ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕೈ ಚೀಲ

ಕೈ ಚೀಲ ಬಿ.ಶ್ರೀನಿವಾಸ ಆ ಹುಡುಗನ ಹೆಸರಿಡಿದು ಯಾರೂ ಕರೆಯುವುದಿಲ್ಲ.ಎಲ್ಲರೂ ಕರೆಯುವುದೇ ‘ಕೈಚೀಲ’ ಎಂದೆ.ತನ್ನ ಕುಂಟುಗಾಲಿನಲಿ ಹೋಗುವಾಗ ಯಾರಾದರೂ “ಕೈ ಚೀಲಾ…”ಕೂಗಿದರೆ ಸಾಕು ತಕ್ಷಣ ನೋಡುತ್ತಾನೆ.ಅವನಿಗೆ ಬಹಳವೆಂದರೆ ಐದೋ ಆರೋ ವರುಷವಿದ್ದೀತು. ಅವ್ವನ ಬಿಟ್ಟರೆ ಅವನಿಗೆ ಬೇರೆ ಜಗತ್ತು ಇಲ್ಲ. ಬಣ್ಣದ ಸಂಜೆಗಳೆಂದರೆ ಅವನಿಗಿಷ್ಟ. ಯಾಕೆಂದರೆ ಅವನವ್ವ ಸಂಜೆಯಾದಂತೆಲ್ಲ ಸುಂದರವಾಗಿ ಕಾಣುವಂತೆ ಅಲಂಕರಿಸಿಕೊಳ್ಳುತ್ತಾಳೆ. ಆ ಪಾಂಡ್ಸ ಪೌಡರಿನ ಪರಿಮಳ ಸಂಜೆಗಳನ್ನು ಅರಳಿಸುತ್ತದೆ. ಸಲೀಸಾಗಿ ಅವ್ವನ ಕೈ ಹಿಡಿದು ನಡೆಯುತ್ತಾನೆ. ಅಷ್ಟರಲ್ಲಿ ಯಾರಾದರೂ ಕೈ..ಚೀ..ಲಾ..!ಪಿಸುಗುಟ್ಟಿದರೂ ಸಾಕು ಅವನು ಅಲ್ಲಿಗೆ ಹೋಗುತ್ತಾನೆ. ಹೊಸ ಅಪ್ಪನನ್ನು ಕಾಣುತ್ತಾನೆ. ಹೊಸ ಅಪ್ಪನೊಡನೆ …ಅವ್ವ ಹೇಳಿಕೊಟ್ಟ ಮಾತುಗಳನ್ನೇ ಹೇಳುತ್ತಾನೆ. ಅವ್ವ ಖುಷಿಯಾಗಿದ್ದಾಳೆಂದು ಇವನೂ ಖುಷಿಯಿಂದ ಹುರಿದ ಬಟಾಣಿ ತಿನ್ನುತ್ತ ಕುಳಿತಿರುತ್ತಾನೆ. ಕೈ ಚೀಲನಿಗೊಂದು ಕನಸಿತ್ತು. ಅಷ್ಟು ಜನ ಅಪ್ಪಂದಿರನ್ನು ಗುರ್ತು ಹಿಡಿಯಲು ಸಂತೆಯಲ್ಲಿ ನೋಡಿದ ಬಣ್ಣದ ಟೋಪಿಗಳನ್ನು ತೆಗೆದಿರಿಸಿದ್ದ. ಕೆಂಪು ಹಳದಿ ಹಸಿರು ನೀಲಿ..ಬಿಳಿ..ಖಾಕಿ…ಹೀಗೆ ತರಹೇವಾರಿ ಉಲನ್ ಟೋಪಿಗಳನ್ನು ಸಾಲಾಗಿ ಇರಿಸಿದ್ದ. ಅವನ ಕನಸಿಗೆ ಅವಳವ್ವ ಅಡ್ಡ ಬರಲಿಲ್ಲ. ಎಷ್ಟೊಂದು ಅಪ್ಪಂದಿರು..! ನಾನು ಹೀಗೆ ಆಸ್ಪತ್ರೆಯಲ್ಲಿ ಮಲಗಿರುವಾಗ ಯಾಕೆ ಯಾರೊಬ್ಬರೂ ಬರುವುದಿಲ್ಲವಲ್ಲ? ಹುಡುಗನ ಹೃದಯ ಮಿಡಿಯುತ್ತಿದೆ. ಅಲ್ಲಿ ಡಾಕ್ಟ್ರು ಅವ್ವನಿಗೇನೋ ಹೇಳುತ್ತಿದ್ದಾರೆ. “ಲಕ್ಷಕ್ಕೊಬ್ಬರಿಗೆ ಮಾತ್ರ ಬರುವ ಕಾಯಿಲೆ…ವಾಸಿಯಾಗುವುದಿಲ್ಲ.” ಆಕೆ ಅಲ್ಲಿಯೇ ಕುಸಿಯುತ್ತಿದ್ದಾಳೆ. ಆ ಹುಡುಗನ ಮುಚ್ಚಿದ ಕಣ್ಣ ಪಾಪೆಯಲ್ಲಿ ಉಲನ್ ಟೊಪ್ಪಿಗೆ ಧರಿಸಿದ ಅಪ್ಪಂದಿರು ಸಾಲಾಗಿ ಬಂದು ..ಮಲಗಿದ್ದ ತನ್ನನ್ನು ನಿಧಾನಕ್ಕೆ ಎದ್ದು ಕೂಡಿಸಿ, ಮುದ್ದುಗರೆಯುತ್ತ ಬ್ರೆಡ್ಡು, ಬಿಸ್ಕತ್ತು, ಸೇಬಣ್ಣು…ತಿನ್ನಿಸುವ ಕನಸು ಕಾಣುತ್ತಾನೆ. ……ಯಾರೋ.. “ಕೈ ಚೀಲಾ..”!ಕರೆದಂತೆ ಭಾಸ ಅವ್ವ ಕೈ ಸನ್ನೆ ಮಾಡಿ ಖುಷಿಯಿಂದ ಮೊಗ ಕಂಡಂತೆ “ಅವ್ವಾ..ಹೊಸ ಅಪ್ಪ.. ಬರ್ತನಂತೆ…”!ಕನವರಿಸುತ್ತಲೇ ಇದ್ದಾನೆ. ಆಕೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾಳೆ.

