ಕಾವ್ಯಯಾನ
ಹೋರಾಟ ಪ್ಯಾರಿ ಸುತ ದೈತ್ಯಶಹರ ರಾಜಬೀದಿಯೊಳಗೆ ಹೋರಾಟ ಮುಚ್ಚುಮರೆಯಲಿ ಜಮಾಯಿಸಿ ಇಟ್ಟ ಕಲ್ಲುಗಳತೂರಾಟ ಎತ್ತರದಲ್ಲಿ ಜೋತುಬಿದ್ದ ಮೈಕಿನಲ್ಲಿ ರಕ್ತಕುದಿಸುವ ಘೋಷಣೆಗಳ ಕೂಗಾಟ ಕಪ್ಪುನೀಲಿಶಾಯಿ,ರಕ್ತದಿಂದ ಬರೆಯಲ್ಪಟ್ಟ ರಟ್ಟು,ತಗಡು,ಬಿಳಿಬಟ್ಟೆಗಳ ಹಾರಾಟ ಗುಂಪುಗಳ ಮಧ್ಯಸಿಕ್ಕು ಕಾರು,ಬೈಕು,ಬಸ್ಸು ಲಾರಿ, ರೀಕ್ಷಾಗಳ ಚೀರಾಟ ಹಳ್ಳಿಕೇರಿಗಳಿಂದ ಸಂತೆಬಜಾರಿಗೆ ಬಂದವರ, ಊರಿಂದ ಊರಿಗೆ ಹೋಗುವವರ ಶಾಲಾಕಾಲೇಜು ಮಕ್ಕಳ,ಓಪ್ಪತ್ತು ಊಟದ ವ್ಯಾಪಾರಸ್ಥರ,ಕೂಲಿ ನಂಬಿದ ಸ್ಟೇಷನ್ ಕೂಲಿಕಾರ್ಮಿಕರ, ಊರುಕೇರಿಯ ಸಾರ್ವಜನಿಕರ ಪರದಾಟ ಅವರದೇ ಜೀವನದಲ್ಲೊಂದಿಷ್ಟು ಗೋಳಾಟ ಅರೆಸೇನೆ,ಪೊಲೀಸಪಡೆಗಳಿಂದ ಮದ್ದುಗುಂಡು, ಅಶ್ರುವಾಯುಗಳ ಎರಚಾಟ ಕಟ್ಟಾಳು ಕರೆ ತಂದವರಿಗೆ ಬಿರಿಯಾನಿ ಬಾಡೂಟ ಬೀರುಬ್ರಾಂಡಿ,ವಿಸ್ಕಿ ಕುಡಿದವರ ನಡುವೆ ಏರ್ಪಟ್ಟ ಮಂಗನಾಟ ಎಡಬಲ ನೀತಿ ನಿಯಮಗಳ ನಡುವೆ ತಿಕ್ಕಾಟ ಸಾವಿರ ಸಾವಿನ ಪ್ರತಿಫಲಕ್ಕೆ ನಡುರಾತ್ರಿ ದಕ್ಕಿದ ಸ್ವಾತಂತ್ರ್ಯಕ್ಕೆ ಶನಿಕಾಟ *******
ಶಿಕ್ಷಣ
ಮೌಲ್ಯಯುತ ಜೀವನಕ್ಕೆ ಶಿಸ್ತು ರಮೇಶ ಇಟಗೋಣಿ ಮೌಲ್ಯಯುತ ಜೀವನಕ್ಕೆ ಶಿಸ್ತು : ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಮುಂದೆ ಗುರಿ ಹಿಂದೆ ಗುರು ಇರಬೇಕು. ವಿದ್ಯೆಯನ್ನು ಅರ್ಥೈಸಿಕೊಂಡು ಕಲಿಯುವ, ಗ್ರಹಿಸುವ ಸಾಮರ್ಥ್ಯ ಸಂಪಾದಿಸುವವನೇ ವಿದ್ಯಾರ್ಥಿ. ಕಲಿಕಾರ್ಥಿಗೆ ಏಕಲವ್ಯನಂತಹ ಉತ್ಕಟವಾದ ಕಲಿಕೆಯ ಹಸಿವು ಇದ್ದಲ್ಲಿ ವಿದ್ಯೆಯನ್ನು ಒಲಿಸಿಕೊಳ್ಳುವುದು ಕಷ್ಟ ಆಗಲಾರದು. ಮಕ್ಕಳಾಗಿ ಕಲಿಯುವುದು ಎಷ್ಟು ಚಂದವೋ ಅಷ್ಟೇ ಗುರುವಾಗಿ ಕಲಿಸೋದು ಅಷ್ಟೇ ಅಂದವಾಗಿದೆ. ಸಾವಿರಾರೂ ಕಲ್ಲುಗಳನ್ನು ಸುಂದರವಾದ ಮೂರ್ತಿ ಮಾಡುವ ಬ್ರಹ್ಮ ಶಿಕ್ಷಕ. ಸ್ಟುಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್ ಆದರೆ ಟೀಚರ್ ಲೈಫ್ ಇಸ್ ಡೈಮಂಡ್ ಲೈಫ್. ಮಕ್ಕಳಲ್ಲಿ ಶಿಸ್ತನ್ನು ರೂಢಿಸುವ ಕಾರ್ಯ ಮನೆಯಿಂದಲೇ ಆರಂಭವಾಗಬೇಕು “ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು” ಎಂಬಂತೆ ಶಿಸ್ತಿನ ಪಾಲನೆ ಕೆವಲ ವಿದ್ಯಾರ್ಥಿ ಜೀವನದ ಭಾಗವಲ್ಲ ಈಡೀ ಜೀವನದುದ್ದಕ್ಕೂ ಶಿಸ್ತು ಒಂದು ಅವಿಭಾಜ್ಯ ಅಂಗ. “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬಂತೆ ಮಕ್ಕಳಿಗೆ ಶಿಸ್ತನ್ನು ಕಾದುಕೊಳ್ಳಲು ತಿಳಿ ಹೇಳುವುದು ಪಾಲಕರ ಕರ್ತವ್ಯವಾಗಿದೆ. ಶಿಕ್ಷಣದಿಂದ ಒಳ್ಳೆಯ ನಡತೆಯನ್ನು ಅಳವಡಿಸಿಕೊಳ್ಳುವುದೇ ಶಿಸ್ತು, ಶಿಕ್ಷೆಯೇ ಶಿಸ್ತಲ್ಲ ಶಿಕ್ಷೆಯಿಂದ ಮಾತ್ರ ಶಿಸ್ತು ರೂಢಿಸಿಕೊಳ್ಳಲು ಸಾಧ್ಯವಿಲ್ಲ. ಜೀವನದಲ್ಲಿ ಯಾವ ವಿದ್ಯಾರ್ಥಿ ಶಿಸ್ತು ಅಳವಡಿಸಿಕೊಳ್ಳುತ್ತಾನೆಯೋ, ಯಾರು ಶಿಸ್ತಿನ ಶಿಪಾಯಿಗಳಾಗಿ ಓದುತ್ತಾರೆಯೋ ಅಂತಹ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚುತ್ತದೆ ಅಂತವರು ಮಾತ್ರ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯ. ಶಿಕ್ಷಣ ಎಂದರೆ ಓದಿ ಉದ್ಯೋಗ ಗಿಟ್ಟಿಸಿಕೊಳ್ಳುವುದಲ್ಲ ನಿಮ್ಮಲ್ಲಿ ವ್ಯಕ್ತಿತ್ವವನ್ನು, ಮನುಷ್ಯತ್ವವನ್ನು, ಸಂಸ್ಕಾರವನ್ನು, ಉತ್ತಮ ಗುಣಗಳನ್ನು ಪಡೆಯುವುದೇ ಶಿಕ್ಷಣವಾಗಿದೆ. ವಿದ್ಯಾರ್ಥಿ ತನ್ನ ಜೀವನದಲ್ಲಿ ಗುರಿ ಸಾಧಿಸಬೇಕಾದರೆ ಕೆಲವೊಂದು ನಿಯಮ ಪಾಲಿಸಬೇಕಾಗುತ್ತದೆ. ಅದರಲ್ಲೂ ಶಿಸ್ತು ಮತ್ತು ಸಮಯಪ್ರಜ್ಞೆ, ಹಿರಿಯರನ್ನು ಗೌರವಿಸುವ ಗುಣ, ಸಂಯಮದ ನಡವಳಿಕೆಗಳು ಹೆಚ್ಚಾಗಬೇಕು ಇವುಗಳನ್ನು ಯಾರು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಾರೋ ಅಂತವರು ಜೀವನದಲ್ಲಿ ಏನಾದರೂ ಸಾಧನೆ ಮಾಡುತ್ತಾರೆ ಇಲ್ಲವಾದರೆ “ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ” ಎಂಬಂತೆ ಜೀವನದುದ್ದಕ್ಕೂ ಗೊಂದಲದಲ್ಲಿ ಉಳಿಯುತ್ತಾರೆ. “ಒಡೆದ ಮುತ್ತು ಕಳೆದ ಹೊತ್ತು” ಯಾವತ್ತೂ ತಿರುಗಿ ಬಾರದು ಎಂಬ ಮಾತಿನಂತೆ ಸಿಕ್ಕಂತ ಸಮಯವನ್ನು ಬಳಸಿಕೊಂಡು ಅವಕಾಶಗಳನ್ನು ಸೃಷ್ಟಿಸುತ್ತಾ ಹೋಗಬೇಕು. ಸಮಯ ಎಲ್ಲರಿಗೂ ಒಂದೇ ಅದನ್ನು ಅರಿತು ಹೆಜ್ಜೆ ಇಡುವುದು ಸಮಂಜಸ. ವಿದ್ಯಾರ್ಥಿಗಳಿಗೆ ಒಂದು ವರ್ಷದ ಮಹತ್ವ ತಿಳಿಯುವುದು ಪರೀಕ್ಷೆಯಲ್ಲಿ ಉತ್ತಿರ್ಣರಾದಾಗ ಮಾತ್ರ, ಸಿಕ್ಕ ಅವಕಾಶವನ್ನು ಆಯಾ ಸಮಯದಲ್ಲಿ ಸರಿಯಾಗಿ ಬೆಳೆಸಿಕೊಳ್ಳುತ್ತಾ ಶಿಸ್ತಿನ ಜೊತೆಗೆ ಸಾಧನೆಯು ನಿಮ್ಮನ್ನು ಬೆನ್ನಟ್ಟಿ ಬರುತ್ತದೆ. ಶಿಸ್ತು ಎಂದರೆ ಕೆಲವರ ಮನಸ್ಸಿಗೆ ನಿಯಂತ್ರಣ ಹಾಕಿಕೊಳ್ಳುತ್ತಾರೆ ಬದುಕಿನ ಇತಿಮಿತಿಗಳನ್ನು, ಎಲ್ಲೆಯನ್ನು ಹಾಕಿಕೊಳ್ಳುತ್ತಾರೆ ಸಂತೋಷದ ಎಲ್ಲ ವಿಚಾರಗಳಿಂದ ದೂರ ಇರುತ್ತಾರೆ ಇದು ಶಿಸ್ತು ಅಲ್ಲ. ಬದುಕಿನೊಂದಿಗೆ ಶಿಸ್ತು ರೂಢಿಸಿಕೊಳ್ಳುವುದೆಂದರೆ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಏಕಾಗ್ರತೆಯಿಂದ ತಮ್ಮೊಳಗಿನ ಶಕ್ತಿಯನ್ನು ಹರಿಬಿಡುವುದರ ಜೊತೆಗೆ ಇತರರ ಮಾತುಗಳಿಗೆ ಒಳಗಾಗದೇ ಕೆಟ್ಟ ಅಭ್ಯಾಸಗಳಿಗೆ ಬಲಿಯಾಗದೆ ಸರಿಯಾದ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದೇ ಶಿಸ್ತು. ಎಲ್ಲ ವಿದ್ಯಾರ್ಥಿಗಳ ಜೀವನದಲ್ಲಿ ಗುರುವಿನ ಪಾತ್ರ ಅಮೂಲ್ಯವಾದದ್ದು ಶಿಕ್ಷಕರು ಕೂಡಾ ಒಬ್ಬ ನಿರಂತರ ವಿದ್ಯಾರ್ಥಿಯಾಗಿ ಬಹಳ ವಿಚಾರಗಳನ್ನು ವಿದ್ಯಾರ್ಥಿಗಳಿಂದ ಕಲಿತುಕೊಳ್ಳುತ್ತಾರೆ. ತಮ್ಮಲ್ಲಿರುವ ಎಲ್ಲ ಒಳ್ಳೆಯ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಬಿತ್ತರಿಸಿ ಮೌಲ್ಯಯುತ ಮೂರ್ತಿಯನ್ನಾಗಿ ರೂಪಿಸುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಪ್ರೀತಿಸಿ, ಬೋಧಿಸಿ ಒಳ್ಳೆಯ ಮೌಲ್ಯ ತುಂಬಿ ನಿಸ್ವಾರ್ಥ ಸೇವೆ ಸಲ್ಲಿಸುವಲ್ಲಿ ಶಿಕ್ಷಕರದು ಒಂದು ಕೈ ಮೇಲೆ ಇರುತ್ತದೆ. “ಹರ ಮುನಿದರೂ ಗುರು ಮುನಿಯಲಾರ” ಎಂಬ ಮಾತಿನಂತೆ ಅಂತಹ ಪ್ರತಿಯೊಬ್ಬ ಗುರುವಿಗೂ ನನ್ನ ಅನಂತಕೋಟಿ ನಮನಗಳು. *****************************
