ಒಬ್ಬ ತತ್ವಶಾಸ್ತ್ರಜ್ಞ ವಿಚಾರಗಳ ಮೂಲಕ ಚಿಂತಿಸ್ತಾನೆ. ನಾನೊಬ್ಬ ಕಲಾವಿದ; ಯಾಕಂದ್ರೆ ಶಬ್ದಗಳ ಮೂಲಕ ನಾನು ಚಿಂತಿಸ್ತೇನೆ, I think through words”.
-ಆಲ್ಬರ್ಟ್ ಕಾಮ್ಯೂ
“ಹೂ ಅರಸುತ್ತಾ ಉದ್ಯಾನವನಕ್ಕೆ ತೆರಳಬೇಡ ನಿನ್ನ ಶರಿರವೇ ಹೂ ಗಿಡವಾಗಿರುವಾಗ ಹೂವನೇತೆಕೆ ಅರಸುವೆ ? ಬಾ ಇಲ್ಲಿ ಕುಳಿತಿಕೊ ನಿನ್ನ ದೇಹದಲ್ಲಿ ಸಾವಿರ ಕಮಲಗಳು ಅರಳುವುದನು ನೀನು ಗಮನಿಸು”
– ಕಬೀರ್ ದಾಸ್
ಅಂಕಣ ಸಂಗಾತಿ ಗಜಲ್ ಲೋಕ ಶ್ರೀದೇವಿಯವರ ಗಜಲ್ ಸಿರಿ ಸಂಪತ್ತು ಹಲೋ…. ಏನು ಮಾಡ್ತಾ ಇದ್ದೀರಾ, ಏನು ಓದುತ್ತಾ ಇದ್ದೀರಾ …? ಇಂದು ತಮ್ಮ ಮನವನ್ನು ತಣಿಸಿದ, ತಣಿಸುತ್ತಿರುವ ಓರ್ವ ಗಜಲ್ ಗೋ ಅವರ ಹೆಜ್ಜೆ ಗುರುತುಗಳೊಂದಿಗೆ ನಿಮ್ಮ ಮುಂದೆ ಬಂದಿದ್ದೇನೆ. ಶುಭ ಮುಂಜಾವು.. ಭುವನೇಶ್ವರಿಯ ಮಕ್ಕಳಾದ ಕನ್ನಡದ ಮನಸುಗಳಿಗೆ ನಮಸ್ಕಾರಗಳು…. “ಸ್ವರ್ಗದ ವಾಸ್ತವತೆ ನಮಗೆ ತಿಳಿದಿದೆ ಆದರೆ ಹೃದಯವನ್ನು ಸಂತೋಷವಾಗಿಟ್ಟುಕೊಳ್ಳಲು ಇದೊಂದು ಒಳ್ಳೆಯ ಆಲೋಚನೆ ‘ಗಾಲಿಬ್‘” –ಮಿರ್ಜಾ ಗಾಲಿಬ್ ಮನುಷ್ಯ ಭಾವನೆಗಳ ಗೊಂಚಲು. […]
ಅಂಕಣ ಸಂಗಾತಿ ಗಜಲ್ ಲೋಕ ರಜಪೂತರ ಗಜಲ್ ನಾದದಲ್ಲೊಂದು ಸುತ್ತು … ಹಾಯ್…. ಏನು ಯೋಚಿಸ್ತಾ ಇದ್ದೀರಾ, ಇಂದು ಯಾವ ವಾರ ಎಂದೋ…? ನಾನು ಓರ್ವ ಗಜಲ್ ಗೋ ಅವರ ಪರಿಚಯದೊಂದಿಗೆ ಬಂದಿದ್ದೇನೆ ಎಂದರೆ ಇಂದು ‘ಗುರುವಾರ’ ಎಂದಲ್ಲವೇ…!! ಶುಭೋದಯ, ನನ್ನ ಎಲ್ಲ ಕಸ್ತೂರಿ ಕನ್ನಡದ ಹೃದಯಗಳಿಗೆ ಈ ಮಲ್ಲಿನಾಥನ ಮಲ್ಲಿಗೆಯಂತ ನಮಸ್ಕಾರಗಳು. “ಆ ಹೆಜ್ಜೆಗಳ ಸದ್ದನ್ನು ನಾವು ಬಹಳ ಮೊದಲೇ ತಿಳಿಯುತ್ತೇವೆ ಹೇಯ್ ಜೀವನವೇ..