ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಮಾಡು ನೀ ಪ್ರಯತ್ನ ಪ್ಯಾರಿಸುತ ಯತ್ನ,ಯತ್ನ ಮಾಡು,ಮಾಡು ನಿನ್ನ ಪ್ರಯತ್ನ ಆಗಲೇ ನನಸಾಗಿಸುವುದು ಆ ನಿನ್ನ ಸಪ್ನ ರಾತ್ರಿ ಕಂಡ ಕನಸುಗಳೆಲ್ಲ ಕನಸುಗಳೇ ಅಲ್ಲ ಮಲಗಲಾವುದು ಬಿಡೋದಿಲ್ಲವಲ್ಲ ಅದುವೇ ನಿನ್ನ ಸಪ್ನ, ಮಾಡು ನೀ ಪ್ರಯತ್ನ ಒಳ್ಳೆ ಬದುಕು ಕಾಣಲು ವಿದ್ಯೆಯೊಂದು ಸಾಲದು ಒಂದೇ ಗುರಿಯ ನಿಗದಿಸಿ ಯತ್ನ ಮಾಡು ಸಿಗುವುದು ಕಾಲ ತುಂಬಾ ಓಡುವದು ನೀನು ಯಾಕೆ ನಿಲ್ಲುವದು ಗುರಿಯ ಕಡೆ ಓಡುತಿರೇ ಸಾಧನಾಶಿಖರವೇ ನಿನ್ನದು ಬಡವ ಬಲ್ಲವ ಎಲ್ಲ ಒಂದೇ ಗುರಿಯನ್ನು ಸಾಧಿಸಲು ಕುಂಟು ನೆಪವು ಹೇಳಿದರೆ ಆಗದು ಉಚ್ಛವಾಗಿ ಬದುಕಲು ಪಡೆದು ಬಂದ ಜನುಮ ಗುರುತಾಗಿಯೇ ಉಳಿಸಲು ಹಗಲಿರುಳು ಯತ್ನಿಸು ಜಯದ ಡಮರುಗ ಬಡಿಯಲು ಗೆದ್ದು ಬಂದ ಸಾಧಕರೆಲ್ಲ ಅದೃಷ್ಟ ಮಾಡಿ ಗೆದ್ದವರಲ್ಲ ಇಟ್ಟ ಗುರಿಯನು ಆಗದೆಂದು ಬಿಟ್ಟವರಲ್ಲ ಸುಲಭವಾಗಿ ಗೆದ್ದರೆ ಸಾಧನೆಯಾಗೋದಿಲ್ಲ ಗೌರವಯುತ ಸನ್ಮಾನ ಬಿಟ್ಟಿಯಾಗಿ ಸಿಗೋದಿಲ್ಲ *******************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

 ವಿಭಿನ್ನ ರೇಶ್ಮಾ ಗುಳೇದಗುಡ್ಡಾಕರ್ ಕೋಟೆ ಕಟ್ಟುವೆ ಭಾವನೆಗಳ ನಡುವೆಎಂದವ ಹೆಣವಾಗಿ ಬಿದ್ದನುಒಡೆದ ಕನಸುಗಳ ಅವಶೇಗಳಮಧ್ಯೆ …. ಮಾನವತೆಯ ಹರಿಕಾರನೋಂದಮನಗಳ ಗುರಿಕಾರ ಎಂದುನಕಲಿ ಫೋಸು ಕೊಟ್ಟವನುಎಡಬಿಡದೆ ಭಾಷಣಗಳಸುರಿಮಳೆಗೈದವನು ಬಹಳ ದಿನಬಾಳಿಕೆ ಬರಲಿಲ್ಲ ಸತ್ಯಗಳ ಮುಂದೆ …. ಮಾತಿನಲ್ಲೆ ಬಂದೂಕು ಇಟ್ಟವನುಮುಗ್ದ ಮಂದಿಯ ಚಿತ್ತ ಕದಲಿದನುಅನಾಯಾಸವಾಗಿ ಗೆಲುವು ಪಡೆಯಲುನಿರಂತರವಾಗಿ ಹೆಣಗುತಿರುವನುಗುಂಪುಗಳ ನಡುವೆ …. ಹಿಡಿ ಮಣ್ಣಿಗೆ ಸಾರವ ಪರೀಕ್ಷಿಸುವವರುಬದುಕಿನ ಸಾರವ ಹೊತಿಟ್ಟುಮುಖವಾಡಗಳಿಗೆ ಬಣ್ಣ ಹಚ್ಚುವರು ಸರಳತೆಯೇ ಉಸಿರು ಎಂದುಆದರ್ಶಗಳೇ ಬದುಕು ಎಂದುಅಹಿಂಸೆಯೇ ದೇವರೆಂದವರುಇಂದು ಎಂದೆಂದು “ಮಹಾತ್ಮ “ನೇ ಅಗಿರುವರು …… *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನದಿಯಾಚೆ ಊರಿನಲ್ಲಿ ಕಾಯುತ್ತಿದ್ದೇನೆ ಮೂಗಪ್ಪ ಗಾಳೇರ ಅನಾಥ ಶವವಾಗಿ ಮಲಗಿರುವ ನನ್ನ ಒಂದೊಂದು ಕನಸುಗಳು ಇನ್ನೂ ಉಸಿರಾಡುತ್ತಿವೆ ಎಂದರೆ ನೀ ಬಿಟ್ಟು ಹೋದ ನೆನಪುಗಳು ಚುಕ್ಕಿ ಚಂದ್ರಮರಂತೆ ಅಜರಾಮರ ಎಂದರ್ಥ| ಉಸಿರಾಟಕ್ಕೂ ಉಸಿರಿಗು ಕನಸುಗಳಿಗು ನೆನಪುಗಳಿಗು ವ್ಯತ್ಯಾಸ ತಿಳಿಯದೆ ಶವವಾದ ಈ ಹೃದಯಕ್ಕೆ ಈ ಕವಿತೆಗಳೇ ಔಷಧಿ ಎಂದರೆ ತಪ್ಪಿಲ್ಲ ಒಮ್ಮೆ ನೀ ಹಿಂದಿರುಗಿನೋಡಿದರೆ ಗೊತ್ತಾಗುತ್ತಿತ್ತು ನಾನೆಟ್ಟ ಹೂವಿನ ಗಿಡಗಳು ನೂರಾರು ಜಾತಿಯದ್ದಾಗಿದ್ದರೂ ಅವುಗಳಿಂದ ಸೂಸುವ ಕಂಪು ಒಂದೆಂದು ಒಂದೊಮ್ಮೆ ನೀ ಮುಂದಿಟ್ಟ ಹೆಜ್ಜೆ ತಿರುಗಿಸಿ ಹಿಂದಿಟ್ಟರೆ ನನ್ನ ಹೃದಯದ ಆಕೃತಿ ಅಷ್ಟೇ ಅಲ್ಲ ನನ್ನ ಭವಿಷ್ಯದ ಚಿತ್ರಣವು ಬದಲಾಗಬಹುದು ಕೆರೆಯ ದಂಡೆಯ ಮೇಲೆ ಕೂತು ಕಂಡ ಕನಸುಗಳಿಗೆಲ್ಲಾ…… ಒಂಟಿಯಾಗಿದ್ದಾಗ ಬರೆದ ಕಾವ್ಯಗಳಿಗೆಲ್ಲಾ…… ಮತ್ತೆ ನಿನ್ನ ಬಾಚಿ ತಬ್ಬಿಕೊಳ್ಳುವ ಬಯಕೆ ಬಂದುಬಿಡು ನದಿಯಾಚೆ ಊರಿನಲ್ಲಿ ಕಾಯುತ್ತಿದ್ದೇನೆ……! ****************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸೀರೆ ಮತ್ತು ಬಟ್ಟೆ ಡಾ.