ಕೈ ಚೀಲ Read Post »

ಕಾವ್ಯಯಾನ

ಅಂಗಳದ ಚಿಗುರು

ಕವಿತೆ ಅಂಗಳದ ಚಿಗುರು ಬಿರುಕು ಬಿಟ್ಟ ಗೋಡೆಯ ಮೌನದಲಿಅಜ್ಞಾತ ಹಕ್ಕಿಯ ಗೂಡೊಂದು ಮುಗಿಲ ಕೂಗುತಿತ್ತು ಅಂಗಳ ತುಂಬಿದ ನೀರಿನ ದಡದಲಿಮರಿಗಳ ಹಿಂಡು ಕಣ್ಣಾಮುಚ್ಚಾಲೆ ಆಡುತಪೇಪರ ಬೋಟಿನ ಕಣ್ಣೊಳಗೆಅಲೆಗಳ ಲೆಕ್ಕದಲಿ ಮೈಮರೆತವು ಅವಳು ಬಿಡುಗಣ್ಣಲಿಪಾದಕ್ಕೆರಗಿದ ಗಾಯದ ಸಲಾಕೆ ಜಾಡಿಸುತ್ತಗೋಗರಿವ ಮುಳ್ಳುಗಳ ಹೃದಯದಲಿಕಸಿ ತುಂಬೊ ರಸದ ಮುಲಾಮಾದಳು ಬಿರುಕ ಗೋಡೆಗಳ ನಡುವೆಬೆಸುಗೆಯ ಚಿತ್ತ ಬೆನ್ನೊಳಗ ಬಿಗಿದುಕೊಂಡುಹರಿವ ತೊರೆಯಲಿ ತೇಲಿ ಬರೋ ನಾವೆಯಾದಳು ಉರಿವ ಒಲೆಗಳಲಿ ಗುಪ್ತ ಬೂದಿಯಾಗಿತೇದು ತೇಗಿ ನಕ್ಷತ್ರಗಳ ನೆಲಕ್ಕಿಳಿಸಿಗುಡಿಸಲು ಕಣ್ಣೊಳಗೆಸದಾ ಹುಣ್ಣಿಮೆಯ ಚಂದಿರ ಚಿತ್ರಿಸಿಬೆಳದಿಂಗಳ ನಕ್ಷೆಯಾದಳು ಅಂಗಳದ ಚಿಗುರಿಗೆ *************************

