ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

Image result for photos of shadow of man

ಡಾ.ಗೋವಿಂದ ಹೆಗಡೆ

ಗಜಲ್

ಸತ್ಯ ಎಂದಿನಂತೆ ಬೆತ್ತಲೆಯಾಗೇ ಇದೆ
ಸುಳ್ಳು ವೇಷ ಕಳಚುವ ಕಾಲ ಬಂದಿದೆ

ಸುಳ್ಳೀಗ ಸತ್ಯವಾಯಿತು ಎಂದರ್ಥವಲ್ಲ
ಹುಸಿಯ ಅಸಲಿಯತ್ತು ಸಾಬೀತಾಗಿದೆ

ಎಷ್ಟೊಂದು ಬಣ್ಣಬಣ್ಣದ ವೇಷಗಳು ಇಲ್ಲಿ
ತೊಗಲುಗೊಂಬೆಗಳಿಗೆ ಜೀವ ಬಂದಂತಿದೆ

ಹೊಸ್ತಿಲಲ್ಲಿ ಹುಲ್ಲು ತುಂಬಿದೆ ಎಂದರು ಅಣ್ಣ
ಮಾಡುವುದೇನು ಕಣ್ಣಲ್ಲೂ ರಜ ತುಂಬಿದೆ

ನೆರಳಿನೊಂದಿಗೆ ಎಷ್ಟೆಂದು ಗುದ್ದಾಟ ಗೆಳೆಯ
ನಿಜದ ನೇರಕೆ ತೆರೆದು ಎದೆಯ ನಡೆಸಬೇಕಿದೆ

***********

About The Author

3 thoughts on “ಕಾವ್ಯಯಾನ”

  1. ಶ್ರೀನಿವಾಸ್ ಬಿ.ಎಸ್

    ಸುಂದರ ಅರ್ಥಪೂರ್ಣ ಗಝಲ್! ಅಭಿನಂದನೆಗಳು.

Leave a Reply

You cannot copy content of this page

Scroll to Top