ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಮುಖ ಪುಸ್ತಕ ಗೌರಿ.ಚಂದ್ರಕೇಸರಿ ಮುಖ ಪುಸ್ತಕ ತೆರೆದರೆ ನಿತ್ಯ ಹತ್ತಾರು ರಿಕ್ವೆಸ್ಟುಗಳು ಕನ್ಫರ್ಮ್ ಮಾಡುವ ಎಂದರೆ ಮನಸು ಬುದ್ಧಿ ಹೇಳುತ್ತದೆ ಸ್ನೇಹದ ಅರಿಕೆ ಇಟ್ಟವರ ಕಥೆ ಹೇಳುತ್ತವೆ ಅವರ ಪೋಸ್ಟು ಲೈಕು, ಕಮೆಂಟುಗಳು ಅವೇ ಹಳಸಲು ಜೋಕುಗಳು ಫಾರ್ವರ್ಡ್ ಮೆಸೇಜುಗಳು ಯಾರೋ ಹೆಣೆದ ವಿಶ್ಶುಗಳು ಬೇಡವೆಂದರೂ ಬೆರಳು ತಾಗಿ ಬಿಡುತ್ತವೆ ಪುಟ್ಟ ನೀಲಿಯ ಬಾಕ್ಸಿಗೆ ಅಷ್ಟರಲ್ಲಿ ಬಂದು ಬೀಳುತ್ತದೆ ಒಂದು ‘ಹಾಯ್’ ನನ್ನ ಮೆಸೆಂಜರಿಗೆ ಇದು ಬೇಕಿತ್ತಾ ಎಂದು ಕೇಳುತ್ತದೆ ಮನಸು ಮೊಬೈಲ್ ಬೆಳಕು ಬೀರಿದಾಗಲೆಲ್ಲ ಗುಡ್ ಮಾರ್ನಿಂಗ್, ಗುಡ್ ನೈಟುಗಳು ಟೀ,ಕಾಫಿ,ಊಟ ಆಯಿತಾ? ಎಂಬ ಕಿರಿ ಕಿರಿಗಳು ಮನಸು ರೋಸಿ ಹೋಗುತ್ತದೆ ಮೆಸೆಂಜರಿನ ಕುತ್ತಿಗೆಯನ್ನು ಒತ್ತಿ ಹಿಡಿಯುತ್ತೇನೆ ಆಗ ಅರೆ ಸ್ಕ್ರೀನ್ ಮೇಲೆೆ ಕಸದ ಬುಟ್ಟಿ ಎಳೆದೊಯ್ದು ಅಲ್ಲಿ ನೂಕಿ ಬಿಡುತ್ತೇನೆ ಹಸಿದು ರಚ್ಚೆ ಹಿಡಿದ ಮೊಬೈಲ್ ಬಾಯಿಗೆ ಚಾರ್ಜರ್ ಸಿಕ್ಕಿಸಿ ಬಾಲ್ಕನಿಗೆ ಬಂದರೆ ಆಕಾಶದಲ್ಲಿ ರುಜು ಹಾಕುತ್ತ ಹೊರಟ ಬಾನಾಡಿಗಳು ಕುಪ್ಪಳಿಸುತ್ತಿರುವ ಅಳಿಲುಗಳು ಮಧು ಹೀರುತ್ತಿರುವ ದುಂಬಿಗಳು ಗಾಳಿಯಲ್ಲಿ ಗುಳ್ಳೆಗಳನ್ನು ಬಿಡುತ್ತ ನಿಂತ ಪುಟ್ಟಿ ಮನಸು ಆಗ ಮಗುವಾಗಿ ಬಿಡುತ್ತದೆ. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಿಮ್ಮ ಸ್ಥಿತೀನೂ ಇದೇನಾ ಗಾಯತ್ರಿ ಆರ್. ಟ್ರಿಣ್….ಟ್ರಿಣ್….ಟ್ರಿಣ್… ರಿಂಗಣಿಸಿತು ಮನೆಯ ದೂರವಾಣಿ ಅತ್ತಲಿಂದ ಬಂತೊಂದು ಧನಿ ಕರ್ಕಶವಾಗಿ ಈ ಯುಗಾದಿಗೆ ರಜೆ ಇಲ್ಲ ನಾವು ಬರಲ್ಲ ಕಾಯಬೇಡಿ ನಮಗಾಗಿ ವಾರದಿಂದ ಮಗ, ಸೊಸೆ, ಮೊಮ್ಮಕ್ಕಳು ಬರುವರೆಂದು ಮಾಡಿದ ಸಿಹಿ ತಿಂಡಿಗಳೆಲ್ಲಾ ಅವಳ ನೋಡಿ ನಗುತ್ತಿತ್ತು ವ್ಯಂಗ್ಯವಾಗಿ. ಅಹ..ಹಾ ಅಹ…ಹಾ ಅಹ…ಹಾ. ಮನೆಯ ಮೂಲೆಯ ಪಲ್ಲಂಗದಲ್ಲಿ ಪವಡಿಸಿದ್ದ ಪತಿರಾಯ ಮಡದಿಯ ಹುಸಿನಗುವಿಂದ ಎಲ್ಲವನ್ನೂ ಅರಿತೆಂದ ನಿನ್ನ ಮನೆಕಾಯ ನನ್ನನ್ನೂ ಬಿಡದೆ, ನಿನಗೂ ಆಗದೆ, ಸಿಹಿ ಕರಿವಾಗ ನೋಡಿಲ್ಲಿ ಆದ ‌ಸುಟ್ಟಗಾಯ ಹಚ್ಚುತ್ತಲೇ ಮುಲಾಮು ಹೇಳಿದಳು ಬೇಗ ಆಗುವುದು ಗುಣ ನಿಮ್ಮ ಗಾಯ ಇಟ್ಟಿರುವಿರೇ… ನಿಮ್ಮಬಳಿ ಕಾಣದ ನನ ಗಾಯಕ್ಕೆ ಔಷಧಿಯ ಉತ್ತರವಿಲ್ಲ!! ಇಬ್ಬರ ಕಣ್ಣುಗಳ ನಡುವೆ ಮೌನ ಮೆಲ್ಲ ಮೆಲ್ಲನೆ ಹಾಕಿತ್ತು ಕೇ…ಕೇ ಹಿಹಿಹೀ…ಹಿಹಿಹೀ…ಹಿಹಿಹೀ. ಜಾಗತೀಕರಣವೇನೋ ಮಾಡಿತು ವಿಶ್ವವನ್ನೇ ಒಂದು ಕುಟುಂಬವನ್ನಾಗಿ ಬಡ ರಾಷ್ಟ್ರಗಳು ಸಾಗಿದವು ಅಭಿವೃದ್ಧಿಯತ್ತ ದಾಪುಗಾಲಾಕಿ ಆದರೇನು? ಮಾನವ ಸಂಬಂಧಗಳು ಹೊರಳಾಡುತಿದೆ ಡೋಲಾಯಮಾನವಾಗಿ ಹೀಗೆಂದು ಚಿಂತಿಸುತ್ತಿರುವಾಗಲೇ ಆಕೆಗೆ ಬಂತೊಂದು ತಂತಿ! ನಾಳೆ ನಾವು ಬರುವೆವು ಅದನೋದಿದ ಆಕೆಯ ಕಾಲು ಕುಣಿಯಿತು ಪಾಡು ತಾ ಗಾನ ಆ…ಆ…ಆ.ಅಹಾಹ… ಲಗುಬಗೆಯಿಂದ ಎಡವಿ ಎಡವದಂತೆ, ಬಿದ್ದು ಬೀಳದಂತೆ ಓ…ಡುತಾ ಅಡುಗೆ ಕೋಣೆಗೆ ಕೈ ಹಾಕಿ ತಿಂಡಿ ಡಬ್ಬಿಗೆ ಕೇಳಿದಳು ಈಗೇನಂತಿ? ಮತ್ತದೇ ಮನೆಯ ಮೂಲೆಯಿಂದ ಬಂತೊಂದು ಸಶರೀರ ವಾಣಿ ಬೀಗಬೇಡ ಮಾರಾಯ್ತಿ… ಇದಕ್ಕೆಲ್ಲಾ ಕಾರಣ ಕರೋನ ಮೀಟಿದ ಕೃತಕ ತಂತಿ! ಕೃತಕವೋ… ನೈಸರ್ಗಿಕವೋ .. ಅಂತೂ ನಿಜ ನುಡಿದಿತ್ತು ಮುಂಜಾನೆಯ ಹಾಲಕ್ಕಿ. ಕೆಡುಕಿನಲೂ ಕರೋನ ಕರುಣಿಸಿತೇ ಕ..ರು..ಣಾ ..? ತೆರಳು ಬಾರದೂರಿಗೆ ಕರೋನ ಎಂದೆದ್ದ ಅವಳ ಕೈ ಅವಳಿಗರಿವಿಲ್ಲದೇ ಗುಡಿಯ ದೇವಿಗೆ ಸಲಿಸಿತು ನಮನ ಹಾಡುತಾ ‌ಸವಿಗಾನ ಆ..ಹ.ಹಾ..ಹಾ..ಹಾ..ಹಾ **************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಮ್ಮ ನಡುವಿನ ಅಂತ ವೀಣಾ ರಮೇಶ್ ಎಲ್ಲಾ ದಿನಗಳೂ ಖಾಲಿ ಇದ್ದರೂ ಮನಸಿನ ದಾರಿಯಲಿ ನೀ ನಿರದಿದ್ದರೂ ಮುಳ್ಳುಗಳೇನಿಲ್ಲ ಚುಚ್ಚಲು ಕಲ್ಲುಗಳಿಲ್ಲ ಎಡವಲು ಬರವಿರದಿದ್ದರೂ ನಿನ್ನ ನೆನಪಿಗೆ ಬೇಸರವೆನಿಸಿದೆ ಮನಸಿಗೆ ಗೆಳತೀ ಎಲ್ಲೆಲ್ಲೂ ನೀ ಸಿಗದೆ … ಯಾಕೆ ಸಮಾನಾಂತರ ರೇಖೆಗಳಾಗಿದ್ದೇವೆ ನಡುವೆ ಎಷ್ಟೊಂದು ಅಂತರದ ಅರಿವು, ಇರಲಿ ಸಮಾನ ಅಂತರ ಕಾಯ್ದುಕೊಂಡಿದ್ದೇವೆ, ಮಾತು, ಮೌನಗಳಲೂ ಬಿಗಿಅಂತರವೇ ಗೆಳತೀ….. ಮನಸಿನಲಿ ಭಾವನೆಗಳ ಕುಟ್ಟಿ ಪುಡಿ ಮಾಡಿರುವೆ ಆದರೆ ಮೊಳಕೆಯೊಡೆದ, ಹೃದಯ ತಟ್ಟುವ , ಉಸಿರು ಕಟ್ಟುವ, ನಿನ್ನದೆ ನೆನಪುಗಳು, ನೀಡುಸುಯ್ದ ಬಿಸಿಉಸಿರು ನಿನ್ನ ಸೋಕಿರಬಹುದು ನಿನ್ನುಸಿರ ತಣ್ಣನೆ ಗಾಳಿ ತುರ್ತು ವಿರಾಮದ ಪರದೆಯ ಬೇಲಿ ಹಾಕಿದೆ ನನಗೂ ಗೊತ್ತಿದೆ ಗೆಳತೀ …. ದಿಗಂತದ ಊರಿನಲಿ ಯಾವ ಬೇಲಿಯ ತಡೆಯಿಲ್ಲದ ರವಿ ಕೆಂಪಿಟ್ಟು, ಬರುವಾಗ, ಏನೋ ತಳಮಳ ನನ್ನೊಳಗೆ…. ನಿನ್ನ ಸಿಹಿ ನಗು ಕಣ್ತುಂಬಿ ಕೊಳ್ಳುವ ತವಕ…… ತುಟಿ ಇಟ್ಟು ಮೆತ್ತಿದ, ಕೆಂಪು ಕೆನ್ನೆಯ ಗುಳಿಯೊಳಗೆ ಅವಿತು ಕುಳಿತು, ನಿನ್ನ ನೋಡುವ ಅವಸರ ಗೆಳತೀ…. ದಿನವೂ ಖಾಲಿ,ಅಂತರದ ಖಯಾಲಿ………. ಅದೇನು ಶಂಕೆ,ಪ್ರೀತಿಗೂ ಅಂತರಂಗದಲ್ಲಿ ಸೊಂಕೆ ಹಾಗಿದ್ದರೆ .. ನಿನ್ನ ಭಾವನೆಗಳನ್ನು ಅಪ್ಪಿ ಕೊಳ್ಳುವುದಾದರು ಹೇಗೆ….. ನೀ ನಲ್ಲಿ ಕಿಟಕಿಯಲ್ಲಿ ನಾನಿಲ್ಲಿ ಹೃದಯದ ಕದ ತೆರೆದು ನಿನ್ನ ಕಾಯುವುದು ನಿರಂತರವೇ ಗೆಳತೀ.. ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಗುವ ತೊಡಿಸಲೆಂದು ಶಾಲಿನಿ ಆರ್. ತಾಳ್ಮೆ ಕಳಕೋತಿದಿನಿ ದಿನದಿಂದ ದಿನಕ್ಕೆ, ಮರೆತೆನೆಂದರು ನೆನಪ ನೋವ ಎಳೆಯ ನೂಲುತಿದೆ ಗೆಳೆಯ, ಬೇಡ ಎನಗಿದು ಬೇಸರದ ಹೊದಿಕೆ ಸ್ವಚ್ಛಂದ ಹಕ್ಕಿಯಿದು ನಭದ ನೀಲಿಯಲಿ ಹಾರುವ ಬಯಕೆ, ಒಲವ ಮಳೆಯಿದು ನನಗಾಗಿ ಕಾಯುತಿದೆ, ಬಣ್ಣದ ಕುಂಚಗಳು ತುಂಟನಗೆ ಬೀರುತಿದೆ, ಅಂಕುಡೊಂಕಿನ ನವಿಲು, ಬಿಂಕ ತೋರಿಅಣಕಿಸುತಿದೆ, ಮನದ ಸಾರಂಗ ಮನಸಾರೆ ತಪಿಸುತಿದೆ, ಕಳೆದ ನೆನ್ನೆಗಳು ನಾಳೆಗಳ ಹುಡುಕುವಂತೆ ಬಾಗಿದ ಬೆನ್ನಿಗಿದು ನೋವಿನ ಕುಣಿಕೆ, ನಾ ಒಲ್ಲೆ ಗೆಳೆಯ ನಾಳೆಯ ಸೂರ್ಯನಿಗೆ ಸುಪಾರಿ ಕೊಟ್ಟು ಬಾರೋ, ನನ್ನೆದೆಯ ನೋವುಗಳ ಕೊಲ್ಲಲ್ಲೆಂದು,ನಗೆಯ ನಗವ ತೊಡಿಸಲೆಂದು… *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಶ್ವೇತಾಂಬರಿ ಸಿಂಧು ಭಾರ್ಗವ್ ಕನಸು ಕಂಗಳ ಚೆಲುವೆ ನಾನು ಬರುವೆನೆಂದು ಹೋದೆ ನೀನು ಮುಗಿಲು ತುಂಬ ಬೆಳ್ಳಿ ಮೋಡ ಕರಗಿ ಬೀಳೋ ಹನಿಯ ನೋಡ ಕಂಬನಿಯ ಒರೆಸುವವರಿಲ್ಲ ಮನದ ಮಾತಿಗೆ ಕಿವಿಗಳಿಲ್ಲ ಹಾರೋ ಹಕ್ಕಿಗೂ ಇದೆ ಗೂಡು ಪ್ರೀತಿ ಹಕ್ಕಿಗಿಲ್ಲಿ ಗೂಡು ಇಲ್ಲ ಒಂಟಿ ಮನಕೆ ಜೊತೆಯಾದೆ ನೀನು ನಗುವ ನೀಡಿ ಹೋದೆಯೇನು ಮಾತು ಮರೆತ ಮನವು ನನ್ನದು ಮಾತು ಕಲಿಸಿ ನಡೆದೆ ನೀನು ಹತ್ತು ಹದಿನಾರು ಕನಸುಗಳು ಮತ್ತೆ ಮೂರು ನನಸುಗಳು ಸುತ್ತ ನಗುವ ಸುಮಗಳು ದುಂಬಿ ಮಾತ್ರ ಬರಲೇ ಇಲ್ಲ ಹೆತ್ತ ಮನೆಯ ತೊರೆದೆ ನಾನು ಹೊತ್ತು ನಡೆದೆ ಕೂಸನು ಎತ್ತ ಸಾಗಲಿ ಕತ್ತಲ ಹಾದಿಯಿದು ಮತ್ತದೇ ಒಂದು ಕವಲುದಾರಿ ಕರುಳ ಬಳ್ಳಿ ಬೆಳೆಯುತಲಿದೆ ನಡೆದು ನಡುಗಿ ಬಸವಳಿದೆ ಮುಂದೆ ಹಾದಿ ಕಾಣದೇ ಆತ್ಮವನ್ನೇ ಹಾರಿ‌ಬಿಟ್ಟೆ ಶ್ವೇತಾಂಬರಿ ಈಗ ನಾನು ಗಿರಕಿ ಹೊಡೆವ ಗರುಡಗಳು ನೀ ತಿರುಗಿ‌ ಬರದೇ ಹೋದರೂನು ಹುಡುಕಿ ಬರುವೆ; ?? ಈಗ ಆತ್ಮ ನಾನು!! ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ವಿನಿ ಬೆಂಗಳೂರು ಪ್ರಕೃತಿಯೇ ತಾನಾಗಿ ಸೌಂದರ್ಯ ತುಂಬಿದವಳು ತಾಯಿ ಭೂಮಿಯೇ ಅವಳಾಗಿ ಭಾರವನು ಹೊತ್ತವಳು ತಾಯಿ ಸಾವಿಗೂ ಹೆದರದೆ ಹೆರಿಗೆ ನೋವ ನುಂಗುವಳು ತಾಯಿ ಸಾವಿರ ಕನಸು ಕಂಡು ಮಗುವಿನ ಒಳಿತ ಬಯಸುವವಳು ತಾಯಿ ಭವಿಷ್ಯದ ಉತ್ತಮ ವ್ಯಕ್ತಿಯಾಗಲು ಶ್ರಮಿಸುವಳು ತಾಯಿ ಅಕ್ಷರೆ ಪ್ರೀತಿ ಮಮತೆಯ ಧಾರೆ ಎರೆದು ಬೆಳೆಸುವಳು ತಾಯಿ ತನ್ನೆಲ್ಲ ನೋವ ಮರೆತು ನಗುತ ಮುದ್ದು ಮಾಡುವವಳು ತಾಯಿ ಕಷ್ಟವೆಲ್ಲವನು ತಾನೆ ಅನುಭವಿಸುತ ತನ್ನ ಕುಡಿಗಾಗಿ ದುಡಿದವಳು ತಾಯಿ ತನ್ನೆಲ್ಲ ವಾತ್ಸಲ್ಯವನು