ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮಕ್ಕಳ ಪದ್ಯ

ಪಟ್ ಪಟೆಕಾಯಿ ಚಟ್ ಪಟ ಎಂದು! ವಿಜಯಶ್ರೀ ಹಾಲಾಡಿ ಪಟ್ ಪಟೆಕಾಯಿ ಚಟ್ ಪಟ ಎಂದು ಹಾಡು ಕಟ್ತಿತ್ತು ಮೆತ್ತನೆ ಹೆಜ್ಜೆಯ ಬೆಳ್ಳಿ ಬೆಕ್ಕು ಕದ್ದು ಕೇಳ್ತಿತ್ತು ಪಟ್ ಪಟೆಕಾಯಿ ಚಟ್ ಪಟ ಎಂದು ನಕ್ಕು ಉರುಳಿತ್ತು ಮುಳ್ಳಿನ ಮರೆಯ ಓತಿಕ್ಯಾತವು ಫೋಟೋ ಹಿಡಿದಿತ್ತು ಪಟ್ ಪಟೆಕಾಯಿ ಚಟ್ ಪಟ ಎಂದು ಅಳುತಾ ಕೂತಿತ್ತು ಓಡುತ ಬಂದ ಇರುವೆಯಣ್ಣ ಗಲ್ಲ ಸವರಿತ್ತು ಪಟ್ ಪಟೆಕಾಯಿ ಚಟ್ ಪಟ ಎಂದು ಗೊರಕೆ ಹೊಡೆದಿತ್ತು ನಿದ್ದೆ ಬಾರದೆ ಬಾಲವ ಸುತ್ತಿ ನರಿಯು ಊಳಿತ್ತು ನರಿಯು ಊಳಿತ್ತು..!

ಮಕ್ಕಳ ಪದ್ಯ Read Post »

