ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗುಲಾಬಿ ನಕ್ಷತ್ರ ಅಂಜನಾ ಹೆಗಡೆ ಶಾಪಿಂಗ್ ಹೋದಾಗಲೊಮ್ಮೆ ಪರಿಚಯದ ಅಂಗಡಿಯವ ಗುಲಾಬಿ ಬಣ್ಣದ ಚಪ್ಪಲಿ ಹೊರತೆಗೆದ ಬೆಳ್ಳನೆಯ ಪೇಪರಿನೊಳಗೆ ಬೆಚ್ಚಗೆ ಸುತ್ತಿಟ್ಟ ರಾಣಿ ಪಿಂಕ್ ಚಪ್ಪಲಿ! “ಸೈಜ್ ನೋಡಿ ಮೇಡಂ; ನಿಮ್ಮ ಕಾಲಿಗೆ ಹೇಳಿ ಮಾಡಿಸಿದ ಬಣ್ಣ” ಎಂದ ಹಳೆ ಚಪ್ಪಲಿಯ ಕಳಚಿ ಪಾದಗಳನ್ನೊಮ್ಮೆ ಕೈಯಿಂದ ತಡವಿ ಧೂಳು ಕೊಡಹಿ ಅಳೆಯಲು ನಿಂತೆ ಬಣ್ಣ ಗಾತ್ರಗಳ! ಬಳಸಲಾಗದು ಅಳತೆ ದಕ್ಕದೆ ಕುತ್ತಿಗೆಯ ತುಸುಬಾಗಿಸಿ ಬಿಳಿಯ ಸ್ಟ್ರೈಪ್ ಗಳೊಳಗೆ ಬೆರಳುಗಳ ಬಂಧಿಸಿ ದಿಟ್ಟಿಸಿದೆ! ಕನ್ನಡಿಯೊಳಗಿನ ಪಾದಗಳ ಮೇಲೆ ಹೊಳೆದವು ಬಿಡಿಸಿಟ್ಟ ಬಿಳಿ ಹೂಗಳು! ಕೊರೆದಿಟ್ಟ ಪುಟ್ಟಪುಟ್ಟ ಹೃದಯಗಳೊಂದಿಗೆ ಗುಲಾಬಿ ನಕ್ಷತ್ರಗಳು! ಜೊತೆಯಾದವು ಹೆಜ್ಜೆಗಳ ನೋವು ನಲಿವಿಗೆ; ನೇಲ್ ಪಾಲಿಷ್ ಗಳ ಕೂಡಿಟ್ಟ ಕನಸಿಗೆ! ನನ್ನ ನಿದ್ದೆಗೆ ಆಕಳಿಸಿ ಎದ್ದಾಗಲೊಮ್ಮೆ ಮೈಮುರಿದು ಕೂಡಿಕೊಂಡವು ಹಗಲು ರಾತ್ರಿಗಳಿಗೆ ಬಾತ್ ರೂಮು ಬಾಲ್ಕನಿ ಟೆರೆಸು ನಿರ್ಭಯವಾಗಿ ಅಲೆದೆವು “ದೇವರಮನೆಗೆ ಪ್ರವೇಶವಿಲ್ಲ” ಎಂದೆ ಮುನಿಸಿಕೊಂಡವು “ಪ್ಲೀಸ್” ಎಂದು ಪಟಾಯಿಸಿದೆ ಎಲ್ಲ ಸಲೀಸು ಪ್ರೈಸ್ ಟ್ಯಾಗ್ ಇಲ್ಲದ ಪ್ರೀತಿ ಮಾರಿದೆವು; ಖರೀದಿಸಿದೆವು ಮನಸ್ಸೊಂದು ಫ್ಲೀ ಮಾರ್ಕೆಟ್ಟು ಈಗ ಶಾಪಿಂಗ್ ಹೋದಾಗ ಬಟ್ಟೆ ಬ್ಯಾಗು ತರಕಾರಿ ಎಲ್ಲ ತರುತ್ತೇನೆ ಚಪ್ಪಲಿ ಅಂಗಡಿಯವ ಇನ್ಯಾರಿಗೋ ಹೊಸ ಜೊತೆಯ ಪಿಂಕ್ ಚಪ್ಪಲಿಯೊಂದನ್ನು ಮಾರುತ್ತಿರಬಹುದು! ಅದರ ಮೇಲೂ ಇರಬಹುದು ಹೂವು ಹೃದಯ ನಕ್ಷತ್ರಗಳು ******

