ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
Man Carrying Her Daughter Smiling

ಅಪ್ಪ ಅಂದರೆ ಆಕಾಶ

ದೇವಿ ಬಳಗಾನೂರ

ಅಪ್ಪ ಅಂದರೆ ಆಕಾಶ

ಅಪ್ಪ ಅಂದ್ರೆ
ಅಗೋಚರ ಪ್ರೀತಿಯ ಕಡಲು
ನನ್ನಮ್ಮನಂತ ಕರುಣೆಯ ಮಡಿಲು
ಮಗಳ ಸಾಧನೆಯು ಪ್ರಜ್ವಲಿಸಲು
ಕಾರಣವಾದ ತಿಳಿಮುಗಿಲು
ಮಗಳಿಗಾಗಿ ದಣಿದನದೆಷ್ಟೋ ಹಗಲು
ಅವಳಿಗಾಗಿಯೇ ಕಾಯ್ದಿರಿಸಿದನು ತನ್ನ ಇರುಳು

ಅಪ್ಪ ಅಂದ್ರೆ
ಮಗಳ ಪಾಲಿನ ನಾಯಕ
ಅವಳ ಬದುಕ ದೋಣಿಯ ನಿಜ ನಾವಿಕ
ಮಗಳ ಮುಗ್ದ ನಗುವಿಗಾಗಿ ಕಾದ ಅಮಾಯಕ
ಅವಳ ಬದುಕ ರೂಪಣೆಯ ನಿಜ ಮಾಲಿಕ

ಅಪ್ಪ ಅಂದ್ರೆ
ಮಗಳಿಗಾಗಿಯೇ ಬದುಕೋ ಜೀವ
ಅವಳ ಖುಷಿಯಲ್ಲೆ ಮರೆವನು ತನ್ನೆಲ್ಲ ನೋವ
ಮಗಳೇ ತನ್ನ ಅತಿದೊಡ್ಡ ಸಂಪಾದನೆಯೆಂಬ ಭಾವ

ಮತ್ತೊಮ್ಮೆ ಮಗದೊಮ್ಮೆ ಹೇಳುವೆನು ಕೇಳಿ
ಅಪ್ಪ ಅಂದ್ರೆ ಆಕಾಶ
ಅಪ್ಪ ಅಂದ್ರೆ ತಾಯಿಯೆಂಬ ಭೂಮಿಗೇ ಒಡಲು
ಮಗಳಿಗವನೇ ಪ್ರೀತಿಯ ಕಡಲು

About The Author

3 thoughts on “ಕಾವ್ಯಯಾನ”

  1. ನಿಜ ಅಪ್ಪ ಅಂದ್ರೆ ಆಕಾಶ ಅಪ್ಪ ಎಂದರೆ ಅದ್ಭುತಗಳ ಅಗರ ಅಪ್ಪನ ಬಗ್ಗೆ ಎಷ್ಟು ಬರೆದರೂ ತೃಪ್ತಿ ಸಿಗದು. ನಿಮ್ಮ ಕವನ ಸುಂದರವಾಗಿದೆ

Leave a Reply

You cannot copy content of this page

Scroll to Top