ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತೆಲುಗು ಮೂಲ-

ಡಾ.ಕತ್ತಿ ಪದ್ಮಾರಾವು

ಕನ್ನಡಕ್ಕೆ

ನಾರಾಯಣಮೂರ್ತಿ ಬೂದುಗೂರು

ಯಾರು ಕೊಲೆಪಾತಕರು?

ಸಮುದ್ರ ಹಿಮದಿಂದ ಗಾಢವಾಗಿ ಗಡ್ಡೆಕಟ್ಟಿದೆ

ನಡುವೆ ಒಂದು ನೀರಿನ ಝರೀ

ತಿಮಿಂಗಲಗಳು ಈಜುತ್ತಾ ಸಾಗುತ್ತಿವೆ

ಹೆಚ್ಚಾಗಿ ಇಬ್ಬನಿ ಸುರಿದಾಗ, ಅವಕ್ಕೆ ಉಸಿರಾಡಲು ಕಷ್ಟವೆನಿಸುತ್ತದೆ

ಈಗ ತಿಮಿಂಗಲಗಳದೇ ಬೇಟೇ

ಬಲೆಗಳೆಲ್ಲಾ ಖಾಲೀ,ಖಾಲೀ ಬಿದ್ದಿವೆ

ಇತ್ತೀಚೆಗೆ ಮೀನುಗಳೂ… ಬಲೆಯನ್ನು ಗುರ್ತು ಹಚ್ಚುತ್ತಿವೆ.

ಆ ಕಾಲುವೆ ಬದಿಯಲ್ಲಿ ತುಂಬಾ ನಾಯೀಕೊಡೆಗಳ ಸಾಲು

ರಸ್ತೆ ಒದ್ದೆ ಒದ್ದೆಯಾಗಿ

ಕಿರುಪಾದಗಳ ಸಪ್ಪಳಕೆ

ನೀರು ಚೆಲ್ಲುತಿದೆ.

ಮನುಷ್ಯನಿಗೆ 
ಈ ಚಳೀಯಲ್ಲೂ ಬೆವರು ಕಿತ್ತುಬರುತ್ತಿದೆ

ಕಟಕಟೆಯಲ್ಲಿ ಒಬ್ಬೊಬ್ಬರೇ ನಿಂತು ತಪ್ಪುಗಳನ್ನ ಒಪ್ಪಿಕೊಳ್ಳುತ್ತಿದ್ದಾರೆ.

ಆ ನೀರಿನ ಮೋಟಾರುಪಂಪು ನಿಂತುಹೋಗಿದೇ

ಗದ್ದೆಗಳೆಲ್ಲಾ ಒಣಗಿಹೋಗಿವೆ.

ಬಿತ್ತನೆಯ ಕತ್ತನ್ನು ಯಾರೋ ಹೊಸಕಿಹಾಕಿದರು.

ರಿಲಯನ್ಸ್ ಷಾಪಿನೊಳಗೆ ಹೊಳೆಯುತ್ತಿರುವ ಆಪಲ್

ಒಳಗೆಲ್ಲಾ ಕೊಳೆತುಹೋಗಿದೆ.

ತಿನ್ನಬಾರದೇ ಮತ್ತೇ…

ಗಾಜಿನ ಒಳಗೆ, ಏಸೀ ಯಲ್ಲಿ ಇಟ್ಟಿದ ತೊಗರೀ ಬೇಳೇ

ಆರ್ಗಾನಿಕ್ ಪದ್ದತಿಯಲ್ಲಿ

ಬೆಳದದ್ದು ಎನ್ನುತ್ತಾರೇ.

ಬೆಲೆ ಮಾತ್ರ ಬೆಟ್ಟದಷ್ಟು.

ನರಕಾಸುರನನ್ನ ಕೃಷ್ಣ ಸಾಯಿಸಿದ್ದಕ್ಕೆ

ಇಷ್ಟು ಕಾಲುಷ್ಯವೇಕೇ?

ನರಕಾಸುರ, ಜರಾಸಂಧ ಒಬ್ಬರೇನು ?

