“ಪೂರ್ಣಗೊಳ್ಳದ ಚಿತ್ರಕ್ಕೆ ಬಣ್ಣವ ಬಳಿಯುತ್ತ….” ವೈ.ಯಂ.ಯಾಕೊಳ್ಳಿ
ಕಾವ್ಯ ಸಂಗಾತಿ ವೈ.ಯಂ.ಯಾಕೊಳ್ಳಿ “ಪೂರ್ಣಗೊಳ್ಳದ ಚಿತ್ರಕ್ಕೆ ಬಣ್ಣವ ಬಳಿಯುತ್ತ….” ಇಲ್ಲಿ ಇದ್ದ ಮೇಲೆ ಏನೂತೊರೆಯಲಾಗದುಬೆನ್ನತ್ತಿ ಬಂದಿರುವದನುನಮ್ಮದೆ ಎಂಬುದಮರೆಯಬಾರದು ಬಿಡಲೆನು ಮೂರು ದಿನದಸಂತೆಯಲ್ಲ ಜೀವನದಾಟಬಡಿದಾಡಿ ಮುಗಿಸಲುಅಪರಿಚಿತರೊಡನೆ ಜಗಳವಲ್ಲಸಂಸಾರ ಕೂಟ ಒಡನೆ ಇದ್ದವರು ಬಿಡದೆಕಾಡುವರು ನಿಜದ ಮಾತುಅನಿವಾರ್ಯ ಹೊಂದಿಕೆಯೆಇಲ್ಲಿ ಮುಖ್ಯ ಧಾತು ಯಾರನೆ ದೂಷಿಸುತ ಏನನೋನಿಂದಿಸುತ ಅತ್ತರೇನು ಬಂತುಹೊತ್ತು ತಂದ ತಟ್ಟೆಯಅನ್ನವ ನಾವೇ ಉಣ್ಣಬೇಕು ಎನಿತು ಬಡಿದಾಡಿದರೂ.ಎಷ್ಟು ಕಾದಾಡಿದರೂಅಂತಿಮ ನಿರ್ಣಯವಾಗದ ಯುದ್ದಯಾವ ನ್ಯಾಯಾಲಯದಲೂದಾವೆ ಹೂಡಿದರೂ ಉತ್ತರಸಿಗದ ವ್ಯಾಜ್ಯ ಹೃದಯದ ಪ್ರಶ್ನೆಗಳಿಗುತ್ತರವಹೃದಯವೆ ಕೊಡಬೇಕುದೊರಕದು ಬೇರೆಡೆಗೆಎನಿತು ಹುಡುಕಿದರೂ ತಾಜಮಹಲಿ ಮುಂದೆ ನಗುತರಾಜರಾಣಿಯಂತೆ ನಿಂತುತಗೆಸಿಕೊಂಡ ಪೋಟೊಬಂದು ಕಾಡುತ್ತವೆ ಆಗಾಗಎಲ್ಲರಿಗೂ ಕನಸಿನಲ್ಲಿಅದನೆ ನಿಜವೆಂದು ನಂಬಿಹೊರಡಲಾಗದುಮರುದಿನದ ನನಸಿನಲ್ಲಿ ಹಾಗೆಂದುಮಧ್ಯ ರಾತ್ರಿಯಲಿಎದ್ದು ಹೋಗಲಸಾಧ್ಯಅದು ಕವಿತೆಕಥೆಯಲಷ್ಟೇ ಬರೆದದ್ದು ತೂತಿರುವ ದೋಸೆಯನೆ ಕತ್ತರಿಸಿ ತಿನ್ನುತ್ತಸುಖವ ಅನುಭವಿಸಬೇಕುಹರಿದ ಹಾಸಿಗೆಯನೆಹೊಲಿದು ಹೊದ್ದುಕೊಂಡುಮತ್ತೆ ಕನಸುಗಳ ಕಾಣಬೇಕು —–ವೈ. ಎಂ.ಯಾಕೊಳ್ಳಿ
“ಪೂರ್ಣಗೊಳ್ಳದ ಚಿತ್ರಕ್ಕೆ ಬಣ್ಣವ ಬಳಿಯುತ್ತ….” ವೈ.ಯಂ.ಯಾಕೊಳ್ಳಿ Read Post »









