ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಆ ಗುಡಿಗಳಲ್ಲಿ ಜ್ಯೋತಿ ಡಿ.ಬೊಮ್ಮಾ. ಆ ಗುಡಿಗಳಲ್ಲಿ.. ಪರದೆ ಹಾಕಿದ ಗರ್ಭಗುಡಿಯೊಳಗೆ ಅರ್ಚಕರು ದೇವಿಯ ಮೈ ಮುಟ್ಟಿ ಬಟ್ಟೆ ಬದಲಾಯಿಸಿ ,ಬೊಟ್ಟಿಟ್ಟು,ಸಿಂಗರಿಸಿ ಹೊರಗೆ ದರ್ಶನಕ್ಕೆ ನಿಂತ ಸ್ತ್ರೀಯರನ್ನೂ ಮುಟ್ಟಿಸಿಕೊಳ್ಳದೆ ಮೆಲಿಂದಲೆ ಎಸೆದ ಪ್ರಸಾದವನ್ನೂ ಭಕ್ತಿಯಿಂದ ಸ್ವೀಕರಿಸಿ,ಕಣ್ಣಿಗೊತ್ತಿಕೊಂಡು ಪರವಶರಾಗಿ ದೇವಿಯೆಡೆ ನೋಡಿದಾಗ.. ಮೂಕಳಾಗಿ ನಿಂತ ದೇವಿಯೂ ನಿಟ್ಟುಸಿರು ಹಾಕುತಿದ್ದಳು ಒಳಗೊಳಗೆ ಬೇಯುತ್ತ ಕೇಳುವಂತಿತ್ತು ನೋಟ ನಿಮ್ಮೊಳಗಿರದ ಅದಾವ ಶಕ್ತಿ ದೇವಾಲಯದಲ್ಲಿದೆ. ಮುಟ್ಟಾದವರೂ ದೇವರನ್ನೂ ಮುಟ್ಟಬಾರದು ಎಂಬ ಸಂಪ್ರದಾಯದಿಂದ ದೇವಿಯೂ ನಡುಗುವಳು ತನ್ನೊಳಗೂ ಸ್ರವಿಸುವ ಸ್ರಾವ ಕಾಣದಂತೆ ತಡೆಗಟ್ಟುವದು ಹೇಗೆಂದು ತಿಳಿಯದೆ.. ಹೋಗಲಿ ಬಿಡಿ ಮುಟ್ಟಬೇಡವೆಂದಮೇಲೆ ಮುಟ್ಟುವ ಹಠವೇಕೋ ಮುಟ್ಟಿದ ತಕ್ಷಣ ಸಮತೆ ಕನಸು ನನಸಾಗುವದೇ..! ಮುಟ್ಟಿನ ಮಡುವಿನಲ್ಲಿ ಈಜಾಡಿ ಧರೆಗೆ ಬಿದ್ದ ಕ್ಷಣದಿಂದಲೆ ಶ್ರೇಷ್ಠರೆನಿಸಿಕೊಂಡ ಅವರೇ ತುಂಬಿರಲಿ ದೇವಸ್ಥಾನದೋಳಗೆ. ಆ ಗುಡಿಗಳಲ್ಲಿ ಅರ್ಚಕರ ಆಟದ ಬೋಂಬೆಯಾದ ಶಿಲೆಗಳು ಸನ್ನೆ ಮಾಡುತಿವೆ ನಮಗೆ.. ಹೋಗು ಬರದಿದ್ದರೆ ನಷ್ಟವೇನಿಲ್ಲ.. ನಿನ್ನ ದೇಹವೇ ದೇಗುಲವಾಗಿಸಿಕೋ.. ನನ್ನನ್ನು ಅಲ್ಲೆ ಪ್ರತಿಸ್ಟಾಪಿಸು..ಎಂದು. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕೆಂಚಬೆಕ್ಕಿಗೆ ಏನಾಯ್ತು ವಿಜಯಶ್ರೀ ಹಾಲಾಡಿ ಕೆಂಚಬೆಕ್ಕಿಗೆ ಏನಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡಗಡ ಚಳಿಗೆ ಬಿಸಿ ಬಿಸಿ ಬೋಂಡಾ ಪಾಕಂಪಪ್ಪನು ತಿಂದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಇರುವೆ ಸಾಲನು ಹಾ….