ಅಂಗಳದ ಚಿಗುರು Read Post »

ಕಾವ್ಯಯಾನ

ವಿಧಾಯ ಹೇಳುತ್ತಿದ್ದೇವೆ

ಕವಿತೆ ದೇವು ಮಾಕೊಂಡ ಮಧುರ ಸ್ಪರ್ಷವಿತ್ತನೆನಪುಗಳು ಮುಳುಗುತ್ತಿವೆಕಣ್ಣುಗಳ ಮುಂದೆ ಹಾದು ಹೋಗುತ್ತಿವೆದಿನ ದಿನ ಕಳೆದ ಘಟನೆಗಳುಭಯವಿದೆ ನನಗೀಗನೂರಾರು ವರುಷಗಳಿಂದ ಪಕ್ಕೆಲುಬುಗಳಲಿಬಚ್ಚಿಟ್ಟಿದ್ದ ನೆನಪುಗಳು ಅಭದ್ರಗೊಳ್ಳುತ್ತಿವೆ ಎಂದುಹೇರಳವಾಗಿರುವ ಸಿಡಿಲು ಮಳೆ ಹನಿಗಳಿಂದ ನಾನು ಏಕಾಂಗಿಯಾಗಿದ್ದೇನೆಸ್ವರ್ಗದ ಹಾದೀಲಿದುಃಖಗಳ ಗುರುತ್ವಾಕರ್ಷಣೆಯ ತುದಿಗೆ ಒರಗಿಕೊಂಡು ನಾನೀಗಕಳೆದು ಹೋದ ಜೋತಿರ್ವರ್ಷಗಳಮೆಲಕು ಹಾಕುತ್ತ ನಿಂತಿರುವೆಲಿಖಿತ ಡೈರಿಗಳುಶೀರ್ಷಿಕೆ ರಹಿತ ಪದ್ಯಗಳುರಾತ್ರಿ ಮಂಡಿಸಿದ ಕನಸುಗಳು ಕಳೆದುಕೊಂಡುಬರಿಅರೆಬರೆ ತಿದ್ದಿದ ನಂಬಿಕೆ ಹದೀಸ್ ಪುರಾಣಗಳನಡುವೆ ನಿಂತಿದ್ದೇನೆ ನೋಡಿವರ್ಷಕ್ಕೊಂದೆರಡು ಸಲತ್ರಿವರ್ಣದ ಧ್ವಜದ ಕೆಳಗೆಮಸುಕಾದ ಹೆಜ್ಜೆಗುರುತುಗಳುಉಸಿರು ಕಟ್ಟಿದ ಗಂಟಲಿಂದ ಬರುವಶುಭಾಶಯ ಸಹಾನುಭೂತಿಗಳುಮಿನುಗುತ್ತಿವೆಮರುದಿನ ಮತ್ತೆಅಸಮ ಉಸಿರುಎದೆಬಡಿತ ! ಬನ್ನಿನೋಡಬನ್ನಿನಾವು ಎಷ್ಟೊಂದು ನಿಧಾನವಾಗಿಎಷ್ಟೊಂದು ಅಭಾರವಾಗಿ ಸಾಯುತ್ತಿದ್ದೇವೆಗಲ್ಲಿಯಲಿ ಕನಸು ಕಂಡ ಆತ್ಮಗಳುಷಹರನಲಿ ಅಳಿಯುತ್ತಿವೆಭಯ ಬೆನ್ನುಮೂಳೆ ಸುತ್ತುವಾಗಖುಷಿಯನ್ನು ರಕ್ತನಾಳ ಸುಡುತ್ತಿದೆಹೀಗೆ…ದಿನೇ ದಿನೆ ವಿಧಾಯ ಹೇಳುತ್ತಿದ್ದೇವೆ ನಾವುನೋಡಬನ್ನಿ ನೀವು***************************

