ಕವಿತೆ ಕಾರ್ನರ್

ಕವಿತೆ ಕಾರ್ನರ್

ಆತ್ಮದ ಮಾತುಗಳು ಈಗ ಹಗಲನ್ನುಇರುಳನ್ನೂಕಳೆದುಕೊಂಡೆ ಹೊಂಬಣ್ಣದ ಸಂಜೆಯೊಳಗೆತುಂಗೆಯ ಮರಳುರಾಶಿಯಲ್ಲಿ ಮೂಡಿದನಿನ್ನ ಹೆಜ್ಜೆಗಳ ಅನುಸರಿಸುವ ಭ್ರಮೆಯೊಳಗೆಕಾಲುಗಳುಹೂತುಹೋದದ್ದು ಗೊತ್ತಾಗಲೇ ಇಲ್ಲ ಮೋಡಗಳ ಮರೆಯಿಂದ ಇಣುಕುತ್ತಿದ್ದ ಸೂರ್ಯನಿರಂತರವಲ್ಲವೆಂಬ ಅರಿವು ಮೂಡುವಷ್ಟರಲ್ಲಿಕಳೆದುಕೊಂಡಿದ್ದೆ ನಿನ್ನನ್ನೂ. ಕವಿತೆಯ ಪ್ರತಿಸಾಲನ್ನೂನೀನು ಆಕ್ರಮಿಸುವಾಗಪ್ರತಿ ಶಬುದವನ್ನೂ ಜತನದಿಂದಕಂಠಪಾಠ ಮಾಡಿಟ್ಟುಕೊಂಡಿದ್ದೆ ನಿನ್ನೆದುರು ಹಾಡಲು ಆಗುಂಬೆಯ ಸೂರ್ಯಾಸ್ತದಲ್ಲಿ ಮುಳುಗಿದ್ದವನುಮುಸುಕಿದ ಕತ್ತಲ ಕಂಡುತಿರುಗಿ ನೋಡುವಷ್ಟರಲ್ಲಿನೀನಾಗಲೇ ವಿದಾಯ ಹೇಳಿಯಾಗಿತ್ತು ಯಾಕೆ ಹೋದೆಎಲ್ಲಿ ಹೋದೆಯಾರಿರುವರು ಜೊತೆಗೆಕೇಳಬಾರದಕೇಳಲಾರದ ಪ್ರಶ್ನೆಗಳಿಗೆ ಉತ್ತರಕ್ಕಾಗಿಅಲೆಯುತ್ತಿದ್ದೇನೆ ಈಗ ತುಂಗೆಯಿಂದ ದೂರ ಬಯಲು ಸೀಮೆಯ ಕುರುಚಲು ಬಯಲುಗಳಲ್ಲಿಆತ್ಮದ ಮಾತಾಡಬೇಡವೆಂದು ಹೇಳಿದ ನಿನ್ನ ಮಾತುಗಳಷ್ಟೇರಿಂಗಣಿಸುತ್ತವೆ ನನ್ನ ಕಿವಿಗಳೊಳಗೆ! […]

ಘಾಚರ್ ಘೋಚರ್

ಘಾಚರ್ ಘೋಚರ್ಕಥಾಸಂಕಲನಲೇಖಕ: ವಿವೇಕ ಶಾನಭಾಗ ಏಕತ್ವ ಮನಸ್ಸಿನ ಗುಣ. ಆದರೆ, ಪ್ರತೀ ಉನ್ಮೇಷ, ನಿಮೇಷದಲ್ಲಿಯೂ ಮಗದೊಂದು ವಿಷಯ ಚಿಂತನೆಗೆ ಜಾರಬಲ್ಲ ಮನಸ್ಸು ಒಂದು ಕ್ರಮಬದ್ಧತೆಗೆ ಒಳಪಡಲು ಅಭ್ಯಾಸ ಬೇಕು. ಬದುಕು ಅದೇ ಮನೋಭ್ಯಾಸದ ಪಡಿಯಚ್ಚು‌. ಅದರ ಈ ಅಣಿಮ, ಗರಿಮಾದಿ ಗುಣಗಳ ಬಿಚ್ಚಿಡುವ ಈ ಕಥಾಸಂಕಲನ ಈ ವಿಶಿಷ್ಟ ನಿರೂಪಣೆಯಿಂದಾಗಿ ಹೃದಯವನ್ನು ಗೆಲ್ಲುತ್ತದೆ. ಒಂದು ನೀಳ್ಗತೆ, ಐದು ಕಥೆಗಳ ಸಂಗ್ರಹವಿದು. ಘಾಚರ್ ಘೋಚರ್ ನೀಳ್ಗತೆಯ ಮುಂದುವರೆದ ಭಾವವೇ ಉಳಿದ ಕಥೆಗಳು ಎಂಬ ಸುಳಿವು ಕೊನೆಯವರೆಗೂ ಓದುವಾಗ ಅನಿಸುತ್ತದೆ. […]

