Category: ಕವಿತೆ ಕಾರ್ನರ್

ಕವಿತೆ ಕಾರ್ನರ್

ಕವಿತೆ ಕಾರ್ನರ್

ಮತ್ತೆಂದೂ ನಿನ್ನ ನೆನೆಯದೆ! ನಾನೀಗ ಬರೆಯುವುದ ನಿಲ್ಲಿಸಿರಬಹುದು ಹಾಗೆಯೇ ನಿನ್ನ ನೆನೆಯುವುದನ್ನೂ ಮೊದಲಿನಂತೆ ಅಕ್ಷರಗಳ ಸಹಕರಿಸುತಿಲ್ಲ ಹುಟ್ಟಿದ ಶಬ್ದಗಳೂ ಅರ್ಥ ಕೊಡುತಿಲ್ಲ ಘನಘೋರ ಬದುಕಿನ  ಹಲವು ಹಗಲುಗಳು ಅಸ್ಥವ್ಯಸ್ಥವಾಗಿ ಸರಿದು ಹೋದವು  ಓಡುವ ರೈಲಿನ ಪಕ್ಕದ ಗಿಡಗಂಟೆಗಳಂತೆ ಆಯ್ದುಕೊಂಡಿದ್ದೆನೆ ನಾನೀಗ ಇರುಳುಗಳನ್ನು ಅದು ತಂದೊಡ್ಡುವ ಸಾವಿನಂತಹ ಏಕಾಕಿತನವನ್ನು ಮೋಡಗಳ  ಹಿಂದಿನ ಬೆತ್ತಲೆ ಚಂದ್ರ ಮೊದಲಿನಂತೆ ಕಣ್ಣಾ ಮುಚ್ಚಾಲೆಯಾಡುವುದಿಲ್ಲ ಬೀಸುವ ಗಾಳಿಗೂ ಉತ್ಸಾಹದ ಉಸಿರಿಲ್ಲ ಎಲ್ಲ ಮುಗಿದು ಹೋದವರ ಅಂಗಳದಲ್ಲಿ ಮಿಂಚು ಹುಳುವೂ ಮಿನುಗುವುದಿಲ್ಲ ನನ್ನ ಪಾಪಗಳು ನಿರಂತರವಾಗಿ […]

ಕವಿತೆ ಕಾರ್ನರ್

ಒಮ್ಮೊಮ್ಮೆ ಹೀಗೂ ಆಗುತ್ತೆ! ಚಳಿಗಾಲದ ಸಂಜೆಯೊಳಗೆ ಗೋಡೆಗೊರಗಿ ಕೂತಿದ್ದವಳೆನ್ನ ಎದೆಗಾನಿಸಿಕೊಂಡು ಕವಿತೆ ಹಾಡುತ್ತಾ ಹೋದಳು ಕೇಳುತ್ತ ವಿರಮಿಸಿದವನ ಕನಸಲ್ಲಿ ದೇವತೆಗಳು ಬಂದು ನಿಂತರು ಅದು ಯಾವ ಕಾಲಕ್ಕೂ ಮುಗಿಯದ ಹಾಡೆಂಬ ನಂಬಿಕೆಯೊಳು ಮಲಗಿದವನಿಗೆ ಎಚ್ಚರವಾದಾಗ ಗೋಡೆಯಿರಲಿಲ್ಲ,ಅಸಲಿಗೆ ಅಲ್ಲೊಂದು ಮನೆಯೇ ಇರಲಿಲ್ಲ ಬಯಲ ಹೊರತು ಇನ್ನು ಅವಳಾಗಲಿ, ಅವಳ ಮಡಿಲಾಗಲಿ ಕಾಣಲಿಲ್ಲ ತೆರೆದು ಬಿದ್ದ ಬಯಲೊಳಗೆ ಕೇವಲ  ನಾನು ಮತ್ತು  ನಾನು ಮತ್ತು ನನ್ನ ಮೌನ ನನ್ನ ಹೆಗಲ ಮೇಲೆ ನನ್ನದೇ ಹೆಣ! ಕು.ಸ.ಮಧುಸೂದನ ರಂಗೇನಹಳ್ಳಿ

ಕವಿತೆ ಕಾರ್ನರ್

ಅಡ್ಡಾಡಬೇಡ ಒಬ್ಬಳೇ! ಅಡ್ಡಾಡಬೇಡ ಒಬ್ಬಳೇ! ಅದರಲ್ಲೂ ಮಳೆಗಾಲ! ಇರುಳಿಡೀ ಸುರಿದ ಜಡಿಮಳೆಗೆ ತೊಯ್ದು ತೊಪ್ಪೆಯಾದವಳು ಜಗುಲಿಯೊಳಗೆ ಕಾದು ಕೂತಳು ಹಗಲ ಸೂರ್ಯನ! ನೆಂದದ್ದೆಲ್ಲ ಒಣಗಬೇಕು ಇಲ್ಲ ಫಲವತ್ತಾದ ನೆಲದೊಳಗೆ ಮೊಳಕೆಯೊಡೆಯಲು ಬೇಕು ಒಂದಿಷ್ಟು ಶಾಖ ಬೆಳಕು ಎಷ್ಟು ಹೊತ್ತಾದರು ಬಾರದ ಸೂರ್ಯನೊ ಬಿದ್ದ ಮಳೆಗೆ ಕಾರಣ ತಾನಲ್ಲ ಮೊಳಕೆಯೊಡೆವ ಬೀಜವೂ ತನ್ನದಲ್ಲವೆಂಬಂತೆ ಬರಲೇ ಇಲ್ಲ ಕಾದು ಕುಂತವಳ ಕಾಲುಗಳು ಬೇರುಬಿಟ್ಟು ಮನುಜರ ಕಾಡಿನಲಿ ತನ್ನದೇ ಗೂಡು ಕಟ್ಟಿದಳು ಒಂಟಿಯಾಗಿ ಈಗವಳು ಮಗಳ ಕೂರಿಸಿಕೊಂಡು ಕತೆ ಹೇಳುತ್ತಾಳೆ ಜೊತೆಗಷ್ಟು […]