ಅವ್ಯಕ್ತಳ ಅಂಗಳದಿಂದ
ದೌರ್ಬಲ್ಯ-ಸಾಮರ್ಥ್ಯ -2 ಅವ್ಯಕ್ತ ನನ್ನ ಹಿಂದಿನ ಕಥೆಯಲ್ಲಿ ಹೇಳಿದ ರೀತಿ ನಮ್ಮ ದೃಷ್ಟಿಕೋನ ದಲ್ಲಿ ಬದಲಾವಣೆಯಾದಂತೆ ನಮ್ಮ ದೌರ್ಬಲ್ಯಗಳು ನಮ್ಮ ಸಾಮರ್ಥ್ಯಗಳಾಗಿ ಬದಲಾಗುತ್ತವೆ….. ಇದಕ್ಕೆ ಅಂಟಿಕೊಂಡಂತೆ ಇನ್ನೊಂದು ಕಥೆಯನ್ನು ಎಳೆ ಎಳೆಯಾಗಿ ಬಿಡಿಸಿ ತಿಳಿದುಕೊಳ್ಳಲು ಪ್ರಯತ್ನಿಸೋಣ… ಸಾಮಾನ್ಯವಾಗಿ ಮಕ್ಕಳು ಅಥವಾ ಕೆಲವು ದೊಡ್ಡವರು ತಮಗೆಲ್ಲ ತಿಳಿದಿದೆ ಎಂದು ಪ್ರತಿಯೊಂದು ಘಟನೆಯನ್ನು ಪ್ರತಿಯೊಬ್ಬರನ್ನು ಸರಿ-ತಪ್ಪುಗಳಲ್ಲಿ, ಒಳ್ಳೆಯದು-ಕೆಟ್ಟದ್ದು ಗಳಲ್ಲಿ ತೂಗಿ ತಮ್ಮ ಹಳೆಯ ಅನುಭವಗಳ ಮೇರೆಗೆ ಅವರದೇ ಆದ ಒಂದು ದೃಷ್ಟಿಕೋನವನ್ನು ಮಾಡಿಕೊಂಡು ಬಿಡುತ್ತಾರೆ.. ಅವರಿಗೆ ಅದೇ ಸರಿ…ಈ ನಿಟ್ಟಿನಲ್ಲಿ ನನ್ನ ಮಕ್ಕಳಲ್ಲಿಯೂ ಕೂಡ ಇದು ಕಂಡುಬಂತು… ಆ ದಿನ ನಾನು ಹೇಳಿ ಕೊಟ್ಟಿದ್ದೇನೋ ಹೌದು ನಮ್ಮ ಗುಣಗಳನ್ನು ನಾವು ತಿಳಿದುಕೊಂಡರೆ, ಅದು ನಮ್ಮ ಸಾಮರ್ಥ್ಯವಾಗಿ ಬಿಡುತ್ತವೆ…. ಆದರೆ ಎಲ್ಲೋ ಇದು ಅರ್ಧ ಸತ್ಯವಾಗಿತ್ತು. ಅದನ್ನು ಸಮಾಜದ ದೃಷ್ಟಿಯಿಂದಲೂ ಹೇಳಿಕೊಡಬೇಕಾದ ಅಗತ್ಯತೆ ಇತ್ತು… ಇದಕ್ಕೆ ಪೂರಕವಾಗಿ ಒಂದು ಹುಡುಗಿ ನನ್ನ ಬಳಿಗೆ ಬಂತು ‘ಮಿಸ್ ಮಿಸ್ಆವತ್ ಹೇಳಿದ್ದೇನೋ ನಿಜ! ನಾವು ಹೇಗಿದ್ದೇವೆ ಅದನ್ನು ಒಪ್ಪಿಕೊಂಡರೆ ನಮಗೆ ನೋವಾಗುವುದಿಲ್ಲ. ಆದರೂ ಏಕೆ ಸಮಾಜದಲ್ಲಿ ಕೆಲವೊಂದನ್ನು ಎತ್ತಿಹಿಡಿಯುತ್ತಾರೆ ?…’ ಅವಳ ಮಾತು ಕೇಳಿ ನನಗೆ ಅಯ್ಯೋ ಎನಿಸಿತು, ಹೌದಲ್ವಾ ಇದರಲ್ಲಿ ಸಮಾಜದ ಜವಾಬ್ದಾರಿಯನ್ನು ತಿಳಿಸಿ ಹೇಳೋಣ.. ಇವತ್ತಿನ ಕ್ರಿಯೆ ನನ್ನದು ಸ್ವಲ್ಪ ವಿಚಿತ್ರವಾಗಿತ್ತು, ಪ್ರತಿಯೊಂದು ಮಗುವಿನ ದೌರ್ಬಲ್ಯವು ನನಗೆ ಗೊತ್ತಿತ್ತು.. ಬೇಕಂತಲೇ ಅದನ್ನು ಎತ್ತಿ ಹಿಡಿದು ಹೀಯಾಳಿಸಿ ಬಿಟ್ಟೆ.. “ಏನೇ ಡುಮ್ಮಿ ಕೊಟ್ಟ ಕೆಲಸ ಮಾಡಿದ್ಯಾ, ಇಲ್ಲ ಬರೀ ತಿಳ್ಕೊಂಡೆ ಕೂತಿದ್ಯಾ”……“ಕೋಳಿ ಅಳುಬುರುಕಿ ಕೆಲಸ ಮುಗಿಸು ಆಮೇಲೆ ಕಾವೇರಿಯ ಹೊಳೆ ತುಂಬಿಸುವಂತೆ”…. “ಏ ಕುಳ್ಳ , ನೋಡಲಿಕ್ಕೆ ಮಾತ್ರ ಕುಳ್ಳ ಬರೀ ಕುಚೇಷ್ಟೆ ಪ್ರತಿಷ್ಠೆ ನಿನ್ನದು ಸುಮ್ಮನೆ ಕೂತು ನಿನ್ನ ಕೆಲಸ ಮಾಡು ಹುಂಬ”…. ಐದೇ ನಿಮಿಷದಲ್ಲಿ ಮಕ್ಕಳ ಮುಖಗಳೆಲ್ಲ ಚಪ್ಪೆಯಾಗಿ ಹೋದವು… ನಾನು ಮನಸ್ಸಿನಲ್ಲಿ ನಗಾಡಿ ಕೊಳ್ಳುತ್ತಾ….ಆ ದಿನದ ಕೊನೆ ಬರುವವರೆಗೂ ಅವರುಗಳನ್ನು ಗೊಂದಲದಲ್ಲಿಯೇ ಬಿಟ್ಟುಬಿಟ್ಟೆ…. ನನಗೆ ಗೊತ್ತು ಸುಲಭವಾಗಿ ಬಾಯಲ್ಲಿ ಹೇಳಿದ ನೀತಿ ಮಕ್ಕಳ ತಲೆಗೆ ಹತ್ತುವುದಿಲ್ಲ ಕ್ರಿಯೆಯಲ್ಲಿ ಮಾಡಿತೋರಿಸಿದರೆ ಮಾತ್ರ ಹತ್ತರಲ್ಲಿ ಐದು ಜನಕ್ಕಾದರೂ ಉಳಿದುಕೊಳ್ಳುತ್ತದೆ….