ಗೋವಿಂದ ಹೆಗಡೆ ಸೀರೆ ಮತ್ತು ಬಟ್ಟೆ ಆದರೂ ಈ ಸೀರೆ ಎಂಥ ಯಕ್ಷಿಣಿ! ಮೈತುಂಬ ಹೊದ್ದ ಸೆರಗಾಗಿ ಗಜಗೌರಿ ಎನಿಸಲೂ ಸೈ ಮಾಟದ ಬೆನ್ನು ಸೊಂಟ ಆಕರ್ಷಕ ಹೊಕ್ಕುಳ ಸುಳಿ ತೋರಿಸಿ ಹಸಿವು ಕೆರಳಿಸಲೂ ಸೈ ‘ನಾವೇನು ಸೀರೆ ಉಟ್ಟಿಲ್ಲ’ ಎಂದೆಲ್ಲ ಪೌರುಷ ತೋರಿಸುವಂತಿಲ್ಲ ಈಗ ನೀರೆಗೂ ಸೀರೆ ಕಡ್ಡಾಯವಲ್ಲ! ಆಯ್ಕೆಗಳಿವೆ ಅವಳಿಗೆ ಆದರೂ ‘ಸೆರಗು ಸೊಂಟಕ್ಕೆ ಸುತ್ತಿ’ ‘ವೀರಗಚ್ಚೆ ಹಾಕಿ’ ಎಂದೆಲ್ಲ ನಾರೀಶಕ್ತಿಯನ್ನು ಬಣ್ಣಿಸುವುದುಂಟು ಗಂಡ ಅರ್ಧ ಸೀರೆಯನ್ನು ಹರಿದು ಸುತ್ತಿಕೊಂಡು ನಾಪತ್ತೆಯಾದಾಗ ದುರುಳ ಉಟ್ಟ ಸೀರೆಯನ್ನು ಸೆಳೆಯುವಾಗ ಎದ್ದು ನಿಂತಿದ್ದಾಳೆ ಅವಳು ತನ್ನ ಅಂತಃಶಕ್ತಿಯನ್ನೇ ನೆಚ್ಚಿ ಸೀರೆಯ ನೆರಿಗೆಯನ್ನು ಎಷ್ಟೊಂದು ಸಲ ಬೆರಳುಗಳು ನೇವರಿಸಿವೆ ಸುಕ್ಕಾಗಿದ್ದು ಸೀರೆ ಮಾತ್ರವೇ? ಸೆರಗಿನ ಕೊನೆ ಕಣ್ಣ ಪಸೆಯನ್ನು ಎಷ್ಟೆಲ್ಲ ಬಾರಿ ಹೀರಿ ಸಂತೈಸಿದೆ ಯಾವೆಲ್ಲ ನಿಟ್ಟುಸಿರು ಕರಗಿದೆ ಸೀರೆಯ ಮೃದು ಒಡಲ ಹಿಂದೆ ಗಂಡಸಿನ ಅಹಂಕಾರಕ್ಕೋ ಅವಳು ಹಾಸಿಗೆ ಅಥವಾ ಪೊರೆಯುವ ಮಡಿಲು ಅವಳ ಹುಟ್ಟೇ ಬೇರೆ! ಎದೆಯೂಡೆಂದ ತ್ರಿಮೂರ್ತಿಗಳ ಕೂಸಾಗಿಸಿ ಸಲಹಿದ್ದಾಳೆ ಅವಳು ಅಜಾತನಿಗೂ ಎದೆಹಾಲು ಉಣಿಸಿದ್ದಾಳೆ ಜಾತನಿಗೆ ತಾಯಿಯಾಗುವುದು- ಅದೇನು ಮಹಾ! ಕಾಡುವ ಕಣ್ಣು ಕೈ ತಾಳಿ ಕಟ್ಟಿದ ಕಾರಣಕ್ಕೆ ತನ್ನ ಹಕ್ಕೆನ್ನುವ ಪುರುಷಾಮೃಗ ದ ತುರಿಕೆ ತೀಟೆಗೆ ಬುದ್ಧಿ ಬಂದಿರಬಹುದೇ ಸೀರೆಯಲ್ಲ, ನೂಲಿನ ಹಂಗನೂ ಕಳಚಿ ನಡೆದಾಗ ಅಕ್ಕ ಸಂತೆ-ಸೀಮೆಯ ದಾಟಿ ಬಯಲನ್ನು ಬಿತ್ತಿಕೊಂಡಾಗ ಬಟ್ಟೆಯ ಗೊಡವೆಯೆಲ್ಲಿ ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಶಿವನ ನೆನೆಯಲೆಂದು ರೇಖಾ ವಿ. ಕಂಪ್ಲಿ ಸಾವಿರದ ಮೆಟ್ಟಿಲ ಮೇಲೊಂದು ಕನಸು ಕಾಣುವವನ ಭಾವನೆಯ ಮೇಲೊಂದು ನನಸು ಇಟ್ಟನು ದೇವಾ ಹೆಣ್ಣ ಮೇಲೊಂದು ಸೊಗಸು ಮಠ ಒಂದು ಕಟ್ಟಲಿಲ್ಲ ಗಂಡು ಮೇಲೊಂದು ಮನಸು ಆಸೆಗಳ ಅರಿಬಿಟ್ಟ ಅಂಚಿಕೆಯ ಮಾಡದೇ ಅನುದಿನವು ಅವನ(ದೇವರ) ನೆನೆಯಲೆಂದು ಪಾದುಕೆಗಳಿಗೊಂದು ಹೊದುಕೆ ಕೊಟ್ಟವನು ಮನಸೆಂಬ ಹೊದುಕೆಗೆ ಆಳು ನೆನಪುಗಳ ನಿಟ್ಟು ತನ್ನ ಮುಟ್ಟುವ ಗಟ್ಟಿ ಗುಟ್ಟಾಗು ಎಂದು ಮೆಟ್ಟು ಭಾವನೆಯ ನಿನ್ನ ಪಟ್ಟು ಮೀರೆಂದು ತಟ್ಟು ಶಿವನೆದೆಯ ಕರುಣಾಂತರಂಗವನು ಅವನೊಲುಮೆಯ ಸಾಗರದ ಶರಧಿಯನು *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಡುಗೆ ಮನೆಯೆಂದರೆ ಸ್ಮಿತಾ ರಾಘವೇಂದ್ರ ಅಡುಗೆ ಮನೆಯೆಂದರೆ ಯುದ್ಧಕ್ಕೆ ಮೊದಲು ಎಲ್ಲವೂ ಶಾಂತವೇ ಯುದ್ದ ಮುಗಿದ ಮೆಲೂ… ಅನಿವಾರ್ಯ ಮತ್ತು ಅವಶ್ಯಕತೆ- ಸಂಭವಿಸುವ ಮುಂಚಿನ ಸಮಜಾಯಿಶಿ. ಅಣಿಗೊಳ್ಳಲು ಹೆಚ್ಚಿನ ತಯಾರಿ ಏನಿಲ್ಲ ಅತ್ತಿಂದಿತ್ತ ತಿರುಗಾಡುತ್ತಲೇ ಮಾತು ಒಗೆದಂತೆ- -ಅಣಿಮಾಡುವ ರಣರಂಗ. ನುಗ್ಗೆಕಾಯಿ ಸಪೂರ ದಂತವರು, ಹೊಟ್ಟೆ ಭಾರದ ದೊಣ್ಣ ಮೆಣಸಿನಂತವರು ಕೆಂಪು ಗಲ್ಲದ ಟೊಮೆಟೊ ಅಂತವರು, ಸೊಪ್ಪಿನಂತೆ ಉದ್ದ ಕೂದಲಿನವರು, ನಾ ನಾ ವಿಧದ ಸೈನಿಕರ ಗುಂಪು, ರಾಜನ ಆಗಮನವನ್ನೇ ಎದುರು ನೋಡುತ್ತ.. ಯಾರು ಮೊದಲು ಮಡಿಯಬಹುದು!? ಇಂದು ನಿನ್ನದೇ ಪಾಳಿ ಮೂಲೆಯಲ್ಲಿ ಕೂತ ಈರುಳ್ಳಿ. ಬಿಡುವೆನೇ ಕಣ್ಣ ಹನಿ ಉದುರಿಸದೇ ಸಣ್ಣ ಹೊಟ್ಟೆ ಉರಿ- ಇವಳು ಇಷ್ಟಾದರೂ ಘಟ್ಟಿ; ಅಡಗಿ ಕೂತವರನ್ನೆಲ್ಲ ಎಳೆದು ತಂದು