ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜೀವಾತ್ಮಕ್ಕೆಲ್ಲ

Photo of Red and White Petaled Flowers

ದೀಪಿಕಾ ಬಾಬು

ಮನದುಂಬಿ ಬರೆದಿಹೆನು
ಇದನು ನಾನೂ
ನೀವು ಓದಿದರೆ ಸಾರ್ಥಕವು,
ನನಗೆ ಇನ್ನೂ….!!

ನನ್ನ ಬರಹಗಳೆನು
ಶ್ರೇಷ್ಠ ಕಾವ್ಯಗಳಲ್ಲಾ,
ನೀವೆಳುವ ಮುನ್ನ
ತಿಳಿದಿಹೆನು ನಾನೆಲ್ಲಾ….!!.

ಬರೆದ ಸಾಲಿನ ನಡುವೆ
ಮೂಡಿದ ಭಾವಗಳೆಲ್ಲಾ
ನಿಮ್ಮನು ಒಮ್ಮೆ ಹೀಗೆ
ತಲ್ಲಣ ಗೊಳಿಸುವವೆಲ್ಲಾ..!!

ಅಕ್ಷರ ಪಾತ್ರದ ಒಳಗೆ
ನೂರಾರು ದುಗುಡವನೆಲ್ಲಾ
ಗೀಚಿಬರದೆ ನಾನು
ನಿಕ್ಷಲ್ಮಶ ಹೃದಯದ ಹೊನಲಾ..!!

ಏನಿದೇ ನಿನ್ನಯ ಒಳಗೆ
ಅರ್ಥವಿರದ ಪದಗಳೆಲ್ಲಾ,
ಸಹನೆ ಎಂಬುದೇ ಬೇಕು
ತಿಳಿಯುವ ಉದ್ದೇಶವಲ್ಲಾ..!!

ನೂರಾರು ಸಾವಿರಾರು
ಕಲ್ಪನೆಯ ಕುಸುಮಗಳಿಗೆಲ್ಲಾ
ಬರಹದ ರೂಪದಲ್ಲಿ ಇನ್ನೂ
ಜೀವನದ ಕಳೆ ಹೊಂದಿರುವವೆಲ್ಲಾ.!!

ನಿನ್ನಯ ಬಗೆಗೆ ಹೇಳಲು ಏನಿದೇ
ನೀನೇ ನನ್ನ ಜೀವನದ ಮೂಲಾ
ಕೊನೆಯವರೆಗೂ ನೀನೇ ನನ್ನಯ
ಉಸಿರಿನ ಹಸಿರಾಗುವೆಯಲ್ಲಾ…!!

ಓದುವ ಮಿತ್ರರು
ಮರು ಜೀವನ ‌ಕೊಟ್ಟರು
ನನ್ನೆದೆಯ ಒಳಗೆ ಇರುವ
ಪದಪುಂಜವನ್ನು ಒಪ್ಪಿ ಎಲ್ಲಾ‌..!!

ಬೇಡೆನು ಬೇರೆನನೂ
ಸಾಕು ನನಗಿನ್ನೆಲ್ಲಾ,
ಸಾಹಿತ್ಯವೇ ನನಗೆ.
ಸ್ಪೂರ್ತಿಯ ಜೀವಾತ್ಮಕ್ಕೆಲ್ಲಾ…

**********

About The Author

Leave a Reply

You cannot copy content of this page

Scroll to Top