ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನೇಣಿಗೇರಿದ ನೈತಿಕ ಮೌಲ್ಯ.

ದೀಪಾಜಿ ನಾನು ಕೂಗುತ್ತಲೆ‌ ಇದ್ದೆ ಯಾರಾದರೂ ಬಂದು ಉಳಿಸಿಯಾರೆಂದು ಓಡುತ್ತಲೆ ಇದ್ದೆ ಯಾರಾದರೂ ಹಿಡಿದು ನಿಲ್ಲಿಸಿ ಆಸ್ಪತ್ರೆಯ ಬೆಡ್ಡಿನವರೆಗೆ ತಂದು ಬಿಟ್ಟಾರೆಂದು. ಬದುಕುವ ಆಸೆಗಲ್ಲ ಜೀವದ ಹಂಗಿಗೂ ಅಲ್ಲ ನೋವಿನ ನರಳಿಕೆಗಂತೂ ಅಲ್ಲವೇ ಅಲ್ಲ ಅದೆಲ್ಲವ ಅಂದೆ ಕೈಬಿಟ್ಟಿದ್ದೆ ಅತ್ಯಾಚಾರಕೆ ಸಿಲುಕಿ ಪೋಲೀಸ್ ಠಾಣೆ ನ್ಯಾಯಾಲಯ ಮಾಧ್ಯಮಗಳ ಮುಂದೆ ಬಂದ ದಿನವೆ ನಾನು ಸತ್ತು ಹೋಗಿದ್ದೆ ಇಲ್ಲಿ ಉಳಿದದ್ದು ವರ್ಷಾನುಗಟ್ಟಲೆ‌ ಚಪ್ಪಲಿ ಸವೆಯುವಂತೆ ತಿರುಗುತ್ತಿದ್ದದ್ದು ಕೇವಲ ಅಳಿದುಳಿದ ನಂಬಿಕೆ ಎಂಬ ಭರವಸೆಯ ಮೇಲೆ ತಪ್ಪಿದಸ್ತರ ಪೊಗರು ಕಳಚಿ ನೇಣಿಗೆ ಏರುವ ಕ್ಷಣದ ನಿರೀಕ್ಷೆಯಲಿ ಆದರಿಲ್ಲಿ ನೇಣುಗಂಬಕ್ಕೆರಿದ್ದು ಮಾತ್ರ ನೈತಿಕ ಮೌಲ್ಯ.. ಈಗಲೂ ಸುಟ್ಟು ಬೂದಿಯಾದದ್ದು ನಾನಲ್ಲ ನನ್ನ ದೇಹವೂ ಅಲ್ಲ ಈ ವ್ಯವಸ್ಥೆಯ ಮೇಲಿದ್ದ ನಂಬಿಕೆ ಅದೀಗ ನಡುರಸ್ತೆಯಲ್ಲಿ ಉರಿದು ಬೂದಿಯಾಯ್ತು ಸುಟ್ಟು ಕಮರಿದ ವಾಸನೆ ಇಡೀ ಜಗವನೆ ಆವರಿಸಿತು ಸಂತ್ರಸ್ತರ ಕೂಗು ಇಲ್ಲಾರ ಕಿವಿಗೂ ಕೇಳಿಸಲಿಲ್ಲ ವಾಸನೆ ಹಿಡಿದ ಮೂಗುಗಳು ಕೈವಸ್ತ್ರದ ಒಳಗೆ ಬಂಧಿಯಾಗಿ ದಾಟಿ ಹೋದವು ನನ್ನಂತೆ ನಲುಗಿ ಮತ್ತೆ ಕಟಕಟೆಯಲಿ ನಿಲ್ಲಲು ಹೊರಟ ಹೆಂಗಸರ ಗುಂಪು ಸುಟ್ಟ ಚರ್ಮದ ವಾಸನೆಗೆ ಹೆದರಿ ನ್ಯಾಯದ ನಿರೀಕ್ಷೆ ಬಿಟ್ಟು ಮೂಲೆ ಸೇರಿದರು..

ನೇಣಿಗೇರಿದ ನೈತಿಕ ಮೌಲ್ಯ. Read Post »

ಕಾವ್ಯಯಾನ

ನನ್ನೊಳು ಸುನಾಮಿಯೊ

ನನ್ನ ಕೊಳಲು ಚಂದ್ರಪ್ರಭ ಬಿದಿರ ರಂಧ್ರಗಳಲಿ ತೂರಿ ತುಳುಕುವಾಗ ನೀನು ಕೊಳಲ ಮಾಧುರ್ಯ.. ಇಂಪು ಸೊಂಪಿನ ಅದೇ ಮೋಡಿ ಬೀಸಿ ಬಂದ ಬಿರುಗಾಳಿಯಲಿ ಬೆರೆವಾಗ ಅಲುಗುವುದೇಕೆ ಅಸ್ತಿತ್ವದ ಸೌಧ..! ಮತ್ತದೇ ಗಾಳಿ ಭೋರ್ಗರೆವ ಸುನಾಮಿಯಲಿ ಬೆರೆವಾಗ ನನ್ನೊಳು ಸುನಾಮಿಯೊ ಸುನಾಮಿಯೊಳು ನಾನೊ..!! ನಿನ್ನ ಹೊರತು ಸಾಗದ ಉಸಿರು.. ಅಳವಿಗೇ ಸಿಕ್ಕದ ನಿನ್ನ ಗಾಳಿ ಎಂದವರಾರು..?

ನನ್ನೊಳು ಸುನಾಮಿಯೊ Read Post »

ಕಾವ್ಯಯಾನ

ಕಾವ್ಯಯಾನ

ನಾನು ನಿನ್ನಾತ್ಮದ ಗುರುತಾಗಿದ್ದೆ ಬಿದಲೋಟಿ ರಂಗನಾಥ್ ಹೌದು ನಾನು ನಿನ್ನಾತ್ಮದ ಗುರುತಾಗಿದ್ದೆ ಆ ನಿನ್ನ ನೋಡುವ ನೋಟದ ಬಿಸುಪಿಗೆ ಚಳಿಯಾಗಿದ್ದೆ ಮಳೆಯಾಗಿದ್ದೆ ಮುಗಿಲೇ ಆಗಿದ್ದೆ ನಿನ್ನ ಮೈಯೊಳಗಿನ ಬಿಸಿಗೆ ಬೆರೆತ ಜೀವವಾಗಿದ್ದೆ ನೀನು ನಡೆದ ದಾರಿಯ ಮೇಲಿನ ಹೆಜ್ಜೆಯನು ಮುಟ್ಟಿ ಬೆಳಕಿನ ಕಿರಣಗಳ ಮುಡಿಸಿದ್ದೆ ಉಳಿದ ಮಾತುಗಳ ನಿಟ್ಟುಸಿರ ಮೌನಕೆ ಕಾಲದ ಸವಾರ ಕುಂಟಾಗಿ ಬಿದ್ದಿದ್ದ ಎದೆಯೊಳಗಿನ ಗಿಲಕಿಗೆ ಕೀ ಕೊಡುವ ನಿನ್ನ ಹೃದಯದ ಕೋಮಲ ಕೈಗಳು ನನ್ನಿಂದ ಜಾರಿಹೋದಾಗಿನ ಶೂನ್ಯತೆಯಲಿ ಕತ್ತಲ ಮನೆಯಲಿ ದಿನಗಳ ಎಣಿಸುತ್ತ ಕೂತಿರುವೆ ಎಷ್ಟೊಂದಿತ್ತು ಹೇಳಲು ಮೌನದ ಒರಟುತನವ ಪಾಳಿಸಲು ನೋಡು ನಿನ್ನ ಕಣ್ಣ ಚಿಪ್ಪಿನಲಿ ಕಡೆದ ನನ್ನದೇ ಚಿತ್ರ ಕಣ್ಣೀರ ಕೋಡಿ ಹರಿದರೂ ಕೊಚ್ಚಿ ಹೋಗಿಲ್ಲ ಅಂದು ನಿನ್ನೆದೆಯೊಳಗೆ ಮಿನುಗಿದ ನಕ್ಷತ್ರ ಕಣ್ಮಿಟುಕಿಸುತ್ತಲೇ ಇದೆ… ನೀನು ಜಾರಿ ಹೋಗಿ ಎಷ್ಟೋ ವರುಷಗಳಾದರು ! ಅವತ್ತು ನೀನೆ ಹೇಳಬಹುದಿತ್ತು ಹೃದಯ ಕಣ್ಣೀರುಕ್ಕಿಸಿದ ಕಥೆಯ ಹೇಳದೆ ಹೋಗಿ ನೋವಿನಲಿ ಹೆಣೆದ ಬಲೆಯಾದೆ ನೀನೂರಿದ ಹೆಜ್ಜೆಗಳು ಕವಲೊಡೆದು ಚಾಚಿವೆ ಎದೆಯ ತುಂಬಾ ಒಣಗಿ ಬೆತ್ತಲಾಗಿದ್ದರೆ ನಿಜಕ್ಕೂ ಈ ಕವಿತೆ ಇವತ್ತು ನಗುವ ಚಲ್ಲುತಿರಲಿಲ್ಲ ನಿನ್ನ ನೆನಪ ದಾರಿಯ ಏರಿಯ ಮೇಲೆ ಕೂತು ಕೆರೆಯ ನೀರಿಗೆ ಕಲ್ಲೆಸೆಯುತ್ತಿರಲಿಲ್ಲ.!

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಾಲ್ಕಾರು ಮಳೆ ಹನಿಗಳು: ದೇವು ಮಾಕೊಂಡ ಸಿಂದ್ಗಿ ನನಗೆ ನಾನೇ ಬಂಧಿಯಾಗಿರುವೆ ಎರಡು ಕಳ್ಳ ಹುದುಲಗಳ ನಡುವೆ ಸಿಲುಕಿ ಬೇರೆರಡರ ಇಕ್ಕಟಿನಲಿ ಬೆಳೆದ ಈಚಲು ಸಸಿಯ ಹಾಗೆ ವಿಶಾಲ ಭೂಮಿ ಬಾನುಗಳ ನಡುವೆ ತಳಕು ಹಾಕಿಕೊಂಡಿರುವೆ ಪರೀಧಿಯೊಳಗಿನ ಕೇಂದ್ರದ ಹಾಗೆ ಬೆಳಗು ಬೈಗು ಪ್ರೀತಿ ಇಮ್ಮಡಿಗೊಳ್ಳುತ್ತದೆ ಸೂರ್ಯ ಬಿಸಲ ಪ್ರಖರ ಶಾಖಗೆ ಕಾಮ ಕಸ್ತೂರಿ ಅರಳಿದ ಹಾಗೆ ಎಲ್ಲೋ ಎಸೆದ ಬೀಜ ಮೊಳಕೆಯೊಡೆದು ನನ್ನೊಳಗೆ ಹೂವು ಬಿಡುತ್ತಿದೆ ತಿಂಗಳ ಚಂದಿರ ಮೂಡಿದ ಹಾಗೆ ಇರುಳ ರಾತ್ರಿ ಪುಟಿದೇಳುತ್ತಿದೆ ವಿರಹ ಕರಕಲಾಗುತ್ತಿದೆ ಸುಟ್ಟು ಸುಟ್ಟು ಅನಾಥನ ಗರಡಿಯೊಳಗೆ ಸಿಲುಕಿ ಬೆಳದಿಂಗಳ ಮೋಹ ಕಾಮದ ಚಿಗುರನು ಹಿಪ್ಪಿ ಮಾಡುತ್ತಿದೆ ಹಿಂಡಿ ಹಿಂಡಿ ಮರಡಿ ಮಣ್ಣಲಿ ನಾಲ್ಕಾರು ಮಳೆ ಹನಿ ಬಿದ್ದ ಹಾಗೆ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮೌನ ಮಾತಾದಾಗ ಸರೋಜಾ ಶ್ರೀಕಾಂತ ಅಮಾತಿ ಎದೆಯಗೂಡೊಳಗೆ ಬಚ್ಚಿಟ್ಟು ಮರೆಮಾಚಿದ ಮಾತುಗಳೆಷ್ಟೋ!? ನುಡಿಯದೇ ಮೌನರಾಗವಾದ ಶ್ರುತಿ,ತಾಳಗಳಿಲ್ಲದ ಹಾಡುಗಳೆಷ್ಟೋ!!? ತುಟಿಯ ಬಿಟ್ಟು ಹೊರಬರದೇ ಅಡಗಿಸಿಟ್ಟ ನಲಿವು-ನೋವ ಬಗೆಯ! ಬಿಡಿ ಬಿಡಿಸಿ ನಿನ್ನ ಮುಂದಿಡುವೆ ನಾನೀಗ ಕೇಳದಿರಬೇಡ ಗೆಳತಿ ಮನದ ಮಾತೀಗ!! ಅಳಿಯದೆ ಉಳಿದ ಭಾವಗಳಿಗೆ  ಜೀವ ಬಂದಿದೆ ಮತ್ತೊಮ್ಮೆ ಈಗ! ಮನದ ಮೂಲೆಯಲಿ ಅವಿತಿರುವ ಆಸೆ ಹಕ್ಕಿಗೆ  ಹಾರಲು ರೆಕ್ಕೆ ಬಂತೀಗ!! ನನ್ನೀ ಮೌನ ಮಾತಾಗಬೇಕೆಂದರೂ ಬೇಕು ನಿನ್ನ ಸನಿಹ ಸಾಂಗತ್ಯ ನಾ ಬರೆವ ಲೇಖನಿ ನೀನೆಂಬುದು ಸತ್ಯ! ಮತ್ತೇ ಮತ್ತೇ ಬಂದು ಸೇರು ನನ್ನ ಕೈಗೆ ನೀ ನಿತ್ಯ ಮರೆತು ಕೂಡ ಮರೆಯಾಗದಿರು ಕಂಗಳ ಹೊಳಪಿನಿಂದ! ಕನಸ ಕಾಣೋ ಕಲ್ಪನೆಯ ಬಗೆಯಿಂದ ಬಯಸಿದೆ ಮನ ಸದಾ ನಿನ್ನ ಸ್ನೇಹ ಸಂಬಂಧ!! ಅವಿತು ಕೂತ ಮೌನಪದಗಳಿಗೆಲ್ಲ ಮಾತೆಂಬ ಕವಿತೆಯಾಗೋ ಹೊಂಗನಸೀಗ! ನನ್ನೊಲವಿನ ಗೆಳತಿ ಬಂದು ಬಿಡು  ತುಟಿಯಂಚಿನಿಂದ ಆಚೆಯೀಗ!!  ಮತ್ತೇ ಮಾತು ಮೌನವಾಗುವ ಮುನ್ನ!!!

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ದಾರಿಹೋಕನೆಂದು ನಂಬಿ ಬಿಟ್ಟೆ! ಅವ್ಯಕ್ತ ಕುಶಲ ಚೇಷ್ಟೆಗಳ ಕನಸ ಮಾರುವ ಕಾಂತನೆ ಹೆಣ್ಣಿನ ಒಳಮನಸ್ಸ ಮರ್ಮವ ಹೇಳುವೆ ತಿಳಿದುಕೊ… ನಿನ್ನ ನಿಜ ಲೋಕದ ಕಡಲ ಮುತ್ತು ಗಳಂತಿರುವ, ಮೌನ ವನಿತೆಯರ ಸಖಿಗುಟ್ಟಿದು.. ಮುಂಗುರುಳ ನಡುವೆ ನಲಿವ ಕಣ್ಣಲ್ಲಿ ಕನಸೊಂದ ಹುಡುಕುವುದು ತಪ್ಪೇನಲ್ಲಾ.. ತುಂಟ ನಗುವಿನೊಳಗೆ ರಸಿಕತೆಯ ಬಯಕೆಯು ಅಲ್ಪಾಯುಷಿಯೂ ಅಲ್ಲಾ.. ಸಭ್ಯತೆಯ ನೀಳ ಸೆರಗ ಜಾರಿಸಲು ಬಾಡದ ನಿತ್ಯಾನುರಾಗವ ಹುಡುಕುವಳಷ್ಟೆ, ಸಹಜ ಜೀವನದಲ್ಲಿರುವ ತಿರುವುಗಳ ಮಧ್ಯೆ ಸ್ಪಷ್ಟ ಮನದ ಮದುರ ಪ್ರೀತಿಯ ಅರಸುವಳಷ್ಟೇ. ಉದಾಸೀನ ಪುರುಷನ ಭೂಷಣವಾದರೆ, ಕ್ಷಮಿಸುವುದು ಸ್ತ್ರೀಯ ಮಾತೃತ್ವವೇ ಹೌದು. ನಿನ್ನ ಮೆದುಳಿನಾಟದ ದಾಳದ ಕಾಯಿ ಅವಳೆಂದರೆ, ಅವಳ ಹೃದಯದಾಟದ ಗುಪ್ತ ರಾಜ ನೀನು ಮರುಳೇ. ಅಯ್ಯೋ, ಮೂಢಾಂಧ…! ಈ ಯುಗದ ಬಲಿಷ್ಠ ಸ್ವತಂತ್ರ ನಾರಿ ಇವಳು. ಆ ಕನಸಿನ ವೀಣಾತಂತಿಗಳ ಮೀಟುವುದ ನೀ ನಿಲ್ಲಿಸಿದೆ, ಬಯಕೆಯ ಹೆಬ್ಬಾಗಿಲ ಮುಚ್ಚಿ, ಪ್ರೀತಿಯ ಹೂಗಳನಿಟ್ಟಳು ಮಚ್ಚೆಯ ಕಚ್ಚಿದಾಗಲೇ ಗುಟ್ಟಾದ ಗಂಟೊಂದ ಕಟ್ಟಿದ್ದಳು.. ಕಾಣದೆ ಅರಳುವ ಮುಗುಳ್ನಗೆಯೊಳಗಿನ ಆಲಿಂಗನವ, ತುಸುತಟ್ಟಿ ನೋಡದೆ…. ನಾನು ಕೇವಲ ದಾರಿಹೋಕ ಎಂದು ನೀ ನಂಬಿಬಿಟ್ಟೆ! ಒಲವ ಅನರ್ಘ್ಯ ಮಾಲೆಗೆ ಅಹಂಮಿನ ಮೋಡ ಕವಿಯಿತಷ್ಟೆ.