ದಿನದ ಕೊನೆಯಲ್ಲಿ ಮಕ್ಕಳಲ್ಲಿ ಕೇಳಿದೆ, ಹೇಗಿತ್ತು ಇವತ್ತು ನನ್ನ ಮಾತಿನ ಶೈಲಿ ವೆರಿ ಸ್ಟ್ರಾಂಗ್ ಅಲ್ವಾ….. ಎಲ್ಲರೂ ಸಪ್ಪೆಯಾಗಿ ಸ್ವಲ್ಪ ಹೊತ್ತು ಕೂತರು ನಂತರ ಅದರಲ್ಲಿ ಒಬ್ಬಳು ‘ಮಿಸ್ ನೀವ್ ಇವತ್ತು ಹೀಗೆ ಮಾತನಾಡಬಾರದಿತ್ತು. ಯಾಕೆ ಅವಳನ್ನು ಹೀಯಾಳಿಸಿದಿರಿ, ಅವಳಿಗೆ ನೋವಾಗುವುದಿಲ್ಲ ವೇ?’ ಎಂದು ಕೇಳಿಯೇ ಬಿಟ್ಟಳು… ನನಗೂ ಬೇಕಿದ್ದದು ಅವೇ ತಾನೇ…. ನಾನು ಹೇಳಿದೆ ‘ಹೌದು ಬೇಕಂತಲೇ ಹೀಗೆ ಮಾಡಿದೆ.ಕೆಲವು ದಿನಗಳ ಕೆಳಗೆ ನಮ್ಮ ದೌರ್ಬಲ್ಯವನ್ನು ನಾವು ಸಾಮರ್ಥ್ಯ ವಾಗಿ ಹೇಗೆ ಉಳಿಯಬಹುದು ಎಂದು ತಿಳಿಸಿಕೊಟ್ಟಿದೆ, ಇವತ್ತು ಬೇರೆಯವರ ದೌರ್ಬಲ್ಯಗಳ ಕಡೆಗೆ ನಮ್ಮ ದೃಷ್ಟಿಕೋನ ಹೇಗಿರಬೇಕು ಹಾಗೂ ನಮ್ಮ ಜವಾಬ್ದಾರಿ ಏನು ಹೇಳಿ ನೋಡೋಣ??’ಎಲ್ಲರೂ ಯೋಚಿಸತೊಡಗಿದರು, ನನಗೆ ಗೊತ್ತಿತ್ತು ಅಷ್ಟು ಸುಲಭವಾಗಿ ಇವರು ಗ್ರಹಿಸಿರಲಿಕ್ಕಿಲ್ಲಾ… ಇನ್ನೊಬ್ಬರಿಗೆ ದೈಹಿಕವಾಗಿ ನಾವು ಹೊಡೆಯುವುದು ಜಿಗುಟುಗಳು ಎಷ್ಟು ಸರಿಯಲ್ಲವೋ ಹಾಗೆ ಇನ್ನೊಬ್ಬರ ಮನಸ್ಸಿಗೆ ನೋವಾಗುವಂತಹದನ್ನು ಮಾತನಾಡುವುದು ತಪ್ಪು, ಇದರಲ್ಲಿ ಅವರ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದಾದರೆ ಎಂದಿಗೂ ಹಾಗೆ ಮಾಡಬಾರದು…’ಆತ್ಮೀಯ ಸ್ನೇಹಿತರು ಹೀಗೆ ಅಡ್ಡ ಹೆಸರು ಇಟ್ಟು ಕರೆಯಬಹುದು ಅಲ್ಲವೇ’ ಎಂದು ಇನ್ನೊಬ್ಬ ಕೇಳಿದ.. ನಮಗೆ ಆತ್ಮೀಯ ವಾದವರು ನಮ್ಮ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ಸಮಾಜದ ಎದುರು ವರ್ತಿಸುವುದಿಲ್ಲ, ಹಾಗಾದರೆ ಮಾತ್ರ ಅವರು ನಮ್ಮ ನಿಜವಾದ ಆತ್ಮೀಯರು, ನಾವು ನಾವು ಇರುವಾಗ ಎಷ್ಟು ಸಲಿಗೆಯ ಮಾತನಾಡಿದರು, ಮುಕ್ತವಾಗಿ ತರಲೆ ಹೊಡೆದರೂ ಹತ್ತಾರು ಜನಗಳ ಎದುರು ಅವರ ಗೌರವ ಪ್ರೀತಿ ಎಷ್ಟು ಮುಖ್ಯವೋ ಅಷ್ಟೇ ಆತ್ಮೀಯರ ಗೌರವ ಪ್ರೀತಿಯನ್ನು ಕಾಪಾಡುತ್ತಾರೆ…ಇಲ್ಲವಾದರೆ ಅವರು ನಿಮ್ಮ ಪರಮಾಪ್ತರು ಅಲ್ಲವೇ ಅಲ್ಲ… ಇದು ಮಾತ್ರ ನಿಜವಾದ ಸಂಬಂಧ ವಾಗಿರುತ್ತದೆ, ನೆನಪಿನಲ್ಲಿಡಿ ಮಕ್ಕಳೇ ಎಂದೆ. ಸಮಾಜದ ಒಳಿತಿಗೆ, ಅದರ ಆರೋಗ್ಯಕರ ಬೆಳವಣಿಗೆಗೆ ಪ್ರತಿಯೊಬ್ಬನಿಗೂ ಸಾಮಾಜಿಕ ಜವಾಬ್ದಾರಿ ಇರಬೇಕು. **********************************
ಕಾವ್ಯಯಾನ
ಅದಿಂಬಾದೊಳು ರೇಖಾ ವಿ.ಕಂಪ್ಲಿ ಅಪಸ್ವರವು ಹಾಡುತಿದೆ ಧ್ವನಿಯ ಗೂಡಿನೊಳು ಇಂದುಮಂಡಲದಿಂ ಬೆಳಕಿಲ್ಲದ ಅಂಗಳದೊಳು ಉಪರೋಚಿತ ಮನದಿಂ ಉಪಾದಿ ಕನಸೊಳು ಋತುಮಾನದ ತಾಡನವಿಲ್ಲ ಕಾಲಮಾನದೊಳು ಎಕ್ಕತಾಳಿ ಎಡಬಿಡಂಗಿ ಕೊಡಂಗಿ ಎಡೆಸೆಳೆಯೊಳು ಒಡಕಲು ಗೆಳೆತನದ ಹಸಿಮುಸಿ ಬಂಧದೊಳು ಕಗ್ಗಾಡಿನಲಿ ಹೆದ್ದಾರಿಯ ಬಯಸುತ ಮಬ್ಬಿನೊಳು ಗವಯ ಯಾನ ಯಾವುದೆಂದು ಅರಿಯಲ್ಕೆಯೊಳು ಚಕ್ರಬಂಧದಲಿ ಅಕ್ಷರಗಳ ಸುಳಿ ಕಾಣಿಸದೊಳು ಜಡಮತಿಯು ಕವಿದ ಜಗದ ನಿಯಮದೊಳು ಟಂಕಾರವಿಹುದೆ ಬಿಲ್ಲು ಬಾಣಗಳಿಲ್ಲದೊಳು ಡಂಬಕ ದೇಹ ಅಲಂಕಾರ ಬಿನ್ನಾ ವೈಯಾರದೊಳು ತಡಕಾಡಿಹೆ ಎಲ್ಲಾ ನಶಿಸಿದ ಬಳಿಕವೂ ಅದರೊಳು ದಂಡನೀತಿ ಎಸೆದಿಹೆವು ಲೋಕಪಾಪದೊಳು ಪಕ್ಕಣದ ಬೀದಿಯಲಿ ಹುಡುಕುತ ನ್ಯಾಯದೊಳು ಬಂಜೆಪಡಿಸಿಹೆವು ಧಮ೯ ಮತಾಂಧದೊಳು…… ********
