ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗಝಲ್ ಸುಜಾತಾ ಲಕ್ಮನೆ ಧುಮ್ಮಿಕ್ಕಿ ಇಳಿದು ಬಾ ಜಲಧಾರೆಯಂತೆ ಕರೆವೆ ನನ್ನೊಳಗೆ ಒತ್ತಾಸೆಯಾಗಿ ನಿಲ್ಲು ಬಾ ನದಿ ದಂಡೆಗಳಂತೆ ಹರಿವೆ ನಿನ್ನೊಳಗೆ ನನ್ನ ನೆರಿಗೆ ನೆರಿಗೆಯೊಳಗೂ ಹುದುಗಿ ಹೀಗೆ ಕಾಡುವುದೇಕೆ ಚಿತ್ತಾರದಂಚಿನ ಸೆರಗಾಗಿ ಬೀಸಿ ಬಾ ತೊನೆವೆ ತೆಕ್ಕೆಯೊಳಗೆ ಮುಸ್ಸಂಜೆ ಮಾಧುರ್ಯ ಮಗುಚಿ ಬಿದ್ದಿದೆ ಇಲ್ಲಿ ನೀನಿಲ್ಲದೆ ಸಂಪ್ರೀತಿ ಕೊಡವ ಹೊತ್ತು ಬಾ ಮಧು ಸುರಿವೆ ಒಳಗೊಳಗೆ ಸುರಚಾಪದಲ್ಲೇನಿಹುದು ಬಿಡು ಅಂಥ ಬಣ್ಣ ಬಣ್ಣದ ಆಟೋಪ ರಂಗಿನೋಕುಳಿಯ ಎರಚಿ ಬಾ ಆಡೋಣವೆ ಕಣ್ ಕಣ್ಣೊಳಗೆ ಜೀವ ಸೊಬಗನ್ನೆಲ್ಲ ಒಂದೇ ಗುಕ್ಕಿನಲ್ಲಿ ಸೂರೆಗೊಂಡರೆ ಸಾಕೆ ಗುಟುಕು ಗುಟುಕಾಗಿ ಹೀರು ಬಾ ಉಸಿರಾಗುವೆ ಎದೆಯೊಳಗೆ ಪ್ರೀತಿಗೊಂದಿಷ್ಟು ಬದ್ಧತೆಯ ಬೆರೆಸಿ ಸಂತಸದಿ ಸಾಗೋಣ ಮುಂದೆ ಮೌನದಲೂ ಮಾತಾಗಿ ಮತ್ತೇರಿ ಬಾ ಮುತ್ತಾಗುವೆ ಮನದೊಳಗೆ “ಸುಜೂ” ಳ ಪರಮ ಸುಖದ ಕನಸ ಪರಿಯ ಬಣ್ಣಿಸಲೆಂತು ಹೇಳು ಪರಿ ಪರಿಯಲಿ ಬಯಸಿ ಒಲಿದೊಲಿದು ಬಾ ಪಲ್ಲವಿಸುವೆ ಬಾಳೊಳಗೆ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹಮ್ಮು ಬಿ.ಎಸ್.ಶ್ರೀನಿವಾಸ್ ಬಲ್ಲವನೆಂಬ ಭ್ರಾಮಕ ಹಮ್ಮು ತಲೆತಿರುಗಿಸುವ ಅಮಲು ಏನೂ ಅರಿಯದ ಪಾಮರನ ಪ್ರಾಮಾಣಿಕ ಅಳಲು ಅಮಾಯಕತ್ವವೆ ಮೇಲು ಅಗ್ಗದ ಉಪದೇಶಕ್ಕಿಂತ ನಡೆದು ತೋರಿಪುದು ಮೇಲು ನಿಜಸಾಧಕರಿಗೆ ಸವಾಲು ಸಲ್ಲದು, ನಾ ಕಂಡಿದ್ದೇ ಸತ್ಯವೆಂಬುದು ಅಹಮಿಕೆ ಡೌಲು ಬಲ್ಲವರು ಹೇಳುವರು ಸತ್ಯ ಒಂದೇ ಆದರೂ ಧೃಷ್ಟಿಕೋನ ನೂರಾರು ಹಿಮಾಲಯದ ಶಿಖರಕ್ಕೂ ಏರುವ ದಾರಿ ಹಲವಾರು ಮಾತಿನೀಟಿಯಲಿ ಪರರ ಘಾತಿಸುತ ಸಮನಾರಿಲ್ಲ ಎನಗೆಂದು ಬಿಂಕದಿ ಮೆರೆದು ಬೀಗಿದರೆ ಮೆಚ್ಚುವನೆ ಪರಮಾತ್ಮನು ಮೇಲೇರಿದರೆ ಕೆಳಗಿನದು ಕುಬ್ಜವಾಗುವುದು ಸಹಜ ಕೆಳಗಿರುವವರ ಕೈಹಿಡಿದು ಧನ್ಯತೆ ಪಡೆವವ ನಿಜ ಮನುಜ *********

ಕಾವ್ಯಯಾನ Read Post »

You cannot copy content of this page

Scroll to Top