ಕವಿತೆ ಕಾರ್ನರ್

ರಕ್ತ ಒಸರುವ ಗತದ ಗಾಯ
ಮುಲಾಮುಗಳಿಗೆಲ್ಲ ಮಾಯುವುದಿಲ್ಲ
ಬಾಂಡಲಿಯ ಕುದಿಯುವ ಎಣ್ಣೆಯೊಳಗೆ ಬೇಯಿಸುವ
ನರಕದ ಭಯ ಯಾರಿಗಿದೆ ಇಲ್ಲೀಗ?

ಕವಿತೆ ಕಾರ್ನರ್

ಅವಳ ಕಣ್ಣುಗಳಲ್ಲಿ ಬೇಸಿಗೆಯ ಧಗೆಯನೆಲ್ಲ ಹೀರಿಬಿಡಬಲ್ಲ ಅವಳ ಕಣ್ಣುಗಳಲ್ಲಿ ಸದಾ ಒಂದು ಕನಸು ಬರಲಿಹ ನಾಳೆಗೆ. ಇಡಿ ಜಗದ ಕಸುವನೆಲ್ಲ ಹೀರಿಬಿಡಬಲ್ಲಂತ ಅವಳ ಕಣ್ಣುಗಳಲ್ಲಿ ಸದಾ ಒಂದು ಸೋನೆ ಒಳಗಿನ ದು:ಖಕ್ಕೆ. ಬದುಕಿನೆಲ್ಲ ವಿಷಾದಗಳ ಕೊನೆಗೊಳಿಸಬಲ್ಲಂತ ಉಡಾಫೆಯ ನೋಟವಿದ್ದ ಅವಳ ಕಣ್ಣುಗಳಲ್ಲಿ ಸದಾ ಒಂದು ನಗು ಮನುಜನ ಅಸಹಾಯಕತೆಗೆ. ಕಂಡಿದ್ದನ್ನೆಲ್ಲ ಮುಕ್ಕಿಬಿಡುವ ಹಸಿವಿದ್ದ ಅವಳ ಕಣ್ಣೊಳಗೆ ಸದಾ ಒಂದು ಆತುರ ಎದುರಿನ ಮಿಕದೆಡೆಗೆ. ನೋವುಗಳಿಗೆಲ್ಲ ಮುಕ್ತಿ ನೀಡುವ ಮುಲಾಮು ಇದ್ದ ಅವಳ ಕಣ್ಣೊಳಗೆ ಸದಾ ಒಂದು ನಿರಾಳತೆಯ […]

ಕವಿತೆ ಕಾರ್ನರ್

ನೀನು ಮಾತ್ರವೇ! ನೀನೊಂದು ಬರೀ ರಕ್ತಮಾಂಸದಏರುಯೌವನದ ಜೀವಂತ ಹೆಣ್ಣು ಮಾತ್ರವಾಗಿದ್ದರೆ ಇಷ್ಟೊಂದು ಪ್ರೀತಿಸುತ್ತಿರಲಿಲ್ಲ ನಾನು! ನನ್ನಗಾಢ ವಿಷಾದದ ಬಟ್ಟಲೊಳಗಿನ ಮಧು ನೀನುನನ್ನ ಒಂಟಿತನದ ನಟ್ಟಿರುಳುಗಳ ಕನಸು ನೀನುನನ್ನ ಅನಾಥಅಲೆಮಾರಿ ಹಗಲುಗಳ ಹುಡುಕಾಟ ನೀನುನಾನು ಕಳೆದುಕೊಂಡ ಎಲ್ಲವನೂಮೊಗೆಮೊಗೆದು ಕೊಡಬಲ್ಲ ಸಾವಿರದ ನೋವಿರದ ದೇವತೆ ನೀನು. ನೀನೊಂದು ಭೂಮಿಯ ಹಾಗೆ ನಾನೋ ನಿನ್ನತ್ತಲೇ ಸರಿಯುವ ಸುತ್ತುವ ಕ್ಷುದ್ರ ಗ್ರಹನಿರಾಕರಿಸಿದಷ್ಟೂ ನಿನ್ನ ಕನವರಿಸುವಕಷ್ಟದ ದಿನಗಳಲ್ಲಿಯೂ ಸತ್ಯವ ನುಡಿದು ಸರಳುಗಳಹಿಂದೆ ನರಳುತಿಹ ಜೀವ ಮಾತ್ರ ನಾನುಇಷ್ಟು ಮಾತ್ರ ಹೇಳಬಲ್ಲೆ ನನ್ನೆಲ್ಲ ತಪ್ಪುಗಳ ಕ್ಷಮಿಸಿನನ್ನ […]

Back To Top