ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಭ್ರೂಣಹತ್ಯೆ ಶಾಲಿನಿ ಆರ್. ಕನಸುಗಳು ಹೌ ಹಾರಿವೆ ನಾ ಬರುವ ಮೊದಲೆ ಅಮ್ಮಾ , ಬಾಯಿಯಿರದ ನಾ’ ನಿರಪರಾಧಿನೆ ಕಣೆ ! ಮನದ ಭಾವನೆಗಳು ಒಡಲಲಿಳಿದು ಒಡಮೂಡಿದಾಗ ಹೊಡೆತಗಳ ಸವಿ‌ ತಿನಿಸು, ಚುಚ್ಚು ಮಾತುಗಳಾರತಿಗೆ, ಭಾವಗಳ ಬಸಿರಲೆ, ನನ್ನಿರುವು ಕಮರಿ ಕುಸಿದು ಹೋಯಿತು, ಕಥೆ ಮುಗಿದ ನನ್ನ ವ್ಯಥೆಗೆ ಅಂಕಣ ಪರದೆ ಜಾರಿತು, ರಕ್ಷಿಸುವ ಕೈಗಳಿಗೆ ಕೊಳ ತೊಡಿಸಿದ ರಾಕ್ಷಸರು, ನೋಡುವ ಹೃದಯಗಳು ಕೆಲವು ಚೀತ್ಕರಿಸಲರಿಯದ ಮನಗಳು ಹಲವು, ಬಾಯಿ‌ ಇರುವ ಮೂಕರನೇಕರ ನಡುವೆ ,ನತದೃಷ್ಟೆ ನಾನಮ್ಮ! ಅಮ್ಮಾ’ ನಿನ್ನಾರ್ಥನಾದ ಅಡಗಿಹುದು ಇಲ್ಲಿ‌,   ಅಹಿಂಸತ್ವವ ಸಾರಿದ ನಾಡಲ್ಲಿ, ನನ್ನಂಥ ನಿರಪರಾಧಿ ಕೂಸಿಗೆ ‘ ಭ್ರೂಣದಲಿರುವಾಗಲೆ ಹೆಣ್ಣೆಂಬ ಅಪರಾಧಿ ಪಟ್ಟ … ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ಎಷ್ಟೊಂದು ಕನಸುಗಳು ನಿನ್ನ ತಲೆಯಲಿ ಕುಂತಿವೆ ಅಮ್ಮಾ ನಾಳೆ ಬಿದ್ದು ಹೋಗುವ ಸೂರಿನೊಳಗೆ ನಿಂತಿವೆ ಅಮ್ಮಾ ಹಕ್ಕಳೆ ಉದುರಿದ ಗೋಡೆ ಇಂದೋ ನಾಳೆ ಬಿಳಲಿದೆ ಎಲ್ಲ ಚಿಂತೆಗಳನ್ನು ಗಂಟು ಕಟ್ಟಿ ಕುಳಿತಿರುವೆ ಅಮ್ಮಾ ಗೆದ್ದಿಲು ಹಿಡಿದ ಬಾಗಿಲು ಇಂದೋ ಎಂದೋ ಕಿತ್ತು ಹೋಗಲಿದೆ ನಿನ್ನೊಳಗೆ ಎಷ್ಟು ಕನಸುಗಳ ತುಂಬಿ ಕೊಂಡಿರುವೆ ಅಮ್ಮಾ ಇಂದು ನಾಳೆಗಳ ಹಂಗಿಗಂಜದೆ ಗಂಜಿಯ ಚಿಂತೆ ಬಿಟ್ಟು ಹೋಗಿದೆ ಪುಸ್ತಕದೊಳು ನೀ ಮುಳುಗಿ ಈಜಾಡುತ್ತ ಸಾಗುತ್ತಿರುವೆ ಅಮ್ಮಾ ಬಡತನ ಸಿರಿತನದ ಹಂಗಿಲ್ಲ ಮರುಳನಿಗೆ ನಿನ್ನ ಹೊರತು ನಿನ್ನೊಳಗೆ ಜ್ಞಾನ ನಿಧಿಯ ಹಂಬಲಕೆ ಮೆಟ್ಟು ಬಿಡದೆ ಧ್ಯಾನಿಸುತಿರುವೆ ಅಮ್ಮಾ *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನನ್ನೊಳಗಿನ ನೀನು ದೀಪಾ ಗೋನಾಳ ಏನೋ ಹೇಳಬೇಕಿತ್ತು ಹೇಳುವುದು ಬೆಟ್ಟದಷ್ಟಿತ್ತು ಸಂತಸದ ಮೂಟೆ‌ಹೊತ್ತು ನಿನ್ನ ಬಾಗಿಲು ತಟ್ಟಿದೆ ನೂಕಿಕೊಂಡು ರಭಸವಾಗಿ ಒಳನುಗ್ಗಿದೆ, ಅವಸರ ಸಲ್ಲದು ನಿಧಾನ ಎಂದವನ ಧ್ವನಿಯಲ್ಲಿ ಕೋಪ ಮಿಶ್ರಿತ ಪ್ರೀತಿಯಿತ್ತು ಇನ್ನೇನು ಎಲ್ಲ ಹೇಳಿ ಗೆಲುವ ಹಂಚಿ ತೇಗಬೇಕು ಮಾತಿನ ನಡುವಿನ ಅಂತರದಲ್ಲಿ ಅವಾಂತರವೆದ್ದಿತು ಹೋಗು ಇನ್ನೊಮ್ಮೆ ಹುಡುಕಿ ತಾ ಎಂದಿ, ಬಂದೆ, ತಿರುವಿನಲ್ಲಿ ನಿಂತು ಬಿಕ್ಕಳಿಸಿ ತಂದ ಮೂಟೆಯ ತಲೆಯಲ್ಲೆ ಉಳಿಸಿ ಹೊರಟೆ, ಎಲ್ಲಿಗೆ!? ನನ್ನ ಜೀವ ತಲ್ಲಣಿಸುತ್ತಿತ್ತು ಹಿಡಿ ಮಾತು ಹುಡಿಯಾಗಿ ಇಡೀ ಜೀವ ಮುದ್ದೆಮಾಡಿ ಪಳ್ಳನೆ ಉದುರಿದ ಹನಿ ನೆಲಕಾಣುವ ಮನ್ನ ಕವಸ್ತ್ರಕ್ಕಿಟ್ಟು ಕರಗಿಸಿ ನೆಲಕಚ್ಚಿ ಕುಳಿತೆ ಈ ನೆಲ ಒಮ್ಮೆ ಬಿರಿದು ನುಂಗಿಬಿಡಲಿ ಸಮಾಧಾನದ ಧಾತ್ರಿಯ ಒಡಲ ಸೇರಿಬಿಡಲಿ, ಅಲ್ಲಿಗೆ.. ಸಂತಸ ಸಂಕಟ ಬಿಕ್ಕು ಕಣ್ಣಹನಿ ಒಡಲು ಕಡಲು ನಾನು ನನ್ನೊಳಗಿನ ನೀನು ಇಲ್ಲೆ ಸಮಾಧಿಯಾಗಿಬಿಡಲಿ.. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೀನೆಂದರೆ ಮೋಹನ್ ಗೌಡ ಹೆಗ್ರೆ ನೀನೆಂದರೆ ಬರಿ ಬೆಳಕಲ್ಲ ಕುರುಡು ಕತ್ತಲೆಯ ಒಳಗೆ ಮುಳ್ಳು ಚುಚ್ಚಿದ ಕಾಲಿನ ನೋವ ಗುರುತಿಸುವ ಮಹಾಮಾತೆ ಜಗದ ತದ್ವಿರುದ್ಧಗಳ ಸಮದೂಗಿಸಿ, ಅಳುವ ಕಣ್ಣೀರಿಗೆ ಬಾಡಿ ಹೋದ ಮೊಲೆಯ ತೊಟ್ಟಿಂದ ಅಮೃತವ ಉಣಬಡಿಸುವ ಕರುಣಾಳು…. ನೀನೆಂದರೆ ಬರಿ ಕಷ್ಟಜೀವಿಯಲ್ಲ ಕಷ್ಟಗಳನೆ ಅಂಜಿಸುವ ಮಹಾತಾಯಿ ಬರೆಯದೇ ಇರುವ ಖಾಲಿ ಪುಸ್ತಕದೊಳಗೆ ನಾನೊಬ್ಬನೇ ಓದಬಹುದಾದ ಕೋಟಿ ಕಥೆ ನಿನ್ನ ಮುಖ ಯಾವ ಚಟಕ್ಕೂ ಹಾತೊರೆಸದ ದಿಗ್ಬಂಧನದ ಮಹಾ ಮಂಟಪ ಸಹಸ್ರ ಸಂಕಷ್ಟಗಳ ಹಡೆದ ನಿನ್ನ ಪಾದದಲ್ಲೆ ನನಗೆಲ್ಲಾ ಪುಣ್ಯಸ್ಥಳ….. ನೀನೆಂದರೆ ಬರಿಯ ಒಂದು ಜೀವವಲ್ಲ ದೂರದೂರದೂರಿನಲಿ ನಾನು ನೀನು ದುಡಿಯುತ್ತಿದ್ದರೂ ಪಂಚಭೂತಗಳಲ್ಲಿ ಸದಾ ನಿನ್ನಿರುವ ತೋರಿಸುವ ಜಗದ್ರೂಪಿ ಜಗತ್ತಿನ ಹೊಸೆತೆಲ್ಲವ ಹಳೆತು ಮಾಡುವ ಕಳೆದುಹೋದ ಹಳೆಯದಕ್ಕೆ ಮರು ಜೀವ ತುಂಬಿಸುವ ಎದೆಯೊಳಗೆ ಹದವಾದ ಸಿಹಿ ಒಲವ ಬಲವ ಉಣಿಸುವ ದಿವ್ಯ ಕಂಗಳ ಕಷ್ಟ, ಕಣ್ಣೀರುಗಳನೇ ಅಂಜಿಸುವ ಮಗನ ಜಗದ ” ತಾಯಿ” *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಜೀವ ಕನಿಷ್ಠವಲ್ಲ ಮದ್ದೂರು ಮಧುಸೂದನ ಕಾಣದ ಜೀವಿಯ ಕರಾಮತ್ತಿಗೆ ದೀಪದ ಹುಳುಗಳಾಂತದ ಭಾರತ ವಿಲವಿಲದ ನಡುವೆ ಸಾವಿನ ದಳ್ಳುರಿ ಧಗ ಧಗಿಸಿ ಆವರಿಸುತ್ತಿದ್ದರೂ ಧರ್ಮದ ಅಪೀಮು ತಿಂದವರ ದಿಗಿ ದಿಗಿ ನೃತ್ಯ ನಿಂತಿಲ್ಲ.. ಜಾತಿ ಮತ ಧರ್ಮಗಳ ಸ್ಪೃಶ್ಯ ಅಸ್ಪೃಶ್ಯಗಳ ಸೋಂಕಿತರ ನಡುವೆ ಅವರವರ ಧರ್ಮದ ಉಳುವಿಗೆ ವಿಧ ವಿಧ ಲೆಕ್ಕಚಾರದ ಅಸಹ್ಯವೂ ಸಹ್ಯ ಧರ್ಮದ ಕಿನ್ನರಿ ಮುಂದೆ ಸಾವು ತುಟ್ಟಿಯಲ್ಲ ಬಿಡಿ! ನನ್ನ ಒಂದು ಕಣ್ಣು ಕಿತ್ತಾದರೂ ವಿರೋಧಿಗಳ ಎರೆಡೆರಡು ಕಣ್ಣು ಕೀಳುವ ಕುಹಕ ಕೇಕೆ ನಡುವೆ ಜೀವವೂ ಕನಿಷ್ಠತಮ ಎನ್ನುವುದೇ ಚೋದ್ಯ ***********************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಪ್ರಿಯತಮೆ ವೀಣಾ ರಮೇಶ್ ಈ ಧರೆಯ ಒಡಲು ಧರಿಸಿದೆ, ಸ್ವರ್ಗದ ಹಸಿರು ತಳಿರು,ತಳೆದಿದೆ ಸೊಬಗಿನ ಸಿರಿಯ ಸೌಂದರ್ಯ ಮೇಳೈಸಿದೆ ಮೌನವಿಲ್ಲಿ ಪ್ರೀತಿಸಿದೆ ಸ್ರಷ್ಟಿಯ ಸಿರಿಯಲಿ ರಸ ವೈಭೋಗ ತೂಗಿದೆ ಮತ್ತೆ ಋತುರಾಜ ಬಂದ ಚಿಗುರು ತಂದ ಚಲುವ ನಗೆಯ  ಅರಳೋ ಮುಗುಳು ಈ ಇಳೆಯ ಹಸಿರಲಿ ನಿನ್ನ ನಗುವಿನ ಸವಾರಿ ಕೇಳೇ ನನ್ನ ವೈಯಾರಿ ಈ ಕಣ್ಣ ನೋಟದ ಬಿಗಿ ಸರಳು,ಸೆರೆಯಾದೆ ನಾ ನಿನಗೆ ಪ್ರತಿಬಿಂಬದ ಪ್ರತಿಕ್ಷಣದ ಪ್ರತಿ ನೆರಳು ಸೆಳೆವ ಕಂಗಳ ಅಂಚಿಗೆ ಮುತ್ತಿಡುವ ಈ ಮುಂಗುರುಳು ತುಟಿಮೇಲೆ ಹರಿದ ನನ್ನ ಕೆಣಕುವ ಮಂಜಿನ ಹರಳು,ಮೌನ ಸ್ಪರ್ಶದ ಪ್ರತಿನಿಮಿಷದ ಎದೆಯ ಬಡಿತಗಳು,   ಈ ನೆನಪುಗಳು, ನನ್ನ ಮೈಮನಗಳು ಮಧುರ ಯಾತನೆ ಪಲ್ಲವಿಸಿದೆ ಈ ಇರುಳು *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಪ್ರೀತಿಸಲಾಗುವುದಿಲ್ಲವಲ್ಲ ದೀಪಾ ಗೋನಾಳ.. ದ್ವೇಷಿಸುವಷ್ಟು ಸುಲಭವಾಗಿ ಪ್ರೀತಿಸಲಾಗುವುದಿಲ್ಲವಲ್ಲ ಎನೆಲ್ಲ ನೋವು ಹತಾಷೆ, ಸಂಕಟ ಅನುಭವಿಸಿಯು ಅನದೆ ಉಳಿಯಬೇಕಲ್ಲ ಹಾವು ತುಳಿದರೂ ಹೂವು ತುಳಿದದ್ದೆಂದು ಸಂಭಾಳಿಸಬೇಕಲ್ಲ ಕನಸು ಕನವರಿಕೆ ಬೆಸುಗೆ ಹಾಕಿ ಚೆಂದದ ಮಾತ ಹೇಳಿದಾಗಲೂ ಮುನಿಸು ಮಾಡುವ ಗೆಳೆಯನ ಉಳಿಸಿಕೊಳಬೇಕಲ್ಲ ಕಾಡಿಗೆಯಿಟ್ಟ ಕಣ್ಕೆಳಗಿನ ಕಪ್ಪು ವರ್ತುಲಕೆ ಬೆಳ್ಳಂಬೆಳ್ಳಗಿನ ಪೌಡರು ಹಾಕಿ ನಿಂದು, ಒಂದೂದ್ದದ ನಿದ್ದೆ ಮಾಡಿದೆ ಕನಸಿನ ತುಂಬ ನೀನೆ ಎಂದಂದು ಅವನ ಕನಸಿನ ಹೆಣಿಕೆಗೆ ದಾರವಾಗಬೇಕಲ್ಲ ಭುಜ ಹಿಡಿದು ಅಲುಗಿಸಿದಾಗೆಲ್ಲ ಕಳೆದು ಹೋದ ಚಿಂತೆಜಾತ್ರೆಯ ಮುಚ್ಚಿಟ್ಟು ಆಕಾಶ ನಿರುಕಿಸಬೇಕಲ್ಲ ದ್ವೇಷಿಸುವಷ್ಟು ಸುಲಭವಾಗಿ ಪ್ರೀತಿಸಲಾಗುವುದಿಲ್ಲವಲ್ಲ ಅವನೆಂಬ ಅಂಬಾರಿಯ ಎದೆತುಂಬ ಹೊತ್ತು ಜೀವನ ಸವಾರಿಗೆ ಸಿಗದ ಸುಖೀ ಚಣಗಳ‌‌ ಹುಡುಕುತ್ತ ರಥ‌ ಬೀದಿಯಲ್ಲಿ ಸಾಗಬೇಕಲ್ಲ ಭಾರವಾಯಿತೆನ್ನುವಂತಿಲ್ಲ ಶ್ವಾಸಕ್ಕಿಳಿದ ಗಾಳಿ, ಅರಸುತ್ತ ಉಸಿರೆಳೆದವಳು ನಾನೇ ಅಲ್ಲವೇ ಅನ್ನುತ್ತಾನಲ್ಲ ದ್ವೇಷಿಸುವಷ್ಟು ಸುಲಭವಾಗಿ ಪ್ರೀತಿಸಲಾಗುವುದಿಲ್ಲವಲ್ಲ.. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ತಾಳು ಮನವೆ. ಚೈತ್ರಾ ಶಿವಯೋಗಿಮಠ ತಲ್ಲಣಿಸದಿರು ಮನವೆ! ದಟ್ಟೈಸುವ ಕಾರ್ಮೋಡಗಳ ಸುರಿದು ಹಗುರಾಗಿ ಮತ್ತೆ ಕಂಗೊಳಿಸದೆ ನೀಲ ನಭವು??? ತಲ್ಲಣಿಸದಿರು ಮನವೆ! ಕಗ್ಗತ್ತಲ ಒಡಲ ಹರಿದು ಪ್ರಖರವಾಗಿ ಇರುಳ ಗರ್ಭದಿ ಜನಿಸಿ ಬರುವನಲ್ಲವೆ ಇನನು?? ತಲ್ಲಣಿಸದಿರು ಮನವೆ! ಬೊಬ್ಬೆಯಿಟ್ಟು ಚಂಡಿಹಿಡಿದ ಕಂದನ ಹಾಲುಣಿಸಿ ಸಂತೈಸಲು ಬರಲಾರಳೇನು ಅಬ್ಬೆಯು?? ತಲ್ಲಣಿಸದಿರು ಮನವೆ! ಶೀತ ಹೇಮಂತನ ಕೊರೆತವ ಕರಗಿಸಿ ಬಿಸುಪ ಮುದ ನೀಡಲು ಬರುವಳಲವೆ ಗ್ರೀಷ್ಮಳು? ತಲ್ಲಣಿಸದಿರು ಮನವೆ! ಕಾಲಚಕ್ರವದು ನಿಲದೆ ತಿರುಗುವುದು ಅಹಿತವು ಅಳಿದು ಹಿತವು ನಿನಗಾಗಿ ಬಾರದೆ?? ತಲ್ಲಣಿಸದಿರು ಮನವೆ!! ಮಂದಸ್ಮಿತವು ವದನದೊಳಿರಲಿ!! ತಲ್ಲಣಿಸದೆ ಶಾಂತನಾಗು ಮನವೆ!! *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಸ್ಮಿತಾ ರಾಘವೇಂದ್ರ ಗಜಲ್ ಎಡ ಬಿಡದೇ ಸುಳಿದಾಡುವ ನೋವು ಹಿಂಸೆ ನೀಡುತ್ತದೆ. ಗವ್ ಎನ್ನುವ ತಣ್ಣಗಿನ ಮೌನ ಉಸಿರುಗಟ್ಟಿಸುತ್ತದೆ. ಗಾಳಿಯಲಿ ವಿಹರಿಸುವಾಗ ಭಾವಗಳು ಸದಾ ನಿರಾಳ/ ಬಣ್ಣದ ಚಿತ್ರಗಳ ಹಿಂದಿನ ಅಳಲು ಹೆಪ್ಪುಗಟ್ಟುತ್ತದೆ. ನೋಟಕ್ಕೆ ನಿಲುಕಿದ್ದೆಲ್ಲ ನಂಬಲರ್ಹವೇನು ಇಲ್ಲಿ/ ತಾಳ್ಮೆ ಕಳೆದುಕೊಂಡಾಗ ಸತ್ಯವೂ ಸುಳ್ಳೆನಿಸುತ್ತದೆ ತಡರಾತ್ರಿಯಲಿ ಬೆಚ್ಚಿ ಬೆವರೊಡೆದ ಒದ್ದೆ ನೆನಪು / ಕದ ಮುಚ್ಚುವಾಗ ಅಂತರಂಗ ತುಟಿ ಬಿರಿಯುತ್ತದೆ. ಆಡಿಕೊಂಬವರ ಅನುರಾಗವೋ ಭ್ರಮೆಯ ಮುಸುಕು/ ಆಪ್ತ”ಸ್ಮಿತ”ಕುಹಕವೆನಿಸಿದಾಗ ಎಲ್ಲವೂ ಸ್ತಬ್ಧವಾಗುತ್ತದೆ **************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಈ ದಾರಿಗಳಿಗೆ ಎಷ್ಟೊಂದು ಮುಖ ಸತ್ಯಮಂಗಲ ಮಹಾದೇವ ಬದುಕು ಒಂದು ಜೀವನ ನೂರು ಮೊಗ ಒಂದು ಮುಖವಾಡ ಹಲವು ಪದ್ಯ ಒಂದೇ ಅನೇಕ ಪದಗಳು ಜೀವ ಒಂದೇ ಜೀವಿಸುವ ದಾರಿ ನೂರು ಆಯ್ಕೆಗೊಂದು ಮುಖ ನಡೆಗೊಂದು ಮುಖ ನೋಟದ ದಾರಿಗೂ ಒಂದು ಮುಖ ಮುಖವಾಡದೊಳಗೆ ಉಸಿರುಕಟ್ಟುವಾಗ ಝಳ ಝಳನೆ ಉದುರುವ ನೀರು ಉಪ್ಪು ನದಿಯ ನೋಡಿ ಖುಷಿ ಇಟ್ಟೆ ಕಾಲು ಒಳಸೆಳೆತದ ದಾವಂತ ಬೊಗಸಯಲ್ಲೆ ಹಿಡಿದು ಕುಡಿದೆ ಜೀವ ಉಳಿಸಿಕೊಂಡೆ ಈಗ ಜೀವ ಆ ನೀರಿನ ಹೆಸರಲ್ಲಿದೆ ನದಿಗೂ ಮುಖವಾಡವಿತ್ತು ನನ್ನ ಉಸಿರಿಗೂ ಅದರ ಸೋಂಕಿದೆ ಕರೋನ ಬಂದಿದ್ದರೆ ಪರವಾಗಿಲ್ಲ ಅದು ನೆಗಡಿ ಮೂಗು ಇರುವವರೆಗೆ ತಪ್ಪದ ನೇಹ ಹೊರಗಡೆ ಹೆಜ್ಜೆ ತಗೆದರೆ ನನ್ನ ಹೆಜ್ಜೆ ಈ ನೀರ ಗುರುತು ನೆಲಕ್ಕೊಂದು ನನ್ನ ಹೆಜ್ಜೆಯ ಮುಖವಾಡ ಬಿಸಿಲಿಗೆ ಆವಿಯಾದ ಮುಖ ಕಾಲಲ್ಲೇ ಉಳಿದ ಇನ್ನೊಂದು ಮುಖ ನಡಿಗೆಯೊಳಗೊಂದು ನುಡಿಯೊಳಗೊಂದು ಪಾದರಕ್ಷೆಯೊಳಗೊಂದು ತನ್ನ ತುಂಬಿಕೊಂಡ ಕಾಲುಚೀಲದೊಳಗೆ ಈ ಎಲ್ಲಾ ವರ್ತಮಾನಗಳ ಕಂಡು ಬೆವೆತು ಬೆಂಡಾಗಿ ಮತ್ತೆ ಚಿಗುರುವ ಆಸೆ ಈ‌ ಆಸೆಗೊಂದು ಮುಚ್ಚಿದ ಮುಖ ಇತ್ತೀಚೆಗೆ ಈ ಹೃದಯವೂ ಹೇಳಿದ ಮಾತು ಕೇಳುವುದಿಲ್ಲ ಜೀವಕ್ಕೆ ನದಿಯ ಸೆಳವು ನದಿಗೆ ಮುಖವಾಡಗಳ ಸೆಳವು ಮುಖವಾಡಗಳ ಹೊರುವ ಊರದಾರಿಯ ತುಂಬಾ ಈಗ ಮುಖ ಪುಸ್ತಕಗಳ ಮಾಡಿದ್ದಾರೆ ಮುಖಪುಸ್ತಕಗಳ ಜಾತ್ರೆ. ಅವರದೇ ಮುಖ ಅವರೊಳಗೊಂದು ಮೊಗ ಮಾನಕ್ಕೊಂದು, ಸತ್ಯಕ್ಕೊಂದು ಸುಳ್ಳಿಗೊಂದು ಮಾನವತೆಗೂ ಒಂದು ರಾಕ್ಷಸತ್ವಕ್ಕೂ ಒಂದು ರೋಗಕ್ಕೂ ಒಂದು ಆರೋಗ್ಯಕ್ಕೂ ಒಂದು ನದಿಗೆ ಹಲವು ದಾರಿ ನದಿಗೆ ಹೊರಟವನಿಗೂ ಹಲವು ದಾರಿ ಹರಿಯುವ ನದಿಗೆ ಮೈಯೆಲ್ಲಾ ದಾರಿ ಈ ದಾರಿಯು ಹರಿಯುವಾಗ ಮುಖವೇ ಒಂದು ದಾರಿ ಮುಖವಾಡಗಳಿಗಂತೂ ಭಿನ್ನ ದಾರಿ. ********

ಕಾವ್ಯಯಾನ Read Post »

You cannot copy content of this page

Scroll to Top