ಕಾವ್ಯಯಾನ Read Post »

ಕಾವ್ಯಯಾನ

ಮಕ್ಕಳ ಕವಿತೆ

ಚಂದ್ರಯಾನ ಎನ್. ಶಂಕರರಾವ್ ಆಹಾ ಚಂದಿರ ಪೂರ್ಣ ಚಂದಿರ ಎಷ್ಟು ಎತ್ತರ ನಿಲುಕದಷ್ಟು ದೂರ. ನಾ ನೀ ಜೊತೆ ಜೊತೆಯಲಿ ಆಡುವ ಬಾ ಚಂದಿರ, ಮೋಡದಿ ಮರೆಯಾಗದಿರು ಅಂಬರದಿ ತೇಲಾಡದಿರು. ನಿಲ್ಲು ಅಲ್ಲೇ ಚಂದಮಾಮ ಎಲ್ಲಿ ಅವಿತೆ ಬಾನಲಿ ನೀನು, ಬಲ್ಲೆ ನಿನ್ನ ಕಣ್ಣುಮುಚ್ಚಾಲೆ ಜಲದ ಹಿಂದೆ ಅವಿತೆಯೇಕೆ. ಹುಣ್ಣಿಮೆಯ ಸುಂದರ ಚಂದಿರ ವಿಧು ನೀ ಬಾನಲಿ ಮಂದಿರ, ಮುದದಲಿ ಪ್ರಕಾಶಿಸು ನಿರಂತರ ಬದುಕಿಗೆ ನೀ ಭಾಸುರ. ವಿಜ್ಞಾನದ ಪರಿಶ್ರಮ ಭಾರತದ ಚಂದ್ರಯಾನ, ನೋಡತಲಿರು ಮುಂದೊಮ್ಮೆ ನಿನ್ನಲ್ಲಿಗೆ ನಾ ಬರುವೆ ಚಂದ್ರಯಾನಕೆ ಕಾದಿರಿಸಿರುವೆ. ಕಿರುಪರಿಚಯ: ನಿವೃತ್ತ ಬ್ಯಾಂಕ್ ಮ್ಯಾನೇಜರ್,ಮೂರು ಕವನಸಂಕಲನಗಳು ಬಿಡುಗಡೆಯಾಗಿವೆ.ಇವರ ಹಬ್ಬ ಪದ್ಯ ಐದನೇ ತರಗತಿಯ ಕನ್ನಡ ದ್ವಿತೀಯ ಬಾಷೆಯಲ್ಲಿ ಪಠ್ಯವಾಗಿದೆ