ಕಾವ್ಯಯಾನ
ಮತ್ತೆ ನೀನು ಔಷಧಿಯಾಗು ಮೂಗಪ್ಪ ಗಾಳೇರ ಮತ್ತೆ ನೀನು ಔಷಧಿಯಾಗು ನನ್ನ ಬಿಟ್ಟು ಹೋದ ಮೇಲೆ ಒಳ್ಳೆಯ ದಿನಗಳು ಬರಬಹುದೆಂದಿನಿಸಿರಬಹುದು ನಿನಗೆ ಸತ್ಯಶೋಧನೆಯ ಹಾದಿಯಲ್ಲಿ ಪ್ರೀತಿಯ ಅದೆಷ್ಟೋ ಕನಸುಗಳು ಸತ್ತು ಸ್ವರ್ಗಕ್ಕೂ ಸೇರದೆ ನರಕಕ್ಕೂ ನಿಲುಕದೆ ಬೇತಾಳ ಗಳಂತೆ ನಿನ್ನ ನೆನಪಿನ ಹಿಂದೆ ಸುತ್ತ ಬಹುದೆಂಬ ಒಂದಿಷ್ಟು ಅರಿವಿರಬಾರದೆ……. ಪ್ರೀತಿಯನ್ನು ಹುಡುಕುತ್ತಾ ಹೋಗುತ್ತೇನೆ ಎಂಬುವುದು ಹುಡುಗಾಟದ ವಿಚಾರವಲ್ಲ……… ಯಾಕಾದರೂ ನೀನು ನನ್ನ ಅರ್ಧ ದಾರಿಯಲ್ಲಿ ಕೈ ಬಿಟ್ಟು ಹೋದೆನೆಂದು ಮರುಗುವ ದಿನಗಳು ಬರಲು ದೂರವಿಲ್ಲ…… ಹೃದಯದ ಒಳ ಕೋಣೆಯಲ್ಲಿ ಜಡಿದ ಸರಳುಗಳಿಗೆ ಬರೀ ನಿನ್ನ ಪ್ರೀತಿಯದ್ದೆ ಚಿಂತೆ………. ನಾನೆಂದು ತುಟಿಗಳಿಗೆ ವಿಷ ಮೆತ್ತಿಕೊಂಡು ಮಾತನಾಡಿದವನಲ್ಲ…….. ನಿನ್ನ ಮುಡಿಗೆ ನಕ್ಷತ್ರಗಳನ್ನು ಮುಡಿಸುವೆನೆಂದೇಳಿದ ಮೂರ್ಖನಲ್ಲ…..! ಒಂದಂತೂ ನಿಜ ಚಂದಿರನಿಲ್ಲದ ಅಮಾವಾಸ್ಯೆ ಕತ್ತಲಲ್ಲಿ ನನ್ನ ಪ್ರೀತಿ ನಿನಗೆ ಹೇಳುವಾಗ ಸೂರ್ಯ ಚಂದ್ರ ಅಷ್ಟೇ ಏಕೆ ನಕ್ಷತ್ರಗಳು ನಾಚಿ ರಜೆ ಯಾಕೆ ಕುಳಿತಿದ್ದ ನೆನಪುಗಳಷ್ಟೆ ನನಗೀಗಾ……. ಮರಳಿ ಬಾ ಗೆಳತಿ ಲೆಕ್ಕಕ್ಕೆ ಸಿಗದ ಕನಸುಗಳಿಗೆ ಹುಚ್ಚು ಹರೆಯದ ದಿನಗಳಿಗೆ ಮೈಚಾಚಿ ಮಲಗಿಕೊಂಡಿದ್ದ ಮೌನಕ್ಕೆ ಮತ್ತೆ ನೀನು ಔಷಧಿಯಾಗು…….. *********
ಕಾವ್ಯಯಾನ
ಹನಿಮೂನ್ ಗಿರೀಶ ಜಕಾಪುರೆ, ಮೈಂದರ್ಗಿ ಹನಿಮೂನ್ ಈ ಬಿಕನಾಶಿ ಚಂದ್ರನಿಗೆ ಬುದ್ಧಿಯಿಲ್ಲ ಸುರಿಯುತ್ತಾನೆ ವಿರಹದ ಅಗ್ನಿಗೆ ತುಪ್ಪ..! ಲಾಲ್‌ಬಾಗ್‌ಗೆ ಹೊರಟಿದ್ದವು ಎರಡು ಹಕ್ಕಿಗಳು ಹನಿಮೂನ್‌ಗೆಂದು ಸಮುದ್ರತೀರದ ಕಾಂಕ್ರೀಟ್ ಕಾಡಿನಿಂದ, ಒಂದೇಸಮನೆ ಧಾವಿಸುತ್ತಿತ್ತು ಎದೆಯಲ್ಲಿ ನಿಗಿನಿಗಿ ಕೆಂಡವಿರಿಸಿಕೊಂಡು ಉಸಿರಿನಿಂದ ಬಿಸಿಹೊಗೆ ಚಿಮ್ಮುವ ಉಗಿಬಂಡಿ.., ನಾನೋ ಅಲೆಮಾರಿ, ಹತ್ತಿದೆ ರೈಲು ಅವಳು ನನ್ನ ತೊರೆದುಹೋದ ನಿಲ್ದಾಣದಲಿ ಕಾಲಿಡಲೂ ಅವಕಾಶವಿರದಷ್ಟು ರಶ್ಶು ಆದರೂ ನನಗೆ ರೈಲಿನ ಮೇಲೆ ಏನೋ ಕ್ರಶ್ಶು ಅವರು ಇಬ್ಬರು, ಎರಡು ಬರ್ಥಗಳು ನಾನು ಎಂದಿನಂತೆಯೇ ವೇಟಿಂಗ್ ಲಿಸ್ಟು..! ಗಮನಿಸಿದೆ.. ಅವಳ ಅಂಗೈ ಮದರಂಗಿ ಚೂರೂ ಮಾಸಿಲ್ಲ ಅವನ ಕಣ್ಣಲಿ ಮಿಲನದ ಉಮೇದು.. ಆದರೂ ಯಾವುದೋ ಸಣ್ಣ ವಿಷಯ, ಪುಟ್ಟ ತಕರಾರು ಹುಸಿ ಹುಸಿ ಮುನಿಸು, ಏನೋ ಸ-ವಿರಸ..! ಈ ಕೊರೆಯುವ ಚಳಿಯ ಎದುರಿಗೆ ಎಷ್ಟು ಹೊತ್ತು ನಿಲ್ಲುತ್ತದೆ ವಿರಹ?..? ಚುಕ್ಕೆಗಳು