ಕಾವ್ಯಯಾನ

ಕಾವ್ಯಯಾನ

ಪ್ರಿಯ ಸಖ H. ಶೌಕತ್ ಆಲಿ  ಬೆಳದಿಂಗಳಲ್ಲಿ ತಂಪು ತಂಗಾಳಿಯಲ್ಲಿ ನಮ್ಮ ಮಿಲನ ಆಲಿಂಗನ ಅರಳಿದ ನೈದಿಲೆಯ ಚಂದಿರನ ಚುಂಬನ ಪ್ರಶಾಂತವಾದ ಹೃದಯ ಮನಸೆಲ್ಲಾ ಅವನಲ್ಲೇ ಲೀನಾ ಆಧ್ಯಾತ್ಮವೂ ಅಮರ ಪ್ರೇಮವೂ ಬುದ್ಧ ನನ್ನ ಪ್ರಿಯ ಸಖ ಬೆಳಕಾಗಬೇಕು ಈ ಭೂಮಿಯು ಈ ಸುಂದರ ಪ್ರಕೃತಿ ನೆನಪಿರಲಿ ಶ್ವೇತ ಮೋಡಗಳು ಆಗಸದಲ್ಲಿ ಹೃನ್ಮನಗಳು ಏಕಾಂತವಾಗಿ ಭಾವನೆಗಳು ಹೂವಂತೆ ಅರಳಿ ಸುಖದ ಸೆಲೆಯಾಗಿ ಅವ ನಿಂತ ಬುದ್ಧ ನನ್ನ ಪ್ರಿಯ ಸಖ ನೋಟದಲ್ಲಿ ಸಾವಿರ ಅರ್ಥ ಜನ್ಮಜನ್ಮಾಂತರ ಪುನೀತ […]

ಕಾವ್ಯಯಾನ

ಪೂರ್ಣವಾಗದ ಸಾಲುಗಳು ಶೀಲಾ ಭಂಡಾರ್ಕರ್ ಮನಸ್ಸು ಒಮ್ಮೊಮ್ಮೆತೊಟ್ಟಿಕ್ಕುತ್ತಾ ಶಬ್ದಗಳಾಗಿ, ಹಾಳೆಯ ಮೇಲೆ ಒಂದೊಂದಾಗಿ ಬಿದ್ದು ಹರಡಿಕೊಳ್ಳುತ್ತಾ…. ಶುರುವಿಟ್ಟುಕೊಳ್ಳುತ್ತದೆ ಆಡಲು ಶಬ್ದಗಳ ಆಟ. ಹೊಂದಿಕೊಳ್ಳಲು ಹೆಣಗುವ ಭಾವನೆಗಳ ಮಾಟ. ಕವಿತೆಯಾಗಲು ಹೊರಟ ನಿಶ್ಶಬ್ದ ಶಬ್ದಗಳ ಅರ್ಧಂಬರ್ಧ ಸಾಲುಗಳು. ನೋಡಲು ಯಾವುದೋ ನಿರ್ಭಾವುಕ ಚಹರೆಯಂತಹ ಉಲ್ಲೇಖಗಳು. ಹಿಂದೊಮ್ಮೆ ಮುಂದೊಮ್ಮೆ ನಿಲ್ಲಲು ಸೆಣಸಾಟ. ಅರ್ಥವಿಲ್ಲದವುಗಳ ಮೂಲೆಗೆ ತಳ್ಳಾಟ ಮನುಷ್ಯರಲ್ಲಿ ಮಾತ್ರವಲ್ಲ ಶಬ್ದಗಳಿಗೂ ಸಂಬಂಧಗಳಲ್ಲಿ ಹೊಂದಾಣಿಕೆ ಬೇಕು ಎಂದರೆ ಒಪ್ಪುವಿರಾ? *********

ಪ್ರಸ್ತುತ

ಹೋಮ್ ಕೇರ್ ಹಗರಣ. ಮಾಲತಿಶ್ರೀನಿವಾಸನ್. ಇತ್ತೀಚೆಗೆ ನಗರಗಳಲ್ಲಿ ವೃದ್ಧರ,ರೋಗಿಗಳ,ಮತ್ತು ಮಕ್ಕಳ ಆರೈಕೆಗೆ ಮನೆಯಲ್ಲಿದ್ದು ಮನೆಯವರೊಡನೆ ಸಹಕರಿಸಿಸಹಾಯಮಾಡಲು ಜನರನ್ನುಒದಗಿಸುವ ಸಂಘಗಳುಹೆಚ್ಚಳವಾಗಿವೆ ,ಹಿಂದೆ, ಒಂದೋ ಎರಡೋ nightingale,Red cross,ನಂತಹ ಸಂಸ್ಥೆಗಳು ಈ ಜವಾಬ್ದಾರಿ ಹೊರುತ್ತಿದ್ದವು,ಈಗ ಪ್ರತಿ ಸರ್ಕಾರಿ/ಹಾಗೂಖಾಸಗಿ ಅಸ್ಪತ್ರೆಯಲ್ಲೂಇಂತಹ ಸಂಸ್ಥೆಗಳ ಸಂಚಾಲಕರು ಈ ಕೆಲಸ ಒಪ್ಪಿಕೊಂಡು, ನುರಿತ ಜನರನ್ನು ಒದಗಿಸುತ್ತಿರುವುದು ಶ್ಲಾಘನೀಯವಾದ ಸಮಾಜಸೇವ.     ಅವರ ಶುಲ್ಕ ,ಮುಂಗಡ ಹಣ ದುಬಾರಿ ಅನಿಸಿದರೂತುರ್ತುಪರಿಸ್ಥಿತಿಯಲ್ಲಿ ಅವಶ್ಯಕತೆ ಇದ್ದಾಗ ಸಿಗುವ ನೆರವುಅಪ್ಯಾಯಮಾನ ಹಾಗೂ ಉಪಯುಕ್ತ.      ಇಂತಹ ಸಂಸ್ಥೆಗಳು ಕಳುಹಿಸಿದ ಅಪರಿಚಿತ ಸಹಾಯಕರನ್ನುತಿಂಗಳುಗಳು ಒಮೊಮ್ಮೆವರುಷಗಳುಜೊತೆಯಲ್ಲಿಟ್ಟುಕೊಂಡು,ವೃದ್ಧರ ,ರೋಗಿಗಳ […]

ಕಾವ್ಯಯಾನ

ನಿಯಮ ಡಾ.ಅಜಿತ್ ಹರೀಶಿ . ಅಪಘಾತಗಳೆಲ್ಲ ಆಕಸ್ಮಿಕಗಳಲ್ಲ ಕಾರಣವಿರಬಹುದಲ್ಲ ಅಲಕ್ಷ್ಯ ಆತುರ ಅತ್ಯುತ್ಸಾಹ ಕಲ್ಪಿಸುವ ಎದುರಿನ ಅಚಾತುರ್ಯ ಬೇಕೆಂದಾಗ ಬಂಜೆತನ ಬೇಡವಾದಾಗ ಫಲಿಸುವ ಗರ್ಭ ಸುರತಕ್ಕೆ ಸುರಕ್ಷಿತ ಸಂಗಾತಿ ಮಾತ್ರ! ಯುಗ ಬದಲಾಗಿದೆ ಸ್ವರ್ಗ ನರಕಗಳೆಲ್ಲವೂ ಸೃಷ್ಟಿಯಾಗಿದೆ ಇಲ್ಲೇ ತೆರೆಯಲಾಗಿದೆ ಬದುಕಿನ ಕಂದಾಯ ಕಟ್ಟುವ ಕೌಂಟರ್ ನಮ್ಮಲ್ಲೇ ದೇವನ ಕಣ್ಣುಗಳು ಮಾರು-ಮಾರಿಗೆ ಎಲ್ಲೆಲ್ಲೂ ಟವರ್ ಲೊಕೇಷನ್ ಅಪರಾಧಿಯಾಗದ ಸೂತ್ರ ಜೀವಿಸುವ ಸಾಫ್ ಸೀದಾ *********

ಬುದ್ಧ ಪೂರ್ಣಿಮೆಯ ವಿಶೇಷ-ಕವಿತೆ

ಬೆಳಕಿನ ಸಂತ ಶಿವಶಂಕರ ಸೀಗೆಹಟ್ಟಿ. ಊರೂರು ಸುತ್ತಿದ ಬಿಕ್ಕುಪಾತ್ರೆ ನನ್ನ ಮುಂದೆಯೇ ಬಂದು ನಿಂತಿದೆ ಪಾತ್ರೆಗೆ ಬೀಳುವ ಎಲ್ಲವೂ ನನ್ನೊಳಗೆ ಅಕ್ಷಯವಾಗುತ್ತಿವೆ ಅಚ್ಚರಿಯೆನಿಸಿತು ನಾನು ಕತ್ತಲನು ಸುರಿದಾಗ ಬೆಳದಿಂಗಳು ನನ್ನ ಕಣ್ಣೆದುರಿಗಿತ್ತು ಊರೂರು ತಿರುಗಿದ ಬೆಳಕು ಮನವೆಂಬ ಗುಡಿಸಲಿಗೂ ಬಂದು ಬೆಳಕು ಕೊಟ್ಟಿದೆ ಬೆಳಕು ಪಡೆಯುವ ತವಕದ ಬಯಕೆಯಲ್ಲಿ ಗಾಳಿ ತಾಗಬಹುದೆಂದು ಬದುಕ ಅಡ್ಡಗಟ್ಟಿದ್ದೇನೆ ಹೆಗಲ ಜೋಳಿಗೆಯಲ್ಲಿ ಬಯಲೆಂಬ ಸಿರಿಯು ಬದುಕುಗಟ್ಟಿದೆ ಬಾಚಿ ತಬ್ಬುವ ತವಕದಲ್ಲಿ ಬೆನ್ನ ಹಿಂದೆಯೇ ಸಾವರಿಸಿ ನಡೆಯುತಿದ್ದೇನೆ ಆಸೆ ಅತಿಯಾಗಬಾರದೆಂಬ ಬುದ್ದಗುರುವಿನ ಮಾತುಗಳನು […]

ಬುದ್ಧ ಪೂರ್ಣಿಮೆಯ ವಿಶೇಷ -ಕವಿತೆ

ವೈಶಾಖ ಹುಣ್ಣಿಮೆ ರಾತ್ರಿ ಶಾಲಿನಿ ಆರ್. ಮನುಕುಲದ ಭಾಗ್ಯ ನಮ್ಮ ಸರ್ವಾಥ ಸಿದ್ಧ/ ಲೋಕದ ಜನರ ದುಃಖ ನಿವಾರಿಸಲರಿತು ಎದ್ದ// ವೈಶಾಖ ಹುಣ್ಣಿಮೆಯ ರಾತ್ರಿ ಹಳೆನೆನಪುಗಳ ಕಳಚಿತು/ ದಿವ್ಯಚಕ್ಷುವಿನಿಂದಾದ ಯೋಗ ಜ್ಞಾನಜ್ಯೋತಿ ಬೆಳಗಿತು// ದೇದೀಪ್ಯಮಾನ ಬೆಳಗದು ಮನುಕುಲದ ತಮವ ಕಳಚಿತು/ ಧ್ಯಾನದೊಳಿದ್ದರು ಎಚ್ಚರವಾಗಿರುವ ಮನದ ನೇತ್ರ ಅರಳಿತು// ಬಿಂದುವೊಂದು ಸಿಂಧುವಾದ ಆನಂದದಾ ಮೊಗ/ ಅನಿರ್ವಚನೀಯ ಕಲ್ಮಷರಹಿತ ಪರಮಾನಂದದಾ ಯೋಗ// ಮಾನವ ಕುಲ ಒಂದು ಆಸೆಯೇ ದುಃಖಕ್ಕೆ ಕಾರಣ ಎಂದ/ ಸಮ್ಯಕ್ ಬೋಧಿ’ ಸಿದ ಅಷ್ಟಾಂಗ ಮಾರ್ಗ ಅರುಹಿದ// […]

