ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
Woman Near Window

ಗ್ರಹಣಕ್ಕೆ ಮುನ್ನ

ಪ್ರಮಿಳಾ ಎಸ್.ಪಿ

ಗ್ರಹಣಕ್ಕೆ ಮುನ್ನ

ಕೋಣೆ ಕಿಟಕಿಯ ಸರಳುಗಳ
ನಡುವೆ ಚಂದ್ರಮನ ಚಿತ್ರ
ಮನದಲ್ಲಿ ಆತುರದ ಕಾವು…

ಗ್ರಹಣ ಪ್ರಾರಂಭ ಆಗುವುದಕ್ಕೆ ಮುನ್ನ ಮನೆ ಮಂದಿಗೆಲ್ಲಾ
ಊಟ ಬಡಿಸಬೇಕಿದೆ..
ಎದೆಯೊಳಗಿನ ನೋವುಗಳ
ಬಚ್ಚಿಟ್ಟು…ಪರದೆ ಮುಂದೆ ಕುಳಿತು ಪುಂಗಿ ಮಾತು ಆಲಿಸಿ
ಆಕಳಿಸುವ ಅರಮನೆಯ
ಮನಸ್ಸುಗಳ ನಡುವೆ ಆತುರಕ್ಕೆ
ಆಟ ವಾಡ ಬೇಕಿದೆ ನಾನು…

ಬಳಲಿದ ಕಾಲುಗಳ…
ಮೇಲೆ ನಿಂತು ನಿಟ್ಟುಸಿರು
ಸೆರಗು ಸುತ್ತಿ ಪ್ರತಿ
ಕ್ಷಣಕ್ಕೂ ಬೇಡುತಿದ್ದೇನೆ
ಹೊರಗೆ ಹೋದವರು
ಹುಷಾರಾಗಿ ವಪಸ್ಸಾಗಲಿ..

ಪರದೆಯಲ್ಲಿ ಕಂಡ ರಾಶಿ ಭವಿಷ್ಯ ದ ಮಾತುಗಳು
ಮಂಕಾಗಲಿ…
ಅವನಿತ್ತ ಆಯಸ್ಸು
ಇಮ್ಮಡಿಗೊಳ್ಳಲಿ ..

ಕರುಳಕುಡಿಗಳಿಗೆ
ಮಂತ್ರದ ಸೋಕು
ತಾಗದಿರಲೆಂದು…
ಬಡಿಸಬೇಕಿದೆ ಅನ್ನ
ಗ್ರಹಣ ಕ್ಕೆ ಮುನ್ನ…

******

About The Author

Leave a Reply

You cannot copy content of this page

Scroll to Top