ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
Woman in White and Yellow Dress With Scarf

ಸ್ತ್ರೀ ಹೆಜ್ಜೆ

ಕವಿತಾ ಸಾರಂಗಮಠ

ಸ್ತ್ರೀ ಹೆಜ್ಜೆ

ಲಂಗ ದಾವಣಿ ತೊಟ್ಟ ಬಾಲೆಯರು ವಿರಳ..
ಹಿಡಿದಿದೆ ಫ್ಯಾಶನ್ನಿನ ಮರುಳ..
ಮಾಯವಾಗಿವೆ ಉದ್ದ ಜಡೆ ಮೊಗ್ಗುಗಳ..
ಕೇಶ ಕತ್ತರಿಸಿ ನಡೆಯುವರು ಸರಳ..!

ಅನುಕರಣೆ ಹೆಸರಲಿ ನಡೆದಿದೆ ಅಂಧರ ಆಟ..
ತೋರುತಿದೆ ತೆಳು ಧಿರಿಸಿನಲಿ ಅವಳ ಮೈಮಾಟ.‌.
ಹಗಲಿರುಳೂ ಅವಳ ಪೀಡಿಸುತ್ತಿದೆ ಕಾಮುಕರ ಕೂಟ..!

ಮಾಧ್ಯಮಗಳಲ್ಲಿ ಜಾಹಿರಾತುಗಳ ದರಬಾರು..
ಮಹಿಳೆಯರ ಮನೆ-ಮನಗಳಲ್ಲಿ ಅವುಗಳದ್ದೇ ಸಂಚಾರು..
ಹೋಗುತಿರುವ ಅವಳದೇ ಮಾನಕೆ
ಇಲ್ಲವೇ ಇಲ್ಲ ಕೊಂಚ ವಿಚಾರ..!

*********

About The Author

Leave a Reply

You cannot copy content of this page

Scroll to Top