ವಿಧಾಯ ಹೇಳುತ್ತಿದ್ದೇವೆ Read Post »

ಕಾವ್ಯಯಾನ

ಅನುವಾದಿತ ಕವಿತೆ

ರಾಹತ್ ಇಂದೋರಿ ಕನ್ನಡಕ್ಕೆ:ರುಕ್ಮಿಣಿ ನಾಗಣ್ಣವರ ವಿರೋಧವಿದ್ದರೆ ಇರಲಿ ಅದು ಪ್ರಾಣ ಅಲ್ಲವಲ್ಲಇದೆಲ್ಲವೂ ಮುಸುಕು ಹೊಗೆ ಆಕಾಶ ಅಲ್ಲವಲ್ಲ ಬೆಂಕಿ ಹೊತ್ತಿದರೆ ಆಹುತಿ ಆಗುವವು ಬಹಳ ಮನೆಇಲ್ಲಿರುವುದು ಕೇವಲ‌ ನನ್ನ ಮನೆ ಮಾತ್ರ ಅಲ್ಲವಲ್ಲ ನಾನು ಹೇಳಿರುವುದೇ ಇಲ್ಲಿ ಅಂತಿಮಬಾಯೊಳಗೆ ಇರುವುದು ನಿನ್ನ ನಾಲಗೆ ಅಲ್ಲವಲ್ಲ ನನಗೆ ಗೊತ್ತಿದೆ ಅಸಂಖ್ಯ ವೈರಿಗಳು ಇರುವರುನನ್ನ ಹಾಗೆ ಜೀವ ಕೈಯಲ್ಲಿ ಹಿಡಿದವರು ಅಲ್ಲವಲ್ಲ ಇಂದಿನ ಈ ಪಾಳೆಗಾರಿಕೆ ನಾಳೆ ಇರುವುದಿಲ್ಲಅವರು ಬಾಡಿಗೆದಾರರು, ಸ್ವಂತದ ಮನೆ ಅಲ್ಲವಲ್ಲ ಇಲ್ಲಿನ ಮಣ್ಣಲ್ಲಿ ಎಲ್ಲರ ನೆತ್ತರ ಹನಿಯೂ ಸೇರಿದೆಈ ಹಿಂದೂಸ್ತಾನ್ ಯಾರ ಅಪ್ಪನದೂ ಅಲ್ಲವಲ್ಲ ******************************

ಅನುವಾದಿತ ಕವಿತೆ Read Post »

