ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
Image result for photos of indian constitution

ಗಝಲ್

ಸಮಬಾಳು ಸಹಬಾಳ್ವೆ ಸಮತೆಯ ರೀತಿ ಗಣತಂತ್ರ ವೆಂದರೆ
ಶಾಂತಿ ಸಹಿಷ್ಣುತೆ ಸಹನೆ ಪ್ರೀತಿ ಗಣತಂತ್ರವೆಂದರೆ

ಪಾರತಂತ್ರ್ಯದ ಕತ್ತಲು ಅಳಿದರಷ್ಟೇ ಸಾಕೇ
ಸ್ವಯಮಾಡಳಿತ-ಸಂವಿಧಾನದ ಕ್ರಾಂತಿ ಗಣತಂತ್ರವೆಂದರೆ

ಎಷ್ಟೊಂದು ವೇಷ ಭಾಷೆ ಸಂಸ್ಕೃತಿ ವೈವಿಧ್ಯಗಳು
ಎಲ್ಲರೆದೆ ಹೂಗಳನು ಪೋಣಿಸುವ ನೀತಿ ಗಣತಂತ್ರವೆಂದರೆ

ಸಮಾನ ಆಶೋತ್ತರಗಳು ಸುರಾಜ್ಯದ ಕನಸು
ಎಲ್ಲರ ಮುಗಿಲುಗಳ ವಿಸ್ತರಿಸುವ ಪ್ರಣತಿ ಗಣತಂತ್ರವೆಂದರೆ

ಹೊರಗಿನ ಶತ್ರುಗಳ ಜೊತೆಗೆ ಒಳಗಿನ ವಿಕೃತಿಗಳು
ಹುಸಿಗಳ ಮೀರುವ ನಿಜ ಬದುಕಿನ ಕಾಂತಿ ಗಣತಂತ್ರವೆಂದರೆ

ನಮ್ಮ ರಾಷ್ಟ್ರ ನಮ್ಮ ಜೀವ ಭಾವ ಸದಾ ಜಾಗೃತ
ಎಲ್ಲ ಸ್ವರಗಳನು ಬೆಸೆಯುವ ಸಮಶ್ರುತಿ ಗಣತಂತ್ರವೆಂದರೆ

***************

ಡಾ.ಗೋವಿಂದ ಹೆಗಡ

About The Author

Leave a Reply

You cannot copy content of this page

Scroll to Top