ನಮಗೊಂದು ಪ್ರಕೃತಿಯು..!

ಕವಿತೆ –ರಮಣ ಶೆಟ್ಟಿ ರೆಂಜಾಳ. ನಮಗೊಂದು ದೇಹವಕೊಟ್ಟನು ಆ ದೇವ,ಕೊಟ್ಟದರಲ್ಲಿಟ್ಟನು ಪರಿ ಪರಿಯ ನೋವ !ನಮಗೊಂದು ಮನವಕೊಟ್ಟನು ಆ ದೇವ,ಕೊಟ್ಟದರಲ್ಲಿಟ್ಟನು ನಾನಾ ಪರಿ ಚಿಂತೆಯ !ನಮಗೊಂದು ಜಿಹ್ವೆಯಕೊಟ್ಟನು ಆ ದೇವ,ಕೊಟ್ಟದರಲ್ಲಿಟ್ಟನು ವಿಧ ವಿಧ ರುಚಿಯ

ಮನೋ ಇಂಧನ

ಕವಿತೆ ವಿದ್ಯಾ ಶ್ರೀ ಎಸ್ ಅಡೂರ್ ಸೀಟಿ ಹೊಡೆಯುತ್ತದೆ ಕುಕ್ಕರ್…ತಾಳದೇತನ್ನ ಅಡಿಯಲ್ಲಿ ಉರಿಯುತ್ತಿಯುವ ಬೆಂಕಿ.ನಾನೂಹೊರಹಾಕುತ್ತೇನೆ ನೋವು ನಲಿವುಗಳಪೆನ್ನು ಕಾಗದ ಹಿಡಿದು ,ಮನವನ್ನು ಕೆದಕಿ ಕೆದಕಿ . ಹಣೆಮೇಲಿನ ನೆರಿಗೆ, ಕಣ್ಣಂಚಿನ ಹನಿತುಟಿಯ ಮೇಲ್ಮುಖ ….ಕೆಳಮುಖ

ಮೌಢ್ಯ

ಕವಿತೆ ವೀಣಾ ರಮೇಶ್ ಮಾನದಂಡವಿಲ್ಲದ ಮೂಢ ಸಂತೆಯೊಳಗೆಬದುಕು ವ್ಯಾಪಾರ ವಾಗುತ್ತಿದೆ .ನಂಬಿಕೆಯ ನಡುವೆ ಮೂಢತ್ವ ಬಿತ್ತಿಮೊಳಕೆಯೊಡೆದುಬೇರು ಚಾಚಿಮೌಢ್ಯ ಹೆಮ್ಮರವಾಗಿದೆ ಬೆತ್ತಲಾಗಬೇಡ ಬತ್ತಿದಕನಸುಗಳಿಗೆಪೊಳ್ಳು ಕಟ್ಟು ಪಾಡುಗಳಹೆಗಲೇರಿ ಶವವಾಗಬೇಡ. ನಿನ್ನ ಕನಸುಗಳ ಚಲುವಿಗೆಸುಜ್ಞಾನ ತೊಡಿಸಿಜ್ಞಾನ ದಾರದಿಂದ ಬಿಗಿದುಅಭಿಜ್ಞಾನದೆಡೆಗೆ

ಕಣ್ಣುಗಳು ನನ್ನದಲ್ಲ

ಕವಿತೆ ಜಹಾನ್ ಆರಾ ಎಚ್. ಕೋಳೂರು ನಾನು ನಿನ್ನನ್ನು ನೋಡಿದ್ದೇನೆಆದ್ರೆ ಕಣ್ಣುಗಳು ನನ್ನದಲ್ಲ ದಶರಥನ ಮಹೋನ್ನತ ಯೋಚನೆಯಲ್ಲಿಮಂಥರೆಯ ಮೋಸದಲಿಊರ್ಮಿಳೆಯ ಉದಾಸೀನತೆ ಯಲ್ಲಿಲಕ್ಷ್ಮಣನ ನೆರಳಿನಲ್ಲಿಹನುಮಾನನ ಸೇವೆಯಲಿರಾವಣನ ಶೌರ್ಯದಲ್ಲಿಹೌದು ಅದೇ ಸೀತೆಯ ಕಂಬನಿಯಲ್ಲಿ ನಿನ್ನನ್ನು ಮತ್ತೆ ನೋಡುತಿದ್ದೇನೆಮತ್ತೆ

ಪಯಣ

ಕವಿತೆ ಪಾರ್ವತಿ ಸಪ್ನ ಹೊಗಳಿದರೆ ಹಿಗ್ಗದೆತೆಗಳಿದರೆ ಕುಗ್ಗದೆಅಪ್ಪಳಿಸುವ ಮಾತಿನಅಲೆಗಳಿಗೆ ಜಗ್ಗದೆನಿನ್ನ ಹಾದಿಯಲ್ಲೇನಿಲ್ಲದೆ..ನೀ ಸಾಗಿಬಿಡು..!! ಕಾಲಿಗೊಂದು ಮುಳ್ಳುಕೈಯಿಗೊಂದು ಕಲ್ಲುನಾಲಿಗೆಯಲ್ಲಿ ಸುಳ್ಳುಅಚ್ಚರಿಯೇನಿಲ್ಲ..ಲೋಕವೇ ಡೊಂಕುಮಾತೆಲ್ಲಾ ಕೊಂಕುಇರಲಿಬಿಡು.. ನಿನ್ನಷ್ಟಕ್ಕೇನೀ….ಸಾಗಿಬಿಡು…!! ತಪ್ಪು ಹುಡುಕುವಬೆಪ್ಪನಿಗೆ..ತುಪ್ಪ ಸವರಿದರೂಮೊಸರಲ್ಲೂ ಕಲ್ಲಂತೆ,,ಕಾಣದ ಗಾಳಿಯದುಬೊಗಸೆಯಲ್ಲಿ ಹಿಡಿದಂತೆ,,ಸುಮ್ಮನೆ ನಡೆದುಬಿಡುನಿನ್ನ ಹಾದಿಯಲ್ಲಿ

ಇಲ್ಲದೆಯೂ ಎಲ್ಲವನ್ನೂ ಬಯಸುತ್ತೇನೆ

ಕವಿತೆ ಸ್ಮಿತಾ ಭಟ್ ಅಬ್ಬರಿಸಿ ಬರುವ ನಿನ್ನ ಮಾತಿನಹೊಡೆತಕ್ಕೆ ಸಿಲುಕಿದ ಒಂಟಿ ದೋಣಿಮತ್ತೊಂದು ಪ್ರಶಾಂತ ನಿಲುವಿಗಾಗಿಯಾಕೋ ಕಾಯಬೇಕೆನಿಸುತ್ತಿಲ್ಲಕೊಚ್ಚಿ ಕಾಣದಾಗಲೆಂದು ಬಯಸುತ್ತೇನೆ ಬುಡಮೇಲಾದ ನಂಬಿಕೆಯಮತ್ತೆ ಊರಿ ಅದಕ್ಕೇ ಚಿಗುರೊಡೆವಸಮಯಕ್ಕಾಗಿಯಾಕೋ ಕಾಯಬೇಕೆನಿಸುತ್ತಿಲ್ಲಕುರುಹೂ ಇಲ್ಲದಂತೆ ನಶಿಸಿ ಹೋಗಲು ಬಯಸುತ್ತೇನೆ.

ಊರುಗೋಲು ಕಾಫಿ ಮತ್ತು ಅಪ್ಪ

ಕವಿತೆ ವಿಭಾ ಪುರೋಹಿತ್ ಚತುರ್ಮುಖ ಬ್ರಹ್ಮಅವನೊಳಗೊಂದು ಕಾಣ್ದಅಗೋಚರ ಮೈವೆತ್ತ ಹಾಗೆಅವನಿಯೊಳಗಿನ ಜ್ಞಾನಕಣ್ತೆರೆದಂತೆಸುಡುವ ನೋವಿದ್ದರೂ ಎದೆಯೊಳಗೆಉತ್ಸಾಹ ಉತ್ತುವದು ನಗೆಯ ಬಿತ್ತುವುದುಮಹಾತ್ಮ ನ ಲೀಲೆನಾರಾಯಣನಿಲ್ಲದೇ ಅವನಿಯುಂಟೇ?ಅದೃಶ್ಯದಲ್ಲಿ ಸದೃಶನಾಗಿಸೋಫಾಮೇಲೆ ಕುಳಿತಿದ್ದಾನೆರೇಡಿಯೋ ಕೇಳುತ್ತಿದ್ದಾನೆಎರಡುತಾಸಿಗೊಮ್ಮೆ ಕಪ್ಪು ಕಾಫಿಸೋಮರಸ ಸದಾ ಥರ್ಮಾಸಿನೊಳಗೆಕಾಲುಮೇಲೆಕಾಲಿಟ್ಟುಅನುಭವದ ರೇಖೆಗಳನ್ನೆಲ್ಲ