ಉಣಿಸಿ ಬೆಳೆಸುವವಳು ತಾಯಿ ವಿಜಯಳ ಬಾಳಲಿ ಬೆಳಂದಿಗಳಂತೆ ಬೆಳಗಿದವಳು ತಾಯಿ ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ವೈರಾಣು-ಪರಮಾಣು ಉಮೇಶ್ ಮುನವಳ್ಳಿ ಕೆಟ್ಟು ಕೆರವಾದ ಮನಸ್ಥಿತಿಯ ಗುಟ್ಟು, ರಟ್ಟು! ಜತನಮಾಡಿ ಇಟ್ಟಿದ್ದು, ಹಿಡಿ ಹಿಟ್ಟು, ಹಾಲು, ಔಷಧಿ, ಸೋಪು, ಸ್ಯಾನಿಟೈಸರು. ಬೀದಿಗೆ ಬಿದ್ದಿದ್ದು, ಲಿಪ್‌ಸ್ಟಿಕ್, ಪೌಡರ, ಪೇಂಟು, ಫ್ರೆಶ್ನರು! ಗುಡಿ-ಗುಂಡಾರ, ಮಸೀದಿ, ಚರ್ಚು ಸ್ಥಬ್ದ ಅರಿವಿನ ಆಸ್ಧಾನದಲಿ ಮನಸ್ಸು ನಿಶ್ಶಬ್ದ! ತಪ್ಪಿನ ಅರಿವು, ಒಪ್ಪಿನ ಹುಡುಕಾಟ, ಒಪ್ಪತ್ತಿನ ಊಟದ ಹೊಂದಾಣಿಕೆ. ಬೆಳೆದವನ ಮಾಲು, ಮನೆ ಬಾಗಿಲಿಗೆ! ದಲ್ಲಾಳಿಗಳ ಗಲ್ಲಾಪೆಟ್ಟಿಗೆ ಲೂಟಿ. ದೂರದ ಪಯಣ, ದೂರ, ಒಬ್ಬರಿಗೊಬ್ಬರು ದೂರ ದೂರ. “ನಮ್ಮ ಹಳ್ಳಿ ಊರ ನಮಗ ಪಾಡ, ಯಾತಕವ್ವಾ ಹುಬ್ಬಳ್ಳಿ ಧಾರವಾಡ!” ನನ್ನವಳು ನನಗೆ ಚಂದ, ಓಣಿಯ ಹುಡುಗಿ ಬಲು ಅಂದ! ಮನೆಯ ಊಟ ರುಚಿ, ಶುಚಿ ಹೋಟೆಲ್ ಊಟ ಬಾಯಿರುಚಿ ನುಚ್ಚು ನೂರಾದ ಅಹಂ, ಸುರಿದ ಕಣ್ಣೀರು, ಸಿರಿವಂತನ ಎದೆಗೂಡು ಬಡವನ ಸೂರು. ಸಾವೇ ಕಲಿಸಬೇಕಿತ್ತೆ ನಮಗೆ ಆಧ್ಯಾತ್ಮದ ಪಾಠ? ‘ಹಾದಿ ಬೀದಿಗೆ ಬಿದ್ದಿಹುದು’ ಪುಸ್ತಕದ ಬದನೇಕಾಯಿ. ಕೀರ್ತಿ, ಪದವಿ, ಪಾರಿತೋಷಕ ಮಣ್ಣುಪಾಲು ಹೆಣ್ಣು – ಹೊಣ್ಣು – ಮಣ್ಣು – ‘ನಾನು’ ಬೀದಿಪಾಲು ಅನ್ನ ಹಾಕುವ ರೈತ, ಆಶ್ರಯ ನೀಡುವ ತಾಯಿ, ಕಾದುವ ಸೇನಾನಿ, ಕಾಯುವ ಪೋಲೀಸ್, ಶುಶ್ರೂಷೆ ಮಾಡುವ ದಾದಿ, ಚಿಕಿತ್ಸೆ ನೀಡುವ ವೈದ್ಯ ಶವ ಸಂಸ್ಕಾರ ಮಾಡುವ ಸ್ವಯಂ ಸೇವಕ, ಸರ್ವವೇದ್ಯ! ವೈರಾಣು ಕೊರೋನಾ ಇಂದಲ್ಲ ನಾಳೆ ಅಳಿದೀತು ‘ವ್ಯವಸ್ಥೆ’ ಸ್ಫೋಟಕ ಪರಮಾಣು ಅಳಿವುದಿನ್ಯಾವಾಗ? ************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಎ.ಹೇಮಗಂಗಾ ಜುಲ್ ಕಾಫಿ಼ಯಾ ಗಜ಼ಲ್………….. ಜಂಜಾಟಗಳ ಒತ್ತಡವೇ ನಿಜಬದುಕೆಂದು ನೆಮ್ಮದಿಯನ್ನೇ ಮರೆತೆ ಅಜ್ಞಾನದ ಕತ್ತಲಕೂಪವೇ ಜಗತ್ತೆಂದು ಜ್ಞಾನಜ್ಯೋತಿಯನ್ನೇ ಮರೆತೆ ಎದುರಾದ ನೂರು ಸಂಕಷ್ಟಗಳು ತಾತ್ಕಾಲಿಕವೆಂಬ ಅರಿವು ಇರಬೇಕಿತ್ತು ನಿನ್ನ ದುಃಖ ವೇದನೆಯೇ ಎಲ್ಲಕಿಂತ ಮಿಗಿಲೆಂದು ನಗುವುದನ್ನೇ ಮರೆತೆ ದ್ವೇಷ ಮದ ಮತ್ಸರಗಳ ಜ್ವಾಲಾಮುಖಿ ಸುಡುವುದಿಲ್ಲವೇ ನಿನ್ನನ್ನು ? ಇತರರ ಅವನತಿಯಲ್ಲೇ ನಲಿವಿದೆಯೆಂದು ಪ್ರೀತಿಯನ್ನೇ ಮರೆತೆ ಮೂರು ದಿನದ ಬಾಳಿನಾಟದಿ ಯಾರೂ ಯಾವುದೂ ಶಾಶ್ವತವಲ್ಲ ಸ್ವಾರ್ಥ ಲಾಲಸೆಯಲ್ಲೇ ಏಳಿಗೆಯಿದೆಯೆಂದು ನಿಸ್ವಾರ್ಥವನ್ನೇ ಮರೆತೆ ಎಚ್ಚರಿಸಬೇಕಿತ್ತು ನಿನ್ನ ಮನಸ್ಸಾಕ್ಷಿ ಎಂದೂ ಕೇಡು ಬಗೆಯದಿರೆಂದು ಪರರ ಸಾವಿನಲ್ಲೇ ಸಾರ್ಥಕತೆ ಇದೆಯೆಂದು ಮಾನವತೆಯನ್ನೇ ಮರೆತೆ *************************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೀರೊಲೆಯ ಮೇಲೆ. ಶಶಿಕಲಾ ವೀ ಹುಡೇದ ನೀರೊಲೆಯ ಮೇಲೆ. ಸೀಗೆಯ ಹೊಗರು ಸುಡುಸುಡು ನೀರು ಬೆರಕೆಯ ಬೇಡುವ ಹೊತ್ತು ಸುಣ್ಣ ನುಂಗಿದ ಹೊಗೆಸುತ್ತಿದ ಗೋಡೆಗಳ ಮೇಲೆ ನೀರ ಹನಿಗಳದೇ ಚಿತ್ತಾರ ಯಾವ ಯುದ್ಧದ ಕತೆಯ ಹೇಳುತ್ತಾವೋ ನೋಡುವ ಕಣ್ಣುಗಳಿಗೆ ಒಂದೊಂದು ರೀತಿಯ ಅರ್ಥ ಉಸಿರಾಡಲು ಒದ್ದಾಡುವ ಒಂದೇ ಒಂದು ಕಿಂಡಿಯ ಕುತ್ತಿಗೆಯ ಮಟ್ಟ ಧೂಳು ಮಸಿಯದೇ ಕಾರುಬಾರು ಹೆಸರೂ ನೆನಪಿರದ ಮುತ್ತಜ್ಜ ಬುನಾದಿ ಹಾಕಿದ ಈ ಬಚ್ಚಲು ಮನೆ ಯಾವ ವಾರಸುದಾರನ ಅವಧಿಗೆ ಏನನು ಸುಖ ಕಂಡಿದೆಯೋ ಯಾರಿಗೂ ನೆನಪಿಲ್ಲ ತಿಕ್ಕಿ ತೊಳೆಯಲು ಹೋಗಿ ಅದೆಷ್ಟು ಬಳೆಗಳು ಚೂರಾಗಿವೆಯೋ ಆ ದೇವರೇ ಬಲ್ಲ! ನೀರು ಕುಡಿದು ಲಡ್ಡಾದ ಕದ ಮುಚ್ಚಿದ ಈ ಕೋಣೆಯೊಳಗೆ ಮಾತ್ರ ಇಷ್ಟು ಹತ್ತಿರ ನಾನು ನನಗೆ ಬಯಲಿನಷ್ಟು ಬೆಳೆದು ಬೆಟ್ಟವಾಗಿ ಬೆತ್ತಲಾಗಿ ಮಲ್ಲಿಕಾರ್ಜುನನಿಗಾಗಿ ಕಾಡುಮೇಡ ಅಲೆದ ಅಕ್ಕ ಫಕ್ಕನೆ ನೆನಪಾಗುತ್ತಾಳೆ ಇದೇ ಬಚ್ಚಲಿನಲ್ಲಿ ಧರ್ಮರಾಯನ ಕೃಪೆ ತುಂಬಿದ ಸಭೆಯೊಳಗೆ ಮುಟ್ಟಾದ ಪಾಂಚಾಲಿ ಗೇಣು ಬಟ್ಟೆಯ ಕರುಣಿಸುವ ಜಾರ ಕೃಷ್ಣನ ಕೈಗಳನು ಹುಡುಕಿ ಕಣ್ಣೀರಿಡುವ ಚಿತ್ರ ಮರೆಯಾಗಲು ಇನ್ನೇಸು ದಿನ ಬೇಕು? ಸೀರೆಯ ಸೆಳೆದ ದುಶ್ಯಾಸನ ದುರುಳನೇ ಸರಿ ಆದರೆ ಒಬ್ಬನಲ್ಲ ಇಬ್ಬರಲ್ಲ ಕೋತ್ವಾಲರಂತಹ ಐವರಿರುವಾಗ ಗಂಡ ಅನ್ನುವುದಕೆ ಏನು ಅರ್ಥ ಹೇಳಿ? ಸ್ವಯಾರ್ಜಿತ ಆಸ್ತಿಯಾಗಿ ಹೋದೆ ನನ್ನ ಬೆತ್ತಲೆ ಮಾಡಲು ಹೋಗಿ ಲೋಕವೇ ಬೆತ್ತಲಾಯಿತಲ್ಲ! ಎನ್ನುವ ಪಾಂಚಾಲಿಯ ಸ್ವಗತಕ್ಕೆ ಯಾರೋ ಸ್ಪೀಕರು ಹಚ್ಚಿದ್ದಾರೆ ಅಹಲ್ಯೆಯ ಸೇರಲು ಹೋಗಿ ಇಂದ್ರ ಸಹಸ್ರಯೋನಿಯಾದದ್ದೇನೋ ಸರಿ ಅವಳೇಕೆ ಕಲ್ಲಾಗಿ ರಾಮನಿಗಾಗಿ ಕಾಯಬೇಕು? ಅಷ್ಟಕ್ಕೂ ಆ ರಾಮನೇನು ಸಾಜೋಗನೆ? ತುಳಿತುಳಿದು ಆಳಲೆಂದು ಹತ್ತತ್ತು ಅವತಾರವೆತ್ತಿ ಮತ್ತೆ ಮತ್ತೆ ಬರುತ್ತಾರಿವರು ಗಂಧರ್ವರ ರತಿಕೇಳಿ ನೋಡಿದ ರೇಣುಕೆ ತಲೆಯನ್ನೇ ಕೊಡಬೇಕಾಗಿತ್ತೆ? ನೂರೆಂಟು ಪ್ರಶ್ನೆಗಳಿವೆ ಉತ್ತರಿಸುವ ಧೀರರಾರೊ ಕಾಣೆ ಕೂಸಾಗಿ ಇದೇ ಬಚ್ಚಲಲ್ಲಿ ಮೂಗು ಹಣೆ ತಿಕ್ಕಿಸಿಕೊಂಡು ಕೆಂಪಾಗಿ ಚಿಟಿಚಿಟಿ ಚೀರಿದ್ದು ದೊಡ್ಡವಳಾದೆನೆಂದು ಹಾಲು ತುಪ್ಪ ಹಾಕಿ ಅರಿಷಿಣವ ಪೂಸಿ ಮೀಯಿಸಿದರು ಮತ್ತೆ ಇದೇ ಬಚ್ಚಲಲ್ಲಿ ಮಣೆಯ ಮೇಲೆ ಸೇಸೆ ವಧುವಾಗಿ ಮಧುವಾಗಿ ಹಣ್ಣಾಗಿ ಹೆಣ್ಣಾಗಿ ಮತ್ತೆ ದಣಿವು ಕಳೆಯಲೆಂದು ಇದೇ ಬಚ್ಚಲಿನ ಸುಡುಸುಡು ನೀರು ಮೀಯಲೆಂದು ಮೀಯಿಸಲೆಂದು ಹುಟ್ಟಿದ ಜೀವವೇ ನೀರೊಲೆಯ ನೆಂಟಸ್ತಿಕೆ ನಿನಗೆ ಕುದಿವ ನೀರಿಗೆ ಬೆರಕೆಯ ಹದ ಅಷ್ಟಕೇ ದಣಿವು ಕಳೆಯಿತೆಂದು ನಿದ್ದೆ ಮಾಡೀಯೆ ಜೋಕೆ! ಸೀತೆ ಸಾವಿತ್ರಿ ದ್ರೌಪದಿ ಅನಸೂಯೆ ಏಸೊಂದು ಮಾದರಿ ನಡುವೆ ನಿನಗಿಷ್ಟ ಬಂದದ್ದು ಆರಿಸಿಕೋ ಪರವಾಗಿಲ್ಲ ನೆನಪಿಡು ಇದು ದಿಗಂತವಿರದ ನಿರ್ಭಯದ ನಿತ್ಯ ವ್ಯವಹಾರ ಇಲ್ಲಿ ನೋವು ಚಿರಾಯುವಾಗಿದೆ ಗೆಳತಿ ಸೀಗೆಯ ಕಡುಹೊಗರು ಈಗಿಲ್ಲದಿರಬಹುದು ಕೆಂಡಸಂಪಿಗೆಯಂಥ ಬೆಂಕಿ ಈಗ ಕಾಣದಿರಬಹುದು