ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೆರಳನ್ನೊಮ್ಮೆ ಬಿಚ್ಚಿಬಿಡು

Image result for images of indian woman long hair

ವಿಜಯಶ್ರೀ ಹಾಲಾಡಿ

ಆ ಬೆಚ್ಚನೆ ರಾತ್ರಿಗಳಲ್ಲಿ
ಈ ತಣ್ಣನೆ ಹಗಲುಗಳಲ್ಲಿ
ನಿನ್ನ ಪಾದಕ್ಕೆ ತಲೆಯೂರಿ
ಮಲಗಿದ ಬೆಕ್ಕನ್ನೊಮ್ಮೆ
ನೋಡು ….

ಕರುಣೆಯ ಕತ್ತಲು
ಹಣ್ಣುತುಂಬಿದ ಮರ
ಹಗುರ ತುಂಬೆ ಹೂ..
ಹೆರಳನ್ನೊಮ್ಮೆ ಬಿಚ್ಚಿಬಿಡು

ಸುತ್ತುವ ಭೂಮಿಯನ್ನು
ನಿಲ್ಲಿಸು ಅಥವಾ
ಮತ್ತಷ್ಟು ವೇಗವಾಗಿ
ಸುತ್ತಿಸು
ಹೊಸ ಹೆಜ್ಜೆ
ಕಚ್ಚಿಕೊಳ್ಳಬೇಕಿದೆ

ನಿಹಾರಿಕೆ ಉಲ್ಕೆಗಳು
ಸಾಗರ ಸುನಾಮಿಗಳು
ಅಪ್ಪಳಿಸಲಿ
ಇಲ್ಲವೇ
ಬ್ರಹ್ಮಾಂಡದಾಚೆ
ಕರೆದೊಯ್ಯಲಿ ….

ಮಧುಶಾಲೆಗೂ ನನಗೂ
ಸಂಬಂಧವಿಲ್ಲ
ನೋವನ್ನೇ ಬಟ್ಟಲಿಗಿಳಿಸಿ
ಗಟಗಟನ ಕುಡಿ
ಯುತ್ತಿದ್ದೇನೆ ………!

*******************

About The Author

Leave a Reply

You cannot copy content of this page

Scroll to Top