ಬುದ್ಧ ಪೂರ್ಣಿಮೆ ವಿಶೇಷ-ಕವಿತೆ

ಬೆಳಕಿಗೊಂದು ಮುನ್ನುಡಿ ಅರಸುತ. ಪೂರ್ಣಿಮಾ ಸುರೇಶ್ ವಿಶ್ವವೆಲ್ಲವನು ಕಪ್ಪು ಕವಿದಾವರಿಸಿದ ವೇಳೆ ಸೃಷ್ಟಿಯಖಿಲದ ಜೀವಜಾತಗಳಿಗೆಲ್ಲ. ನಿದ್ರೆಯ ಮಾಯೆ ಮುಸುಕಿರುವ ವೇಳೆ ಸೊಬಗಿನೈಸಿರಿಯೆ ಸಾಕಾರಗೊಂಡಂತೆ ಪಕ್ಕದಲಿ ಪವಡಿಸಿದ ಸುಕೋಮಲೆಯ. ಘನವಾದ ಕಟ್ಟಕ್ಕರೆಯ ಚೆಂಬೆಳಕ ಲೆಕ್ಕಿಸದೆ ಹೊರಟೇಬಿಟ್ಟ ಪುಣ್ಯಾತ್ಮ. ಹೊಸ ಬೆಳಕಿನ ಮೂರ್ತತೆಯ ಹುಡುಕಾಟದಲ್ಲಿ ಬದುಕಿನರ್ಥವ ಬಗೆವ ಬೆದಕು ನೋಟದಲ್ಲಿ ನನ್ನೊಳಗೂ ಆಗಾಗ್ಗೆ ತುಂಬಿಕೊಳ್ಳುವ. ಕಪ್ಪಿಗೆ ಕಪ್ಪ ಸಲ್ಲಿಸುತ್ತಲೇ ಬಂದಿರುವೆ. ಆದರೀಗ ಕಪ್ಪಿನೆದೆಯನ್ನಿರಿದು ಆಚೆ ಹೆಜ್ಜೆ ಹಾಕಿರುವೆ. ಅವ್ಯಕ್ತದೆಡೆಗೆ ಅವನಂತೆ ಒಬ್ಬಂಟಿ- ಕೆಮ್ಮಣ್ಣ ಮಾದಕ ಕಂಪನ್ನು ಮೂಸಿ ಮುಟ್ಟಿರುವೆನವನ ಸಂಪ್ರೀತಿ […]

ಬುದ್ಧ ಪೂರ್ಣಿಮೆಯ ವಿಶೇಷ-ಕವಿತೆ

ಬುದ್ದಂ ಶರಣಂ! ಚೈತ್ರಾ ಶಿವಯೋಗಿಮಠ ನಿನ್ನಲ್ಲಿ ನನ್ನಲ್ಲಿ ಎಲ್ಲೆಲ್ಲಿಯೂ ದೇವರ ಕಂಡೆ ಅಂತಹದರಲ್ಲಿ ನನ್ನನೇ ನೀನು ದೇವರ ಮಾಡಿಕೊಂಡೆ ದೀಪವ ಮುಡಿಸಿ, ಧೂಪವ ಹಾಕಿದೆ ಮೂರ್ತಿ ಮಾಡಿ ಒಳಗಿನ ದೀಪವ ಬೆಳಗಲಾರೆಯ ಮನದ ಸೊಡರಿಗೆ ಕಿಡಿ ನೀಡಿ? ಅನ್ನವ ಬೇಯಿಸಿ, ಹಿಸುಕಿ ಪರೀಕ್ಷಿಸಿ ಬೆಂದನ್ನವ ಸಮರ್ಪಿಸಿದೆ ಎಡೆಯೆಂದು ಮನದ ಗಡಿಗೆಯಲಿ ಭಾವದನ್ನವ ಬೇಯಿಸಲಾರೆಯ ನೀನಿಂದು? ನಾನು ದೇವರಲ್ಲ, ನಿನ್ನೊಳಗಿನ ಪ್ರಾಂಜಲ ದೈವತ್ವ! ದೇವರಾಗಿಸದೆ, ಮರೆಯದೆ ಮೆರೆಸಿದರೆ ಸಾಕು ಮನುಷ್ಯತ್ವ! ಇನ್ನಾದರೂ ನಿನ್ನೊಳಗಿರುವ ನನ್ನ ಕೂಗನ್ನ ಕೇಳು ಮಲಗಿದ್ದು […]

ಹರಟೆ

ಇಲಿ ಪುರಾಣ ಶೀಲಾ ಭಂಡಾರ್ಕರ್ “ಇಲಿಗಳ ಸಂಸಾರದಲ್ಲೂ ಅಜ್ಜಿಯರು ಇರ್ತಾರಾ? ರಾತ್ರಿ ಮಲಗುವಾಗ ಒಳ್ಳೊಳ್ಳೆ ನೀತಿ ಕತೆಗಳನ್ನು ಹೇಳಿ ಮಲಗಿಸ್ತಾರಾ? ಹೇಗೆ ತಪ್ಪಿಸಿಕೊಳ್ಳುವುದು ಅನ್ನುವ ಟಿಪ್ಸ್ ಹೇಳಿ ಕೊಡ್ತಾರಾ?” ಗೊಣಗ್ತಾ ಇದ್ದೆ ನಾನು. ಮಕ್ಕಳಿಬ್ಬರೂ ಮುಖ ಮುಖ ನೋಡಿಕೊಂಡು “ಅಮ್ಮ ಶಶಿಕಪೂರ್” ಅಂತ ಮುಸಿ ಮುಸಿ ನಗ್ತಾ ಇದ್ರು. ನಮ್ಮನೇಲಿದ್ದ ಗೊಣಗುವ ಶೇಷಿಯ ಕತೆ ಹೇಳಿದ್ನಲ್ಲ. ಶೇಷಿಗೆ ದಿನ್ನು, ಶಶಿಕಪೂರ್ ಅಂತ ಹೆಸರಿಟ್ಟಿದ್ದನ್ನೂ ಹೇಳಿದ್ದೇನೆ. ನಿಮಗೆ ಮರೆತಿರಬಹುದು. ನನಗೆ ಕೋಪ ಬಂತು. “ನಿಮಗೇನು ಗೊತ್ತು? ನಗ್ತಿದಿರಲ್ಲ ನೀವು!” […]

ಕಾವ್ಯಯಾನ

ಎರಡು ಲಾಕ್ ಡೌನ್ ಕವಿತೆಗಳು ಶ್ರೀದೇವಿ ಕೆರೆಮನೆ ಮಾತು ಮುಗಿದ ಹೊತ್ತಲ್ಲಿ ನೀನು ಸಂಪರ್ಕಗಳೆಲ್ಲವನ್ನೂ ನಿಲ್ಲಿಸಿ ಅಂತರ ಕಾಯ್ದುಕೊಳ್ಳ ತೊಡಗಿದ ಮೇಲೆ ನಾನು ಫೋನು ಕೈಗೆತ್ತಿಕೊಂಡೆ ಅತ್ತಕಡೆಯ ನೀರಸ ಮಾತುಗಳ ಹೊರತಾಗಿಯೂ ಒಂದಿಷ್ಟು ಜೀವ ತುಂಬಲು ಯಾವುದೋ ಹಳೆ ನೆನಪುಗಳ ಹೆಕ್ಕಿ ಪೋಣಿಸುತ್ತ ಮಾಲೆ ಮಾಡಿದರೂ ಕಾಣದ ಉತ್ಸಾಹ ನಿನ್ನ ಮಾತಿನಲ್ಲಿ ಅರ್ಥವಿಲ್ಲದ ನೀರಸ ಮಾತುಗಳ ಆಡುವುದಾದರೂ ಅದೆಷ್ಟು ಸಮಯ ? ಹತ್ತೇ ನಿಮಿಷಗಳಲ್ಲಿ ಮಾತು ಸೋತು ಅಲ್ಲಿಯೂ ಅಂತರ ಇಣುಕಿ ವ್ಯರ್ಥ ಪ್ರಲಾಪವೆನಿಸಿದಾಗ ಮತ್ತದೇ ಅಂತರ […]

Back To Top