ಮಕ್ಕಳ ಕವಿತೆ Read Post »

ಕಾವ್ಯಯಾನ

ಕಾವ್ಯಯಾನ

ಹೇಳಿ ಹೋಗು ಕಾರಣ ಪ್ರಮಿಳಾ ಎಸ್.ಪಿ. ದಿಂಬಿನ ಕೆಳಗಿನ ಜಂಗಮ ಗಂಟೆಯನ್ನು ಮತ್ತೊಮ್ಮೆ ಮಗದೊಮ್ಮೆ ಹುಡುಕಿ ನೋಡುತ್ತಿದ್ದೆ….. ಕೆಂಪು ಗುಲಾಬಿ ಅದರ ಮುದ್ರೆ ಹೃದಯದ ಇಮೇಜು ಇದ್ದಿರಬಹುದು ನಿನ್ನ ಕಡೆಯಿಂದ…ಎಂದು!!! ಈಗೆಲ್ಲವು ಶೂನ್ಯ… ಅದೆಷ್ಟು ದಿನ ಅಂತರಂಗದ ಒಡೆನಾಟವಿತ್ತೋ… ಅಷ್ಟೂ ದಿನ ನಿನ್ನ ಡಿಪಿ ಗೊಂದು ಬೆಲೆಯಿತ್ತು…. ಈಗ ಕೊನೆಯ ಸೀನ್ ಎಷ್ಟು ಗಂಟೆಗೆ ನೋಡಿರುವೆ… ಎಂಬುದು ಒಂದೇ ಬಾಕಿ ನನಗೆ… ಹೇಳಿ ಹೋಗು ಕಾರಣ ಎನ್ನುವುದಿಲ್ಲ ನಾನು ಕಾರಣ ಹೇಳದೆ ಬಂದಿದ್ದವನು ನೀನು….!!!

