ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
Rectangular Wooden Frame Mirror

ಡಾ.ಗೋವಿಂದ ಹೆಗಡೆ

ಕನ್ನಡಿಗೊಂದು ಕನ್ನಡಿ

ಕನ್ನಡಿಯೆದುರು
ನಿಂತೆ
ಬುದ್ದಿ ಕಲಿಸಲೆಂದೇ
ಬಿಂಬಕ್ಕೆ-
ಹೊಡೆದೆ

ಈಗ
ಕೆನ್ನೆಯೂದಿದೆ !
••
ಕೋಪದಲ್ಲಿ ಹೋಗಿ
ನಿಂತೆ
ಕನ್ನಡಿಯೆದುರು
ಉರಿದೆ, ಕೂಗಾಡಿದೆ.

ಸರಿ-
ಬಿಂಬಕ್ಕೆ ಕೋಪ ಬಂದರೆ
ಏನು ಮಾಡುತ್ತದೆ

ಹೇಗೆ ಇದಿರು
ನಿಲ್ಲುತ್ತದೆ ?!

**********

About The Author

Leave a Reply

You cannot copy content of this page

Scroll to Top