ಕಾವ್ಯಯಾನ

ಕಾವ್ಯಯಾನ

ಮನದಾಳದ ಬಯಕೆ ರತ್ನಾ ಬಡವನಹಳ್ಳಿ ಸದ್ದಿಲ್ಲದೆ ಸರಿದ ಸುಂದರ ದಿನಗಳು ಸುದ್ದಿ ಮಾಡಿದ್ದರಿಯದಿಹ ವಾರಗಳು ತಂಗಳೆನಿಸದ ತಿಳಿನೀರಂತಹ ತಿಂಗಳುಗಳು ಹರುಷದ ಸವಿ ಸಿಂಚನಗೈದ ವರುಷಗಳು ಮೆಲುಕು ಹಾಕಲು ಕಾಯಬಹುದು ನಾ ಮುಂದೊಂದು ದಿನ ಬುದ್ದಿಯಗರ್ಭದಲಿ ಮೊಳಕೆಯೊಡೆದು ಮನಸು ಅಂಬೆಗಾಲಿಟ್ಟ ಅಕ್ಷರಗಳಲಿರದೆ ಮುನಿಸು ಪದಗಳಾಗಿ ಹೆಣೆದ ಬಾಡದಿಹ ಹಾರ ಸೊಗಸು ಕನ್ನಡಾಂಬೆಯ ಕೊರಳಲಂಕರಿಸಿ ಮೆರೆವ ಕನಸು ನಂಬಿಕೆಯ ನೆರಳಲಿ ನನಸಾಗಬಹುದು ಮುಂದೊಂದು ದಿನ ಕಿಚ್ಚಾವರಿಸದ ಹಚ್ಚ ಹಸಿರು ಕಾನನ ಸ್ವಚ್ಛ ಮನಗಳ ನಡುವೆ ಹೂವಾದ ಜೀವನ ಧಾವಂತಗಳಲಿ ನಲುಗದೆ ನಲಿದ ಮೌನ ಧ್ಯಾನ ನವನೀತದಲಿ ಜಾರುವ ಕೇಶದಂತಹ ಯಾನ ಕಲ್ಪನೆಯ ಬದುಕು ಸಾಕಾರವಾಗಬಹುದೇ ಮುಂದೊಂದು ದಿನ ಬರಡು ಬಯಲೊಳಗೆ ಭರವಸೆಯ ಬೆಳಕು ತೊರೆದು ತೆರಳಿರೆ ಜಗದಿ ತುಂಬಿಹ ಕೊಳಕು ಹಳಿಯದೆ ಹರಸುತ ಹುಡುಕದೆ ಹುಳುಕು ಒಳಿತನೇ ಬಯಸುತ ಎಲ್ಲರಲಿ ಸರ್ವಕಾಲಕು ಉರುಳಿತಿರೆ ಕಾಲಚಕ್ರ ಕಾಣದೇನು ಸತ್ಯಯುಗ ಮುಂದೊಂದು ದಿನ ಕಿರುಪರಿಚಯ: ಕವನ,ಕವಿತೆ,ಗಜ಼ಲ್,ಚುಟುಕು ಲೇಖನ ಬರೆಯುವ ಹವ್ಯಾಸ.ಪ್ರಜಾಪ್ರಗತಿ,ಮಾನಸಾ,ಕಸ್ತೂರಿ ಇನ್ನಿತರ ಪತ್ರಿಕೆಗಳಲಿ ಪ್ರಕಟಗೊಂಡಿವೆ.ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿಹೆಕನ್ನಡ ಸಾಹಿತ್ಯಪರಿಷತ್ ನಿಂದ ಪ್ರಶಸ್ತಿ ಬಂದಿದೆ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಖಿ ಸತ್ಯಮಂಗಲ ಮಹಾದೇವ ಈ ಬೆಳಗಿನ ಏಕಾಂತ ಅದೇಕೊ ಮುದ ನೀಡಲಿಲ್ಲ ಸಖಿ ನಟ್ಟನಡುರಾತ್ರಿಯ ಕಡುಕತ್ತಲಲ್ಲಿ ನಿನ್ನ ಮೊಗವೊಂದೆ ಸಾಕು ಬೆಳದಿಂಗಳಂತೆ ಯಮುನಾ ತೀರದಲಲೆಯುತ ಒಂಟಿ ನಡಿಗೆಯ ಪ್ರಯಾಣ ಅದೆಷ್ಟು ನೀರಸ ಸಖಿ ಮಧುರ ಮಂಜುಳ ನಾದವೂ ಸಪ್ಪೆ ತೆರೆಯೇರಿ ಬೀಸುವ ತಂಗಾಳಿಯೂ ರುಚಿಯಿಲ್ಲ ಮೈಗೆ ನಿನ್ನ ಹೆಸರೊಂದೇ ಸಾಕು ಅದೆಷ್ಟೋ ದೂರದ ನಿನ್ನ ಸನಿಹದಂತಿರಿಸುವುದು ಪದವನರಿತ ಮನಸ್ಸಿಗೆ ಪರಿಚಯ ಬೇಕೆ ಬಣ್ಣವಾಗುವ ಕನಸುಗಳಿಗೆ ರೆಕ್ಕೆಗಳ ಬಿಡಿಸಿ ಹಾರುವುದ ಕಲಿಸಬೇಕೆ ಸಖಿ ನಿನ್ನ ಉಸಿರ ಜಾಡು ಕಣ್ಣಳತೆಯಲಿ ಹಾದು ಹೋಗುವಾಗ ನನ್ನ ಆವರಿಸಿದ ಆ ಮಹಾನಂದವನು ಬಣ್ಣಿಸಲು ಅಕ್ಷರಗಳು ಸೋಲುತ್ತಿವೆ ಏಕಾಂತದ ಆ ಮೌನಕೆ ಹೊಸಚೈತ್ರಗಳಾ ಆಮೋದಕೆ ಕಾಲ್ಬೆರಳು ಗೀಚುವ ಲಜ್ಜೆಯ ಯಾತ್ರೆಗೆ ಆ ನಗುವು ಭಾಷ್ಯ ಬರೆಯಿತು ಮುತ್ತಿಡಲು ಹೊರಟ ವಸಂತ ನಾನು ಅವನನ್ನು ಮೀರಿಸಿ ಹೊರಟೆ… ಒಳಗೊಳ್ಳುವ ಸಂವಿಧಾನಕ್ಕೆ ದುಃಖ ನೀರದಾರಿ ಅರ್ಥವಿರದ ಈ ಆಸೆಗಳ ಭ್ರೂಣಕ್ಕೆ ನೀನು ತಂದೆ ನಾನು ತಾಯಿ.

ಕಾವ್ಯಯಾನ Read Post »

ಕಾವ್ಯಯಾನ

ಗಜಲ್

ಯಾರಿಗೆ ಯಾರು ಸಂಗಾತಿ? ವಿನುತಾ ಹಂಚಿನಮನಿ ಬಾಳಿನ ಬಂಡಿ ಎಳೆಯುವ ಕನಸಿನ ಕುದುರೆಗಳೇ ಯೋಚಿಸಿ ಹೇಳಿ ನಾಲ್ಕು ದಿನದ ಬದುಕಿನಲಿ ಯಾರಿಗೆ ಯಾರು ಸಂಗಾತಿ ಹೇಳಿ ಮರಕೆ ಕೋಮಲ ಲತೆಯೇ ಸಂಗಾತಿ ಹೃದಯಕೆ ಮಧುರ ಭಾವನೆಗಳೆ ಸಂಗಾತಿ ಲತೆಯ ಭಾವನೆ ಮರ ಅರಿಯದಾದರೆ ಹೃದಯದ್ದೇನು ತಪ್ಪು ಹೇಳಿ ಚಂದಿರನಿಗೆ ಹೊಳೆವ ತಾರೆಗಳೆ ಸಂಗಾತಿ ಸುಂದರ ತನುವಿಗೆ ನಿರ್ಮಲ ಮನವೇಸಂಗಾತಿ ನಕತ್ರಗಳಿಲ್ಲದ ಆಗಸದಲ್ಲಿ ಚಂದ್ರ ಏಕಾಂಗಿಯಾದರೆ ನಿಷ್ಟೆಯಿಲ್ಲದ ಮನದ ಮಾಲಿಕ ಕುರೂಪಿಯಲ್ಲವೇ ಹೇಳಿ ಹೂವಿಗೆ ಹಾರುವ ದುಂಬಿಯೇ ಸಂಗಾತಿ ನೋವಿಗೆ ಸುರಿವ ಕಂಬನಿಯೇ ಸಂಗಾತಿ ನಂಬಿದ ಹೂವಿಂದ ದುಂಬಿ ದೂರವಾದರೆ ಕಂಬನಿ ಒರೆಸುವವರು ಯಾರು ಹೇಳಿ ವಾರಿಧಿಗೆ ಭೋರ್ಗರೆವ ತೆರೆಗಳೆ ಸಂಗಾತಿ ಹರೆಯಕೆ ಸಂಭ್ರಮದ ಕನಸುಗಳೆ ಸಂಗಾತಿ ಅಲೆಗಳಿಲ್ಲದ ಕಡಲಲಿ ನಾವೆ ತೇಲದಾದರೆ ಕನಸುಗಳು ನನಸಾಗುವ ಬಗೆ ಹೇಳಿ ಹರಿವ ನದಿಗೆ ದಡವೇ ಸಂಗಾತಿ ಮರೆವ ಮನಕೆ ರೂಡಿಯೇ ಸಂಗಾತಿ ದಡದ ಗೊಡವೆ ನದಿಗೆ ಬೇಡವಾದರೆ ವಿನೂತನ ಮರೆತ ಮನಕೆ ಗತಿಯಾರು ಹೇಳಿ.