ಕಾವ್ಯಯಾನ

ನಮ್ಮೂರ ಮಣ್ಣಿನಲಿ ವಿನುತಾ ಹಂಚಿನಮನಿ ನಮ್ಮೂರ ಬೀಸು ಗಾಳಿಯಲಿಮಾಸದ ಸಂಸ್ಕೃತಿಯ ಸುಗಂಧನನ್ನ ಉಸಿರ ಪರಿಮಳದಲಿಇಂದಿಗೂ ಸೂಸತಾವ ಘಮಘಮ ನಮ್ಮೂರ ಕಾಡ ಹಾದಿಯಲಿನಾ ಮೂಡಿಸಿದ ಹೆಜ್ಜೆ ಗುರುತುನಡೆದ ದಾರಿಯ ತೋರಿಸುತಲಿಇಂದಿಗೂ ಬೆನ್ಹತ್ತತಾವ ಎಡಬಲ ನಮ್ಮೂರ ಕೆರೆಯ ನೀರಿನಲಿನಾ ಒಗೆದ ಕಲ್ಲು ಹರಳುಅಲೆಗಳ ಮಾಲೆ ಹೆಣೆಯುತಲಿಇಂದಿಗೂ ನಗತಾವ ಕಿಲಕಿಲ ನಮ್ಮೂರ ನಿಷ್ಠ ಮಣ್ಣಿನಲಿಕಷ್ಟ ಎದುರಿಸುವ ಕೆಚ್ಚುಕನಸಿಗೆ ಎಣ್ಣಿ ಹೊಯ್ಯತಲಿಇಂದಿಗೂ ಮಿನಗತಾವ ಮಿಣಮಿಣ ********** ನಮ್ಮೂರ ಚಿಕ್ಕ ಆಗಸದಲಿಅಕ್ಕರೆಯ ಚೊಕ್ಕ ಚುಕ್ಕೆಗಳುಸಕ್ಕರೆಯ ಕಥೆ ಹೇಳುತಲಿಇಂದಿಗೂ ನೀತಿ ಹೇಳತಾವ ಚಕಚಕ ನಮ್ಮೂರ ಜನರ […]

ದಿಕ್ಸೂಚಿ

ವಿಶಾಲ ಗೋಲದೊಳಗೆ ಎಂದೆಂದಿಗೂ ಅನಿಶ್ಚತತೆ ಜಯಶ್ರೀ ಜೆ.ಅಬ್ಬಿಗೇರಿ . ಅನಿಶ್ಚಿತತೆ ಎಂದ ಕೂಡಲೇ ನನಗೆ ನೆನಪಿಗೆ ಬರೋದು ತತ್ವಜ್ಞಾನಿಯೊಬ್ಬನ ಜೀವನದ ನೈಜ ಘಟನೆ.ಆತ ಪ್ರಸಿದ್ಧ ಪಾಶ್ಚಿಮಾತ್ಯ ತತ್ವಜ್ಞಾನಿ ನರ‍್ಮನ್ ಕಸಿನ್ಸ್.ಆತನ ದಿ ಅನಾಟಮಿ‌‌ ಆಫ್ ಇಲ್ನೆಸ್ ಎಂಬ ಗ್ರಂಥ ತುಂಬಾ ಪ್ರಸಿದ್ಧಿಯನ್ನು ಹೊಂದಿದೆ.ಇಂಥ ಸಾಧಕನಿಗೆ ರಕ್ತ ಕ್ಯಾನ್ಸರ್ ಎಂದು ಗೊತ್ತಾಯಿತು.ಇದನ್ನು ಕೇಳಿ ಆತನಿಗೆ ಬರಸಿಡಿಲು ಬಡಿದಂತಾಯಿತು.ಆದರೆ ಅವನು ತನ್ನ ಮನೋಭಾವನೆ ಯಿಂದ ಅದನ್ನು ಗುಣಪಡಿಸಿಕೊಳ್ಳಬೇಕೆಂದು ನಿರ್ಧರಿಸಿದ ಹಾಸ್ಯ ಚಲನಚಿತ್ರಗಳನ್ನು ನೋಡತೊಡಗಿದ.ಸುಮಾರು ೫೦೦ ಹಾಸ್ಯ ಚಲನಚಿತ್ರಗಳನ್ನು ನೋಡಿದ್ದರ ಪರಿಣಾಮ […]