ಸಿಪ್ಪೆ ಸುಲಿದು. ಕಚ ಕಚನೇ ಕೊಚ್ಚಿ ಬೇಯಿಸಿ ಬಾಡಿಸಿ, ಉಪ್ಪು ಹುಳಿ ಖಾರ, ಉರಿ ಉರಿ ಕೂಗಿದರೂ ಬಿಡದ ಘೋರ ಹಳೆಯ ದ್ವೇಶವೆಲ್ಲ ತೀರಿಸಿಕೊಂಡ ಹಗುರ ಅಮರಿಕೊಂಡ ಅಸಹಾಯಕತೆಯ ಅಸಹನೆ ಕೊಡವಿಕೊಂಡ ನಿರಾಳ ಎಲ್ಲ ಮುಗಿದ ಮೇಲೂ ಏನೂ ಆಗದಂತೆ ಕಣ್ತುದಿಯ ಹನಿಯೊಂದು ಇಂಗಿದಂತೆ ಅಗಲ ನಗೆಯಲಿ ಎಲ್ಲವೂ ಖಾಲಿ ಖಾಲಿ ಕುರುಹೂ ಇಲ್ಲದ ರಣರಂಗದಲಿ ಖಿಲ ಕಿಲನೇ ನಗುವ ಅವಳ ಖಯಾಲಿ.. ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗೆಳತಿ ನಕ್ಕುಬಿಡು ಮೂಗಪ್ಪ ಗಾಳೇರ ನಾನು ನೋಡಿದ ಹುಡುಗಿಯರೆಲ್ಲಾ….. ಪ್ರೇಯಸಿಯರಾಗಿದ್ದರೆ ನಾನು ಗೀಚಿದ ಸಾಲುಗಳೆಲ್ಲಾ ಕವಿತೆಗಳಾಗಬೇಕಿತ್ತಲ್ಲ! ದಡ್ಡಿ….. ನಿನಗಿನ್ನೂ ಹಗಲು ಮತ್ತು ರಾತ್ರಿಯ ವ್ಯತ್ಯಾಸ ಗೊತ್ತಿದ್ದಂತೆ ಕಾಣುತ್ತಿಲ್ಲ! ಕತ್ತಲನ್ನು ನುಂಗಿ ಬೆಳಕಾಯಿತೋ…! ಬೆಳಕನ್ನು ನುಂಗಿ ಕತ್ತಲಾಯಿತೋ…! ನೀನು ನನ್ನ ಜೊತೆ ಇಟ್ಟ ಒಂದೊಂದು ಹೆಜ್ಜೆಯೂ ಹಳೆ ಸಿನಿಮಾದ ಹಾಡುಗಳಂತೆ ನನ್ನೆದೆಯಲ್ಲಿ ಯಾವಾಗಲೂ ಗುನುಗುತ್ತಿರುತ್ತವೆ ಒಮ್ಮೊಮ್ಮೆ ಎದೆಭಾರ ಆದಾಗ ಕವಿತೆಯ ಸಾಲು ಬೇರೆಯಾಗಬಹುದು ಕವಿತೆ ಮಾತ್ರ ಎಂದೆಂದೂ ನೀನೆ ಒಂದೊಮ್ಮೆ ನನ್ನ ಕವಿತೆಯ ಸಾಲುಗಳನ್ನು ಯಾರೋ ಓದುತ್ತಿದ್ದಾರೆಂದರೆ ಅದು ನಮ್ಮಿಬ್ಬರ ನಡುವಿನ ಪ್ರೀತಿಯ ಪಲ್ಲವಟವೆಂದೆ ಕರೆಯಬಹುದು ಹಾಗೆ ಪಲ್ಲಟ ವಾದ ಈ ಪ್ರೀತಿಗೆ ಯಾವ ಪ್ರೇಮಿಗಳು ಸಾಟಿ ಹೇಳು ಗೆಳತಿ ಒಮ್ಮೆ ನಕ್ಕು ಬಿಡು ಮಲ್ಲಿಗೆಯ ದಳದಲ್ಲಿಯೂ ನಿನ್ನ ಮನಸ್ಸಿನ ಯವ್ವನವ ಗೀಚಿರುವೆ ಕಡಲ ಮುತ್ತಿನಲ್ಲಿಯೂ ಪ್ರೀತಿಯ ಒಡಲ ಕಟ್ಟಿರುವೆ| ************************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ದೇವರ ದೇವ ಅಂಜನಾ ಹೆಗಡೆ ಕಾಲ ಎಲ್ಲವನ್ನೂ ಮರೆಸುತ್ತದೆ ಎಂದವ ಕಾಲಕ್ಕೆ ಕಿವುಡಾಗಿ ಕಣ್ಣುಮುಚ್ಚಿ ಉಟ್ಟಬಟ್ಟೆಯಲ್ಲೇ ಧ್ಯಾನಕ್ಕೆ ಕುಳಿತಿದ್ದಾನೆ ತಂಬೂರಿ ಹಿಡಿದು ತಂತಿಗಳ ಮೇಲೆ ಬೆರಳಾಡಿಸುತ್ತ ಶ್ರುತಿ ಹಿಡಿಯುತ್ತಾನೆ ಬೆರಳಲ್ಲಿ ಹುಟ್ಟಿದ ಬೆಳಕಿನ ಕಿರಣವೊಂದು ನರಗಳಗುಂಟ ಹರಿದು ಬೆಂಕಿಯಾಗಿ ಮೈಗೇರಿದೆ ಉಸಿರೆಳೆದುಕೊಳ್ಳುತ್ತಾನೆ ದೇವರ ಗೆಟಪ್ಪಿನಲ್ಲಿ ಕಾಲಮೇಲೆ ಕೈಯೂರಿದ್ದಾನೆ ಕಪ್ಪು ಫ್ರೆಮಿನ ದಪ್ಪಗಾಜಿನ ಕನ್ನಡಕ ರೂಪಕವಾಗಿ ಮುಚ್ಚಿದ ಕಿವಿಯ ಮೇಲೆ ಬೆಚ್ಚಗೆ ಕೂತಿದೆ ಕೈಗೆ ಸಿಗದ ಕಣ್ಣಿಗೆ ಕಾಣಿಸದ ಶಬ್ದ ಹಿಡಿಯಲು ಕುಳಿತವನ ಮೈಯೆಲ್ಲ ಕಣ್ಣು…. ಮುಚ್ಚಿದ ಕಣ್ಣೊಳಗೊಂದು ರಾಗ ತೆರೆದರೆ ಇನ್ಯಾವುದೋ ತಾಳ ಮೈಮರೆಯುತ್ತಾನೆ ರೆಪ್ಪೆಗೊತ್ತಿದ ತುಟಿಗಳನ್ನು ಧಿಕ್ಕರಿಸಿದವನ ಹಣೆಮೇಲಿಂದ ಬೆವರಹನಿಯೊಂದು ಲಯತಪ್ಪದಂತೆ ಮುತ್ತಾಗಿ ತುಟಿಗಿಳಿದಿದೆ ಕಾಲವನ್ನೇ ಮರೆಯುತ್ತಾನೆ ಕಾಲವನ್ನು ಮರೆಸುವವ ಕಳಚಿಕೊಂಡ ಕಣ್ಣರೆಪ್ಪೆಯೊಂದು ಧ್ಯಾನ ಮರೆತಿದೆ ********************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಷರಾ ಬರೆಯದ ಕವಿತೆ ಡಾ.ಗೋವಿಂದ ಹೆಗಡೆ ಇಂದು ಅವ ತೀರಿದನಂತೆ ತುಂಬ ದಿನಗಳಿಂದ ಅವ ಬದುಕಿದ್ದೇ ಗೊತ್ತಿರಲಿಲ್ಲ ಒಂದು ಕಾಲದಲ್ಲಿ ನೆಲ ನಡುಗಿಸುವ ಹೆಜ್ಜೆಯ ಭಾರಿ ಮೀಸೆಯ ಹುಲಿ ಕಣ್ಣುಗಳ ಅವ ನಡೆಯುತ್ತಿದ್ದರೆ ನನಗೆ ಮಂಚದ ಕೆಳಗೆ ಅವಿತು ಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ ಆಗ ಕವಿತೆ ಕನಸಲ್ಲೂ ಸುಳಿಯುತ್ತಿರಲಿಲ್ಲ ಮತ್ತೆ ಯಾವಾಗಲೋ “ಅವನಾ? ತುಂಬಾ ಕುಡೀತಾನೆ ರೈಲಿನ ಎಂಜಿನ್ ಹಾಗೆ ಸದಾ ಹೊಗೆ ಬಿಡ್ತಾನೆ” ಹೊಟ್ಟೆ ಊದಿ ಕಣ್ಣು ಹಳದಿಗೆ ತಿರುಗಿ ಲಿವರ್ ಫೇಲ್ಯೂರ್ ನ ದಯನೀಯ ಪ್ರತಿಮೆ ಆಗಲೂ ಹೆಂಡತಿಗೆ ಹೊಡೆಯುತ್ತಿದ್ದ ಭೂಪ ಅವನ ಸೇವೆಗೆಂದೇ ಹುಟ್ಟಿದಂತಿದ್ದ ಅವಳ ಕಣ್ಣುಗಳಲ್ಲಿ ಸದಾ ಉರಿಯುತ್ತಿದ್ದ ಶೂನ್ಯ ಅವು ನಗುತ್ತಲೇ ಇರಲಿಲ್ಲ ಮನುಷ್ಯ ಯಾವಾಗ ಸಾಯಲು ಆರಂಭಿಸ್ತಾನೆ ಕವಿತೆ ಹೇಳುವುದಿಲ್ಲ ಇಂದು ಬರೆಯಹೊರಟರೆ ಬರೀ ಅಡ್ಡ ಉದ್ದ ಗೀಟು ಗೋಜಲು ಷರಾ ಬರೆದರೆ ಬದುಕಿಗೆ ಕವಿತೆಯಾಗುವುದಿಲ್ಲ ಸಾವು ಉಳಿಸುವ ಖಾಲಿತನ ಯಾವ ಷರಾಕ್ಕೂ ದಕ್ಕುವುದಿಲ್ಲ *****************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹೀಗೊಂದುಕವಿತೆ ವಿಜಯಶ್ರೀ ಹಾಲಾಡಿ ನರಳುತ್ತಿರುವ ಬೀದಿನಾಯಿಯಮುಗ್ಧ ಆತ್ಮಕ್ಕೂಅದ ಕಂಡೂ ಕಾಣದಂತಿರುವನನ್ನ ದರಿದ್ರ ಆತ್ಮಕ್ಕೂಅಗಾಧ ವ್ಯತ್ಯಾಸವಿದೆ ! ಮಗುವಿಗೆ ಉಣಿಸು ಕೊಡುವನನ್ನ ಕೈಗಳೇಬೀದಿ ನಾಯಿಮರಿನಿಮ್ಮ ಮಗುವಲ್ಲವೇ? ? ತಿನಿಸು ಉಡುಪು ದುಡ್ಡುಖುಷಿ ನಗು ಗಿಗುಎಲ್ಲ ನಿನಗೇ ಎಂದುಭಾವಿಸುವ ಮೂರ್ಖ ವಿಜೀಅನ್ನವಿಲ್ಲದ ನೆಲೆಯಿಲ್ಲದಆ ಮೂಕಪ್ರಾಣಿಗಳಿಗೇನುಉತ್ತರಿಸುವೆ? ಯಾರೋ ಹೊಡೆದರುಮರಿನಾಯಿ ಅತ್ತಿತುತಾಯಿ ಜೀವಅದೆಷ್ಟನೆ ಸಲವೋಸತ್ತಿತು! !*****************************************

ಕಾವ್ಯಯಾನ Read Post »

You cannot copy content of this page

Scroll to Top