ಕಾವ್ಯಯಾನ

ರಾಧಾ ಕೃಷ್ಣ

ಕವಿತೆ ರಾಧಾ ಕೃಷ್ಣ ಲಕ್ಷ್ಮೀ ಪಾಟೀಲ್ ಕೃಷ್ಣನ ಅಷ್ಟ ಮಹಿಷಿಯರಿಗಿಂತಲೂಹದಿನಾರು ಸಾವಿರ ನೂರುಭಕ್ತಪ್ರೇಮಿಗಳಿಗಿಂತಲೂ ಆತನ ಏಕೈಕ ಜೀವರಾಧೆಯೇ ಆತನಿಗಿಷ್ಟಗಂಡಿನಂತೆ ಸ್ವಾತಂತ್ರವನ್ನು ಉಸಿರಾಡಿದಳುಪ್ರೀತಿಗೆ ಭಾಷ್ಯ ಬರೆದಂತೆ ಬದುಕಿದಳು ಅಷ್ಟ ಮಹಿಷಿಯರು ಹದಿನಾರು ಸಾವಿರ ನೂರುಭಕ್ತ ಹೆಂಗಳೆಯರೆಲ್ಲ ಕೃಷ್ಣನ ಬರುವಿಕೆಗೆಕಾದು ಸೋತು ಹಿಡಿ ಶಾಪ ಹಾಕಿ ಮಲಗುತ್ತಿದ್ದರುಕನಸಿನಲ್ಲಿ ಸುಳಿದಂತೆ ಸುಳಿದರೆ ಬರೀ ಆತದೇಹವಾಗಿ ಜಡವಾಗುತಿದ್ದ ಮುಟ್ಟಾದುದನುಹಾಡಿರೇ ನೀವೆಲ್ಲ ಸೇರಿ ಎಂದು ಗೋಗರೆದುಬೇಡಿ ಸರಕ್ಕನೆ ಸರಿಸಿ ರಾಧೆಯ ಕೂಗಿಗೆಹಾತೊರೆದು ಓಡುತ್ತಿದ್ದ ಮನಬಿಟ್ಟು ಕದಲದೆಆತ್ಮವಾಗಿ ಅರಳುತ್ತಿದ್ದ ರಾಧೆ ಕಾಯಿಸಿ ಮಜಾ ಉಡಾಯಿಸಿದಾಗಲೆಲ್ಲಪುಟಿವ ಚೆಂಡಾಗಿ ನೋಟಕ್ಕೆ ನೂರು ರಂಗಾಗಿಕೈಗೆ ಸಿಗಲಾರದ ಕನಸುಗಳಿಗೆಲ್ಲ ರೆಕ್ಕೆ ಬರಿಸಿಮುಟ್ಟಾಗದೆ ಉಳಿವ ರಾಧೆಗೆ ಜೀವ ಕಾವ್ಯದ ವೇಷ ತೊಟ್ಟ ರಾಧೆಗೊಂದು ದ್ವಾರಕೆ ಕಟ್ಟಿಪ್ರೀತಿಸುವ ಜೀವಕ್ಕೆ ಅರ್ಪಿತಗೊಂಡರಾಧಾ ಕೃಷ್ಣನಾಗಿ ಲೋಕಾರ್ಪಣಗೊಂಡ ಪ್ರೀತಿ ರೂಪದ ಮಾದರಿ ನೀ ಮುಕುಂದಯುಗಾಂತರಿಸು ಸುರಿಸು ಪ್ರೀತಿ ಸಿಂಚನಯುಗ ಭಾರವನಿಳಿಸಿ ತಣಿಸು ಉದ್ಧರಿಸುಹಂಚು ವಿಶ್ವರೂಪ ಜೀವಕುಲಕೆಲ್ಲ ಸ್ನೇಹಸಿಂಚನಗೋಪಿ ರಾಧೆಯರಿಗೊಂದಿಷ್ಟು ಪ್ರೇಮ ಕಂಪಣ *********************

ರಾಧಾ ಕೃಷ್ಣ Read Post »

ಕಾವ್ಯಯಾನ

ದೇವರು

ಕವಿತೆ ದೇವರು ಮಾಲತಿ ಶಶಿಧರ್ ನಿನ್ನ ಮೆಚ್ಚಿಸಲೇಬೇಕೆಂಬಇರಾದೆಯೇನಿಲ್ಲ ಹುಡುಗ,ಸೊಡರ ಹೊತ್ತಿಸುವುದುದೇವರ ಮೆಚ್ಚಿಸುವುದಕ್ಕಲ್ಲಮನವ ಒಪ್ಪಿಸಲು… ನಿನ್ನ ಒಲಿಸಿಕೊಳ್ಳಲೇಬೇಕೆಂಬಹಠವೇನಿಲ್ಲ ಹುಡುಗ,ಹೂವ ಅರ್ಪಿಸುವುದುದೇವರ ಒಲಿಸಲಲ್ಲಭಕ್ತಿ ತೋರಿಸಲು… ನಿನ್ನ ಪಡೆಯಲೇಬೇಕೆಂಬಸಂಕಲ್ಪವೇನಿಲ್ಲ ಹುಡುಗ,ನೈವೇದ್ಯೆ ಕೊಡುವುದುದೇವರು ಪ್ರತ್ಯಕ್ಷವಾಗಲಿ ಎಂದಲ್ಲಪ್ರೀತಿ ಸಮರ್ಪಿಸಲು… ನಿನ್ನ ಮೆಚ್ಚಿಸಿ, ಒಲಿಸಿ, ಪಡೆದುಬಿಟ್ಟರೆಎಲ್ಲರಂತೆ ಕೇವಲಮನುಜನಾಗಿಬಿಡುವೆ,ನೀನೆಂದಿಗೂ ಮನದ ಗುಡಿಯೊಳಗೆನೆಲೆಸಿರುವ ನನ್ನ ದೇವರಾಗೆ ಉಳಿದುಬಿಡು **********************