ಎಷ್ಟೋಜನರನ್ನ ಸಾಯಿಸಿದ, ಸಾಯುವಂತೆ ಮಾಡಿದ

ಕೃಷ್ಣನಿಗೆ ಯಾವ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಶಂಭೂಕನ ಶಿರಚ್ಚೇದನೇ ಮಾಡಿದ,

ವಾಲಿಯನ್ನ ಹಿಂಬದಿಯಿಂ ಕೊಂದ ರಾಮನಿಗೆ ಯಾವ ಶಿಕ್ಷೆ ವಿದಿಸಿದರು.

ಕೊಲೆಪಾತಕರೆಲ್ಲರೂ ದೇವರುಗಳೇ.

ಅವರ ಕೈಯಲ್ಲಿ ಮಾರಣಾಯುಧಗಳು.

ಸತ್ತವ ರಾಕ್ಷಸ

ಸಾಯಿಸಿದವ ದೈವ

ಇದೆಲ್ಲಿಯ ನ್ಯಾಯ ?

ಅನಾರ್ಯರೆಲ್ಲಾ ದುಷ್ಟರು

ಆರ್ಯರೆಲ್ಲಾ ಶಿಷ್ಟರಾ ?

ನ್ಯಾಯ ಎಲ್ಲರಿಗೂ ಒಂದೇ ಅಲ್ಲವೇ ?

ಈಗ ಕಾರಾಗೃಹಗಳೆಲ್ಲಾ ಸಾಮಾನ್ಯರಿಗಲ್ಲಾ…..

ಅಸಾಮಾನ್ಯರಿಗೇನೇ.

ಹಡುಗು ತುಂಬಾ ಮಾದಕ ವಸ್ತುಗಳು ಅಮದಾಗುತ್ತಿವೆ.

ನಿಜಾನೇ

ಅಕ್ಷರಗಳ ತುಂಬಾ ವ್ಯಾಪಾರವೇ

ಅಕ್ಷರ ದೊಳಗಿನ ಜ್ಞಾನವೆಂಬ ತಿರುಳನ್ನು

ತೆಗೆದು ಹಾಕಿ

ಅಮಲನ್ನು (ನಿಷೆ) ತುಂಬಿಸುತ್ತಿದ್ದಾರೆ.

ನಿರಕ್ಷರಕುಕ್ಷಿಯಾ ! ಅಕ್ಷರಸ್ಥನಾ!! ಎನ್ನುವುದಲ್ಲ

ಭ್ರಷ್ಟಾಚಾರವೇ ಒಂದು ಕಿರೀಟವಾಗಿದೆ.

ಈಗ ಯೋಚಿಸುವವನೇ ನಿಜವಾದ ಮನುಷ್ಯ.

ಆ ಅನ್ವೇಷಣೆಯಲ್ಲೇ ಈ ಪಯಣ.

=================

ಕನ್ನಡಾನುವಾದ: ನಾರಾಯಣ ಮೂರ್ತಿ ಬೂದುಗೂರು

ಮೂಲ ತೆಲುಗು ರಚನೆ: ಡಾ.ಕತ್ತಿ ಪದ್ಮಾರಾವು

ಬಿ.ಕಾಂ.ಎಲ್.ಎಲ್.ಬಿ
ವೃತ್ತಿ: ಬೆಂಗಳೂರಿನಲಿ ವಕೀಲರು
ಹವ್ಯಾಸ: ಕನ್ಶಡ ಮತ್ತು ತೆಲುಗು ಸಾಹಿತ್ಯ, ಓದುವುದು, ಸಣ್ಣಪುಟ್ಟ ಬರೆಯುವುದು, ಅನುವಾದ ಮಾಡುವುದು.
ಮೊ: 9448316432

About The Author

1 thought on “ಅನುವಾದ”

  1. ಚಂದವಾಗಿದೆ ಸರ್. ಯಾರು ಕೊಲೆಪಾತಕರು , ಯಾವುದು ನ್ಯಾಯ, ಯಾವುದು ಅನ್ಯಾಯ , ಯಾರಲ್ಲಿ ಕೇಳುವುದು ?

Leave a Reply

You cannot copy content of this page

Scroll to Top