ಸ್ವಾತ್ಮಗತ

ಬಾಳಾಸಾಹೇಬ ಲೋಕಾಪುರ ಬಾಳಾಸಾಹೇಬ ಲೋಕಾಪುರ ಅವರ ಸಾಹಿತ್ಯ ಕೃಷಿಯೂ..!ಮತ್ತವರ ಉಧೋ ಉಧೋ ಎನ್ನುವ ಉತ್ತರ ಕರ್ನಾಟಕದ ಭಾಷೆಯೂ.!! ಬಾಳಾಸಾಹೇಬ ಲೋಕಾಪುರ ಇವರು ನವ್ಯೋತ್ತರ ಸಾಹಿತಿಗಳು. ಬಾಗಲಕೋಟದ ಸಕ್ರಿ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರದ ಉಪನ್ಯಾಸಕರಾಗಿದ್ದಾರೆ… ಇವರ ಕೃತಿಗಳು ಹೀಗಿವೆ– ಕಥಾಸಂಕಲನಗಳು– ಕವಣಿಗಲ್ಲು,ಹಾರುವ ಹಕ್ಕಿ ಮತ್ತು ಆಕಾಶ,ತನು ಕರಗದವರಲ್ಲಿ,ಕಂಗಳು ತುಂಬಿದ ಬಳಿಕ, ಇವರ ಕಾದಂಬರಿಗಳು– ಉಧೊ ಉಧೊಹುತ್ತಬಿಸಿಲುಪುರನೀಲಗಂಗಾ. ಇವರ ಕವನ ಸಂಕಲನಗಳು– ಭ್ರಮರಂಗೆ. ಇವರು ಪಡೆದ ಪ್ರಸಸ್ತಿಗಳು– ಕನ್ನಡ ಸಾಹಿತ್ಯ ಅಕಾಡಮಿ ಪ್ರಸಸ್ತಿಚದುರಂಗ ಪ್ರಸಸ್ತಿಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ […]

ಆರೋಗ್ಯ ಅರಿವು

ಆಗಾಗ್ಗೆ ಹಿಂತಿರುಗಿ ನೋಡಬೇಕು… ಡಾ ವಿಜಯಲಕ್ಷ್ಮಿ ( ರಮಾ) ಪುರೋಹಿತ “ಆಗಾಗ್ಗೆ ಹಿಂತಿರುಗಿ ನೋಡಬೇಕುಭವಿಷ್ಯದ ಹಾದಿಯಲ್ಲಿ ಸಾಗುತ್ತ. ಆರೋಗ್ಯದ ಸಂರಕ್ಷಣೆ ಪ್ರತಿಯೊಬ್ಬ ಮನುಷ್ಯನ ಮಹದಾಸೆ ಏನಾದರೂ ಸಾಧಿಸಬೇಕೆಂಬ ಉತ್ಕಟ ಬಯಕೆ ಇದ್ದೇ ಇರುತ್ತದೆ.ಅದು ಸಂತೋಷಕರ ಸಂಗತಿಯೇ.ಈ ಕಾಲದಲ್ಲಿಯ ಜೀವನ ಆನಂದಮಯ ಹಾಗೂ ತೃಪ್ತಿಕರವಾಗಿರದೇ ಎಲ್ಲೊ ಕಳೆದುಕೊಂಡಹಾಗೆ,ಏನೊ ಹುಡುಕುತ್ತಿರುವ ಹಾಗೆ ಬಹಳ ಜನರನ್ನು ಕಾಣುತ್ತೇವೆ.ಯಾವದರಲ್ಲಿಯೂ ಸಮಧಾನ ಇಲ್ಲ.ಇನ್ನು ಕೆಲವರಿಗಂತೂ ಭಯವೇ ಜೀವನದಲ್ಲಿ ಆವರಿ ಸಿದೆ.ಚಿಕ್ಕವರಿಗೆ ಶಾಲಾ,ಕಾಲೇಜಿನಲ್ಲಿ ಅಂಕಗಳಿಸುವ ತುಡಿತವಿದ್ದರೆ,ಯುವಕರಿಗೆ ಜೀವನೋಪಾಯದ ಚಿಂತೆ  ವಯಸ್ಕರಿಗೆ ಅನಾರೋಗ್ಯದ ಛಾಯೆ ಅಷ್ಟೇ ಅಲ್ಲದೇ […]

ಕಾವ್ಯಯಾನ

ಶರಧಿಗೆ ದೀಪ್ತಿ ಭದ್ರಾವತಿ ಶರಧಿಗೆ.. ನಿನ್ನ ತೀರದಲಿ ಹೆಜ್ಜೆ ಊರಿ ಕೂತಿದ್ದೇನೆಅಳಿಸದಿರುಬಲ್ಲೆ ನಾನುನಿನ್ನ ಉನ್ಮತ್ತ ಅಗಾಧ ಕರುಣೆಯಅಂತರಾಳವನ್ನುನೂರೆಂಟು ನದಿಗಳ ಲೀನದಲ್ಲಿಯುಸಾಧಿಸುವ ನಿಶ್ಚಲತೆಯನ್ನುಮೌನದ ಕಡು ಮೋಹಿಯೇಜಗದ ನೋವುಗಳ ಹೆಕ್ಕಿ ನೀನು ಮೊರೆವಾಗಲೆಲ್ಲ’ಇಟ್ಟ ಅದೆಷ್ಟೋ ಗುರುತುಗಳುಆವಿಯಾಗುತ್ತವೆಹುಟ್ಟಿದ ಮೋಹಗಳುಕಬಂಧ ಬಾಹುಗಳಲಿಇಲ್ಲವಾಗುತ್ತವೆಆದರೂ,ನಿನ್ನೆದೆಯ ರೇವೆಯಲಿ ಹೆಸರು ಗೀಚುವಹುಚ್ಚು ಹಂಬಲಕೆ ಬಿದ್ದಿದ್ದೇನೆಅಲೆದು ದಣಿದ ಕಾವುಗಳಲಿತೇವ ಹೀರಿಕೊಳ್ಳಲು ಕಾಯುತ್ತಿದ್ದೇನೆ..ಇಲ್ಲವೆನ್ನಬೇಡಕಟ್ಟಿದ ಒದ್ದೆ ನೆನೆಹಿಕೆಗಳ ಹಾಗೆಯೇ ಇರಿಸುಉಕ್ಕಿ ಬಾ ಒಮ್ಮೆ ತೋಳ ಚಾಚಿಆಲಂಗಿಸುನಿನ್ನಂತೆಯೇ ನನ್ನ ಉಳಿಸು *******

ನನ್ನಾತ್ಮದ ಕನ್ನಡಿಯಲ್ಲಿ

ಇರಬೇಕಿತ್ತು ನೀನುನನ್ನಾತ್ಮದ ಕನ್ನಡಿಯಲಿ ದೂಳು ಕೂರದಂತೆನನ್ನ ಪ್ರಜ್ಞೆಯಾಳದೊಳಗೆ ಅಹಮ್ಮಿನ ಮುಳ್ಳು ಬೆಳೆಯದಂತೆನನ್ನ ಹೃದಯದಾಳದಲಿ ಪಾಪಿಷ್ಠ ಲಹರಿಗಳುಗುನುಗದಂತೆ ನೋಡಿಕೊಳ್ಳಲು. ಜನರಹಿತ ರಾತ್ರಿಯ ಬೆತ್ತಲು ರಸ್ತೆಗಳಲ್ಲಿಸಂಜೆ ಉರಿಸಿದ ಚಿತೆಯ ಬೆಂಕಿ ಆರದ ಮಸಣಗಳಲಿಗತದ ನೆನಪುಗಳೆಲ್ಲ ಹಾವುಗಳಂತೆ ಹರಿದಾಡುವಅಸಹನೀಯ ಕ್ಷಣಗಳ ಪಯಣದಲಿ. ಎಂದೂ ಮಳೆಯಾಗದಬೀಜ ಸಸಿಯಾಗದಸಸಿ ಮರವಾಗಿಮರ ಹೂವರಳಿಸಿ ಹಣ್ಣುಗಳ ಫಲಿಸಿತಾಯಾಗಲಾರದಂತಹ ತೀರಗಳಿರದರುದ್ರಭೀಕರ ಮರಳುಭೂಮಿಯನಡುವಲ್ಲೂ ಹಸಿರು ಚಿಗುರಿಸುವಛಲದೊಡತಿ ನೀನಿರಬೇಕಿತ್ತು ಮುಗಿದ ನನ್ನಿಷ್ಟಕಾಲದ ಜೊತೆಗೆಆರಂಭಗೊಂಡ ಕಷ್ಟಕಾಲದಲಿನೀನಿರಬೇಕಿತ್ತು ನನ್ನಾತ್ಮದ ಕನ್ನಡಿಯಲ್ಲಿ! ****** ಕು.ಸ.ಮಧುಸೂದನ್

