ಕವಿತೆ ತಲೆದಿಂಬಿನೊಳಗೆ ಅವಿತ ನಾ ಡಾ. ರೇಣುಕಾ ಅರುಣ ಕಠಾರಿ ಈಗೀಗ ಸಾಕ್ಷಿಯ ಪ್ರಜ್ಞೆ ಮರೆತ ನಾಸದ್ದಿಲ್ಲದೆ ತಲೆದಿಂಬಿನೊಳಗಿನಿಂದಎದ್ದು ಎದ್ದು ಬರುವ ಕನಸಗಳಿಗೆ ಉತ್ತರ ಕೊಡಬೇಕಿದೆಪ್ರತಿ ಪ್ರಶ್ನೆಗೂ ಅದೇ ಉತ್ತರವೆಂದು ಹೇಳಿದಾಗಲೂ.ಮತ್ತೆ ಅಂತರಾತ್ಮದ ಹೊನಲು ಕೇಕೆ ಹಾಕುತ್ತದೆ. ಕಾಡುವ ಕನಸುಗಳು ಘಳಿಗೆಗೆ ಒಮ್ಮೆನೆನಪಿನ ನೀರುಣಿಸಿ ಈಗೀಗ ಸಾಕುತ್ತಿದ್ದೇನೆ.ಹರಿದು ಬರುವ ನೀರಿಗೆ ಆಣೆಕಟ್ಟು ಕಟ್ಟಿದಂತೆ,ನದಿಯನ್ನು ದಾಟಲು ಸೇತುವೆಯಂತೆ,ಕ್ಷಣಕ್ಷಣವೂ ಉಸಿರು ನುಂಗಿ, ಜೀವಿಸಿ.ಮೊಳಕೆ ಒಡೆದ ಸಸಿಯಂತೆ, ಹೂವು ಅರಳಿಸುವಂತೆಮತ್ತೆ ನನಗೆ ನಾನೇ ಸಾಕ್ಷಿ ರೂಪವಾಗಿ ಬದುಕುತ್ತಿದ್ದೇನೆ ಕನಸಿಗಾಗಿ. ಜೊತೆಯಾಗಿ ಬರುತ್ತೇನೆ,ಉಸಿರಿಗೆ ಉಸಿರಾಗಿ ಇರುತ್ತೇನೆನಿನ್ನ ತಲೆ ಬೆನ್ನಿಗೆ ಬಿಂಬವಾಗಿರುತ್ತೇನೆ, ಎಂದುಬಂದವನು ನಿನ್ನ ಋಣ ತೀರಿತ್ತೆಂದುಬಂದ ದಾರಿಗೆ ನಡೆದು ಬಹುದೂರ ಹೋಗಿದ್ದಾಯಿತು.ಆಗ ಕಟ್ಟಿದೆಲ್ಲವೂ ಬರೀ ಉಳಿದ ಖಾಲಿ ಕನಸುಗಳು. ಬಯಲು ಆಲಯವು ಒಂದಾದಂತೆಆ ಬೇಸುಗೆಯೂ ಬೇಸತ್ತು ಕಂಗಾಲಾಗಿಸಾಗಿ ಸಾಗಿ ಹಾರಿ ಹೋದಿದ್ದಾಯಿತು.ನನ್ನ ಪ್ರಜ್ಞಾಪೂರಿತ ಸಾಕ್ಷಿಯ ಕನಸು,ವಾಸ್ತವಿಕತೆಯೂ ಮನಸುನನ್ನ ತಲೆದಿಂಬಿನೊಳಗೆ ಜೋಪಾನವಾಗಿಯೇ ಮಲಗಿತ್ತು. *****************************************