ಮಸಿಬಳಿದು ಹುಗಿದ ಹಂಡೆ ಕಾಣೆಯಾಗಿರಬಹುದು ಝಳ ಹೆಚ್ಚುತ್ತಲೇ ಇದೆ ಹೀಗೆ ಈ ಬಚ್ಚಲು ನಮ್ಮೊಳಗಿನ ನಮ್ಮನ್ನು ತಟ್ಟಿ ಎಬ್ಬಿಸುತ್ತಲೇ ಇದೆ ಬೆಚ್ಚಿ ಬೀಳಿಸುತ್ತಲೇ ಇದೆ.. ************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಪ್ರೇಮದ ಹನಿಗಳು ನಾಗರಾಜ ಹರಪನಹಳ್ಳಿ ಬಿಕೋ ಎನ್ನುವ ರಸ್ತೆಗಳ ಮಧ್ಯೆಯೂ ನಿನ್ನದೇ ಧ್ಯಾನ ಎಂದಾದರೆ ಅದೇ ಪ್ರೀತಿ ; ಮತ್ತಿನ್ನೇನು ಅಲ್ಲ… ಜನ ಮನೆ ಸೇರಿದರು ಸರ್ಕಾರದ ಆದೇಶದಿಂದ ಪ್ರೀತಿಯ ಬಂಧಿಸುವುದು ಕಷ್ಟ ಉರಿ ಬಿಸಿಲಲ್ಲೂ ಮೈತುಂಬ ಹೂ ಹೊದ್ದ ಮರ ನೆರಳ ಚೆಲ್ಲಿ ವಿರಹಿಗೆ ಸಾಂತ್ವಾನ ಹೇಳಿತು ನನ್ನ ಕೂಗಾಟ, ಚರ್ಚೆ ವಾದ ಎಲ್ಲವೂ ನಿನಗಾಗಿ ಪ್ರೇಮ ಹುಲುಮಾನವರಿಗೆ ಅರ್ಥವಾಗುವುದಿಲ್ಲ ದೂರದಿಂದ ಸಂತೈಸುವ ನೀನು ನನ್ನ ತಾಯಿ ಪ್ರೇಮಿ, ಕಡು ವ್ಯಾಮೋಹಿ ಕೊಂಚ ಅಸಮಧಾನಿ ಸಹಜ ‌ಪ್ರೇಮಿಗೆ , ಪ್ರೇಮಿಗಳಿಗೆ ಪಕ್ಕದ ಚೆಲುವೆಯರ ಬಗ್ಗೆ ಅಸಹನೆ ,ಹೊಟ್ಟೆಕಿಚ್ಚು , ಅನುಮಾನಗಳಿರಬೇಕು ತನ್ನ ಸ್ವಾಮಿತ್ಯದ ಹಕ್ಕು ಬಿಟ್ಟುಕೊಡಲಾಗದು ಅದೇ ಪ್ರೇಮದ ಸೊಗಸು ಬಿಕೋ ಎನ್ನುವ ಬೀದಿ ಬರಡಾಗಿದೆ ಬಂಜೆಯಾಗಿದೆ ಮತ್ತೆ ಫಲವತ್ತತೆಗೆ ದಿನಗಳ ಕಾಯಬೇಕು ನಿನಗೆ ಮಕ್ಕಳು ಸಂಬಂಧಿಕರು ತೋಟ, ಗದ್ದೆ,ಮನೆ ಹಾಲು ಮಜ್ಜಿಗೆ ಹೊಟ್ಟೆ ತುಂಬಾ ರೊಟ್ಟಿ ಕೈತುಂಬ ಪ್ರೀತಿಸುವ ಜನ ಸ್ವಲ್ಪ ಯೋಚಿಸು ನನಗಾರು ಇಲ್ಲ ಇಲ್ಲಿ ‌ ಪ್ರೀತಿಸುವವರು ನಾನಿಲ್ಲಿ ಅನಾಥನಾಗಿದ್ದೇನೆ ಒಂಟಿಯಾಗಿದ್ದೇನೆ ಇಷ್ಟು ನಿನ್ನ ಮನದಲ್ಲಿ ಸುಳಿದರೂ ಸಾಕು ನಾನು‌‌ ಧನ್ಯ ನಾನು ನಿನ್ನ ಪ್ರೇಮಿ ಒಲವೇ ತಪ್ಪೇ ಮಾಡದ ನನ್ನ ಮನ್ನಿಸು ನಿನ್ನ ಉಡಿಯೊಳಗಿನ ಬೆಳಕು ನಾನು ನನ್ನ ಹಣತೆ ಮಾಡಿ ನಿನ್ನ‌ ಎದೆಯೊಳಗಿರಿಸು ಪ್ರೀತಿಯ ಎರೆದು ************

ಕಾವ್ಯಯಾನ Read Post »

You cannot copy content of this page

Scroll to Top