ಕಾವ್ಯಯಾನ

ಕಾವ್ಯಯಾನ

ಹೀಗೆಯೇ ಬಂದು ಬಿಡುತ್ತಾರೆ ಕೆಲವರು ಶೀಲಾ ಭಂಡಾರ್ಕರ್ ಹೀಗೆಯೇ ಬಂದು ಬಿಡುತ್ತಾರೆ ಕೆಲವರು ಮೌನವಾಗಿದ್ದ, ಶೂನ್ಯವಾಗಿದ್ದ, ಏಕಾಂಗಿ ಬದುಕಿನೊಳಗೆ, ಒಮ್ಮೆಲೇ ಬಂದು ಬಿಡುತ್ತಾರೆ ಕೆಲವರು ಇದ್ದಕ್ಕಿದ್ದಂತೆ ಅಕಾಲದ ಮಳೆ ಹನಿಗಳು ರಸ್ತೆಯಲ್ಲಿ ನಡೆಯುವವರನ್ನು ತೋಯಿಸಿದ ಹಾಗೆ. ಛತ್ರಿಯನ್ನು ಮನೆಯಿಂದ ತರುವುದರೊಳಗೆ ತಂದರೂ ಬಿಚ್ಚುವುದರೊಳಗೆ ಅಥವಾ ಹಾಗೇ ಸುಮ್ಮನೆ ತೋಯುವುದು ಕೂಡ ಅಪ್ಯಾಯವೆನಿಸುವ ಹಾಗೆ ಭೋರೆಂದು ಸುರಿಸುರಿದು ಬಟ್ಟೆಗಳ ಮೇಲೆ, ಮುಚ್ಚದ ಅಂಗಾಂಗಗಳ ಮೇಲೆ, ಕಣ್ಣುಗಳೊಳಗೆ, ಕಿವಿಗಳಲ್ಲಿ, ಮುಟ್ಟಲಾಗದ ದೇಹದ ಸಂಧಿಗೊಂದಿಗಳಲ್ಲಿ, ದಾರಿ ಹುಡುಕುತ್ತಾ, ನುಸುಳಿದಂತೆ ಬಂದು ಬಿಡುತ್ತಾರೆ […]

ಪ್ರಸ್ತುತ

ಸಾಂಸ್ಕೃತಿಕ ಲೋಕದ ದಲ್ಲಾಳಿಗಳು. ಮಲ್ಲಿಕಾರ್ಜುನ ಕಡಕೋಳ ಬೆಂಗಳೂರು, ಒಂದಾನೊಂದು ಕಾಲಕ್ಕೆ ಗುಲಾಬಿ ನಗರ ಎಂದು ಪ್ರಸಿದ್ದವಾಗಿತ್ತು. ಗುಲಾಬಿಯ ಆರಂಭದ ಅಕ್ಷರ “ಗು” ಎಂಬುದೆಲ್ಲೋ, ಎಂದೋ ಉದುರಿ ಬಿದ್ದು ಅದು ಲಾಬಿ ನಗರವಾಗಿ ಬಹಳೇ ವರ್ಷಗಳು ಉರುಳುತ್ತಿವೆ. ಆಗಿನ ಕಾಲದಲ್ಲಿ “ಲಾಬಿ” ಅನ್ನಲಾಗದಿದ್ದರೂ ನಿತ್ಯ ಜೀವನಾಗತ್ಯದ ಸಣ್ಣಪುಟ್ಟ ಕೆಲಸ ಕಾರ್ಯಗಳಿಗೆ ಬಲ್ಲವರ ಮೂಲಕ ಹೇಳಿಸಿ ಈಡೇರಿಸಿಕೊಳ್ಳುವ ತುರ್ತುಅಗತ್ಯದ ಶಿಫಾರಸು ಅವಾಗಿರ್ತಿದ್ದವು. ಹಳ್ಳಿಗಳಲ್ಲಿ ಚೆಂದಗೆ ಹಾರ್ಮೋನಿಯಂ ನುಡಿಸಿ, ಸಂಗೀತ, ನಾಟಕ ಕಲಿಸುವ ಮಾಸ್ತರ, ಬಯಲಾಟ, ಕೋಲಾಟ ಆಡುವ ಹಿರೀಕ ಕಲಾವಿದರು, […]