ನಾವು ನಿನ್ನನ್ನು ದೂರದಿಂದಲೇ ಗುರುತಿಸುತ್ತೇವೆ” –ಫಿರಾಕ್ ಗೋರಖಪುರಿ ‘ಜೇನು’ […]
ಸುನಂದಾ ಅವರ ಇನಿದನಿ ಆಲಿಸುತ್ತಾ…
“ಹೂವು ಮಾತ್ರವಲ್ಲ ಈಗ ಬಂಡೆಯೂ ಗಜಲ್ ಆಗುವುದು
ಸಮಯದ ಧ್ವನಿ ಇದಾಗಿದೆ ಖಡ್ಗವೂ ಗಜಲ್ ಆಗುವುದು”
-ಕಮಲ್ ಕಿಶೋರ ‘ಭಾವುಕ’
“ಪ್ರಪಂಚದಲ್ಲಿ ಸುಖ-ದುಃಖಗಳೆರಡೂ ಇವೆ
ಸುಖ ಒಬ್ಬನಿಗಿದ್ದರೆ ನಾಲ್ವರಿಗೆ ದುಃಖವಿದೆ”
-ಜೌಕ್
“ನಾವು ನಿಟ್ಟುಸಿರು ಬಿಟ್ಟರು ಕುಖ್ಯಾತರಾಗುತ್ತೇವೆ
ಅವರು ಕೊಂದರೂ ಸಹ ಚರ್ಚೆಯೂ ಆಗುವುದಿಲ್ಲ”
-ಅಕ್ಬರ್ ಇಲಾಹಾಬಾದಿ
“ಒಣರೊಟ್ಟಿ ತಿಂದು
ತಣ್ಣೀರ ಕುಡಿ, ಫರೀದ್
ಇತರರ ತುಪ್ಪ ರೊಟ್ಟಿಯ ಕಡೆ
ನೋಡದಿರು ಹಂಬಲಿಸಿ”
-ಬಾಬಾ ಷೇಖ್ ಫರೀದ್
ಅಂಕಣ ಸಂಗಾತಿ ಗಜಲ್ ಲೋಕ ಸಾಲಿಯವರ ಗಜಲ್ ಉದ್ಯಾನವನ… ನಮಸ್ಕಾರ… ಎಂದಿನಂತೆ ಇಂದೂ ಸಹ ನಾಡಿನ ಖ್ಯಾತ ಗಜಲ್ ಕಾರರೊಬ್ಬರ ಪರಿಚಯದೊಂದಿಗೆ ತಮ್ಮ ಮುಂದೆ ಬಂದಿದ್ದೇನೆ. ಓದಲು ತಾವು ಕಾತುರರಾಗಿದ್ದೀರೆಂದು ಬಲ್ಲೆ. ಸಮಯವನ್ನು ಹಾಳು ಮಾಡದೆ, ನೇರವಾಗಿ ವಿಷಯಕ್ಕೆ ಬರುತ್ತೇನೆ. “ಪ್ರೇಮಿಯ ಕಾರಣ ಇತರ ಎಲ್ಲ ಕಾರಣಗಳಿಂದ ಪ್ರತ್ಯೇಕವಾಗಿದೆ ಪ್ರೀತಿಯು ದೇವರ ರಹಸ್ಯಗಳ ಖಗೋಳ“ –ರೂಮಿ ಉರ್ದು ತುಂಬಾ ಕಾವ್ಯಾತ್ಮಕ ಭಾವದ ಭಾಷೆ. ‘ಕಾವ್ಯಾತ್ಮಕ ಭಾಷೆ’ ಎಂದರೆ ಆ ಭಾಷೆಯೂ ಶಬ್ಧಗಳಿಗಿರುವ ಅರ್ಥಬಾಹುಳ್ಯ ಎಂದರ್ಥ. […]