ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದ್ವೇಷ..

Image result for images of woman in fire

ಶ್ವೇತಾ. ಎಂ.ಯು.

ದ್ವೇಷವಿಲ್ಲ ಸುಡಲು
ಬೆಂಕಿ ಮಾತ್ರ ಇದೆ
ನಿಮ್ಮ ಊರಿನ ಉಲ್ಕಾಪಾತಗಳ
ಉಸಿರುಗಟ್ಟಿಸೋಣವೆಂದರೆ
ಪ್ರಾಣವಾಯು ಹೊರತು ಮತ್ತೇನೂ ಉಳಿದಿಲ್ಲ;

ಆಸೆಗಣ್ಣುಗಳಲಿ ನೀವು ತುಂಬಿಕೊಂಡರೆ ನನ್ನ
ನಗಬೇಕು ಎನಿಸುತ್ತದೆ,
ಸುಮ್ಮನಾಗುತ್ತೇನೆ
ರಂಜಕ ಹಾಕಿ ಸುಡುವ ಮನಸಾದರು
ಕಣ್ಣುಗಳು ನೋಡಿಕೊಳ್ಳಲಿ
ಒಮ್ಮೆ ನಿಮ್ಮನ್ನೇ
ಎಂಬ ಆಸೆಯಿಂದ..

ಬಾಯಾರಿದರೆ ಕುಡಿಯ ಬೇಕು ನೀರು;
ಕೊಳದಲ್ಲಿ ಈಜುವುದು
ಕೊಳಕಾದವರು ಮಾತ್ರವೇ ?
ಇಲ್ಲದಿರಬಹುದು ನಾಲಗೆಗೆ ಎಲುಬು
ಹೃದಯಕ್ಕೆ ದಾರಿಗಳಿವೆ
ಸಂಯಮವೇ ಸಂಬಂಧ
ಗುಣಗಳೇ ಬೆಳಕು
ನಗುವಿಗೆ ಹಲವು ಮುಖ
ಬದಲಿ ಇಲ್ಲ ಜೀವಕ್ಕೆ

ಕತ್ತರಿಸಿದರೆ ಕರುಳ ಬಳ್ಳಿ
ಬಳ್ಳಿಯೊಳಗಣ ಬಳ್ಳಿ
ನಿನ್ನ ಹೂ ಬಳ್ಳಿ ನೀನೂ ಹಾಗೆ ನಾನು
ಎಲ್ಲರೊಳಗೊಂದು ಜೀವ
ಅದಕೆ ಹೆಸರು ಬೇರೆ ಬೇರೆ
ಒಂದೇ ಅರ್ಥ ಅದು ಹೆಣ್ಣು !

*******

About The Author

2 thoughts on “ಮಹಿಳಾದಿನದ ವಿಶೇಷ”

  1. MADHUSUDAN B L

    ಮಹಿಳಾ ದಿನಾಚರಣೆ ಶುಭಾಶಯ. ಕವಿತೆ ಅರ್ಥಗರ್ಭಿತ

    1. ಶ್ವೇತಾ ಎಂ.ಯು

      ಧನ್ಯವಾದಗಳು ಸರ್ ತಮ್ಮ ಪ್ರೋತ್ಸಾಹ ನುಡಿಗಳಿಗೆ

Leave a Reply

You cannot copy content of this page

Scroll to Top