ಕಥಾಯಾನ

ಕಿರಿ ದೇವರಿಗೆ ಮರದ ಜಾಗಟೆ. ಕೆ.ಎನ್.ಮಹಾಬಲ ಹನ್ನೊಂದು  ಗಂಟೆಗೆ ಬಾಸ್ ನ ಕೋಣೆ ಒಳಗೆ ಹೋಗಿ ಬಂದ ಅಟೆಂಡರ್ ಸಿದ್ದಲಿಂಗು “ಬಾಸ್ ಸಿಟ್ಟಾಗಿದ್ದಾರೆ.’ಏನಯ್ಯ ನನಗೆ ಹುಷಾರಿಲ್ಲ .ನೆಗಡಿ,ತಲೆಭಾರ ಸ್ವಲ್ಪ ಜ್ವರನೂ ಬಂದಂತಿದೆ.ನೀನು ನೋಡಿದ್ರೆ ಇಷ್ಟೊಂದು ಫೈಲ್ ತಂದು ಕುಕ್ಕುತ್ತಿದ್ದೀಯಾ’ಎಂದು ರೇಗಿದರು  ಎನ್ನುತ್ತಾ ಹೊರಗೆ ಬಂದ ಸಿದ್ದಲಿಂಗು “ಈ ಸಾಹೇಬರಿಗೆ ಹುಷಾರಿಲ್ಲ  ಅಂತ ಯಾರಿಗಾದ್ರೂ ಕನಸು  ಬಿದ್ದಿರತ್ತಾ?’ ಎಂದು ಗೊಣಗಿಕೊಂಡ. ಆ ಬಾಸ್ ಗೆ ಹುಷಾರಿಲ್ವ? ಏನಂತೆ ?ಯಾವಾಗಿಂದ?ಡಿಪಾರ್ಟಮೆಂಟಿನಲ್ಲಿದ್ದ ಎಲ್ಲ ಉದ್ಯೋಗಿಗಳು ಒಟ್ಟಿಗೇ ಪ್ರತಿಕ್ರಿಯಿಸಿದರು. “ಬೆಳಿಗ್ಗೆ   ನಾನು ಅವರು ಬರೋ ಹೊತ್ತಲ್ಲಿ ಬೇರೆ ಡಿಪಾರ್ಟ್ ಮೆಂಟಿಗೆ ಹೋಗಿದ್ದೆ.ಅವರು  ಬಂದ […]

ಕಥಾಯಾನ

ಮನಸು ಮಂಜುಗಡ್ಡೆಯಲ್ಲ. ಜ್ಯೋತಿ ಗಾಂವಕರ್ “ಈಗೀಗ ಏನೂ ನಿರೀಕ್ಷೆಗಳೇ ಇಲ್ಲ ನೋಡು ಭಾವನಾತ್ಮಕ ಅವಲಂಬನೆಯೂ ಇಲ್ಲ ಆಪ್ತವಾಗಿ  ಏನೋ ಹೇಳ್ಕೊಬೇಕು ಅನ್ಸೋದೇ ಇಲ್ಲ ಎದೆ ಬಂಡೆಯಾಗ್ತಿದೆ ಅನ್ನಿಸ್ತಿದೆ “ ಅಂತ ಗೆಳತಿಯೊಬ್ಬಳು ನಿರ್ಭಾವುಕವಾಗಿ ಹೇಳಿಕೊಳ್ಳುತ್ತಿದ್ದರೆ ….. ” ಹಾಗಾದರೆ ಬಂಡೆಯ ಮೇಲಿಂದ ಇಳಿಯುವ ಜಲಪಾತದಂತಹ ಭೋರ್ಗರೆತವೇನು ? ಭಾವುಕತೆಗೆ ಹುಟ್ಟಿದ ಕಣ್ಣೀರಲ್ಲವಾ” ಅಂತ  ಹೇಳಿ ಅವಳನ್ನು ಆ ನಿರ್ಲಿಪ್ತ ಭಾವದಿಂದ ಹೊರತರುವದಕ್ಕೆ ಪ್ರಯತ್ನಿಸುತ್ತಿದ್ದೆ… “ನಿಜ ಬಿಡು ಎಷ್ಟೇ ಕಲ್ಲಾಗಿದ್ದೇವೆಂದರೂ ಈ ಹೆಣ್ಣುಮಕ್ಕಳಿಗೆ ಕರಗೋದು ಅಭ್ಯಾಸ ….ಅತಿ ಭಾವುಕತೆ […]

ಕಾವ್ಯಯಾನ

ನಿನ್ನ ಹುಡುಕಾಟದಲ್ಲಿ ನಾಗರಾಜ ಹರಪನಹಳ್ಳಿ ಉರಿ ಉರಿ ಬಿಸಿಲು ಎಲ್ಲಿ ಹುಡುಕಲಿ ಪ್ರೇಮವ ತಕ್ಷಣ ಕಂಡದ್ದು ನಿನ್ನ ಮೊಗದ ಮುಗುಳ್ನೆಗೆ ಆಸೆಯ ಬೆನ್ನು ಹತ್ತಿದೆ ಓಡಿದೆ ಓಡಿದೆ ದಣಿವರಿಯದೆ ಓಡಿದೆ ಕೊನೆಗೆ ಸಿಕ್ಕದ್ದು ದುಃಖ ಇನ್ನೆನು‌ ಮುಗಿಯಿತು ಅನ್ನುವಾಗ ಕಂಡದ್ದು ನಿನ್ನ ಮುಖದ ಮಂದಹಾಸ ಮೋಕ್ಷವನ್ನೇನು ಹುಡುಕಿ ಹೊರಡಲಿಲ್ಲ ನಾನು ಪ್ರೀತಿಯ ಹುಡುಕಿ ಹೊರಟಿದ್ದು ನಿಜ , ಆದರೆ ನೀ ಹೇಳಿದ ಬಯಲಿನಂತಹ ಪ್ರೀತಿ‌ ಈ ಹುಲುಮಾನವರಿಗೆ ಅರ್ಥವಾದೀತು ಹೇಗೆ ಗೌತಮ ಸಾವಿಲ್ಲದ ಮನೆಯ ಸಾಸಿವೆ ತರಲು […]