ಗಜಲ್ Read Post »

ಕಾವ್ಯಯಾನ

ಕಾವ್ಯಯಾನ

ಸಾವಿರದ ಸಾವಿರ ಕವಿತೆ ರವಿ ರಾಯಚೂರಕರ್ ಬಳಲಿ ಬೇಕೆಂದು ಬಿಕ್ಕಳಿಸಿ ಅತ್ತವನು ಎದೆಗಂಟಿ ನುಡಿ ನುಡಿದು ಆಸೆಯ ಗೋಪುರಕೆ ಹೊಸ ಕನಸುಗಳ ತುಂಬಿ ನೆಲಕಳಚಿ ಬಿದ್ದವನು ನೀನಲ್ಲವೇ ಹಸಿದು ಕುಳಿತಾಗ ಕುಟುಕಿ ಕಾಳನಿಟ್ಟು ನಿಟ್ಟುಸುರ ಹೆಜ್ಜೆಯಲಿ ಊರ ತಿರುಗಿದ ಬಿಕ್ಕು ಪ್ರಾಯದ ಪೊರೆ ಹರಿದು ಹದಿಹರೆಯದ ಒಲವನೆರದವನು ನೀನಲ್ಲವೇ ಬರಿ ಅರ್ಥಗಳನೆ ಈ ಮೌನಕೆ ತುಂಬಿ ಹಾಗೆ ತುಳುಕುವ ಸಾವಿರದ ಸಾವಿರ ಕವಿತೆಗಳ ಹಣತೆ ಹಚ್ಚಿ ಬೆಳಗಾಗುವವರೆಗೆ ಉರಿದು,ಸುಟ್ಟು, ಬೂದಿಯಾಗಿ ಈ ಕಣ್ಣ ಕಾಡಿಗೆಯಾದವನು ನೀನಲ್ಲವೇ ಶತಮಾನದ ನೋವಿಗೆ ಪ್ರೀತಿ ಒಂದೇ ಮದ್ದೆಂದು ಬಂಡಾಯವ ನನ್ನಲಿ ಬಿತ್ತಿ ದುಡಿದು,ತಡೆದು,ಮಣಿದು ರಮಿಸಿ,ಕ್ಷಮಿಸಿ,ಮುದ್ದಿಸಿ ಮುತ್ತಿನ ಮುದ್ರೆ ಹೊತ್ತಿ ಬೆಳಕಿಲ್ಲದೆ ದಾರಿಗೆ ಕೈ ಹಿಡಿದು ನಡೆಸಿಕೊಂಡೊದವರು ನೀನಲ್ಲವೇ ಕಿರು ಪರಿಚಯ: ಕನ್ನಡ ಉಪನ್ಯಾಸಕರು.’ಬಸವಮ ಕಾಲಿನ ಜೋಡಿ ಮೆಟ್ಟು’ಕವನಸಂಕಲನ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಜಲ್ ಸಿದ್ಧರಾಮ ಹೊನ್ಕಲ್ ಇಂಥವರ ನೆನಪಾದಾಗಲೆಲ್ಲ ನಿಟ್ಟುಸಿರೊಂದು ತಾನೇ ತಾನಾಗಿ ಹೊರಬರುತ್ತದೆ ಸಾಕಿ ಕಂಡಾಗಲೆಲ್ಲ ಗಂಟಲು ಕಟ್ಟಿ ಮಾತೆ ಮಥಿಸಿ ಮೌನ ಹೆಪ್ಪುಗಟ್ಟುತ್ತದೆ ಸಾಕಿ ಯಾರ ತಪ್ಪಿಗೆ ಯಾರ ಆಯುಷ್ಯಕ್ಕೆ ಯಾರು ಹೊಣೆ ಪಾಪ!ವವರು ಸಾಕಿ ಕುಂಕುಮ ಹೂ ಬಳೆ ಕೊನೆಗೆ ನಸು ನಗೆಯು ಮರೀಚಿಕೆಯಾಗುತ್ತದೆ ಸಾಕಿ ಸಂತೆಯೊಳಗೊಂದು ಮನೆಯ ಮಾಡಿ ಸುಮ್ಮನೆ ಶಬ್ದಕ್ಕೂ ಹೆದರಿ ಬಾಳುವದು ಇದೆಯಲ್ಲ ಅದು ಕಡುಕಷ್ಟ ಸಾಕಿ ಹದಿ ಬದೆಯ ಬಯಕೆಗಳ ತುಳಿದು ಹಸಿರುಟ್ಟು ಸಹ ಬರಡು ಮರದಂತೆ ಬದುಕಾಗುತ್ತದೆ ಸಾಕಿ ಫಲ ಪುಷ್ಪ ಹೂ ಬಿಡುವ ಹಸಿರು ಮರವು ಸಹ ಕಂಬನಿಗೆ ಕಾರಣವಾಗುತ್ತದೆ ಸಾಕಿ ಅಮಾಯಕರಿಗೆ ಬದುಕೇಕೆ ಇಷ್ಟು ಕ್ರೂರವಾಗಿ ಪರೀಕ್ಷೆಗೊಡ್ಡುತ್ತದೆ ಸಾಕಿ “ಹೊನ್ನಸಿರಿ” ಅಕ್ಕ-ಮೀರಾಳಂತೆ ಬದುಕು ಅಂತ ಹೇಳುವದು ಬಹು ಸುಲಭ ಸಾಕಿ ಬಯಕೆಗಳ ನುಂಗಿ ಬರೀದೇ ಬಾನಂಗಳದಲಿ ಚುಕ್ಕಿ ನೋಡುತ್ತಾ ಜಟಕಾಬಂಡಿಯಾಗುವದು ಕಡುಕಷ್ಟವಾಗುತ್ತದೆ ಸಾಕಿ. ಕಿರುಪರಿವಯ: ಪ್ರಕಟಿತ ಕೃತಿಗಳು- ಒಟ್ಟು 40 ಕೃತಿಗಳು.ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-1996.ಪಂಚನದಿಗಳ ನಾಡಿನಲ್ಲಿ ಪ್ರವಾಸ ಕೃತಿಗೆ.ಗುಲ್ಬರ್ಗಾ ವಿವಿ ಚಿನ್ನದ ಪದಕ ಕಥೆಗಳಿಗೆ-1991,ರಾಜ್ಯೋತ್ಸವ ಪುರಸ್ಕಾರ,ಗುಲ್ಬರ್ಗ ವಿವಿ—2002 ಮತ್ತು 2006, ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ಕೃತಿ. ನೆಲದ ಮರೆಯ ನಿಧಾನ ಕಥಾ ಸಂಕಲನಕ್ಕೆ ಸಂಕ್ರಮಣ ಸಾಹಿತ್ಯ ಪುರಸ್ಕಾರ-ಕಾವ್ಯ ಹಾಗೂ ಲಲಿತ ಪ್ರಬಂಧಕ್ಕೆ ಶ್ರೀ ವಿಜಯ ಪುರಸ್ಕಾರ, ಅತ್ತಿಮಬ್ಬೆ ಪುರಸ್ಕಾರ-ಗಾಂಧೀಯ ನಾಡಿನಲ್ಲಿ ಪ್ರವಾಸ ಕೃತಿಗೆ.ಹೀಗೆ ಅನೇಕ ಪುರಸ್ಕಾರ.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಜಲ್ ದೀಪಾಜಿ ಎದೆಯ ಮೇಲಿನ ಹಚ್ಚೆಗೆ ಅಗ್ಗಿಷ್ಟಿಕೆಯ ಕೆಂಡಹಚ್ಚಿ ಉಜ್ಜಿಕೊಂಡವನಲ್ಲವೇ ನೀನು ಎದೆ ಒಳಗಿನ ಇವಳನ್ನ ತೆಗೆದು ಹಾಕಲೆತ್ನಿಸಿ ಸೋತವನಲ್ಲವೇ ನೀನು ಹಿಡಿದು ತಂದ ಕೆಂಗುಲಾಬಿ ಕೆಳಗಿನ ಮುಳ್ಳ ಎಣಸ ತೊಡಗಿದ್ದ ಕುಸುಮಪ್ರೇಮಿ ಅಂತದೆ ಸುಮದ ಪರಿಮಳಕ್ಕೆ ಸೋತು ಬಿಗಿದಪ್ಪಿದ ದಿನಗಳ ಮರೆತವನಲ್ಲವೆ ನೀನು.. ಅಂಗೈಲಿ ಹಿಡಿದ ಮಧು ಪಾತ್ರೆಯೊಳಗಿನ ಬಿಂಬ ಕಲಕಿತೆಂದು ರೋಧಿಸಿದೆ ಏನು ಮಧುಹೀರಿ ಮಲಗಿದ ನಲ್ಲೆಯ ತುಟಿಗಳನೆ ಕಚ್ಚಿ ಕಡೆಗಣಿಸಿದವನಲ್ಲವೇ ನೀನು ಬಲವಂತಕ್ಕೆ ಪ್ರೀತಿಸಕೂಡದೆಂದು ಪಾಠಮಾಡುತ್ತಿದ್ದೆ ನೋಡು ಮರೆತು ಬಿಡು ಇನ್ನೂ ಜತೆಯಾಗಿ ನಡೆದುಬಂದ ದಿನಗಳನು ಎಂದು ನಶೆಯೊಳಗೂ ಪೀಡಿಸುತ್ತಿದ್ದವನಲ್ಲವೇ ನೀನು ಆಳವಿಲ್ಲದ್ದು-ಸೆಳೆತವಿಲ್ಲದ್ದು ಏನನ್ನೂ ಉಳಿಸಿಕೊಳ್ಳಲಾರದೆನ್ನುತ್ತಿದ್ದೆ‌ ನೋಡು ಬೆಳಗಿಸಿದ-ಬಾಳಿಸಿದ *ದೀಪಕ್ಕೆ ಆಳ ಹುಡುಕಿ ಸಿಗದೊಡನೆ‌ ಬೆನ್ನ ತೋರಿಸಿ ಹೊರಟನಲ್ಲವೇ ನೀನು..

