ಸುಡುಗಾಡು
ರಾಜು ದರಗಾದವರ

ಸುಡುಗಾಡು
ನೀನೆಷ್ಟು ಸಹೃದಯಿ,
ಭೇದಭಾವವಿಲ್ಲದ ನಿನ್ನಲ್ಲಿ
ಅದೆಂತಹ ತಿಳಿಮೌನ.
ಮೇಲುಕೀಳು ಕಾಣದ ನಿನ್ನಲ್ಲಿ
ಹೋಲಿಕೆಗೆ ಸಿಗದ ಐಕ್ಯತೆ.
ದೊಡ್ಡವ ಚಿಕ್ಕವ ಅನ್ನೋ
ತಾರತಮ್ಯವಿಲ್ಲದ,
ಎಲ್ಲರನ್ನು ಸಮಾನಭಾವದಿಂದ
ಸ್ವಾಗತಿಸುವ
ನಿನ್ನದು ಅದೆಂತಹ ಧರ್ಮ…!
ವೀರರನ್ನು ,ಹೇಡಿಗಳನ್ನು
ಪುಣ್ಯವಂತರನ್ನು,ಪಾಪಿಗಳನ್ನು
ಬೇರ್ಪಡಿಸುವ ಬುದ್ಧಿಯೆಂತು ಇಲ್ಲ.
ಹೆಣ್ಣು,ಗಂಡು ಒಂದೇ ಎಂದು
ಸಮಾನಕಾಣೋ ಹೃದಯವಂತಿಕೆ
ನಿನ್ನಲ್ಲಿ ಬಿಟ್ಟು ಮತ್ತ್ಯಾರಲ್ಲಿ ಬರಲು
ಸಾಧ್ಯ ಹೇಳು…?
ಓ ಸ್ಮಶಾನವೇ…ನಿನಗೆ ನೀನೇ ಆದರ್ಶ…!
********



