ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪುಣ್ಯವಂತೆ…

two people watching fireworks display

ಅವ್ಯಕ್ತ

ಕಾಣಲಿರುವ ಒಡನಾಟದ ಚುಕ್ಕಿಯಾಗಿ ಬಂದಳು
ಕನಸುಗಳ ಹೊತ್ತು ನನಸ ಮಾಡುವ ಬಿರುಸಿನಲಿ
ಮಿಡಿಯೋ ಮನಸುಗಳಿಗೆ ಮಿಲನದ ಔತಣವನಿಟ್ಟು
ಮುಗಿಲೆತ್ತರದ ಭಾವಗಳ ಮುಟ್ಪಿಬರುವ ರೆಕ್ಕೆ ಹೊತ್ತು

ನೋವುಗಳ ನುಂಗಿ ನಗುತ ನಲಿಸುವ ಕಲೆಯೇ ಸುಂದರ
ಅಂತ್ಯದೆಡೆಗೆ ಹೂಹಾಸಿ ನಲಿಯುತ ಹರಿಯುವುದೇ ಸುಂದರ
ತುಸು ಕ್ಷಣದ ಹನಿಗಳಲಿ ,ಮೈಮರೆತು ಲೀನಳಾಗಿ..
ನಿನ್ನಲ್ಲೆಲ್ಲೋ ನನ್ನ ಕಂಡೆ ನನ್ನಲ್ಲೆಲ್ಲೋ ನಿನ್ನ ಕಂಡೆ.

ಕಣ್ರೆಪ್ಪೆ ಮಿಟುಕಿಸುವಷ್ಟರಲ್ಲಿ
ಹೇಳದೇ ಮಾಯವಾಗುವವರಲ್ಲಿ,
ಹೇಳಿಹೋದ ಸೌಂದರ್ಯ ಕನಿಕೆ..
ಸಾಧನೆಯ ಪುಟಗಳಲ್ಲಿ ಮಿನುಗುನಕ್ಷತ್ರ..

ನೀನಿಲ್ಲದೆ ನೀನಿಲ್ಲಿರುವೆ,
ನೀನಳಿದರು ಅಳಿಯದೆ ಹೊಳೆಯುತಿರುವೆ,
ತಂಪಾದ ಗಾಳಿಯಲ್ಲಿ ಸೊಂಪಾದ ಪರಿಮಳದಂತೆ,
ತಿಳಿ ನೀರಿನಲಿ ಅಡಗಿರುವ ಸವಿರುಚಿಯಂತೆ,
ಕಣ್ಣೀರಿನ ಅಂಚಿನಲಿ ಸಿಹಿ ನೆನಪುಗಳ ನಗುವಿನಂತೆ,

ನೀನೆ ಪುಣ್ಯವಂತೆ….
ಅತಿ ವಿರಳ ಉಡುಗೊರೆ ನಿನ್ನದಾಗಿದೆ..
ಮನಗಳ ಅರಮನೆಯಲ್ಲಿ ನಿನಗೊಂದು ಶಾಶ್ವತ ಸ್ಥಾನವಿದೆ!
ಆತ್ಮಕ್ಕಿಂದು ಎನ್ನ ಮನದಾಳದ ನಮನ

About The Author

Leave a Reply

You cannot copy content of this page

Scroll to Top