ದೇವರು Read Post »

ಕಾವ್ಯಯಾನ

ಕವಿತೆ

ನೀನಿರಬೇಕು ಎಚ್. ಕೆ. ನಟರಾಜ ಇಳಿಸಂಜೆ ನಾನು ಮುಳುಗುವ ಸೂರ್ಯ..ನೀನೋ ರಾತ್ರೀ ಪ್ರೀತಿಸುವ ಆಗಸದ ಚಂದ್ರಮ.ಆದರೂ ಸೂರ್ಯ ಬೆಳಗುತ್ತಲೇಇರುತ್ತಾನೆ..ಚಂದ್ರ ನೀರಂತರ..ಮುದ ಕೊಡುತ್ತಿರುತ್ತಾನೆ.ನಿನ್ನಂತೆ ನಿನ್ನ ನಗುವಿನಂತೆಈ ಕತ್ತಲೆ ಬೆಳದಿಂಗಳಾಟದ ಗೊಂಬೆ ನಾನು.ಕತ್ತಲೆಯ ನಿಶೆತುಂಬಿದ ಮರುಳಹಗಲಿನಲ್ಲಿ ಬದುಕಿನ ಬಯಲಾಟದಪಾತ್ರವಾದರೂ ಆರ್ಭಟಿಸುವುದು ಇರುಳ ಬೆಳಕಿನಾಟದಲೆ..ಒಡ್ಡೋಲಗ ಪ್ರಭುಗಳು.ನೀನೆಂದರೆ ನೀನೇ ಒಡಲಾಳದ ಕರುಣೆಉಕ್ಕಿ ಬರಲು ಒಲುಮೆಯ ಚಿಲುಮೆ ಕನಸುಕಂಗಳಿಗೆ ಕಾರಿರುಳ ರಾತ್ರಿಯಲಿದೀಪ ದೀವಿಗೆಯಾಗಿ ಕಾಡುವ ನಿನನಗುವಿನಂದದಿ..ಮಲ್ಲಿಗೆ ಚಫ್ಪರಕಟ್ಟುವ ಬಯಕೆಯ ತಿರುಕ ನಾನು..ಪ್ರೇಮತಪೋವನದ ಸಂತನೂ ನಾನುನಕ್ಕು ಬಿಡೆ ಒಮ್ಮೆ.. ಕೇಕೇ ಹಾಕಿ.. ಹಸಿಇನಾಳಕೆ ಇಳಿಯಲೀ ಭೀಬತ್ಸ.. ಚಂದ್ರ ನಗುತ್ತಾನೆಹೀಗೇಕೆ ಮಾಡಿದೆ ತರುಣೆ.. ಕೇಳುತ್ತಾನೆಕನಸುಕಂಗಳಿಗೆ ಹರಿದ ಮಬ್ಬುಕಗ್ಗತ್ತಲೆನೀನಾಗು ನನ್ನ ನಗುವಿನ ತಿಳಿನೊರೆ.. ಬೆಳ್ನೊರೆ.ಅಪ್ಪಿಬಿಡು ಮನಸಾರೆ.. ಸಂಗತಿಗಳೇನು ಘಟಿಸಿಲ್ಲವಿಲ್ಲಿ.. ಅಸಂಗತವೂಸುಸಂಗತವೋ.. ಅರಿಯುವ ತವಕದೊಳಗೆಇದ್ದವರ್ಯಾರು..?ಬೆಚ್ಚಿ ಓಡುವ ಕುದುರೆ ಹಿಡಿದವರ್ಯಾರು..ಬಂದು ಬಿಡೆ ನನ ಮನದೊಳಗೆ ನುಗ್ಗಿಬಿಡೆತಡೆಯುವರ್ಯಾರು.. ನನ್ನ ಪದನುಡಿಯಪ್ರೀತಿಥೇರಿಗೆ ಅಡ್ಡ ನಿಲ್ಲುವರಾರು…??!! ಇರಬೇಕು ನೀನು.. ನಕ್ಷತ್ರಗಳ ನಗುವಾಗಿ..ಹೊಳಪಾಗಿ ಇಳಿಸಂಜೆ ಸೂರ್ಯನ ಹೊನಲಾಗೀ. .ಚಂದ್ರನ ತಂಪಾಗಿ.. ನನ್ನೊಲವ ಇಂಪಾಗಿ.. ಕಾವ್ಯಕನ್ನಿಕೆಯಾಗಿ ಏದೆಯಾಳದಿ ಸೊಂಪಾಗಿಕೊರಳ ಹಾಡಿನ ಪದವಾಗಿ.. ಕಿವಿ ತಣಿಸೋ ಮಾಧುರ್ಯವಾಗಿ.. ನನ್ನ ಪ್ರೀತಿಯರಮನೆಯ ಅರಸಿಯಾಗಿ.. ಇರಬೇಕು ನೀನು..ನನ್ನೊಲವ ಸಿರಿಯಾಗಿ ಬಿಸಿ ಬಯಕೆಯಉಸಿರಾಗಿ.. **********************