ಢಾಳಾಗುವ ಹೊತ್ತಿಗೆ ಆತ : ‘ಸರ್, ನೀವು ಮೇಲಿನ ಬರ್ಥಲಿ ಮಲಗಿ ನಾವಿಬ್ಬರೂ ಒಂದರಲ್ಲಿ ಅಡಜೆಸ್ಟ್ ಆಗ್ತೀವಿ’ ಎಂದ ನನಗೂ ಅದೇ ಬೇಕಿತ್ತು ಕಾಲು ಚಾಚಿದರೆ ಸಾಕಿತ್ತು ಇಡೀರಾತ್ರಿ ಆ ಹಕ್ಕಿಗಳು ತಬ್ಬಿ ಮಲಗಿದ್ದವು ಕೆಳಗಿನ ಬರ್ಥನಿಂದ ಹೊಮ್ಮುತ್ತಿತ್ತು ಹಿತವಾದ ಶಾಖ..! ಅಗ್ಗಿಷ್ಟಿಕೆಯ ಝಳ..! ಹೌದು, ನನ್ನ ಕನಸಲ್ಲೂ ಬಂದಿದ್ದಳು ಅವಳು ನಾನು ಮುನಿದು, ಮರೆತು ಬಂದಿದ್ದ ಕಶ್ಮೀರಿ ಶಾಲು ಕೊಟ್ಟು ಹೋದಳು ಇಡೀ ರಾತ್ರಿಗಾಗಿ ಮುತ್ತು ಬಿಟ್ಟುಹೋದಳು ಬೆಳಗೆದ್ದು ಕಣ್ಣುಜ್ಜುತ್ತ ನಾನು ಆ ಹಕ್ಕಿಗಳಿಗೆ ಹೇಳುವುದಕ್ಕೂ ಮುನ್ನವೇ ಅವೇ ಒಕ್ಕೊರಲಿನಿಂದ ಮಧುವಾಗಿ ಉಲಿದವು ‘ಥ್ಯಾಂಕ್ಸ್’ ಈಗ ಗೊಂದಲದಲ್ಲಿದ್ದೇನೆ ನಾನು ಹೇಳಬೇಕು ಎಂದಿದ್ದ ಥ್ಯಾಂಕ್ಸ್ ಈಗ ಯಾರಿಗೆ ಹೇಳಲಿ? ಮುಗಿಲಲಿ ನೋಡಿದರೆ ಚಂದ್ರನೂ ಇಲ್ಲ..! ಥೂ.. ಈ ಬಿಕನಾಶಿ ಚಂದ್ರನಿಗೆ ಬುದ್ಧಿಯೇ ಇಲ್ಲ ಸುರಿಯುತ್ತಾನೆ ವಿರಹದ ಅಗ್ನಿಗೆ ಜೇನು-ತುಪ್ಪ..!..! **********
ಕಾವ್ಯಯಾನ
ಮೌನ ಮತ್ತು ಕವಿ ಕೊಟ್ರೇಶ್ ಅರಸಿಕೆರೆ ಅದು ಹಾರಾಡುವ ರೀತಿಗೆ, ರೆಕ್ಕೆಗಳಿವೆ ಎಂಬ ಖುಷಿಗೆ , ಮನ ಸೋತಿದ್ದೆ ಆ ಚಿಟ್ಟೆಗೆ! ಇತ್ತೀಚೆಗೆ….. ಯಾಕೋ ಕಿರಿಕಿರಿ ಎನಿಸಿತು ಭಾರೀ ಶಬ್ದ ಎಂದೆನಿಸಿತು; ಮೌನ ನಾಶಮಾಡುತ್ತಿದೆ ಅನಿಸಿತು ಈಗ ಸರಿಯಾಗಿ ನೋಡಲೆತ್ನಿಸಿದೆ ಚಮಕ್ ಬೆಳಕಿಗೆ ಅದು ಆಕರ್ಷಿತ ಆಗುತ್ತಿತ್ತು! ನೋಡಿದೆ…ಪರಿಶೀಲಿಸಿದೆ…ಅಯ್ಯೋ ಅದು ಏರೋಪ್ಲೇನ್ ಚಿಟ್ಟೆ!! ಮೌನ ಅರಿಯದ ಕವಿಯೊಬ್ಬ ಕವಿಯೇ? ವರ್ತಮಾನಕ್ಕೆ ಸ್ಪಂದಿಸುವ ನೆಪ ಎಷ್ಟೆಲ್ಲಾ ಕೂಳತನ! ಹಡೆದವ್ವನ ಝಾಡಿಸಿ ಒದೆಯುವ ದುಷ್ಟತನ!! ಆಗ…. ಕವಿಯೊಬ್ಬ ಹಾಡಿದನೆಂದರೆ ದೇಶವೇ ರೋಮಾಂಚನ; ರೋಮ ರೋಮಗಳಲ್ಲಿ ದೇಶ ಪ್ರೇಮ! ದಾಂಪತ್ಯ, ಸಹಜೀವನ ಪವಿತ್ರ ಪ್ರೇಮ! ಈಗ…. ವಂಚನೆ,ಕೂಳತ್ವ…. ರೋಮ ರೋಮಗಳಲ್ಲಿ ಅಪವಿತ್ರ ಪ್ರೇಮ,ಅನೈತಿಕತೆ ಮೌನವೆಲ್ಲಾ ಮಲಗಿ ಬಿಟ್ಟಿದೆ; ತಣ್ಣನೆಯ ಶವದ ಹಾಗೆ! ಕವಿ ಅರಚುತ್ತಿದ್ದಾನೆ…. ರಾಕ್,ಪಾಪ್… ನಾಚಿಕೆ ಬಿಟ್ಟಂತೆ ದೇಹವನ್ನೆಲ್ಲಾ ಹರಾಜಿಗಿಟ್ಟಿದ್ದಾನೆ ತನ್ನ ತಾ ಮಾರಿ ಕೊಳ್ಳುತ್ತಾ……! ಸದ್ದಿಗೆ ಇಲ್ಲಿ ಯಾರೂ ಬೆಲೆ ಕೊಡರು ಎಂಬುದ ಮರೆತು! ಇಥದನೆಲ್ಲಾ ಧಿಕ್ಕರಿಸಿಯೂ ಅಲ್ಲಲ್ಲಿ…. ಮೌನ,ಕಾಯಕ ಅರಿತ ಚಿಟ್ಟೆಗಳು ಹೂವಿನಿಂದ ಹೂವಿಗೆ ಹಾರಿ ಮಕರಂದ ಹೀರುತ್ತಾ,ಕೊಡುತ್ತಾ ತೆಗೆದು ಕೊಳ್ಳುತ್ತಾ ಪವಿತ್ರ ಪ್ರೇಮ ಬಂಧನ ನಿರ್ಮಿಸುತ್ತಿವೆ ಸದ್ದಿಲ್ಲದೆ! ********
ಕಾವ್ಯಯಾನ
