ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಈ ಚಳಿಗೆ ದಯೆಯಿಲ್ಲ. ದಾಕ್ಷಾಯಿಣಿ ವಿ ಹುಡೇದ ಈ ಚಳಿಗೆ ದಯೆಯಿಲ್ಲ… ಈ ಚಳಿಗೆ ದಯೆಯಿಲ್ಲ ;ಬೀಸಿ ತಂಗಾಳಿಮಂಜನು ಉದುರಿಸಿಪಕ್ಕೆಲುಬುಗಳಲಿ ನಡುಕ ಹುಟ್ಟಿಸಿಹೊಕ್ಕಳ ನಡು ಮಧ್ಯದಿಂದ ನಿನ್ನ ನೆನಪಿಗೆ ಆಹ್ವಾನ ನೀಡಿದೆ. ಈ ಚಳಿಗೆ ದಯೆಯಿಲ್ಲ ;ನಿನ್ನ ಬಿಸಿಯಪ್ಪುಗೆಯಬಿಸುಪಿಗೆ ಸವಾಲೊಡ್ಡಿಸೆಣಸಾಡಿ ಸೋತದ್ದಕ್ಕೀಗಸೇಡು ತೀರಿಸಿಕೊಳ್ಳುತ್ತಿದೆ,ಒಂಟಿ ಹೆಣ್ಣ ಕಣ್ಣ ಕಾಡಿದೆಅಪ್ಪಿ ನನ್ನನೇ ಬೇಡಿದೆ. ಈ ಚಳಿಗೆ ದಯೆಯಿಲ್ಲ ;ನೀನಿಲ್ಲದ ಈ ಘಳಿಗೆಗಳಲ್ಲಿಇದನ್ನೆಲ್ಲ ಎದುರಿಸುವವಿಫಲ ಯತ್ನ ನಡೆದೇ ಇದೆ ;ವ್ಹಿಸ್ಕಿ, ರಮ್ಮು, ಟಕೀಲಾಗಳ ಜೊತೆ ನಿನ್ನ ಬೆರೆಸಿ ಕುಡಿದು ಸೋತಿದ್ದೇನೆ. ಈ ಚಳಿಗೆ ದಯೆಯಿಲ್ಲ ;ಮೈ ಮೇಲೆ ದಾಳಿ ಮಾಡಿಸೊಕ್ಕಿದೆದೆಗಳ ಮೇಲೆ ಪತಾಕೆ ಹಾರಿಸಿದೆ ;ನಿನ್ನ ನೆನಪ ಮೆರವಣಿಗೆಯ ದೊಂದಿ ಹಿಡಿದಿದೆ. ಈ ಚಳಿಗೆ ದಯೆಯಿಲ್ಲ ;ವಿರಹದುರಿಗೆ ಸಿಲುಕಿದವಳ ಅಣಕಿಸಿದೆ,ಏನು ಕುಡಿದರೇನು? ಕುಡಿಯಬೇಕಿದ್ದವನನ್ನು ಕುಡಿದಿದ್ದರೆಹೀಗೆ ನಡುಗಬೇಕಿರಲಿಲ್ಲ ಎಂದು ಚಾಡಿ ಹೇಳಿದೆ. ********