ಪ್ರೀತಿಯ ಸಾಲುಗಳು

ಕವಿತೆ ಬಾಲಕೃಷ್ಣ ದೇವನಮನೆ ಮುಗುಳು ನಗೆಯಲ್ಲಿಹದಗೊಳಿಸಿದಎದೆಯ ಹೊಲದಲ್ಲಿಒಂದೊಂದೇವಾರೆ ನೋಟದಲಿನಾಟಿ ಮಾಡಿದ ಪೈರುತೊನೆದಾಡಿದ ಮಧುರ ಕ್ಷಣ..! ಪ್ರೀತಿಯನ್ನುಮುಲಾಜಿಲ್ಲದ ಹಾಗೆಅವಳು ಒದ್ದು-ಹೋದ ಎದೆಯ ದಾರಿಯಲ್ಲಿಮೂಡಿದ ನೋವಿನ ಹೆಜ್ಜೆಗಳುಯಾವ ಮುಲಾಮಿಗೂಅಳಿಸಲಾಗದೇ ಸೋತರೂಮತ್ತೆ ಮತ್ತೆ ನೆನಪ ಲೇಪಿಸಿಕೊಂಡುಸುಖಿಸುವ ವ್ಯಸನಿ ನಾನು.

ನನಗೂ ನಿನ್ನಂತಾಗ ಬೇಕಿತ್ತು!

ಕವಿತೆ ಅನಿತಾ ಪಿ. ತಾಕೊಡೆ ನನಗೂ ನಿನ್ನಂತಾಗಬೇಕಿತ್ತುಅದೆಷ್ಟೋ ಸಲ ನಾನೂ ನಿನ್ನಂತಾಗಲು…ಎದೆಯಾಳದ ಕನಸಿನ ಕಣ್ಣಿಗೆಕಪ್ಪು ಪಟ್ಟಿ ಬಿಗಿಯುತಿದ್ದೆತೀವ್ರವಾದ ಭಾವಗಳು ಎಲ್ಲೆ ಮೀರದಂತೆಇತಿಮಿತಿಯ ರೇಖೆಯನೆಳೆಯುತಿದ್ದೆ ಕೆಲವೊಮ್ಮೆ ಮಾತುಗಳು ಹಳಿ ತಪ್ಪಿದಾಗಕರಾಳ ಮೌನ ಎದೆಯನ್ನು ಸುಡುತಿತ್ತುಅಭದ್ರತೆಯ ನೆಲೆಯೊಳಗೆ

ಕಲಿಗಾಲದ ಫಲ

ಕವಿತೆ ಅರುಣ್ ಕೊಪ್ಪ ಅಂದು ಖುಷಿಯನ್ನೆಲ್ಲ ಉಸುರಿಹಿಡಿದು ಮುಟ್ಟಿದ್ದಕ್ಕೂತಂತ್ರಜ್ಞಾನದ ಗುಲಾಬು ಜಾಮೂನಿನ ಚಪಲದಲ್ಲಿದ್ದೆವು.ಸ್ವಾರ್ಥದ ಕುದುರೆಯನ್ನೇ ಏರಿ ಸವಾರಿಕಾಂಚಾಣದ ಕರವಸ್ತ್ರವನ್ನೇ ಬಳಸುತ್ತಿದ್ದೆವು. ಪಾದ ಊರದ ನೆಲ ಮೌನದಲ್ಲಿಕಾಲು ದಾರಿಗಳನ್ನು ನುಂಗಿ ಹಾಕಿತ್ತುಬೀದಿ ದೀಪದಲ್ಲೂ ಕಣ್ಣು ಕಾಣದಮೋಜು