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಜಲ್ ಡಾ.ಗೋವಿಂದ ಹೆಗಡೆ ಮದಿರೆಬಟ್ಟಲು ಖಾಲಿಯಾಗಿದ್ದಕ್ಕೆ ಅವಳು ಅಳುತ್ತಿದ್ದಾಳೆಎಲ್ಲಿ ಹೇಗೆ ಯಾವಾಗ ಸೋರಿಹೋಯಿತೆಂದು ಹುಡುಕುತ್ತಿದ್ದಾಳೆ ಜನ್ಮ ಜನ್ಮಾಂತರಕ್ಕೂ ತುಂಬಿರುವುದೆಂದು ಎಣಿಕೆಯಿತ್ತುಇಷ್ಟು ಬೇಗ ಎಲ್ಲ ಖಾಲಿ ಆಗಿದ್ದನ್ನು ನಂಬದಂತಿದ್ದಾಳೆ ಕನಸುಗಣ್ಣುಗಳಲ್ಲಿ ಎಷ್ಟೊಂದು ಸುರೆಯ ಸಂಗ್ರಹವಿತ್ತುಪತ್ತೆಯೇ ಇರದೆ ಸೂರೆಯಾಗಿದ್ದಕ್ಕೆ ತಳಮಳಿಸುತ್ತಿದ್ದಾಳೆ ಮಧುಬಟ್ಟಲಲ್ಲೇ ಐಬಿತ್ತೋ ಅಥವಾ ಮಧುವಿನಲೋಬಟ್ಟಲನೆತ್ತಿ ಹಿಂದೆ-ಮುಂದೆ ತಿರುತಿರುಗಿಸಿ ನೋಡುತ್ತಿದ್ದಾಳೆ ಮರಳೇ ಹಾಗೆ ಕಣಕಣವಾಗಿ ಸುರಿದು ಖಾಲಿಯಾಗುತ್ತದೆಗಡಿಯಾರ ತಿರುಗಿಸಬಹುದು, ಕಾಲವನಲ್ಲ ಮರುಳಿಯಾಗಿದ್ದಾಳೆ ಎದೆಯೊಡೆದ ಹುಚ್ಚಿ ಅವಳನ್ನು ಹೇಗೆ ಸಂತೈಸಲಿ ಸಾಕಿಹೇಗೋ ಒಂದು ಮುಕ್ಕೆರೆದು ಬಿಡು,ಚೇತರಿಸುತ್ತಾಳೆ..