ರಿ ನೆಗೆದು ಪುಟ್ಟಿಯ ಮನೆಗೆ ಬಂದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಮೀನಿನ ಮುಳ್ಳು ದೊಂಡೆಗೆ ಸಿಕ್ಕಿ ಕೆಮ್ಮಿ ಕೆಮ್ಮಿ ಸುಸ್ತಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡವ ಬೆಕ್ಕು ಹೊಯ್ ಕಯ್ ಮಾಡಿ ಕಾಲಿನ ಮೂಳೆ ಮುರಿದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಟ್ರಾಫಿಕ್ ಜಾಮಲಿ ರಸ್ತೆಯ ಕಾದು ಬೋರೂ ಬೋರು ಹೊಡೆದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ನೆತ್ತಿಗೆ ಸಿಟ್ಟು ಸರ್ರನೆ ಏರಿ ಬಾಗಿಲು ಜಡಿದು ಮಲಗಾಯ್ತು.. ********************

ಕಾವ್ಯಯಾನ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ನಕ್ಷತ್ರದಂತವಳನ್ನು ಪ್ರೀತಿಸಿದ ಕವಿಯ ಕಥೆ ಕು.ಸ.ಮದುಸೂದನ ನಕ್ಷತ್ರದಂತವಳನ್ನು ಪ್ರೀತಿಸಿದ ಕವಿಯ ಕಥೆ! ನಕ್ಷತ್ರದಂತವಳನ್ನು ಪ್ರೀತಿಸಿದ ಕವಿಯ ಕಥೆ! ಬರೆಸಿಕೊಳ್ಳಲು ಕವಿತೆ ಒಪ್ಪದಿದ್ದಾಗ ಗದ್ಯದತ್ತ ಮುಖ ಮಾಡಲು ಮನಸು ಒಲ್ಲೆಂದಾಗಲೆಲ್ಲ ಅವನು ಮಾಡುತ್ತಿದ್ದುದು ಒಂದೇ ಕೆಲಸ ಅವಳಿಗೆ ಪ್ರೆಮಪತ್ರಗಳನ್ನು ಬರೆಯುತ್ತಿದ್ದು. ಅವನೇನು ಆ ಪತ್ರಗಳನ್ನು ಪ್ರಿಯೆ ಎಂದೊ ಇಲ್ಲಾ ಅವಳ ಹೆಸರಿನಿದಲೋ ಶುರು ಮಾಡುತ್ತಿರಲಿಲ್ಲ ಪ್ರತಿ ಪತ್ರವೂ ಹಿಂದಿನ ಪತ್ರದ ಮುಂದುವರಿಕೆಯಂತಿರುತ್ತಿತ್ತು ಅಲ್ಲಿಯೂ ಅವನೇನು ಅವಳನ್ನು ಚಿನ್ನ ರನ್ನ ಎಂದು ಮುದ್ದಿಸುತ್ತಿರಲಿಲ್ಲ. ಕಳೆದ ರಾತ್ರಿಯ ತನ್ನ ಒಂಟಿತನದ ಬಗ್ಗೆ, ಈಗೀಗ ಹೆಚ್ಚುಹಣವಿಲ್ಲದ್ದರಿಂದ ತಾನು ತರುತ್ತಿರುವ ಅಗ್ಗದ ಮದ್ಯದಬಗ್ಗೆ ಅದೂ ಕಲಬೆರಕೆಯಾಗುತ್ತಿರುವ ಬಗ್ಗೆ ಈಗ ತಾನಿರುವ ಮನೆಯ ಕೋಣೆಗಳಿಗೆ ತಿಳಿಗುಲಾಬಿಯ ಬಣ್ಣ ಬಳಿಸಿ ನವೀಕರಣಗೊಳಿಸುತ್ತಿರುವ ಬಗ್ಗೆ ಅಂಗಳದ ತುಂಬೆಲ್ಲ ಗುಲಾಬಿಹೂಗಳ ಹೊಸ ಹೂಕುಂಡಗಳ ತಂದಿಡುವ ತನ್ನ ಯೋಜನೆಗಳ ಬಗ್ಗೆ ಅದಕ್ಕಾಗಿಯೇ ತಾನು ಸ್ವಲ್ಪಸ್ವಲ್ಪ ಹಣ ಉಳಿಸುತ್ತಿರುವ ಬಗ್ಗೆ ಈ ದಾವಂತದಲ್ಲಿ ಎಷ್ಟು ಕುಡಿದರೂ ಏರದ ನಿಶೆಯ ಬಗ್ಗೆ ತಾನು ಬರೆಯಲಿಚ್ಚಿಸಿದ್ದ ಅವಳ ಮೇಲಿನ ಅದೊಂದು ಅದ್ಬುತ ಪ್ರೇಮಕಾವ್ಯದ ಬಗ್ಗೆ ಪ್ರತಿಬಾರಿ ಅದನ್ನು ಪ್ರಾರಂಭಿಸಲು ಹೊರಟಾಗಲು ತನ್ನದೇ ಸಾವಿನ ಚರಮಗೀತೆಯ ಸಾಲುಗಳು ಮೂಡಿ ತಾನು ಗಲಿಬಿಲಿಗೊಳ್ಳುವುದರ ಬಗ್ಗೆ ಮತ್ತು ಮುಂದೊಂದು ದಿನ ಅಜರಾಮರವಾಗಿರಬಹುದಾದ ಪ್ರೇಮ ಕಾವ್ಯವ ಬರೆದು ಅವಳಿಗರ್ಪಿಸುವ ತನ್ನ ಕನಸಿನ ಬಗ್ಗೆ ಬರೆಯುತ್ತ ಹೋಗುತ್ತಿದ್ದ. ಹೀಗೆ ಎಷ್ಟೋ ವರುಷಗಳ ಕಾಲ ಅವನು ಬರೆಯುತ್ತಲೇ ಹೋದ ಪತ್ರಗಳ ಲಕೋಟೆಯೊಳಗಿಟ್ಟು ಅಂಚೆಗೂ ಹಾಕದೆ ತನ್ನ ಕೋಣೆಯ ಕಪಾಟಿನಲ್ಲಿ ಜೋಡಿಸಿಡುತ್ತಲೇ ಹೋದ. ಅದೊಂದು ದಿನ ಅವನು ಸತ್ತಾಗ ಅಂತ್ಯಕ್ರಿಯೆ ಮಾಡಲು ಅವನ ಬಂದುಗಳು ಯಾರೂ ಇಲ್ಲವೆಂದಾದಾಗ ಸದ್ಯ ಅವನನ್ನು ಸುಡಲು ಸೌದೆಗೆ ಹಣವನ್ನು ಸರಕಾರ ಖರ್ಚು ಮಾಡಬೇಕಿಲ್ಲವಲ್ಲ ಎಂದುಕೊಂಡ ನಗರಸಭೆಯ ಅಧಿಕಾರಿಗಳು ಸಮಾದಾನದ ನಿಟ್ಟುಸಿರು ಬಿಟ್ಟರು ಈಗಲೂ ಅವನ ಪಕ್ಕದ ಊರಿನ ಅಂಚೇ ಕಚೇರಿಗೆ ಪ್ರತಿನಿತ್ಯ ಬಂದು ನಿಲ್ಲುವ ಅವಳು ನನಗೇನಾದರು ಕಾಗದವಿದೆಯೇ? ಎಂದು ಅಂಚೆಯವನನ್ನು ಕೇಳಿ ನಿರಾಸೆಯಿಂದ ತಲೆತಗ್ಗಿಸಿ ಹೋಗುತ್ತಾಳೆ. ******** ..

ಕವಿತೆ ಕಾರ್ನರ್ Read Post »

You cannot copy content of this page

Scroll to Top