ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರೀತಿಯೆಂದರೆ ಹೀಗೇ ಏನೋ!!??

shallow focus photo of man and woman holding hands

ಸೌಜನ್ಯ ದತ್ತರಾಜ

ಪ್ರೀತಿಯೆಂದರೆ ಹೀಗೇ ಏನೋ!!??

ಮೊದಮೊದಲು

ನಿದ್ದೆ ಕೆಡಿಸಿ, ನೆಮ್ಮದಿ ಕಳೆದು
ಸಾವಿರ ಪ್ರಶ್ನೆಗಳ ಸುಳಿಯೊಳಗೆ ಸಿಲುಕಿಸಿ
ಅವಗಣನೆಯೋ, ಅವಮಾನವೋ
ಎಂದೆಲ್ಲಾ ಅನುಮಾನಗಳ ಹುಟ್ಟಿಸಿ

ಸ್ವಾಭಿಮಾನ, ಸ್ವಾರ್ಥಗಳೆಲ್ಲವ ಮಧ್ಯೆ ತೂರಿಸಿ
ನಂಬದ ದೇವರನ್ನೂ ಮತ್ತೆ ಮತ್ತೆ ನೆನೆಸಿ
ನಿರ್ಧಾರಗಳೆಲ್ಲವ ಏರುಪೇರಾಗಿಸಿ
ಭೂಮಿ ಬಾನುಗಳ ತಲೆಕೆಳಗಾಗಿಸಿ

ಅಬ್ಬಬ್ಬಬ್ಬಾ…….
ಅವೆಷ್ಟೆಲ್ಲಾ ಚಿತ್ರ ವಿಚಿತ್ರ ಭಾವನೆಗಳು

ಒಮ್ಮೆ ಪ್ರೀತಿ ನಮ್ಮೆಡೆ ತಿರುಗಿ ನಕ್ಕರೆ ಆಯ್ತು
ಒಪ್ಪಿಕೊಂಡರಂತೂ ಸರ್ವಸ್ವವೂ ಸುಂದರ

ಅರಳುವ ಮನ, ನೆಮ್ಮದಿಯ ನಿದ್ದೆ
ಪ್ರಶ್ನೆಗಳಿಗೆಲ್ಲಾ ಪೂರ್ಣ ವಿರಾಮ
ಅನುಮಾನ, ಸ್ವಾಭಿಮಾನಗಳ ಜಾಗದಲ್ಲಿ
ಮನದ ತುಂಬಾ ಕನಸುಗಳದ್ದೇ ರಾಜ್ಯಭಾರ

ಜೊತೆ ಜಾರದಂತೆ ದೇವನೊಲಿಯಲೆಂಬ ಸ್ವಾರ್ಥ
ನಿರ್ಧಾರಗಳಿಗೆಲ್ಲ ಮತ್ತೊಂದು ಹೆಗಲ ಖಾತ್ರಿ
ದಿನದಿನಕ್ಕೂ ಅರಳುವ ಜೀವನ ಪ್ರೀತಿ
ಇದೇ ಅಲ್ಲವೇ ಸತ್ಯ ಸುಂದರ ಪ್ರೇಮದ ರೀತಿ……

**********

About The Author

1 thought on “ವ್ಯಾಲಂಟೈನ್ಸ್ ಡೇ ಸ್ಪೆಶಲ್”

Leave a Reply

You cannot copy content of this page

Scroll to Top