ಕಾವ್ಯಯಾನ
ನಮ್ಮ ನಡುವಿನ ಅಂತ ವೀಣಾ ರಮೇಶ್ ಎಲ್ಲಾ ದಿನಗಳೂ ಖಾಲಿ ಇದ್ದರೂ ಮನಸಿನ ದಾರಿಯಲಿ ನೀ ನಿರದಿದ್ದರೂ ಮುಳ್ಳುಗಳೇನಿಲ್ಲ ಚುಚ್ಚಲು ಕಲ್ಲುಗಳಿಲ್ಲ ಎಡವಲು ಬರವಿರದಿದ್ದರೂ ನಿನ್ನ ನೆನಪಿಗೆ ಬೇಸರವೆನಿಸಿದೆ ಮನಸಿಗೆ ಗೆಳತೀ ಎಲ್ಲೆಲ್ಲೂ ನೀ ಸಿಗದೆ … ಯಾಕೆ ಸಮಾನಾಂತರ ರೇಖೆಗಳಾಗಿದ್ದೇವೆ ನಡುವೆ ಎಷ್ಟೊಂದು ಅಂತರದ ಅರಿವು, ಇರಲಿ ಸಮಾನ ಅಂತರ ಕಾಯ್ದುಕೊಂಡಿದ್ದೇವೆ, ಮಾತು, ಮೌನಗಳಲೂ ಬಿಗಿಅಂತರವೇ ಗೆಳತೀ….. ಮನಸಿನಲಿ ಭಾವನೆಗಳ ಕುಟ್ಟಿ ಪುಡಿ ಮಾಡಿರುವೆ ಆದರೆ ಮೊಳಕೆಯೊಡೆದ, ಹೃದಯ ತಟ್ಟುವ , ಉಸಿರು ಕಟ್ಟುವ, ನಿನ್ನದೆ ನೆನಪುಗಳು, ನೀಡುಸುಯ್ದ ಬಿಸಿಉಸಿರು ನಿನ್ನ ಸೋಕಿರಬಹುದು ನಿನ್ನುಸಿರ ತಣ್ಣನೆ ಗಾಳಿ ತುರ್ತು ವಿರಾಮದ ಪರದೆಯ ಬೇಲಿ ಹಾಕಿದೆ ನನಗೂ ಗೊತ್ತಿದೆ ಗೆಳತೀ …. ದಿಗಂತದ ಊರಿನಲಿ ಯಾವ ಬೇಲಿಯ ತಡೆಯಿಲ್ಲದ ರವಿ ಕೆಂಪಿಟ್ಟು, ಬರುವಾಗ, ಏನೋ ತಳಮಳ ನನ್ನೊಳಗೆ…. ನಿನ್ನ ಸಿಹಿ ನಗು ಕಣ್ತುಂಬಿ ಕೊಳ್ಳುವ ತವಕ…… ತುಟಿ ಇಟ್ಟು ಮೆತ್ತಿದ, ಕೆಂಪು ಕೆನ್ನೆಯ ಗುಳಿಯೊಳಗೆ ಅವಿತು ಕುಳಿತು, ನಿನ್ನ ನೋಡುವ ಅವಸರ ಗೆಳತೀ…. ದಿನವೂ ಖಾಲಿ,ಅಂತರದ ಖಯಾಲಿ………. ಅದೇನು ಶಂಕೆ,ಪ್ರೀತಿಗೂ ಅಂತರಂಗದಲ್ಲಿ ಸೊಂಕೆ ಹಾಗಿದ್ದರೆ .. ನಿನ್ನ ಭಾವನೆಗಳನ್ನು ಅಪ್ಪಿ ಕೊಳ್ಳುವುದಾದರು ಹೇಗೆ….. ನೀ ನಲ್ಲಿ ಕಿಟಕಿಯಲ್ಲಿ ನಾನಿಲ್ಲಿ ಹೃದಯದ ಕದ ತೆರೆದು ನಿನ್ನ ಕಾಯುವುದು ನಿರಂತರವೇ ಗೆಳತೀ.. ******