ಕಾವ್ಯಯಾನ Read Post »

ಕಾವ್ಯಯಾನ

ಮಾತೃ ದೇವೋಭವ

ಮಾತೃ ದೇವೋಭವ ಸಂಮ್ಮೋದ ವಾಡಪ್ಪಿ ದೇವ ಬಿತ್ತಿದ ಇಲ್ಲಿ ಎದ್ದು ನಿಲ್ಲಲೆಂದು ಹಸಿರ ಚಿಗುರೊಡೆದು ಮೇಲೇಳಲೆಂದು ಬಸಿರ ಭೂತಾಯಿಯ ಒಡಲ ಹೊರಬಂದು ಉಸಿರ ಬೆಸೆದು ನಸು ನಗುವ ಬೀರಲೆಂದು ಇದು ಜನುಮ ಅಗೋಚರ ಶಕ್ತಿಯಿಂದ ಅಳುವ ದ್ವನಿಯ ಕೇಳುವ ತವಕದಿಂದ ಹುಟ್ಟು ನವಮಾಸದ ತಪದ ದಾರಿಯಿಂದ ಪಯಣ ಆ ಮಾತೆಯ ಲಾಲಿ ಹಾಡಿನಿಂದ ರತ್ನವಾಗಲಿ ಎನುತ ತೊಟ್ಟಿಲ ತೂಗಿದಾಗ ಮಂದಹಾಸದಿ ದೃಷ್ಟಿ ಬೊಟ್ಟು ಒತ್ತಿದಾಗ ಸುಪಥವ ಹಿಡಿದು ನಡೆಸಲು ಹರಸಾಹಸ ಯಶೋದೆಯ ಪರಿಶ್ರಮವೇ ಅವನ ವಿಕಾಸ ಭವದ ದಾರಿಯಲಿ ತಂದು ನಿಲ್ಲಿಸಿದ ದಾತ ಅವನು ನಿರ್ವಿಕಾರ,ಮಾತೆಯನಿಟ್ಟು ಮಾಡಿದ ಸಾಕಾರ ಎರಡು ಬಿಂದು ನಡುವೆ ಬಹು ಏಳು ಬೀಳು ಚಲಿಸು ಮುಂದೆ, ಒಳಿತು ಮಾಡು, ಅವಳು ಕೊಟ್ಟ ಬಾಳು **********

ಮಾತೃ ದೇವೋಭವ Read Post »