ಹೆರಳನ್ನೊಮ್ಮೆ ಬಿಚ್ಚಿಬಿಡು ವಿಜಯಶ್ರೀ ಹಾಲಾಡಿ ಆ ಬೆಚ್ಚನೆ ರಾತ್ರಿಗಳಲ್ಲಿಈ ತಣ್ಣನೆ ಹಗಲುಗಳಲ್ಲಿನಿನ್ನ ಪಾದಕ್ಕೆ ತಲೆಯೂರಿಮಲಗಿದ ಬೆಕ್ಕನ್ನೊಮ್ಮೆನೋಡು …. ಕರುಣೆಯ ಕತ್ತಲುಹಣ್ಣುತುಂಬಿದ ಮರಹಗುರ ತುಂಬೆ ಹೂ..ಹೆರಳನ್ನೊಮ್ಮೆ ಬಿಚ್ಚಿಬಿಡು ಸುತ್ತುವ ಭೂಮಿಯನ್ನುನಿಲ್ಲಿಸು ಅಥವಾಮತ್ತಷ್ಟು ವೇಗವಾಗಿಸುತ್ತಿಸುಹೊಸ ಹೆಜ್ಜೆಕಚ್ಚಿಕೊಳ್ಳಬೇಕಿದೆ ನಿಹಾರಿಕೆ ಉಲ್ಕೆಗಳುಸಾಗರ ಸುನಾಮಿಗಳುಅಪ್ಪಳಿಸಲಿಇಲ್ಲವೇಬ್ರಹ್ಮಾಂಡದಾಚೆಕರೆದೊಯ್ಯಲಿ …. ಮಧುಶಾಲೆಗೂ ನನಗೂಸಂಬಂಧವಿಲ್ಲನೋವನ್ನೇ ಬಟ್ಟಲಿಗಿಳಿಸಿಗಟಗಟನ ಕುಡಿಯುತ್ತಿದ್ದೇನೆ ………! *******************
ನಿಮ್ಮೊಂದಿಗೆ
ಕವಿ-ಕವಿತೆ ಕುರಿತು ವಿಜಯಶ್ರೀ ಹಾಲಾಡಿ ಗೆಳೆಯರೆ, ಕವಿತೆಗಳಿಗಿದು ಕಾಲವಲ್ಲವೆಂದು ಹೇಳುತ್ತಲೇ ತಮ್ಮ ಕವಿಪಟ್ಟಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತಿರುವ ಪ್ರಭಾವಿಗಳ ಕಾಲದಲ್ಲಿಯೂ ನಮ್ಮ ಹೊಸ ಕವಿಗಳು ಇನ್ನಿರದ ಉತ್ಸಾಹದಿಂದ ಕವಿತೆಗಳನ್ನುಬರೆಯುತ್ತಲೇ ಇದ್ದಾರೆ. ಬಹುಶ: ಮೂರು ವರ್ಷಗಳ ಹಿಂದೆ ನೆಚ್ಚಿನ ಕವಿಯಿತ್ರಿ ವಿಜಯಶ್ರೀ ಹಾಲಾಡಿಯವರು ಬರೆದ ಈ ಪುಟ್ಟ ಟಿಪ್ಪಣಿ ಇವತ್ತಿಗೂ ಪ್ರಸ್ತುತವಾಗಿದೆ ಹೊಸ ಕವಿಗಳು ಯಾವ ಗೊಂದಲವೂ ಇರದೆ ಬರೆಯಲು ಈ ಮಾತುಗಳು ಸ್ಪೂರ್ತಿಯಾಗಬಹುದೆಂದು ನಾನು ನಂಬಿದ್ದೇನೆ.ಅದಕ್ಕಾಗಿ ಹಾಲಾಡಿಯವರ ಈ ಬರಹ ನಿಮ್ಮ ಓದಿಗಾಗಿ. ಕು.ಸ.ಮದುಸೂದನ ಬರೆಹಗಾರರಲ್ಲಿ ೩ ವರ್ಗ. ೧.ಪ್ರತಿಭಾವಂತರು-ಹಲವು ವರ್ಷಗಳಿಂದ ತಪಸ್ಸಿನಂತೆ ಸಾಮಾಜಿಕ ಕಾಳಜಿಯಿಂದ ಬರೆಯುತ್ತ ತಮ್ಮದೇ ಛಾಪು ಒತ್ತಿ ಗುರುತಿಸಿಕೊಂಡವರು (ಇವರ ಕುರಿತು ಒಂದು ಸಣ್ಣ ಶಬ್ದ ಮಾತಾಡಲೂ ನಾನು ಅನರ್ಹಳು. ನಿಮಗೆ ನನ್ನ ಗೌರವ) ೨.ಪ್ರಭಾವಿಗಳು ೩.ಸಾಮಾನ್ಯರು. ಪ್ರಭಾವಿಗಳನ್ನು ‘ಕವಿ ‘ಗಳೆಂದು ಎಲ್ಲರೂ ಕರೆಯುತ್ತಾರೆ, ಸಾಮಾನ್ಯ ರು ಪಾಪ ಏನು ಬರೆದರೂ, ಎಷ್ಟು ಬರೆದರೂ ಅಷ್ಟೇ. ಅವರ ಅಸ್ತಿತ್ವವೇ ಸಾಹಿತ್ಯಲೋಕಕ್ಕೆ ಹೊರೆ, ಇರಲಿ. ‘ಕವಿತೆ ‘ಗಳ ವಿಷಯಕ್ಕೆ ಬರುವ. “ಪದ್ಯ ಬೇಡ ಗದ್ಯ ಇದ್ರೆ ಕೊಡಿ ಚೆನ್ನಾಗಿದ್ರೆ ಪ್ರಕಟಿಸುವ “ಎಂಬ ಮಾತು ಹಲವರನ್ನು ಕಕ್ಕಾಬಿಕ್ಕಿಯಾಗಿಸುತ್ತದೆ. ಬಾಲ್ಯದಿಂದ ಈವರೆಗೆ ಪದ್ಯಗಳನ್ನೇ ಬರೆದವರು ಹಲವರು. ಅವನ್ನೇ ಮಗುವಿನಂತೆ ಕಾಪಾಡಿಕೊಂಡು ಬಂದವರು. ಈಗ ಏಕಾಏಕಿ ಅವುಗಳಿಗೆ ಬೆಲೆಯೇ ಇಲ್ಲವಾಗಿದೆ! ! ಜಾಳು ಜಾಳು ಪದ್ಯ ಬರೆದೂ ತಮಗಿರುವ ಪ್ರಭಾವದ ಪ್ರಭಾವಳಿಯಿಂದ ಮೆರೆಯುತ್ತಿರುವ ಕೆಲವರ ಪೆನ್ನು ಸದ್ಯ ಮೊಂಡಾಗಿದ್ದರೂ ಇವತ್ತಿಗೂ ಅವರು “ಕವಿಗಳು! “. ಆದರೆ ಬರೆದೂ ಬರೆದೂ ಇನ್ನೂ ಬರೆಯುತ್ತಲೇ ಇರುವ ಹಲವರು ತಲೆಕೂದಲು ಹಣ್ಣಾದರೂ ಅವರನ್ನು ತಿರುಗಿ ನೋಡುವವರೂ ಇಲ್ಲ! ಸೌಜನ್ಯ, ಸಂಕೋಚ, ನಾಚಿಕೆ …ಮುಂತಾದುವನ್ನೆಲ್ಲ ಬದಿಗಿಟ್ಟು ಇನ್ನಾದರೂ ಇದನ್ನೆಲ್ಲ ಒಂಚೂರು ಪ್ರಶ್ನಿಸುವ ಸ್ನೇಹಿತರೆ …ನಮನಮಗೆ ನಾವು ನಾವೇ ;ಇಲ್ಲಿ ಯಾರಿಗೆ ಯಾರೂ ಇಲ್ಲ. ಚಂದದ ಸಮಾನತೆಯ ಮಾತುಗಳೆಲ್ಲ ವೇದಿಕೆಗೆ ಮಾತ್ರ ಸೀಮಿತ. ಕವಿತೆಗೆ “ಬೆಲೆಯಿಲ್ಲದ ” ಈ ಕಾಲದಲ್ಲಿ ನಿಮ್ಮ ಅನುಭವ, ಅಭಿಪ್ರಾಯ,ನೋವುಗಳನ್ನು ಇಲ್ಲಿ ದಯಮಾಡಿ ದಾಖಲಿಸಿ. ‘ಹಾಡೆ ಹಾದಿಯ ತೋರಿತು ..’ ಎಂಬ ಸಾರ್ವಕಾಲಿಕ ಸತ್ಯದ ಕವಿನುಡಿಯಂತೆ ದಾರಿ ತಾನಾಗೇ ತೋಚುತ್ತದೆ.ಇಲ್ಲವಾದರೆ ಮನಸ್ಸಿನ ಬೇಗುದಿಯಾದರೂ ಕಳೆಯುತ್ತದೆ .**********ವಿಜಯಶ್ರೀ ಹಾಲಾಡಿ