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಾವಿನ ಸಾಂಗತ್ಯದಲ್ಲಿ ಮಧುಸೂದನ ಮದ್ದೂರು ಸಾವೆಂಬ ಸೂತಕದ ಹಕ್ಕಿ ರಕ್ಕೆ ಬಿಚ್ಚಿ ಹಾರುತ್ತಿದೆ ಯಾವ ಜೀವಗಳೆಂಬೋ ಹಣ್ಣ ಕಚ್ಚಿ ತಿಂದು ರಕ್ಕೆ ಪಟಪಟಿಸಿ ಗಗನದ ಚಿಕ್ಕೆಯಾಗಲಿದೆಯೋ ಬಲ್ಲವರು ಯಾರು ? ಸಾವೆಂಬ ಮಾಂತ್ರಿಕನ ಮಂತ್ರಬೂದಿಯ ಸೆಳತೆಗೆ ಸಿಲುಕಿ ಮಾಯವಾಗುವ ಮಾಯಕಾರರೆಷ್ಟೋ ಬಲ್ಲವರು ಯಾರು? ಸಾವೆಂಬ ಬುಟ್ಟಿಯಲಿ ಕಣ್ಕಟ್ಟಿನ ಯಕ್ಷಿಣಿಕಾರನ ಯಕ್ಷಿಣಿ ಕೋಲಿನ ಮಂತ್ರಕೆ ಅತಳ ಸುತಳ ಪಾತಾಳ ಸೇರುವವರೆಷ್ಟೋ ಬಲ್ಲವರು ಯಾರು? ಬಡವ-ಬಲ್ಲಿದ ಅಧಿಕಾರಸ್ಥ-ವ್ಯವಹಾರಸ್ಥ ಕಲೆಕಾರ-ಓಲೆಗಾರ ಯಾಂತ್ರಿಕ-ಮಾಂತ್ರಿಕ ವಿಜ್ಞಾನಿ-ಅಜ್ಞಾನಿ ಎಂಬೋ ಬೇಧ ಭಾವ ಎಣಿಸದ ಸಾವೆಂಬೋ ಸಾಹುಕಾರನೆದರು ಚೆಲ್ಲಾಟಗಾರನೆದುರು ಗೋಣು ಚೆಲ್ಲಲೇಬೇಕಲ್ಲವೇ…?