ಕಾವ್ಯಯಾನ

ಕಾವ್ಯಯಾನ

ಕ್ವಾರೆಂಟೈನ್ ಹಾಯ್ಕುಗಳು. ಪ್ರಮೀಳಾ ಎಸ್.ಪಿ. ಕರೊನಾಕ್ಕೆ ಕಾರಣವಂತೆ ಶಾಂಗ್ಲಿ ಮತ್ತವಳ ಬಾವಲಿ ನರಳುತ್ತಿರೋದು ಮಾತ್ರ ಇಟಲಿಯ ಇಲಿ. ಸತ್ತರಂತೆ ಅಮೆರಿಕಾದಲ್ಲಿ ಅಷ್ಟೊಂದು ಜನ. “ಹೊಯ್” ! ಟೀವಿಯಲ್ಲಿ ಮಾರಾಯ… ಎಂದು ಅಡ್ಡಾಡಿದರು ನಮ್ಮೂರ ಜನ . ಸುರರೇ ಕುಡಿಯುತ್ತಿದ್ದರು ಎಂಬ ನೆಪ ಕುಡುಕರದ್ದು ಕೇಳದಿದ್ದರೂ ನೀಡಿದವರು ಹೇಳಲಾರದ ನೆಪ ‘ಗಲ್ಲ’ದ್ದು. ಕಂಠ ಪೂರ್ತಿ ಕುಡಿದು ಅಪ್ಪ ಅಮ್ಮನಾದರು ಬೆತ್ತಲು ಕಣ್ಣು ಬಿಟ್ಟ ಮಗುವಿನ ಮನದಲ್ಲೀಗ ಕತ್ತಲು. ಕೇಳುವರೆಲ್ಲ ತೆರೆಯಲೆಂದು ಅವರವರ ಆದಾಯದ ಬಾಗಿಲು ತೆರೆಯಿರಿ ಎಂದು ಕೇಳುವುದೇ ಇಲ್ಲ ಮಕ್ಕಳು ಶಾಲೆಯ ಬಾಗಿಲು. ***********************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹೆಣ್ಣಿನಂತರಾಳ ವಾಣಿ ಮಹೇಶ್ ಮಮತೆಯ ಮಡಿಲಲ್ಲಿ ಮಮತೆಯ ಕಾಣದೆ ಮರುಗುವುದ ಕಲಿತೆ ಮರುಳ ಮನಸು ಅರಿಯದೆಲೆ ಆಸೆಗಳು ಕಂಗಳ ತುಂಬಿವೆ / ಕೊರಳುಬ್ಬಿ ಕಂಗಳ ಕಂಬನಿ ಜಾರಲು.. ಹೆದರಿ ಅಲ್ಲೇ ಅವಿತು ತನ್ನಿರವ ಸೂಚಿಸಿದೆ / ಪ್ರೇಮಮಯಿ ಮಾತೆ ತನ್ನಿರವ ಮರೆತಳು ನಾ ಬರೆದ ರಾಗಕೆ ಸ್ವರವೇ ಇಲ್ಲವಾಗಿಸಿಹಳು ತಂತಿ ಕಡಿದು ಜೀವವೀಣೆ ಜೀವಚ್ಛವವಾಗಿದೆ/ ರಾಗಾಲಾಪಗಳು ಶೋಕದಿ ಬಿಕ್ಕುತಿವೆ ಬಯಸಿದ ಮಮತೆ ದೂರ ಸಾಗಿ ಹೋಗಿದೆ.. ಕಾಣದಾ ಲೋಕಕೆ ನೆನಪು ಹಚ್ಚ ಹಸಿರಾಗಿ ಬೊಬ್ಬಿಡುತಿದೆ / ಮೌನ ಕೆಣಕಿದೆ ಕಾಮನಬಿಲ್ಲಂತೆ ಕಂಗೊಳಿಸುವ ವಯಸ್ಸಿನಲ್ಲೇ… ಚಿವುಟಿದ ಕಾರಣ ಅರಿಯದಾಗಿದೆ../ ಅವಿತಿದ್ದ ಭಾವನೆಗಳು ಪ್ರೀತಿಯ ಪ್ರಣಯಕೆ ಜೋತು ಬಿದ್ದಿದೆ ಬೇಕು ಬೇಡದ ಭಾವನೆಗಳೆಲ್ಲಾ ಚಿಗುರೊಡೆದು ಬದುಕೇ ಇಷ್ಟೆನಿಸಿದೆ / ಮಾತೆಯ ಮಡಿಲಿನ ಮಹಿಮೆ ಆಕಾಂಕ್ಷೆ ಕೊನೆಗೂ ಕರುಣಿಸದೆ ಕನಸಾಗಿಸಿದೆ / *************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಂತಃಶುದ್ಧಿಯ ಸಮಯ…!! ಅರ್ಚನಾ ಹೆಚ್ ಜಾತಿ ಧರ್ಮಗಳ ಸುಳಿಯಲರಳಿದ ಕುಸುಮಗಳಿಂದು‌ ಶಿವಪೂಜೆಗೊದಗದೆ ಬರಿದೆ ಬಾಡಿದ ಬೆರಗು..!! ಹೆತ್ತ ಮಡಿಲಲಿ ಮತ್ತೆ ಕೂಸುಗಳು..! ಬದುಕಿದರೂ ಸತ್ತರೂ ಅವಳೊಡಲೇ ಗಮ್ಯ.. ಮಣ್ಣಾಗಬಾರದವುದೆಂಬುದೊಂದೇ ತಾಯಿ ಹರಕೆ..!! ನಾನು ನನ್ನಂದೆಂಬ ತುಂಬು ಗರ್ವದಲಿದ್ದೆ..!!?? ಮತ್ತೆ ಮೇಲಿಹನಾಗ್ರಹ..! ಕಣ್ಣೆವೆಯಿಕ್ಕದೆ ದಿಟ್ಟಿಸಿ ನೋಡು..! ಸ್ವಾರ್ಥ ದುರಾಗ್ರಹದ ಪೀಡೆಯೊಳಾಡಿದ ಮರುಳ ಮಾನವರಿಗಿದೇಟು! ರಣತಂತ್ರ!! ವಿಕೃತ ಮನಸ್ಥಿತಿಗಳಾಟ! ವಿಶ್ವವ್ಯಾಪಿ ಬೀಸಿ ಚಾಟಿಯೇಟು..!! ಧನವೋ! ಋಣವೋ!?? ಶಕ್ತಿಯಾಟದಲಿ ಸತ್ತವರ ಲೆಕ್ಕಗಳು ಸರ್ವವ್ಯಾಪಿ! ಮೃತ್ಯು ಕಡುಕೋಪಿ..!! ಮಾತೃಭೂಮಿಯ ಸೊಗಡು ಭಕ್ತಿ ಮರೆತವಗೆ ಜಯಘೋಷವಪರಿಮಿತವಿದ್ದ ಕಾಲ…! ಹೆತ್ತವರ ಮರೆತವರು ಗೂಡ ಸೇರಿದರು ಹಾರಿದ ಹಕ್ಕಿಗಳ ರೆಕ್ಕೆ ಮುರಿದು..! ಹಾರಲಾಗದೇ ಛೀಮಾರಿಯಲಿ ಮುಗಿದು..! ಮನೆಯೊಳಗೆ ಬೆಚ್ಚಗಿನ ನಾಲ್ಕು ಗೋಡೆಗಳೊಳಗೆ ಮರೆತ ಮಂತ್ರದ ಘೋಷ ಉದ್ಘೋಷ..!! ಬದುಕಲು ಹೊರನಡೆದು ದುಡಿಯುವಂತಿಲ್ಲ.. ಕೂತಲ್ಲಿ ತಳಹಿಡಿದು ಸೀಯಬೇಕು!! ಸೊರಗಿದ ಸೊಡರು ಗಲಬರೆಸಿ ತೊಳೆದು ಮಡಿಯಲಿ ಕರ್ತನೆಡೆ ಮನಮಾಡಿ ಕೂಡಬೇಕು..! ಧರ್ಮದ ಹಂಗಿರದೆ, ಮೇಲು ಕೀಳೆನ್ನದೆ ಉರಿವ ಜ್ಯೋತಿಯು ಒಂದೇ ಲೋಕನೀತಿ..! ಮೂಡಣದ ನೇಸರನ ಅಸ್ತಂಗತಕೂ ಮುನ್ನ ಮುಚ್ಚಿದ ರೆಪ್ಪೆಗಳು ತೆರೆದುಬಿಡಲಿ..! ನ್ಯಾಯನೀತಿಯು ಉಳಿದು ಈರ್ಷೆ ದುರ್ಬುದ್ಧಿ ಅಳಿದು ಅಂತಃಶುದ್ಧಿಯ ಸಮಯ‌‌ ಸದುಪಯೋಗವಾಗಿಬಿಡಲಿ…!! ***********************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ವೆಂಕಟೇಶ ಚಾಗಿ ಆಕಾಶವನು ಮುಟ್ಟುವೆನು ಒಂದು ದಿನ ಚಿಂತಿಸದಿರು ಅಪ್ಪ ನೆಲದ ಮೇಲಿನ ಡೊಂಬರಾಟದ ಬದುಕಿಗೆ ಚಿಂತಿಸದಿರು ಅಪ್ಪ || ನಿನ್ನ ಬಲವನೆಲ್ಲ ಸೇರಿಸಿ ಆಕಾಶಕ್ಕೊಮ್ಮೆ ಚಿಮ್ಮಿ ಬಿಡು ನಿನ್ನ ನನಸುಗಳ ಹೊತ್ತು ತರುವೆ ನೋಡುತಿರು ಅಪ್ಪ || ಹಸಿವಿನ ಆಟವನು ನೋಡಲು ನೆರೆಯುವರು ನಾಟಕದ ಮಂದಿ ನಿನ್ನಾಟದ ಗತ್ತು ಗಮ್ಮತ್ತುಗಳ ತೋರಿಸುವುದ ಮರೆಯದಿರು ಅಪ್ಪ || ಚಂದ್ರಮನ ತೋರಿಸಿ ಅಮ್ಮ ತುತ್ತು ಉಣಿಸುವಳು ಅಷ್ಟೇ ತುತ್ತುಗಳ ಕೂಡಿಡಲು ನನ್ನ ಎಂದಿಗೂ ಕಡೆಗಣಿಸದಿರು ಅಪ್ಪ || ಕಟ್ಟಿಗೆಯು ತುಂಬಾ ಗಟ್ಟಿಯಾಗಿದೆ ಗೊತ್ತೆ ನನ್ನ ನಂಬಿಕೆಯಂತೆ ‘ಚಾಗಿ’ಯ ಕವನಗಳಂತೆ ಬಡತನವ ಎಂದು ಮರೆಯದಿರು ಅಪ್ಪ || *************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಪ್ರತಿಮಾ ಕೋಮಾರ ಕಹಿಯೂರಲ್ಲೊಂದು ಸಿಹಿ ಗಿಡವ ನೆಡುವ ಸಹಕರಿಸು ಬಂದು ನೆಟ್ಟ ಗಿಡಕೆ ಜೀವ ಜಲ ಕೊಟ್ಟು ಪೊರೆಯುವ ಸಹಕರಿ‌‌ಸು ಬಂದು ಬಾಗಿ ಬಸವಳಿದು ಉರುಳಿದ ಜೀವಕೆ ಸಾಂತ್ವನವೇ ಮದ್ದು ಮಾನವತೆಯ ನೆಲೆಯಲ್ಲಿ ಮಮತೆಯನು ಹನಿಸುವ ಸಹಕರಿಸು ಬಂದು ಕೋಟೆಗಳ  ಕಟ್ಟಿ ಹಕ್ಕಿಯೆಂದಾದರೂ ತನ್ನ ಬಂಧಿಸಿಕೊಂಡೀತೇ? ಮನಗಳ ನಡುವೆ ಹಬ್ಬಿರುವ ಬೇಲಿಯನು ಕಡಿಯುವ ಸಹಕರಿಸು ಬಂದು ಸ್ವಾಥ೯ದ ಮಾರುಕಟ್ಟೆಯಲ್ಲಿ ಬಿಕರಿಯಾಗುವವು ಬರೀ ಸ್ವಾಥ೯ಗಳೇ ನಿಸ್ವಾಥ೯ತೆಯ ದೀಪ ಹಚ್ಚಿ ಬದುಕ ಬೆಳಗುವ ಸಹಕರಿಸು ಬಂದು ಗಂಧಕ್ಕೆ ಮುಚ್ಚಿ,ಬಿಚ್ಚಿ,ಬೊಬ್ಬೆ ಹೊಡೆವ ಅವಶ್ಯಕತೆಯೇ ಇಲ್ಲ ಒಳ್ಳೆಯತನದಿ ಒಮ್ಮೆ ಕುಸಿದ “ಪ್ರತಿ” ಹೃದಯ ತಟ್ಟಿ ಬರುವ ಸಹಕರಿಸು ಬಂದು ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಪ್ರಿಯ ಸಖ H. ಶೌಕತ್ ಆಲಿ  ಬೆಳದಿಂಗಳಲ್ಲಿ ತಂಪು ತಂಗಾಳಿಯಲ್ಲಿ ನಮ್ಮ ಮಿಲನ ಆಲಿಂಗನ ಅರಳಿದ ನೈದಿಲೆಯ ಚಂದಿರನ ಚುಂಬನ ಪ್ರಶಾಂತವಾದ ಹೃದಯ ಮನಸೆಲ್ಲಾ ಅವನಲ್ಲೇ ಲೀನಾ ಆಧ್ಯಾತ್ಮವೂ ಅಮರ ಪ್ರೇಮವೂ ಬುದ್ಧ ನನ್ನ ಪ್ರಿಯ ಸಖ ಬೆಳಕಾಗಬೇಕು ಈ ಭೂಮಿಯು ಈ ಸುಂದರ ಪ್ರಕೃತಿ ನೆನಪಿರಲಿ ಶ್ವೇತ ಮೋಡಗಳು ಆಗಸದಲ್ಲಿ ಹೃನ್ಮನಗಳು ಏಕಾಂತವಾಗಿ ಭಾವನೆಗಳು ಹೂವಂತೆ ಅರಳಿ ಸುಖದ ಸೆಲೆಯಾಗಿ ಅವ ನಿಂತ ಬುದ್ಧ ನನ್ನ ಪ್ರಿಯ ಸಖ ನೋಟದಲ್ಲಿ ಸಾವಿರ ಅರ್ಥ ಜನ್ಮಜನ್ಮಾಂತರ ಪುನೀತ ಕಣ್ಣ ರೆಪ್ಪೆಗಳು ಮಿಟುಕಾಡಲಿಲ್ಲ ಜಗದ ಉದ್ದಾರಕ ನಾಯಕ ಶುಭವನ್ನೆ ಲೇಸೆಂದು ಬಯಸುವ ಬೆಳದಿಂಗಳ ಭಾಸ್ಕರ ಚಂದಿರ ನಾ ಬೆರೆತು ಹೋದೆ ಬೆಳಕಲಿ ನಕ್ಷತ್ರಗಳು ಆಗಸದಲ್ಲಿ ಆಗೋ ಬಂದ ನನ್ನ ಸನಿಹಕ್ಕೆ ಮಿತ್ರ ಬುದ್ಧನನ್ನ ಪ್ರಿಯಸಖಿ **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಪೂರ್ಣವಾಗದ ಸಾಲುಗಳು ಶೀಲಾ ಭಂಡಾರ್ಕರ್ ಮನಸ್ಸು ಒಮ್ಮೊಮ್ಮೆತೊಟ್ಟಿಕ್ಕುತ್ತಾ ಶಬ್ದಗಳಾಗಿ, ಹಾಳೆಯ ಮೇಲೆ ಒಂದೊಂದಾಗಿ ಬಿದ್ದು ಹರಡಿಕೊಳ್ಳುತ್ತಾ…. ಶುರುವಿಟ್ಟುಕೊಳ್ಳುತ್ತದೆ ಆಡಲು ಶಬ್ದಗಳ ಆಟ. ಹೊಂದಿಕೊಳ್ಳಲು ಹೆಣಗುವ ಭಾವನೆಗಳ ಮಾಟ. ಕವಿತೆಯಾಗಲು ಹೊರಟ ನಿಶ್ಶಬ್ದ ಶಬ್ದಗಳ ಅರ್ಧಂಬರ್ಧ ಸಾಲುಗಳು. ನೋಡಲು ಯಾವುದೋ ನಿರ್ಭಾವುಕ ಚಹರೆಯಂತಹ ಉಲ್ಲೇಖಗಳು. ಹಿಂದೊಮ್ಮೆ ಮುಂದೊಮ್ಮೆ ನಿಲ್ಲಲು ಸೆಣಸಾಟ. ಅರ್ಥವಿಲ್ಲದವುಗಳ ಮೂಲೆಗೆ ತಳ್ಳಾಟ ಮನುಷ್ಯರಲ್ಲಿ ಮಾತ್ರವಲ್ಲ ಶಬ್ದಗಳಿಗೂ ಸಂಬಂಧಗಳಲ್ಲಿ ಹೊಂದಾಣಿಕೆ ಬೇಕು ಎಂದರೆ ಒಪ್ಪುವಿರಾ? *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಿಯಮ ಡಾ.ಅಜಿತ್ ಹರೀಶಿ . ಅಪಘಾತಗಳೆಲ್ಲ ಆಕಸ್ಮಿಕಗಳಲ್ಲ ಕಾರಣವಿರಬಹುದಲ್ಲ ಅಲಕ್ಷ್ಯ ಆತುರ ಅತ್ಯುತ್ಸಾಹ ಕಲ್ಪಿಸುವ ಎದುರಿನ ಅಚಾತುರ್ಯ ಬೇಕೆಂದಾಗ ಬಂಜೆತನ ಬೇಡವಾದಾಗ ಫಲಿಸುವ ಗರ್ಭ ಸುರತಕ್ಕೆ ಸುರಕ್ಷಿತ ಸಂಗಾತಿ ಮಾತ್ರ! ಯುಗ ಬದಲಾಗಿದೆ ಸ್ವರ್ಗ ನರಕಗಳೆಲ್ಲವೂ ಸೃಷ್ಟಿಯಾಗಿದೆ ಇಲ್ಲೇ ತೆರೆಯಲಾಗಿದೆ ಬದುಕಿನ ಕಂದಾಯ ಕಟ್ಟುವ ಕೌಂಟರ್ ನಮ್ಮಲ್ಲೇ ದೇವನ ಕಣ್ಣುಗಳು ಮಾರು-ಮಾರಿಗೆ ಎಲ್ಲೆಲ್ಲೂ ಟವರ್ ಲೊಕೇಷನ್ ಅಪರಾಧಿಯಾಗದ ಸೂತ್ರ ಜೀವಿಸುವ ಸಾಫ್ ಸೀದಾ *********

ಕಾವ್ಯಯಾನ Read Post »

You cannot copy content of this page

Scroll to Top