸದಾ ಮಿನುಗುವನು
ದೂರದಿಂದಲೇ ನನ್ಮನದ ಧನಿಯ ಕೇಳುವನು
ನನ್ನಂತರಾಳದ ಮಾತ ಅರಿಯುವನು
ಪ್ರತಿ ಇರುಳಲಿ ನನಗಾಗಿ ಬರುವನು

ಇನಿಯನೆಂದರೆ…

ಕನಸ ಕಾಣುವ ಕಂಗಳಿಗೆ ತಂಪನೆರೆವನು
ಕಂಡ ಕನಸಿಗೆ ಬಣ್ಣ ಹಚ್ಚುವನು
ಕಣ್ಣ ಕಾಡಿಗೆಯ ಕದಿಯುವನು
ಕಚಗುಳಿಯನಿಟ್ಟು ಕೆನ್ನೆಯ ರಂಗೇರಿಸುವನು

ಇನಿಯನೆಂದರೆ…

ಮನವೆಂಬ ಇಣುಕುವನು
ತಿಳಿಯ ನೀರಲಿ ಚಹರೆಯ ಬಿಂಬ ಬಿಟ್ಟವನು
ನಾ ಕಾಣುವ ಕನಸಲಿ ಪ್ರತಿದಿನ ಬರುವನು
ಕನಸಲಿ ಕನಸಾಗೇ ಉಳಿದವನು.

*****************

About The Author

Leave a Reply

You cannot copy content of this page

Scroll to Top