ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
red flower illustration

ತುಂಬು

ಡಾ.ಗೋವಿಂದ ಹೆಗಡೆ

ನಾನೂ ರಂಗವೇರಿದ್ದೇನೆ
ನಿನ್ನೊಂದಿಗೆ

ನರ್ತಿಸಲಲ್ಲ..

ಮೂಲೆಯಲ್ಲಿ ನಿಂತು
ಕುಣಿಯುವ ನಿನ್ನ
ಬಿಂಬವ
ಎದೆ ತುಂಬಿಕೊಳ್ಳಲಿಕ್ಕೆ

ಗೆಜ್ಜೆಯಿಂದ ಉದುರುವ
ಕಿರುಗಂಟೆಯೊಂದನ್ನೆತ್ತಿ
ಚುಂಬಿಸಲಿಕ್ಕೆ

ನೆನಪಿನಂಗಳದಲ್ಲಿ
ತೂಗಿಬಿಡಲಿಕ್ಕೆ-

ಅನಂತದವರೆಗೆ…


About The Author

Leave a Reply

You cannot copy content of this page

Scroll to Top