ಪರಿಧಾವಿ

ಪುಸ್ತಕ ವಿಮರ್ಶೆ ಪರಿಧಾವಿ ಡಾ. ಅಜಿತ ಹೆಗಡೆಯವರ – ಪರಿಧಾವಿ-ಆಧುನಿಕ ಬದುಕಿನ ಕನ್ನಡಿ. ಎದುರಾದ ಅಡೆತಡೆಗಳಿಗೆ ಮುಖ ಕೊಟ್ಟು ಬದುಕುವ  ಆ ಸಂಘರ್ಷವನ್ನೆ ಬದುಕೆಂದು ಸ್ವೀಕರಿಸುವ ಜನರು ಜನಸಾಮಾನ್ಯರು. ಅವರ ಬದುಕಿನಲ್ಲಿ ಸಂಭವಿಸದ ಘರ್ಷಣೆಗಳಿಲ್ಲ, ಉಂಟಾಗದ ವಿಕೋಪಗಳಿಲ್ಲ. ನಡೆಯದ ಕಥೆಗಳಿಲ್ಲ. ಹಾಗಾಗಿ ಹಿಂದಿನ ಕಥೆಗಳಿಗೂ ಇಂದಿನ ಕಥೆಗಳಿಗೂ ಅಂತಹ ವ್ಯತ್ಯಾಸಗಳೇನೂ ಇರುವುದಿಲ್ಲ. ಮಾನವ ಸ್ವಭಾವಗಳು ಎಲ್ಲ ಜನಾಂಗಕ್ಕೂ, ಎಲ್ಲ ಕಾಲಕ್ಕೂ ಒಂದೇ ರೀತಿ ಇದ್ದರೂ ಕಾಲಧರ್ಮಕ್ಕೆ ತಕ್ಕಂತೆ ಈ ಜನಸಾಮಾನ್ಯರ ಜೀವನ ಸಂಘರ್ಷವೂ ಭಿನ್ನ ಪಾತಳಿಯಲ್ಲಿ ಮೈತಾಳಿಬರುವುದು. […]

ಬಿತ್ತಿದ ಬೆಂಕಿ

ಬಿತ್ತಿದ ಬೆಂಕಿ ಇಲ್ಲಿ ಬಿತ್ತಿದ ಬೆಂಕಿ ಸುಡುವುದಿಲ್ಲ, ಪರಿವರ್ತಿಸಿ ಬೆಳೆಸುತ್ತದೆ. ಇತ್ತೀಚೆಗೆ ಕಾದಂಬರಿಕಾರರು ಮತ್ತು ಹಿರಿಯ ಲೇಖಕರು, ಕವಿತೆಗಳನ್ನು ರಚಿಸುವುದರಲ್ಲಿ ತೊಡಗಿರುವುದು ಆಸಕ್ತಿಕರ ಸಂಗತಿ. ನಾನು ಗಮನಿಸಿದಂತೆ ಅವರಲ್ಲಿ ಎಸ್. ದಿವಾಕರ, ಇಂದ್ರಕುಮಾರ್ ಎಚ್.ಬಿ ಜೊತೆಗೆ ಶ್ರೀಧರ ಬನವಾಸಿ ಅವರು ಪ್ರಮುಖರು. ಏಕೆ ಹೀಗೆ ಎಂಬುದು ಕೂಡಾ ಚರ್ಚಾರ್ಹ ಸಂಗತಿಯೇ! ಫಕೀರ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಶ್ರೀಧರ ಬನವಾಸಿ ಅವರು ಬೇರು (2017) ಕಾದಂಬರಿಯ ಮೂಲಕ ಮನೆಮಾತಾದವರು. ಬೇರು ಒಟ್ಟು ಒಂಬತ್ತು ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅವರು […]

Back To Top