ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಅನುವಾದ ಸಂಗಾತಿ

“ದುಃಖ” ಮೂಲ ಸುಮನಾ ರಾಯ್(ಇಂಗ್ಲೀಷ್) ಕನ್ನಡಕ್ಕೆ:ಕಮಲಾಕರ ಕಡವೆ “ದುಃಖ” ದುಃಖ ಒಂದು ಬಿಳಿ ಆಕಳ ಮೇಲೆ ಕೂತ ಬಿಳಿ ಕೊಕ್ಕರೆಒಂದು ಮಾತ್ರ ಇನ್ನೊಂದರ ತೂಕ ಸಹಿಸ ಬಲ್ಲದು ದುಃಖ ನದಿತೀರದ ಬಿಳಿ ಮರಳುಅದು ಒದ್ದೆಯಾಗಿದ್ದಾಗಲೂ ಬಿಳಿಯೇ. ದುಃಖ ಬೇಲಿ ಮೇಲಣ ಬಿಳಿ ದಾಸವಾಳಅದಕ್ಕೆ ಬಿಳಿ ಮೊಗ್ಗು, ಬಿಳಿ ಹೆಣ. ದುಃಖ ಮಂಜು-ಮುಸುಕಿದ ಮರ, ಬಿಳಿ ರೆಪ್ಪೆಗೂದಲುಅದರ ಹೆಣೆಗಳು ತಮ್ಮದೇ ತೂಕದಿಂದ ಜೋಲುತ್ತವೆ. ದುಃಖ ಕಾಡಾನೆಯ ದಂತ, ಚೂಪು, ವರ್ಷಾನುವರ್ಷಗಳ ಶೇಖರಣೆಅದರ ಸೌಂದರ್ಯ, ಶೋಭೆ ದೂರದಿಂದ ಮಾತ್ರ. ದುಃಖ ಕಣ್ಣ ಬಿಳಿಪಾಪೆ, ನೋವು ತೊಟ್ಟಿಕ್ಕುವ ಪರದೆಅದು ತನ್ನ ತಾ ತೊಳೆದು, ಕೆಂಪಾಗಿ, ಮತ್ತೆ ಬಿಳಿಗೆ ತಿರುಗುತ್ತದೆ ದುಃಖ ಒಂದು ಸಂಗ್ರಹಾಲಯ, ಬಿಳಿ ಗೋಡೆ ಮೇಲಿನ ಚಿತ್ರಗಳುನಾವದನು ಬಿಟ್ಟರೂ, ಅದು ಬಿಡದು ನಮ್ಮನು ************ Sadness Sadness is a white crane on a white cow.Only one can bear the weight of another. Sadness is white sand on a river bank.It is white even when wet. Sadness is white hibiscus resting on a fence.It has a white bud and a white corpse. Sadness is a snow-covered tree, eyelashes of white.Its branches droop with its own weight. Sadness is a wild elephant’s tusk, sharp, a deposition of years.It has beauty and grace only from a distance. Sadness is the sclera, the screen from which hurt drips.It washes itself, tinges red and becomes white again. Sadness is a museum, pictures on white walls.You leave it but it never leaves you. ***********

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಕೊಡುವುದಾದರೂ ಯಾರಿಗೆ? ವಿಜಯಶ್ರೀ ಹಾಲಾಡಿ ಹೌದು ಈ ಪ್ರೀತಿಯನ್ನು ಮೊಗೆಮೊಗೆದು ಕೊಡುವುದಾದರೂ ಯಾರಿಗೆ ? ನೇರಳೆಮರಕ್ಕೆ ಅಳಿಲಿಗೆ ಬೆಚ್ಚನೆ ಗೂಡಿನ ಹಕ್ಕಿಗೆ ? ಹೆಣ್ತನದ ಪರಿಧಿಗೆ ಎಂದೂ ದಕ್ಕದ ಮುಖ –ಮುಖವಾಡಗಳು … ರಾತ್ರಿ -ಹಗಲುಗಳನ್ನು ಗೆಜ್ಜೆಕಾಲಿನಲ್ಲಿ ನೋಯಿಸಲೆ … ಯಾತನೆಯನ್ನು ನುಂಗುತ್ತಿರುವೆ ಸಂಜೆಯ ಏಕಾಂತಗಳಲ್ಲಿ ಹೆಪ್ಪುಗಟ್ಟಿದ ಇರುಳುಗಳಲ್ಲಿ .. ಬೊಗಸೆಯೊಡ್ಡಿದ್ದೇನೆ ಮಂಡಿಯೂರಿದ್ದೇನೆ ಹಟಮಾರಿ ಕಡಲಾಗಿದ್ದೇನೆ.. ತರ್ಕಕ್ಕೆ ನಿಲುಕದ ಗಳಿಗೆ -ಗಳಲ್ಲಿ ಒಂಟಿಹೂವಂತೆ ನಿಂತುಬಿಟ್ಟಿದ್ದೇನೆ .. ಲೆಕ್ಕವಿಟ್ಟಿಲ್ಲ ಕೋಗಿಲೆ ಹಾಡಿದ ಹಾಡುಗಳನ್ನು… ಉದುರಿಬಿದ್ದ ಗರಿಗಳನ್ನು ಮತ್ತೆ ಹುಟ್ಟಿಸಿಕೊಳ್ಳಲು ಸಾಧ್ಯವಾಗುವುದಾದರೆ ಪ್ರೀತಿಯಿಂದ ಆರ್ತಳಾಗಿದ್ದೇನೆ. (ಚಿತ್ರಕೃಪೆ-ವಿಜಯಶ್ರೀ ಹಾಲಾಡಿ)

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ತುಮುಲ ಬಿ.ಎಸ್.ಶ್ರೀನಿವಾಸ್ ಬಿಟ್ಟು ಬಿಡಬೇಕು ಬಗ್ಗಡದ ನೀರನ್ನು ತನ್ನಷ್ಟಕ್ಕೆ ತಾನೇ ತಿಳಿಯಾಗಿ ಪ್ರತಿಬಿಂಬ ತೋರಿಸುವವರೆಗೂ ಹರಿಯಬಿಡಬೇಕು  ಯೋಚನೆಗಳ ಕಡಿವಾಣವಿಲ್ಲದ ಕುದುರೆಯನ್ನು ಓಡಲಾಗದೆ ತಾನೇ ನಿಲ್ಲುವವರೆಗೂ ಸುರಿಸಿಬಿಡಬೇಕು ಕಂಬನಿ ಮನದ ಬೇಗುದಿಯೆಲ್ಲ ಕರಗಿ ಶಾಂತಿ ನೆಲೆಸುವವರೆಗೂ ನಡೆದು ಹೋಗಲಿ ಪ್ರಳಯ ಪರಶಿವನ ತಾಂಡವ ನೃತ್ಯ ಭ್ರಮೆಗಳೆಲ್ಲ ಭಸ್ಮವಾಗುವವರೆಗೂ ಕರಗಿದಾ ಕತ್ತಲಲಿ ಬಸವಳಿದ ಮೈಮನಕೆ ಗಾಢನಿದ್ರೆಯು ಆವರಿಸಬೇಕು ಮುಂಜಾನೆ ಹಕ್ಕಿ ಚಿಲಿಪಿಲಿ ಅರುಣೋದಯ ರಾಗದಲಿ ಹೊಸಬೆಳಕು ಮೂಡಬೇಕು ********

ಕಾವ್ಯಯಾನ Read Post »

You cannot copy content of this page

Scroll to Top