ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

multicolored heart wallpaper

ಶಶಿಕಾಂತೆ

ಇಂದು ನಿನ್ನೆಯದಲ್ಲ ನನ್ನ ನಿನ್ನ ಪ್ರೇಮ ಯಾವ ಜನ್ಮದ ಮೈತ್ರಿಯೋ ನಾಕಾಣೆ..
ಇನ್ನೆಂದಿಗೂ ನನ್ನನು ಬಿಟ್ಟು ದೂರ ಹೋಗಬೇಡಾ,ನಮ್ಮ ಪ್ರೀತಿ ಮೇಲಾಣೆ..

ತಿಳಿನೀರ ಕೊಳದಂತಿದ್ದ ಮನಸಲಿ ಒಲವೆಂಬ ಕಲ್ಲೆಸೆದು ಹೋದೆಯಲ್ಲಾ..
ಕೂತರೂ ನಿಂತರೂ ,ಮಲಗಿದರೂ ನಿನ್ನದೇ ಧ್ಯಾನ ,ತಾಳಲಾರೆ ಈ ಭವಣೆ..

ಕುಡಿನೋಟ ನೀ ಬೀರಿದಾಗಿ ನಾಚಿನಾಚಿ ಕೆಂಪುಕೆಂಪು ಸೇಬಾಯ್ತು ನನ್ನ ಕೆನ್ನೆ..
ಯಾರನ್ನೂ ಒಪ್ಪದ ಮನಸು ನಿನಗೊಲಿ ಯಲು ಕಾರಣ ನಿನ್ನ ಸ್ನೇಹ ಸಂಭಾಷಣೆ..

ಕಣ್ಣಿಗೆ ಕಾಣ್ಣದ್ದು ಹೃದಯಕ್ಕೆ ತಿಳಿಯಲು ತಡವಿಲ್ಲ. ನಿನ್ನ ಪ್ರೀತಿ ನನಗರಿವಾಯ್ತು..
ನಿನ್ನ ನೆನಪಲ್ಲಿ ,ಭವಿಷ್ಯದ ನೆಪದಲ್ಲಿ ನನಗಾಯ್ತು ರಾತ್ರಿಯೆಲ್ಲಾ ಜಾಗರಣೆ..

ಹೆದರುವಂತಹುದೇನೂ ಇಲ್ಲ ನಿನ್ನ ಬೆಂಬಲ ಸದಾ ನನ್ನ ಜೊತೆಗಿರುವಾಗ..
ನನ್ನ ಕಂಡರೆ ನಗುವ ಆ ಶಶಿಗೆ ನಾನೇಕೆ ಕೊಡಬೇಕು ನಮ್ಮ ಪ್ರೀತಿಯ ವಿವರಣೆ..

********

About The Author

1 thought on “ಕಾವ್ಯಯಾನ”

  1. ಪಾರ್ವತಿ ಸಪ್ನ

    ಸಂಗಾತಿಯಲ್ಲಿ ನಿಮ್ಮ ಕವನ ಓದುವ ಅವಕಾಶ ಸಿಕ್ಕಿತು ಅಭಿನಂದನೆಗಳು ಶೈಲಕ್ಕ ಧನ್ಯವಾದಗಳು ಮಧು ಸರ್

Leave a Reply

You cannot copy content of this page

Scroll to Top