ಕವಿತೆ Read Post »

ಕಾವ್ಯಯಾನ

ಕವಿತೆ

ಕವಿತೆ ಹಾಳೆ ತಿರುವಿದರೆ ಅಧ್ಯಾಯ ಮುಗಿಯದುಧರ್ಮಸ್ಥಾಪನೆಗೆ ಮತ್ತೆ ಮತ್ತೆ ಬರುತ್ತೇನೆಂದವಹೇಳಿದ್ದೂ ಅದನ್ನೇಎಲ್ಲವೂ ಮುಗಿಯದ ಅಧ್ಯಾಯ ದಾರಿಗಳು ಎಂದೋ ಕವಲೊಡೆದವುಎಲ್ಲ ಮರೆತಂತೆ ಹೆಜ್ಜೆಗಳೂ ನಡೆದವುಉಸಿರು ಭಾರದ ಜೋಕಾಲಿಜೀಕಿದಷ್ಟೂ ಎಳೆದಾಡುತ್ತಿತ್ತು ಕಟಕಟೆಯ ತೀರ್ಪಿನಲ್ಲಿಇವರು ಬೇರೆ ಬೇರೆಉಳಿಯುವುದು ಏನಿದ್ದರೂ ಲೆಕ್ಕಾಚಾರಉತ್ತರ ಹುಡುಕುವ ಪುಟ್ಟ ಕಂಗಳಲ್ಲಿಪ್ರಶ್ನೆಗಳ ಮಹಾಪೂರ ಹಾಳೆಗಳೂ ನಾಳೆಗಳಂತೆಕರೆದಷ್ಟೂ ತೆರೆಯುತ್ತವೆಚುಕ್ಕೆಯಿಡುವ ಮುನ್ನ ಅಲ್ಪವಿರಾಮಮುಗಿಸಲು ಮನಸ್ಸಿಲ್ಲಹೇಗೆಂದರೂಇದು ಮುಗಿಯದ ಅಧ್ಯಾಯ.