ಕಾವ್ಯಯಾನ

ಎಂದೂ ಮರೆಯದಾ ಗುರುತು ರಜಿಯಾ ಕೆ.ಬಾವಿಕಟ್ಟೆ ಕಡಲ ಮೌನದಲಿ ನೆಮ್ಮದಿಯ ಕಾಣುವ ಭರವಸೆಯ ನಿರಾಳದಿ ದಿಟ ದಾವಂತದಲಿ ಎಷ್ಟೋ ಕನಸುಗಳು ಆಸೆಗಳು ಮಡಿಲಿಗಂಟ್ಟಿದ್ದವು. ಸಂತಸದ ಮನವು ಬಾನು ಭೂವಿಗಳ ಅಂತರವೇ ಲೆಕ್ಕಿಸದಷ್ಟು ಸಂತೋಷದ ದಿನಗಳು ಅಪಾರತರದಲ್ಲಿದ್ದವು. . ದಿನದಿನವು ಕಳೆದಂತೆ ಕರಾಳತೆಯ ಕಹಳೇಗಳು ಬೆನ್ನ ಹಿಂದೆಯೇ ಬೆನ್ನಟ್ಟಿ ಹೊರಟುನಿಂತಿದ್ದವು. ಆಗಾಧತೆಯ ಖುಷಿಗಳೆಲ್ಲ ಕಳೆದು ಬರೀ ಸಾಲು ಸಾಲು ಸಮಾಧಿಯ ನಿಟ್ಟುಸಿರಿಗೆ ನನ್ನ ಜೊತೆ ಜೊತೆಗಿದ್ದ ಅಣ್ಣತಮ್ಮಂದಿರನೇ ಆ ವಿಧಿ ಬಲಿ ಪಡೆದು ನನ್ನ ನನ್ನಮ್ಮನ ಒಂಟಿಯಾಗಿಸಿದ್ದವು. ಐವರ […]

ಅನುವಾದ ಸಂಗಾತಿ

ಕನ್ನಡ: ಕು.ಸ.ಮಧುಸೂದನ ಮಲಯಾಳಂ: ಚೇತನಾ ಕುಂಬ್ಳೆ ಅಪ್ಪಚ್ಚನ ಅದೊಂದು ಮನೆಯೂ, ನನ್ನ ಸೋದರತ್ತೆಯೂ! ಅದೊಂದು ಮನೆಯಿತ್ತು ನನ್ನದೂ ನನ್ನ ಅಪ್ಪಚ್ಚನ ಕಾಲದ್ದು ಅವನ ವಿರೋಧಿಸಿ ಮನೆ ಬಿಟ್ಟು ಬಂದ ಅಚ್ಚ ಮತ್ತೆ ಅದರೊಳಗೆ ಕಾಲಿಡದೆಲೆ ಸತ್ತು ಹೋಗಿ ನನ್ನನ್ನೂ ಅಪರಿಚಿತ ಊರಲ್ಲಿ ಪರದೇಸಿಯಾಗಿಸಿದ ನಂತರವೂ ಮೊಮ್ಮಗ ಬರುತ್ತಾನೆಂದು ಸಾಯುವ ತನಕ ಕಾವಲು ಕಾಯುತ್ತಿದ್ದ ಮುದುಕ ಅಷ್ಟು ವರುಷ ಇಲ್ಲದ್ದು ಮೊನ್ನೆ ಕಾಲುಜಾರಿ ಮನೆಯ ಹಿಂದಿನ ಅದೇ ಹಳೆಯ ಬಾವಿಗೆ ಬಿದ್ದು ಸತ್ತು ಹೋದನಂತೆ! ವಿಷಯ ಕಿವಿಗೆ ಬಿದ್ದು […]

ಪ್ರಸ್ತುತ

೧೯೭೫ ರ ತುರ್ತು ಪರಿಸ್ಥಿತಿ ಮತ್ತು ಇಂದಿನ ಲಾಕ್ ಡೌನ್…   ಅಂದಿಗೆ ಹೋಲಿಸಿದರೆ ಇಂದಿನ ಸ್ಥಿತಿ ಭೀಕರ, ಭಯಾನಕ. ಅಂದಿನ ಪ್ರಧಾನಿಯ ಖುರ್ಚಿ ಅಲುಗಾಡ ತೊಡಗಿದಾಗ ತುರ್ತು ಪರಿಸ್ಥಿತಿ ಹೇರಲಾಗಿತ್ತು. ರಾಜಕೀಯ ವಿರೋಧಿಗಳನ್ನು ಜೈಲಿಗೆ ಹಾಕಲಾಯಿತು, ಸರ್ಕಾರದ ವಿರುಧ್ಧ ಯಾರೂ ಮಾತನಾಡುವಹಾಗಿರಲಿಲ್ಲ. ಆದರೆ, ಜನಸಾಮನ್ಯರ ಬದುಕು ