ಕಾವ್ಯಯಾನ
ನೀರೊಲೆಯ ಮೇಲೆ. ಶಶಿಕಲಾ ವೀ ಹುಡೇದ ನೀರೊಲೆಯ ಮೇಲೆ. ಸೀಗೆಯ ಹೊಗರು ಸುಡುಸುಡು ನೀರು ಬೆರಕೆಯ ಬೇಡುವ ಹೊತ್ತು ಸುಣ್ಣ ನುಂಗಿದ ಹೊಗೆಸುತ್ತಿದ ಗೋಡೆಗಳ ಮೇಲೆ ನೀರ ಹನಿಗಳದೇ ಚಿತ್ತಾರ ಯಾವ ಯುದ್ಧದ ಕತೆಯ ಹೇಳುತ್ತಾವೋ ನೋಡುವ ಕಣ್ಣುಗಳಿಗೆ ಒಂದೊಂದು ರೀತಿಯ ಅರ್ಥ ಉಸಿರಾಡಲು ಒದ್ದಾಡುವ ಒಂದೇ ಒಂದು ಕಿಂಡಿಯ ಕುತ್ತಿಗೆಯ ಮಟ್ಟ ಧೂಳು ಮಸಿಯದೇ ಕಾರುಬಾರು ಹೆಸರೂ ನೆನಪಿರದ ಮುತ್ತಜ್ಜ ಬುನಾದಿ ಹಾಕಿದ ಈ ಬಚ್ಚಲು ಮನೆ ಯಾವ ವಾರಸುದಾರನ ಅವಧಿಗೆ ಏನನು ಸುಖ ಕಂಡಿದೆಯೋ […]
ಕಾವ್ಯಯಾನ
ಪ್ರೇಮದ ಹನಿಗಳು ನಾಗರಾಜ ಹರಪನಹಳ್ಳಿ ಬಿಕೋ ಎನ್ನುವ ರಸ್ತೆಗಳ ಮಧ್ಯೆಯೂ ನಿನ್ನದೇ ಧ್ಯಾನ ಎಂದಾದರೆ ಅದೇ ಪ್ರೀತಿ ; ಮತ್ತಿನ್ನೇನು ಅಲ್ಲ… ಜನ ಮನೆ ಸೇರಿದರು ಸರ್ಕಾರದ ಆದೇಶದಿಂದ ಪ್ರೀತಿಯ ಬಂಧಿಸುವುದು ಕಷ್ಟ ಉರಿ ಬಿಸಿಲಲ್ಲೂ ಮೈತುಂಬ ಹೂ ಹೊದ್ದ ಮರ ನೆರಳ ಚೆಲ್ಲಿ ವಿರಹಿಗೆ ಸಾಂತ್ವಾನ ಹೇಳಿತು ನನ್ನ ಕೂಗಾಟ, ಚರ್ಚೆ ವಾದ ಎಲ್ಲವೂ ನಿನಗಾಗಿ ಪ್ರೇಮ ಹುಲುಮಾನವರಿಗೆ ಅರ್ಥವಾಗುವುದಿಲ್ಲ ದೂರದಿಂದ ಸಂತೈಸುವ ನೀನು ನನ್ನ ತಾಯಿ ಪ್ರೇಮಿ, ಕಡು ವ್ಯಾಮೋಹಿ ಕೊಂಚ ಅಸಮಧಾನಿ ಸಹಜ […]
ಅನುವಾದ ಸಂಗಾತಿ
ನನ್ನ ಪ್ರಿಯ ಕವಿ ಮೂಲ: ಸರ್ಬಜೀತ್ ಗರ್ಚ ಕನ್ನಡಕ್ಕೆ:ಕಮಲಾಕರ ಕಡವೆ ಬೇಕಾದರೆ ಅವುಗಳನ್ನು ಕವಿತೆ ಎನ್ನಬೇಡಆದರೆ ಬರೆವೆಯಾದರೆ ಬರೆಜೇಬಿನ ಕತ್ತಲೆಗೆ ಬೆಳಕ ಚೆಲ್ಲದಿದ್ದರೂಕೊಂಚ ಬೆಚ್ಚಗಿರುಸುವಂತಸಾಲುಗಳನ್ನು ಹೇಗೆ ನೆಲಹಾಸಿನ ಮೇಲೆ ಬೀಳುವ ಬಿಸಿಲಕೋಲುವರ್ಷಾನುಗಟ್ಟಲೆ ಮುಚ್ಚಿದ್ದ ಕೋಣೆಗೂಹೊರಗೆ ಬೆಳಗುತ್ತಿರುವ ಸೂರ್ಯನಕಾಣುವ ತವಕವನ್ನು ಕೊಟ್ಟಂತೆ ಅಂತಹ ಸಾಲುಗಳುಜೇಬಿನಲ್ಲಿಯೇ ಇದ್ದು ಇದ್ದುಒಂದು ದಿನ ಪಕಳೆಯಾಗಿ ಬಿಡುವವು ಹಾಗೂ ಸೂರ್ಯನಾಗುವನು ಒಂದು ಗುಲಾಬಿಹರಡಿ ಅದರೊಳಗೆಲ್ಲ ತನ್ನ ಕಿರಣ ಕಾಗದ ಅಥವಾ ಜೇಬು ಇಲ್ಲದೆಯೂಅವು ದಿನದಿನವೂ ಬೆಳಗುವವುಅನುದಿನವೂ ನಗುವವು *********
ನಾನು ಓದಿದ ಪುಸ್ತಕ
ಒಡಲಾಳ ದೇವನೂರು ಮಹಾದೇವ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಕೆಲವು ಕಥೆಗಳು ಸಾರ್ವಕಾಲಿಕ. ಈ ಕೊರೋನಾ ರಜೆಯಲ್ಲಿ ನಾನು ಓದಿದ ಈ ಕಥೆ ತನ್ನ ಒಡಲಾಳದ ಬದುಕನ್ನ ತುಂಬ ಅದ್ಭುತವಾಗಿ ಹೇಳುವ ‘ದೇವನೂರು ಮಹಾದೇವ’ ಅವರ ರಚಿತ ‘ಒಡಲಾಳ’. ನಾನು ಚಿಕ್ಕವಳಿದ್ದಾಗ ಅಜ್ಜಿ ಮನೆ ಮೂಡಿಗೆರೆಯ ಹತ್ತಿರದ ಹೊಸಮನೆಯಲ್ಲಿ ಕೆಲಕಾಲ ಇದ್ದೆ. ನಾವು ಅವರನ್ನು ‘ಹೊಸಮನೆ ಅಜ್ಜಿ’ ಎಂದೇ ಸಂಬೋಧಿಸುತ್ತಿದ್ದದ್ದು. ಆಗ ಅಜ್ಜಿ ಅವರ ಕಷ್ಟ ಕಾಲದ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದರು. ಒಂದೊತ್ತಿನ ಊಟಕ್ಕೂ ಕಷ್ಟಪಡುವಂತ ಕಾಲ ಅದು. ಅವ್ರ […]
ಕಾವ್ಯಯಾನ
ಭ್ರೂಣಹತ್ಯೆ ಶಾಲಿನಿ ಆರ್. ಕನಸುಗಳು ಹೌ ಹಾರಿವೆ ನಾ ಬರುವ ಮೊದಲೆ ಅಮ್ಮಾ , ಬಾಯಿಯಿರದ ನಾ’ ನಿರಪರಾಧಿನೆ ಕಣೆ ! ಮನದ ಭಾವನೆಗಳು ಒಡಲಲಿಳಿದು ಒಡಮೂಡಿದಾಗ ಹೊಡೆತಗಳ ಸವಿ ತಿನಿಸು, ಚುಚ್ಚು ಮಾತುಗಳಾರತಿಗೆ, ಭಾವಗಳ ಬಸಿರಲೆ, ನನ್ನಿರುವು ಕಮರಿ ಕುಸಿದು ಹೋಯಿತು, ಕಥೆ ಮುಗಿದ ನನ್ನ ವ್ಯಥೆಗೆ ಅಂಕಣ ಪರದೆ ಜಾರಿತು, ರಕ್ಷಿಸುವ ಕೈಗಳಿಗೆ ಕೊಳ ತೊಡಿಸಿದ ರಾಕ್ಷಸರು, ನೋಡುವ ಹೃದಯಗಳು ಕೆಲವು ಚೀತ್ಕರಿಸಲರಿಯದ ಮನಗಳು ಹಲವು, ಬಾಯಿ ಇರುವ ಮೂಕರನೇಕರ ನಡುವೆ ,ನತದೃಷ್ಟೆ ನಾನಮ್ಮ! […]
ಕಾವ್ಯಯಾನ
ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ಎಷ್ಟೊಂದು ಕನಸುಗಳು ನಿನ್ನ ತಲೆಯಲಿ ಕುಂತಿವೆ ಅಮ್ಮಾ ನಾಳೆ ಬಿದ್ದು ಹೋಗುವ ಸೂರಿನೊಳಗೆ ನಿಂತಿವೆ ಅಮ್ಮಾ ಹಕ್ಕಳೆ ಉದುರಿದ ಗೋಡೆ ಇಂದೋ ನಾಳೆ ಬಿಳಲಿದೆ ಎಲ್ಲ ಚಿಂತೆಗಳನ್ನು ಗಂಟು ಕಟ್ಟಿ ಕುಳಿತಿರುವೆ ಅಮ್ಮಾ ಗೆದ್ದಿಲು ಹಿಡಿದ ಬಾಗಿಲು ಇಂದೋ ಎಂದೋ ಕಿತ್ತು ಹೋಗಲಿದೆ ನಿನ್ನೊಳಗೆ ಎಷ್ಟು ಕನಸುಗಳ ತುಂಬಿ ಕೊಂಡಿರುವೆ ಅಮ್ಮಾ ಇಂದು ನಾಳೆಗಳ ಹಂಗಿಗಂಜದೆ ಗಂಜಿಯ ಚಿಂತೆ ಬಿಟ್ಟು ಹೋಗಿದೆ ಪುಸ್ತಕದೊಳು ನೀ ಮುಳುಗಿ ಈಜಾಡುತ್ತ ಸಾಗುತ್ತಿರುವೆ ಅಮ್ಮಾ ಬಡತನ ಸಿರಿತನದ […]
ಕಾವ್ಯಯಾನ
ನನ್ನೊಳಗಿನ ನೀನು ದೀಪಾ ಗೋನಾಳ ಏನೋ ಹೇಳಬೇಕಿತ್ತು ಹೇಳುವುದು ಬೆಟ್ಟದಷ್ಟಿತ್ತು ಸಂತಸದ ಮೂಟೆಹೊತ್ತು ನಿನ್ನ ಬಾಗಿಲು ತಟ್ಟಿದೆ ನೂಕಿಕೊಂಡು ರಭಸವಾಗಿ ಒಳನುಗ್ಗಿದೆ, ಅವಸರ ಸಲ್ಲದು ನಿಧಾನ ಎಂದವನ ಧ್ವನಿಯಲ್ಲಿ ಕೋಪ ಮಿಶ್ರಿತ ಪ್ರೀತಿಯಿತ್ತು ಇನ್ನೇನು ಎಲ್ಲ ಹೇಳಿ ಗೆಲುವ ಹಂಚಿ ತೇಗಬೇಕು ಮಾತಿನ ನಡುವಿನ ಅಂತರದಲ್ಲಿ ಅವಾಂತರವೆದ್ದಿತು ಹೋಗು ಇನ್ನೊಮ್ಮೆ ಹುಡುಕಿ ತಾ ಎಂದಿ, ಬಂದೆ, ತಿರುವಿನಲ್ಲಿ ನಿಂತು ಬಿಕ್ಕಳಿಸಿ ತಂದ ಮೂಟೆಯ ತಲೆಯಲ್ಲೆ ಉಳಿಸಿ ಹೊರಟೆ, ಎಲ್ಲಿಗೆ!? ನನ್ನ ಜೀವ ತಲ್ಲಣಿಸುತ್ತಿತ್ತು ಹಿಡಿ ಮಾತು ಹುಡಿಯಾಗಿ […]
ಕಾವ್ಯಯಾನ
ನೀನೆಂದರೆ ಮೋಹನ್ ಗೌಡ ಹೆಗ್ರೆ ನೀನೆಂದರೆ ಬರಿ ಬೆಳಕಲ್ಲ ಕುರುಡು ಕತ್ತಲೆಯ ಒಳಗೆ ಮುಳ್ಳು ಚುಚ್ಚಿದ ಕಾಲಿನ ನೋವ ಗುರುತಿಸುವ ಮಹಾಮಾತೆ ಜಗದ ತದ್ವಿರುದ್ಧಗಳ ಸಮದೂಗಿಸಿ, ಅಳುವ ಕಣ್ಣೀರಿಗೆ ಬಾಡಿ ಹೋದ ಮೊಲೆಯ ತೊಟ್ಟಿಂದ ಅಮೃತವ ಉಣಬಡಿಸುವ ಕರುಣಾಳು…. ನೀನೆಂದರೆ ಬರಿ ಕಷ್ಟಜೀವಿಯಲ್ಲ ಕಷ್ಟಗಳನೆ ಅಂಜಿಸುವ ಮಹಾತಾಯಿ ಬರೆಯದೇ ಇರುವ ಖಾಲಿ ಪುಸ್ತಕದೊಳಗೆ ನಾನೊಬ್ಬನೇ ಓದಬಹುದಾದ ಕೋಟಿ ಕಥೆ ನಿನ್ನ ಮುಖ ಯಾವ ಚಟಕ್ಕೂ ಹಾತೊರೆಸದ ದಿಗ್ಬಂಧನದ ಮಹಾ ಮಂಟಪ ಸಹಸ್ರ ಸಂಕಷ್ಟಗಳ ಹಡೆದ ನಿನ್ನ ಪಾದದಲ್ಲೆ […]
ಕಾವ್ಯಯಾನ
ಜೀವ ಕನಿಷ್ಠವಲ್ಲ ಮದ್ದೂರು ಮಧುಸೂದನ ಕಾಣದ ಜೀವಿಯ ಕರಾಮತ್ತಿಗೆ ದೀಪದ ಹುಳುಗಳಾಂತದ ಭಾರತ ವಿಲವಿಲದ ನಡುವೆ ಸಾವಿನ ದಳ್ಳುರಿ ಧಗ ಧಗಿಸಿ ಆವರಿಸುತ್ತಿದ್ದರೂ ಧರ್ಮದ ಅಪೀಮು ತಿಂದವರ ದಿಗಿ ದಿಗಿ ನೃತ್ಯ ನಿಂತಿಲ್ಲ.. ಜಾತಿ ಮತ ಧರ್ಮಗಳ ಸ್ಪೃಶ್ಯ ಅಸ್ಪೃಶ್ಯಗಳ ಸೋಂಕಿತರ ನಡುವೆ ಅವರವರ ಧರ್ಮದ ಉಳುವಿಗೆ ವಿಧ ವಿಧ ಲೆಕ್ಕಚಾರದ ಅಸಹ್ಯವೂ ಸಹ್ಯ ಧರ್ಮದ ಕಿನ್ನರಿ ಮುಂದೆ ಸಾವು ತುಟ್ಟಿಯಲ್ಲ ಬಿಡಿ! ನನ್ನ ಒಂದು ಕಣ್ಣು ಕಿತ್ತಾದರೂ ವಿರೋಧಿಗಳ ಎರೆಡೆರಡು ಕಣ್ಣು ಕೀಳುವ ಕುಹಕ ಕೇಕೆ […]
ಕಾವ್ಯಯಾನ
ಪ್ರಿಯತಮೆ ವೀಣಾ ರಮೇಶ್ ಈ ಧರೆಯ ಒಡಲು ಧರಿಸಿದೆ, ಸ್ವರ್ಗದ ಹಸಿರು ತಳಿರು,ತಳೆದಿದೆ ಸೊಬಗಿನ ಸಿರಿಯ ಸೌಂದರ್ಯ ಮೇಳೈಸಿದೆ ಮೌನವಿಲ್ಲಿ ಪ್ರೀತಿಸಿದೆ ಸ್ರಷ್ಟಿಯ ಸಿರಿಯಲಿ ರಸ ವೈಭೋಗ ತೂಗಿದೆ ಮತ್ತೆ ಋತುರಾಜ ಬಂದ ಚಿಗುರು ತಂದ ಚಲುವ ನಗೆಯ ಅರಳೋ ಮುಗುಳು ಈ ಇಳೆಯ ಹಸಿರಲಿ ನಿನ್ನ ನಗುವಿನ ಸವಾರಿ ಕೇಳೇ ನನ್ನ ವೈಯಾರಿ ಈ ಕಣ್ಣ ನೋಟದ ಬಿಗಿ ಸರಳು,ಸೆರೆಯಾದೆ ನಾ ನಿನಗೆ ಪ್ರತಿಬಿಂಬದ ಪ್ರತಿಕ್ಷಣದ ಪ್ರತಿ ನೆರಳು ಸೆಳೆವ ಕಂಗಳ ಅಂಚಿಗೆ ಮುತ್ತಿಡುವ ಈ […]