ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಧನಿಕನ ರಿಮೋಟ್ ಕಂಟ್ರೋಲ್ ..

Man Sitting at the Side of the Road Leaning Back on Road Railing Near Cars during Day

ಕೆ.ಜಿ.ಸರೋಜಾ ನಾಗರಾಜ್

ಹಸಿವಿನಿಂದ ಸತ್ತೋರಿಗೆ
ಹಬ್ಬ ಸಡಗರಗಳೆಂತು
ಹೊಟ್ಟೆ ಬಟ್ಟೆ ಕಟ್ಟಿದೋರು ಬಡವರು
ಅನ್ನವೆಂದು ನರಳುತ್ತಾ ಬದುಕುವರು..!

ಕೋಟಿ ಕೋಟಿ ಕನಸುಗಳೊಂದಿಗೆ
ಉರಿಯುವ ಮನಸ್ಸುಗಳ ಭೂಕಂಪ
ಹೆಣವಾಗಿಸುವ ಸೂಚನೆಗೆ
ಹೊರಗೆ ಬಿದ್ದವರು ಬಡವರೇ..!

ಹಸಿವಿನ ಕಣ್ಣುಗಳ ಮೇಲೆ
ಹೊಂದಿದವರು ದೌಲತ್ತು
ಗೋಳಿನ ಕಡಲನು ಬತ್ತಿಸಲು
ಬಡವನ ಗುಡಿಸಿಲಿಗೆ ಬರಲೇ ಇಲ್ಲ..!

ಕಳಂಕ ರಹಿತ ಧರಣಿಗೆ
ಬಡವನ ಹಸಿವೇ ಚರಿತ್ರೆಯಾಗಿರುವಂತೆ
ಶತಮಾನದ ಬಡತನಕ್ಕೆ
ನೂರಾರು ಸಾಕ್ಷಿಗಳು ಗುಡಿಸಿಲಿನಲ್ಲಿ..!

ಬಡವನ ತಲೆಗೆ ಧನಿಕರ
ರಿಮೋಟ್ ಕಂಟ್ರೋಲ್
ಹೆಬ್ಬೆರಳೊತ್ತುವನೆಂದು
ಕನಸು ಉಪವಾಸ ಮುರಿದು
ಧನಿಕನ ಮನೆಯ ಮಗುವಿನ
ಹೆಸರಿಟ್ಟ ಮೇಲೆ ಚೆಲ್ಲಾಡಿ ಬಿಟ್ಟ ಆಗುಳ ತಿನ್ನುವವರು…

********

About The Author

Leave a Reply

You cannot copy content of this page

Scroll to Top