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮದುವೆಯ ಪ್ರಸ್ತಾಪ ಹರ್ಷಿತಾ ಕೆ.ಟಿ. ನೋಡುನೋಡುತ್ತಿದ್ದಂತೆ ಆಕಾಶದಲ್ಲೊಂದು ಕದ ತೆರೆದುಕೊಂಡಿತು ಯಾವುದೋ ಕೈಯೊಂದೂ ಚಾಚಿ ಕರೆಯಿತು ನಿಂತಲ್ಲಿಂದಲೇ ಕತ್ತು ನೀಳ ಮಾಡಿ ಎಟುಗಿಸಿ ನೋಡಿದೆ ಕದದ ಆ ಬದಿಯ ಲೋಕ ಅಲ್ಲಿ ಎಲ್ಲವೂ ಕಲ್ಪಿಸಿಕೊಂಡಿದ್ದಕಿಂತ ಅಚ್ಚುಕಟ್ಟು ಜೋಡಿಸಿಟ್ಟ ಕನಸುಗಳಿಗೆ ಧೂಳು ತಾಕಿರಲಿಲ್ಲ ಅಲ್ಲಿ ಹಸಿವು ಬಾಯಾರಿಕೆಗಳೂ ಊಳಿಡುವುದಿಲ್ಲ ಬತ್ತಿ ಸಿಕ್ಕಿಸಿ ಎಣ್ಣೆ ತುಂಬಿಸಿಟ್ಟ ದೀಪಗಳು ಬೆಳಗುವುದೊಂದೇ ಬಾಕಿ ಆದರೂ ಎತ್ತಲೂ ಈಗಾಗಲೇ ಬೆಳಕು ಈ ಭೂಮಿಯಂತಲ್ಲ ಕಸದ ರಾಶಿ ಇಲ್ಲ ಅಂಗಳವೂ ಇಕ್ಕಟ್ಟಿಲ್ಲ ಒಲೆಯೇರಿ ಕುಳಿತ ಮಡಿಕೆಗೆ ತೂತುಗಳಿಲ್ಲ ಮಾಳಿಗೆ ಸೋರಿ ಆಸೆಗಳು ನೀರು ಕುಡಿಯುವುದಿಲ್ಲ ಇದೇ ತಾನೇ ನಾ ಕಲ್ಪಿಸಿ ಕನವರಿಸಿದ್ದು ಇದೇ ತಾನೇ ನನ್ನಮ್ಮ ದಿಬ್ಬದ ಗುಡಿಯಲ್ಲಿ ಹರಸಿಕೊಂಡಿದ್ದು ಆದರೂ ಏನೋ ಸರಿಯೆನಿಸುತ್ತಿಲ್ಲ ಬಯಕೆಗೂ ಮಿಗಿಲಾಗಿ ದಕ್ಕಿದರೂ ಉಪ್ಪು ಸಾಲದ ಭಾವನೆಗಳು ಹಿಗ್ಗಿದರೂ ಅರಳದ ಒಡಲು ಬೆಳಕಿನ ಲೋಕದಲ್ಲಿ ಪ್ರತಿ ಘಳಿಗೆಯೂ ಬೆಳಕಂತೆ ಕತ್ತಲೆಯೇ ಕಾಣದಷ್ಟು ಕಣ್ಣಿಗೇ ಕತ್ತಲು ಕವಿಯುವಷ್ಟು ಗಂಧವಿಲ್ಲದ ಬೆಳಕು ಕೈಗಂಟಿದ್ದ ಎಂದೋ ಬಾಚಿದ ಸಗಣಿಯ ಘಮಲು, ಎದೆಯೊಳಗಿನ ಕತ್ತಲು ಹೆಚ್ಚು ಜೀವಂತವೆನಿಸಿತು ಮುಂಜಾವಿನಲಿ ಹಿತವೆನಿಸಿದ ಒಪ್ಪ ಓರಣಗಳು ಸಂಜೆ ಹೊತ್ತಿಗೆ ಅಸುನೀಗಿದಷ್ಟು ಸ್ತಬ್ದವೆನಿಸಿದವು ಸಾವು ನೋವುಗಳ ಕೇಳರಿಯದ ಮಹಲಿನ ಗೋಡೆಗಳು ಹೀರುತ್ತಿದಂತಿತ್ತು ನಗುವಿನ ಸದ್ದನೂ ಪ್ರತಿಧ್ವನಿಸದಂತೆ ಆಸೆಗಳಿಗೆ ರೆಕ್ಕೆ ಕಟ್ಟದ ಭೂಮಿ ಆಯ ತಪ್ಪಿ ಬಿದ್ದರೆ ಭೂಮಿ ಸಿಗದ ಆಕಾಶ ಚಾಚಲೊಲ್ಲದ ಕೈ ಒಲ್ಲೆಯೆನ್ನದ ಬಾಯಿ ಸಗಣಿ ಮೆತ್ತಿದ ಕನಸುಗಳು ಹರಡಿಕೊಂಡು ಕುಳಿತಿರುವೆ ಮನದ ಎದುರು ಆಯ್ಕೆಗಾಗಿ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯ ಯಾನ

ಆ ಕರಾಳ ಇರುಳು ಮಧು ವಸ್ತ್ರದ್ ನಾವು ಮುಂಬಯಿ ಮಾಯಾ ನಗರದ ದಿಟ್ಟನಿವಾಸಿಗಳು.. ಮರೆಯೆವು ಎಂದೂ 26-11ರ ಆ ಕರಾಳ ಇರುಳು.. ಉತ್ಸಾಹದ ಕೆಲಸದೊತ್ತಡದ ಗಜಿಬಿಜಿಯ ದಿನಗಳು.. ಅರಿವಿಲ್ಲದೆ ಬಲಿಯಾದರು ತಪ್ಪನೆಸಗದ ಮುಗ್ಧಜನಗಳು.. ಶತ್ರುಗಳು ನುಗ್ಗಿದರು ಮೋಸದಿ ಸಮುದ್ರಮಾರ್ಗದೊಳು.. ಯಾರಿಗೂ ಕಾಣಲಿಲ್ಲ ಆ ನೀಚ ಕಪಟಿಗಳ ನೆರಳು.. ಅಕಸ್ಮಾತ್ತಾಗಿಎರಗಿದ ಭೀಕರ ಗುಂಡು ಸಿಡಿಮದ್ದುಗಳು.. ಜೀವತೆತ್ತರನೇಕ ಕಾರ್ಯನಿರತ ಪೋಲಿಸ್ ಕರ್ಮಚಾರಿಗಳು.. ಸೋತುಬಳಲಿದವುಮುಂಬೈನ ಎತ್ತರದ ಕಟ್ಟಡಗಳು.. ಮೌನವಾದವು ಫುಟ್ ಪಾತ್ ಗಳು..ಖಾವುಗಲ್ಲಿಗಳು.. ಹೋಟೆಲ್ ತಾಜ್ಒಳಾಂಗಣದಿ ಪೋಲಿಸರ ಕಸರತ್ತು ಗಳು ಮೂರುದಿನಗಳವರೆಗೆ ಪಿಸ್ತೂಲ್ ಟ್ರಿಗರ್ ನಲ್ಲೆ ಬೆರಳು.. ಪ್ರವಾಸಿಗರನು ಸುರಕ್ಷಿತವಾಗಿ ಹೊರಗೆ ಕಳಿಸುವಗೀಳು.. ಗುಂಡಿನ ಚಕಮಕಿಯಲ್ಲಿ ಬಿದ್ದವು ನೂರಾರು ಶವಗಳು.. ಬೆಳ್ಳಗಾಗ ತೊಡಗಿದವು ತುಕಾರಾಂರ ಕಣ್ಣುಗಳು.. ಆದರೂ ಸೋಲದೆಹಿಡಿದರು ಕಸಾಬನ ಕೊರಳು.. ಮುಂಬಯಿ ಜನರಿಗೆ ತಮ್ಮ ಪೋಲೀಸರೆ ಹೀರೊಗಳು.. ನೀಡುವೆನು ಈ ಪೋಲಿಸರಿಗೆ ನನ್ನ ಶತಃಶತ ನಮನಗಳು ಕಿರುಪರಿಚಯ: ಗೃಹಿಣಿ..ಪತಿ-ಅಸಿಸ್ಟೆಂಟ್ ಪೋಲೀಸ್ ಕಮಿಷನರ್. ಕಳೆದ ೩೨ ವರ್ಷಗಳಿಂದ ಮುಂಬಯಿನಲ್ಲಿ ವಾಸ ಸಂಗೀತ.. ಸಾಹಿತ್ಯ.. ಅಡುಗೆ..ಗಳಲ್ಲಿ ತುಂಬಾ ಆಸಕ್ತಿ ಇದೆ..ಸಮಾಜ ಸೇವೆ ಮಾಡೋದರಲ್ಲೂ ಆಸಕ್ತಿ ಇದೆ.. ಓದುವುದು ಬರೆಯುವುದು ಹವ್ಯಾಸ,

ಕಾವ್ಯ ಯಾನ Read Post »

You cannot copy content of this page

Scroll to Top