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ರೆಕ್ಕೆ ಮುರಿದ ಹಕ್ಕಿ ಕನಸು ಬಿದಲೋಟಿ ರಂಗನಾಥ್ ದುಃಖ ಬಚ್ಚಿಟ್ಟುಕೊಂಡು ನಗುವ ಸೂಸುವ ನಿನ್ನ ಅಂತರಂಗದ ನುಡಿಯೇ ನೋವುಗಳು ಜಾರುತ್ತಿವೆ ನಿನ್ನ ತುಟಿ ಸೀಳುಗಳ ಮೇಲೆ… ಕಣ್ಣಪದರುಗಳಲ್ಲಿ ತೇಲುವ ಕಣ್ಣೀರು ನಿಜಕ್ಕೂ ಎದೆಯಲ್ಲಡಗಿದ ಕಥೆ ಬಿಚ್ಚುತಿದೆ ಕುಂತ ನೆಲದ ಜೊಳ್ಳು ಮಾತುಗಳೋ ಸೀರೆ ಸುಟ್ಟ ನೋವೋ ಅಂತು ಸುಡುತ್ತಿದೆ ಎದೆಯ ಮೇಲೆ ಬಿದ್ದು ಉಕ್ಕಲಾರದೆ ರತಿ ಉಕ್ಕಿ ಗರಿಬಿಚ್ಚದೆ ಒಳಗೇ ಸುತ್ತಿ ಸುತ್ತಿ ಭಾವನೆಗಳ ಕೊಲ್ಲುತ.. ರತಿ ತಿಲೋತಮೆಯಂತಿದ್ದರೂ ಒಡೆದ ಒಳಮನಸಿನ ಕನ್ನಡಿಯ ಚೂರು ತಿವಿಯುತ್ತಿದೆ ಮೆತ್ತಗೆ ಮೆತ್ತಗೆ.. ಹಬೆಯಾಡದ ನಂಜು ಸುತ್ತಿ ಸುತ್ತಿ ಉಸಿರಾಡದಂತೆ ಮಾಡಿದೆ ಹೊತ್ತಿಗೊತ್ತಿಗೆ ಬಿಚ್ಚಿಕೊಳ್ಳದ ಮಾಯದ ನೋವು ಹೆಪ್ಪುಗಟ್ಟಿ ಬಿರಿಯುತ್ತಿದೆ ಕಣ್ಣೊಡಲ ಸುಖದಿಂದ ಅರಳಿ ಬೆವರಲು ಅದ್ಯಾವುದೋ ರೆಕ್ಕೆ ಮುರಿದ ಹಕ್ಕಿ ಕನಸೇ ಬೀಳುತ್ತಿದೆ..! ಹಾರಿದರೂ ಸಿಗದ ಹಕ್ಕಿಯ ಹೆಜ್ಜೆ ಗುರುತೊಂದು ಹಾಸಿಗೆಯ ಮೇಲೆ ಬಿದ್ದು ದುಃಖಿಸುವುದು ಕೇಳಿಸುತ್ತಲೇ ಇದೆ. ಈ ದೇಹದ ಮೇಲೆ ಸನ್ನದ್ದು ಪಡೆದವನ ತೋಳುಗಳು ಬಳಲಿ ಬಳಲಿ ಕಾಮಕ್ಕಾಗಿ ಕಾತರಿಸುವ ಪರಿಗೆ ಬಿತ್ತಿ ಬೆಳೆವ ಆಸೆಯು ಎದೆಯ ತುಂಬಿದರು ಒಪ್ಪಿತವಲ್ಲದ ಮನಸು ಬಂಜರು ನೆಲವಾಗಿದೆ ಸುಡುವ ನೆಲವನ್ನ ಅಪ್ಪಲು ಒಪ್ಪದ ಮನಸು ಬಿಡುಗಡೆಗೊಳ್ಳದ ಉಸಿರ ಶಪಿಸುತ್ತಿದ್ದರೂ ನಾಟಕೀಯ ನಗು ಎಂದೂ ಬಣ್ಣ ಮುಚ್ಚುವುದಿಲ್ಲ ಒಳಗೆ ನೆನಗುದಿಗೆ ಬಿದ್ದ ಭಾವದ ಕಾಲುಗಳಿಗೆ ಚಲಿಸುವ ಹವಣಿಕೆ ಇದ್ದರೂ ಪರದೆ ಎಳೆದು ನಗುತ್ತಿದ್ದೀಯಲ್ಲ. ಇದನ್ನೆಲ್ಲಾ ಕೇಳಿಸಿಕೊಂಡ ನನ್ನ ಮನಸು ಒಳಗಿನ ನೋವು ಪರಚಿ ಸೋತು ಶಬ್ಧಗಳಿಗೆ ಬಲೆ ಬೀಸಿ ಕವಿತೆ ಕಟ್ಟಿದ್ದೇನೆ ಇದರೊಂದಿಗೆ ಉಸಿರು ಬಿಡುವ ಶಕ್ತಿಯಿದ್ದರೆ , ಒಮ್ಮೆ ನಿಡಿದಾಗಿ ಉಸಿರೆಳೆದು ಹೊರಗೆ ಬಿಟ್ಟು ಬಿಡಿ.! ————————

ಕಾವ್ಯಯಾನ Read Post »

You cannot copy content of this page

Scroll to Top