ಅನುವಾದ ಸಂಗಾತಿ
“ನೂರರವರೆಗೆ ಎಣಿಸಿ ಕವಯಿತ್ರಿ ತಲೆಬಾಗಿ ಹೊರ ಬೀಳುತ್ತಾಳೆ” ಮೂಲ: ಆನಾ ಎನ್ರಿಕೇಟಾ ತೇರಾನ್ (ವೆನಿಜುವೆಲಾ) ಕನ್ನಡಕ್ಕೆ: ಕಮಲಾಕರ ಕಡವೆ “ನೂರರವರೆಗೆ ಎಣಿಸಿ ಕವಯಿತ್ರಿ ತಲೆಬಾಗಿ ಹೊರ ಬೀಳುತ್ತಾಳೆ” ಕವಯಿತ್ರಿ ತಾತ್ಕಾಲಿಕ ಗಿಡಮೂಲಿಕೆಗಳ ಒಟ್ಟುಮಾಡಿಕೊಳ್ಳುತ್ತಾಳೆಹಳತಾದ ಬ್ರೆಡ್ಡು, ಚೂರಿಗೆ ಸರಿಯಾದ ಬೂದಿ,ಫಲಿತಾಂಶಕ್ಕೆ ಮತ್ತು ಮೊದಲ ಆಚರಣೆಗಳಿಗೆ ಬೇಕಾದ ನಾರುಬೇರು.ಬಹುಶಃ ಅವಳಿಗೆ ಬಲಾಢ್ಯರು ತಮ್ಮದೆನುವ ಪರಂಪರೆ ಇಷ್ಟಅಧ್ಯಯನಶೀಲ ತಂಡ, ಕೈ ಖಾಲಿ, ಮುಚ್ಚಿದ ಎದೆ.ಯಾರು, ಅವನೋ, ಅವಳೋ? ಪ್ರಮಾಣಕ್ಕೆ ಬದ್ಧ, ಭವಿಷ್ಯಮುಖಿ:ಶಬ್ದಕ್ಕೆಂದು ಕಾದಿರುವ ನಾಯಿಯ ಕುಡಿ, ಸಂತನೆಡೆತಲುಪುವುದು ಹೇಗೆಂದು ಯಾಚಿಸುತ್ತ, ಅವಳ ಮಂಜಿನಂತ ನಾಲಿಗೆಯಿಂದ,ನಿನ್ನೆ ರಾತ್ರಿ ದೇಶದ ಬೆನ್ನ ಮೇಲೆ ಕಲ್ಲುಗಳಿದ್ದವುಹಳ್ಳಿ ಗಲ್ಲಗಳಿಗೆಲ್ಲ ಮಶಿ ಬಳಿದಿತ್ತು.ಬಳಿಕ ಅವರು ಧನ್ಯವಾದಗಳನು ಅರ್ಪಿಸಿದರು, ಕೈಕುಲುಕಿದರು, ಕೊಂಚ ಸುಳ್ಳಾಡಿದರುಜೂನ್ ಮತ್ತು ಜುಲೈ ಹಸಿವಿನಿಂದ ತಡೆಹಿಡಿದರು, ಹಸಿವು ಆದೀತು ಎಂದು.ನೂರರವರೆಗೆ ಎಣಿಸಿ ಒಳ್ಳೆಯ ಹುಡುಗಿ ತಲೆಬಾಗಿ ಹೊರ ಬೀಳುತ್ತಾಳೆನೂರರವರೆಗೆ ಎಣಿಸಿ ಕೆಟ್ಟ ಹುಡುಗಿ ತಲೆಬಾಗಿ ಹೊರ ಬೀಳುತ್ತಾಳೆನೂರರವರೆಗೆ ಎಣಿಸಿ ಕವಯಿತ್ರಿ ತಲೆಬಾಗಿ ಹೊರ ಬೀಳುತ್ತಾಳೆ. “The Poetess Counts to 100 and Bows Out” The poetess gathers interim herbage,aged bread, ash right for the knife,herbs for the outcome and the first rites.Maybe she likes the legacy the strong ones claim,the studious group, hands free, hearts shut.Who, he or she? oathbound, bound for the future:Scions of a bitch baying so sweetly for the word, begging howto get to the saint, her mistful tongue.Last night there were stones on a nation’s back,much coal smeared on far village cheeks.But then they gave thanks, shook hands, told some lies,pulled back June and July for hunger. That there might be hunger.The good girl counts to 100 and bows out.The bad girl counts to 100 and bows out.The poetess counts to 100 and bows out.