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಚೆ ಗುವೆರಾನ ಮುಖ ಇದ್ದ ಮನುಷ್ಯ ಮೂಲ:ವಾಷಿಂಗ್ಟನ್ ಕುಕುರ್ಟೋ ಕನ್ನಡಕ್ಕೆ:ಕಮಲಾಕರ ಕಡವೆ ಚೆ ಗುವೆರಾನ ಮುಖ ಇದ್ದ ಮನುಷ್ಯ ಅವನು ಚೆ ಯ ಟ್ಯಾಟೂವ ತನ್ನ ತೋಳುಗಳ ಮೇಲೆ ಹೊಂದಿದ್ದಆ ಕಾಲದಲ್ಲಿ ಯಾರೂ ಟ್ಯಾಟೂ ಹಾಕಿ ಕೊಳ್ಳುತ್ತಿರಲಿಲ್ಲಆ ಕಾಲದಲ್ಲಿ ಯಾರಿಗೂ ಚೆ ಗೊತ್ತೂ ಇರಲಿಲ್ಲಹಾಗಿದ್ದಾಗ ಅವನು ಟ್ಯಾಟೂ ಹಾಕಿಸಿ ಕೊಂಡಿದ್ದ “ಯಾಕಪ್ಪಾ ಹಾಗೆ ಟ್ಯಾಟೂ ಹಾಕಿಸ್ ಕೊಂಡಿದ್ದಿ”ನನ್ನ ಅಜ್ಜಿ ಕೇಳಿದಳು, “ಒಳ್ಳೇ ಜೈಲಿಂದ್ ಹೊರ ಬಂದೋರುಹಾಕಿಸ್ಕೊತಾರಲ್ಲ ಹಾಂಗೆ”.“ಅಮ್ಮ, ಇನ್ನೇನು ನಮ್ ಲೈಫು ಅಂದ್ರೆ,ದೊಡ್ಡದೊಂದು ಜೈಲು ಅಲ್ದಿದ್ರೆ?”ಚೆ ಇನ್ನೂ ಚೆ ಆಗೋಕೆ ಶತಮಾನ ಇರೋವಾಗ್ಲೇಅವನು ತೋಳುಗಳ ಮೇಲೆ ಟ್ಯಾಟೂ ಹಾಕಿಸಿ ಕೊಂಡಿದ್ದಯಾರೂ ಟ್ಯಾಟೂ ಹಾಕಿಸ್ಕೊಳ್ಳೋ ಇರ್ತಾ ಇರದ ಕಾಲದಲ್ಲಿ.ಇಂದು, ಕ್ರಿಸ್ಮಸ್ ನ ಒಂದು ದಿನದ ಮೊದಲುನಾನು ಅವನಿಗೆ ಫೋನು ಮಾಡಿದ್ದೆ, ಹ್ಯಾಪಿ ಹೋಲಿಡೇಸ್ ಹೇಳಲು.ಅವನು ಫೋನು ಉತ್ತರಿಸಿದಾಗ ಪೂರಾ ಕುಡಿದಿದ್ದನನ್ನ ದನಿ ಕೇಳಿ ಅವನಿಗೆ ಖುಷಿ ಆಗಿತ್ತುಆದರೂ ಅವನು ಅದೇನೋ ಹಿಮದ ಕುರಿತು ಮಾತಾಡಿದ್ದ“ಹಿಮದಲ್ಲಿ ಸಿಮ್ಯುಲೇಷನ್ ಮಾಡಿದಂಗೆ ನೀನು ಕಣೋ”ನನ್ನ ಅಪ್ಪ ಸಾರಾಯಿ ಸಾಹೇಬಾಳ ಬಳಿ ಮರಳಿ ಹೋಗಿದ್ದಅವನು ಅವಳಿಗೆ ವಾಪಸಾಗಿದ್ದ“ನಿನ್ನ ಮಕ್ಳು ಎಷ್ಟು ಚಂದ ಇದಾರೋ, ಅಣ್ಣ”ಅಪ್ಪ ನನ್ನ ಅಣ್ಣ ಅಂತ ಕರೆಯೋದು“ಅಪ್ಪಾ, ನಾಳೆ ಕ್ರಿಸ್ಮಸ್”.“ಚೆ ಟ್ಯಾಟೂ ಯಾಕಪ್ಪಾ ಹಾಕಿಸಕೊಂಡೆ ಅಂತ ಬೇಸರ ಆಗ್ತಾ ಇದೆ.ನನಗೆ ಎಲ್ಲದರ ಬಗ್ಗೂ ಬೇಸರಾನೇ, ಚೆ ಕುರಿತೂ”.ಅವನ ಚೆ! ನಮ್ಮ ಬಾಲ್ಯದ ಹೀರೊ ಚೆ!“ನನ್ನ ತೋಳಿನ ಮೇಲೆ ಚೆಗೆನನಗಿಂತಾ ಹೆಚ್ಚು ವಯಸ್ಸಾಗಿ ಬಿಟ್ಟಿದೆ” ನನಗಂದ ಅವನುನನ್ನ ಅಪ್ಪ ಸಾರಾಯಿ ಸಾಹೇಬಾಳ ಬಳಿ ಮರಳಿ ಹೋಗಿದ್ದನನ್ನಪ್ಪ ಅವನ ತೋಳಿನ ಮೇಲೆ ಒರಗಿದ“ಮರೀ ಬೇಡಪ್ಪ ನನ್ನ, ಅಣ್ಣ” ಹೇಳಿದ ಅಪ್ಪ.ಎಂದಿಗೂ ಇಲ್ಲ. ನಾನೆಂದೆ. ಮತ್ತು ಫೋನು ಕೆಳಗಿಟ್ಟೆ. **************************

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಇನ್ನೂ ಬರಲಿಲ್ಲ ಕೃಷ್ಣಮೂರ್ತಿ ಕುಲಕರ್ಣಿ ಇನ್ನು ಬರಲಿಲ್ಲ…. ಬರ್ತಿನಂತ ಹೇಳಿದ ಗೌಡ ಇನ್ನೂ ಬರಲಿಲ್ಲ.! ಬಸ್ಸಿನ ಗದ್ದಲ, ಟ್ರಾಫಿಕ್ ಕಿರಿಕಿರಿ ಎನೊಂದು ತಿಳಿಲಿಲ್ಲ !! ಮಿಶ್ರಾ ಫೇಡ, ಬಿಗ್ ಬ್ರೇಡ್ ತರ್ತಿನಿ ಅಂದಾವ! ರಾತ್ರಿ ಊಟಕ ಪಂಜೂರ್ಲಿಗೆ ಹೋಗೋಣಾಂತ ಮೇಜೇಜ್ ಹಾಕಿದವ! ಬಟರ್ ನಾನ್ ಕಾಜೂ ಸ್ಪೇಶಲ್ ತಿನ್ನೋಣ ಅಂದಾವ! ಮಸಾಲಿ ಪಾಪಡ್ ಗೋಬಿ, ಗಡಬಡ ಐಗೆ ಕಾದೈತೆ ಜೀವ! ಕುಡ್ತಾ ಜುಬ್ಬಾ ಕೊಡಸ್ತಿನಂತ ಹೇಳಿ ಹೋದಾವ!! ಶೋಚ್ ನ್ಯಾಗ ತರಬೇಕಂತ ಬಯಸೇದ ಜೀವ!! ಬರ್ತಾನಂತ ಕಾದು ಕಾದು ಸುಸ್ತಾತ ಜೀವ! ಎಲ್ಲಿದ್ದಾನಂತ ತಿಳಿಬೇಕಂದ್ರ ನೆಟ್ ವರ್ಕ ಇಲ್ಲವ್ವ!! ಇವತ್ತು ಬಾರದಿದ್ರೂ ನಾಳೆ ಬರ್ಲಿ ಸುಖವಾಗಿರಲಿ ಜೀವ! ತಿನಿಸು ಬಟ್ಟೆ ಮುಖ್ಯವಲ್ಲ ಉಳಿಲೆವ್ವ ನನ್ನ ಗೌಡನ ಜೀವ!! **********************

ಕಾವ್ಯಯಾನ Read Post »

You cannot copy content of this page

Scroll to Top