ಕವಿತೆ Read Post »

ಕಾವ್ಯಯಾನ

ಕವಿತೆ

ಕರೋನಾದ ಕತ್ತಲು ರೇಷ್ಮಾ ಕಂದಕೂರ ಕಳೆಗುಂದಿದೇಕೋ ಮೈಮನಸುಳಿಯದೆ, ನಿನ್ನ ಛಾಯೆ ಸೋಕದೆ ಭ್ರಾಂತಿಯ ಕೇಡು ತಾಗಿಮತಿ ಬಿರುಕಿನ ಕಂದಕದ ಮಾಯೆಗತಿ ಮೀರಿದೆ ಕನಸ ತೇಪೆ ನಿನ್ನಂತರಾಳವ ಹೊಕ್ಕಿರುವೆನೆಂದುಕಕ್ಕಾಬಿಕ್ಕಿಯಾಗಿರುವೆ ತಿಕ್ಕಲು ತನದಿ ಬಿಕ್ಕುತಲಿರುವೆ ಬದುಕಿನ ಚುಕ್ಕಾಣಿಯ ಹಿಡಿಯಲುದಕ್ಕಬಹುದೆ ಒಲುಮೆಅತೀ ಪ್ರೀತಿಯ ಪಾಪಶಂಕೆ ಬೆಂಗಾಡಿನ ವಶವಾಗಿರುವೆತಿದ್ದಿ ತೀಡಲುಪ್ರಗತಿಗೆ ಭಯ ಬುದ್ದಿ ಭ್ರಮಣೆಗೆಅನಂತ ಕನಸುಅದು ಹಾಗೆಯೇನಾಳೆಯಾದರೂ ಆಗಲಿಬದುಕಿನ ಅನಂತ ದಕ್ಕಲಿ **********************

ಕವಿತೆ Read Post »

ಕಾವ್ಯಯಾನ

ಕವಿತೆ

ಕಣ್ಣೀರಿಗೆ ದಂಡೆ ಸಾಕ್ಷಿ ನಾಗರಾಜ ಹರಪನಹಳ್ಳಿ -೧-ಬೀಜಕ್ಕೆ ನೆಲವಾದರೇನುಗೋಡೆಯ ಬಿರುಕಾದರೇನುಬೇಕಿರುವುದುಒಂದು ಹಿಡಿ ಮಣ್ಣು, ಹನಿಯಷ್ಟು ನೀರು -೨- ನದಿಯಾರಿಗೆ ತಾನೇ ಬೇಡ -೩-ನದಿ ಎಷ್ಟೇ ಕವಲಾಗಿ ಹರಿದರೂಕೊನೆಗೆ ಸೇರುವುದು ಕಡಲನ್ನೇ -೪-ಕೋಣೆನಿಟ್ಟುಸಿರಿಗೆ ಫ್ಯಾನ್ಗಾಳಿ ಹಾಕಿದೆ -೫-ಅವಳುನೆರಳಾಗಿದ್ದಳು ಕನ್ನಡಿಯಲ್ಲಿಈಗಅದಕ್ಕೂ ವಿರಹ -೬ಅಲೆಗಳ ಕಣ್ಣೀರಿಗೆದಂಡೆ ಸಾಕ್ಷಿ -೭-ಕಾಯುವುದು ಎಂದರೆಎದೆಯೊಳಗೆಕನಸುಗಳ ಬಿತ್ತುವುದು -೮-ಸಹನೆ ಇದೆಯಾಹಾಗಾದರೆ ;ನಾಳೆಯೂ ಇದೆ -೯-ಆಸೆಯ ಬೆನ್ನು ಹತ್ತುಸಂಚುಗಳಅರ್ಥಮಾಡಿಕೊದಾರಿ ಹೊಳೆದೀತು -೧೦-ಬದುಕಿನ ಅಂತಿಮ‌ ಸತ್ಯಏನುಏನುಏನುಏನು ಅಂದರೆಬಯಲಲ್ಲಿ ಬಯಲಾಗು************************************************–

ಕವಿತೆ Read Post »

You cannot copy content of this page

Scroll to Top