ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
selective focus photography of fish hanging decor

ನಿನ್ನ ನೆನಪಿನ ಮೀನು..!

ಡಾ.ಜಯಪ್ಪ ಹೊನ್ನಾಳಿ(ಜಯಕವಿ)

ನಿನ್ನ ನೆನಪಿನ ಮೀನು
ಎಷ್ಟೊಂದು ಬಣ್ಣದಲಿ
ಆಡುತಿವೆ ಎದೆಗೊಳದ ತಿಳಿಯಾಳದಲ್ಲಿ..!
ಕನಸ ರೆಪ್ಪೆಯ ತೆರೆದು
ಕನವರಿಕೆಯಲೆ ನೆರೆದು
ಮಳೆಬಿಲ್ಲ ಮಿಂದಂತೆ ಮಧು ಮೇಳದಲ್ಲಿ..!

ಹೊಸಿಲ ಚುಂಬಿಸುತಿಹುದು
ಹೊಂಬಿಸಿಲಿನೊಡಗೂಡಿ
ಹೊಸತೊಂದು ಹಾರೈಕೆ ಹಳೆ ನೋವ ಕೊಂದು..!
ನಗುವ ನಂದನದೊಲವು
ತಂಗಾಳಿ ತೊಟ್ಟಿಲಲಿ
ಪರಿಮಳದಿ ತಾ ತುಂಬಿ ನವ ಭಾವ ತಂದು..!

ಬಣಗುಡುವ ಬದುಕಲ್ಲಿ
ನೀ ಬಂದು ನಕ್ಕಂದು
ಮರಳಿ ಬಂದಿತು ಮನಕೆ ಮತ್ತೆ ಮಲೆನಾಡು..!
ಜೀವವಾಯಿತು ಜಿಂಕೆ
ರೆಕ್ಕೆ ಬಿಚ್ಚಿತು ನವಿಲು
ನಲಿದು ಉಲಿಯಿತು ಕುಕಿಲು ಬಂತು ಹೊಸ ಹಾಡು..

*********

About The Author

Leave a Reply

You cannot copy content of this page

Scroll to Top