ಹೊತ್ತು ಬಂದಿದೆ
ಕವಿತೆ ಹೊತ್ತು ಬಂದಿದೆ ಗಾಂಧಿ ನೀನುದಿಸಿದನಾಡಿನಲೀ… ತೊನೆವ ತರುಗಳಕತ್ತು ಹಿಚುಕಿಜಲದ ಕಣ್ಣಿಗಿರಿವ ಹೊತ್ತು ಬಂದಿದೆ ಹರಿವರಿವ ನದಿಯದಿಕ್ಕು ದಿವಾಳಿಯಾಗಿಸಿಬರಿದಾಗಿಸುವ ಹೊತ್ತು ಬಂದಿದೆ ಖಗ ಮೃಗ ಹುಳ ಹುಪ್ಪಟೆಗಳನ್ನು ಬಿಡದೇ ಹುರಿದುರಿದು ಮುಕ್ಕುವ ಹೊತ್ತು ಬಂದಿದೆ ಸಾವಿರಾರು ವರುಷಗಳ ತಪೋನಿರತ ಶಿಲಾತಪಸಿಗಳಎದೆಗೆ ಮದ್ದಿಕ್ಕುವ ಹೊತ್ತು ಬಂದಿದೆ ಕಿವಿಗಡಚಿಕ್ಕುವಬೈರಿಗೆಗಳನ್ನಿಕ್ಕಿನೆಲದೊಡಲ ರಕ್ತ ಬಸಿವ ಹೊತ್ತು ಬಂದಿದೆ ಹೊತ್ತಿಗೊತ್ತಿಗೆ ಉರಿವ ದಿನಕರನ ಸಖ ಓಜೋನನ ಛಿದ್ರವಾಗಿಸುವ ಹೊತ್ತು ಬಂದಿದೆ ಚಂದಿರನ ಅಂಗಳದಲ್ಲಿಳಿವಮಂಗಳನ ಕೇರಿಯಲ್ಲಿಸುತ್ತುವ ಹೊತ್ತು ಬಂದರೂ… ವಿಜ್ಞಾನ ಜ್ಞಾನವೋ,ಅಜ್ಞಾನವೋ ಮಂಕುಗವಿದ ಬುದ್ದಿಗೆ ಲದ್ದಿ ಮೇಯುವ ಹೊತ್ತು ಬಂದಿದೆ ನಿನ್ನ ಮೂರು ಮಂಗಗಳು ಖಾದಿ ವೇಷತೊಟ್ಟುಅಧಿಕಾರದ ದರ್ಪದಲ್ಲಿದಿಮಿ ದಿಮಿ ಕುಣಿದುಮಾನವೀಯತೆಯನ್ನುನುಂಗಿ ನೊಣೆಯುವ ಹೊತ್ತ್ತು ಬಂದಿದೆ ಮಂದಿರವಿತ್ತೆಂಬ ಸಾಕ್ಷ್ಯ ಹುಡುಕಿದವರಿಗೆಗುಮ್ಮಟ ಉರುಳಿಸಿದವರ ನಿರ್ದೋಷದ ಹುಸಿನಗೆಯು ಕಾಣದಹೊತ್ತು ಬಂದಿದೆ ಬಾಪೂಜಿ ನೀ ಕೊನೆಯುಸಿರೆಳೆಯುವಾಗಹೇ ರಾಮ್ ಎಂದು ಉಸಿರು ಚೆಲ್ಲಿದೆಯೋ ನಾ ಕಾಣೆಇದೀಗಅಯ್ಯೋ ರಾಮ ಎಂದೆನುತ ಗೋರಿಯಲ್ಲಿ ನಿಡುಸುಯುವಹೊತ್ತಂತು ಬಂದಿದೆ…ಬಂದೇ ಇದೆ.. *****************************









