ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಯಾರು ಯಾರಿಗೆ

Image result for image of painting on cruelty on women

ರೇಖಾ.ವಿ.ಕಂಪ್ಲಿ

ಹೂಳುವ ಭೂಮಿಯನು ಹಾಳು ಮಾಡಿತಾ
ಮನೆ ಮಠ ಮಸೀದಿ ಮಂದಿರ ಮಹಾಲ್ಗಳನು ಕಟ್ಟಿದರು…..
ಯಾರು ಅವರು ಯಾರು? ಯಾರಿಗೆ ಯಾರು ಅಲ್ಲದ ಮಾನವರು……..

ಜಾಗತೀಕರಣದ ಜಾಗಟೆ ಮೊಳಗಿಸಿ ಜಾಗೃತಿ ಹೆಸರಲಿ ಜನಜೀನವದ ರಸವೀರಿದರು……..
ಯಾರು ಅವರು ಯಾರು? ಯಾರಿಗೆ ಯಾರು ಅಲ್ಲದ ಮಾನವರು……..

ಬಿರುಸು ಮಾತುಗಳ ಹುರುಪು ಹಚ್ಚುತ್ತಾ
ತಮ್ಮ ತಮ್ಮ ಬೆಳೆ ಬೆಯಿಸಿಕೊಂಡರು…….
ಯಾರು ಅವರು ಯಾರು? ಯಾರಿಗೆ ಯಾರು ಅಲ್ಲದ ಮಾನವರು……..

ರಂಗುರಂಗಿನ ಮಾತಿನಲಿ ಸೆಳೆಯುತ
ಚಪಲದ ಉಪಟಳವ ತೀರಿಸಿಕೊಂಡರು……..
ಯಾರು ಅವರು ಯಾರು? ಯಾರಿಗೆ ಯಾರು ಅಲ್ಲದ ಮಾನವರು……..

ಹಣದ ಆಸೆಗೆ ಹೆಣದ ಮೇಲೆಯೂ
ಹೆಗ್ಗಿಲ್ಲದೆ ಅತ್ಯಾಚಾರ ಎಸಗಿದರು…………
ಯಾರು ಅವರು ಯಾರು? ಯಾರಿಗೆ ಯಾರು ಅಲ್ಲದ ಮಾನವರು……..

**********

About The Author

Leave a Reply

You cannot copy content of this page

Scroll to Top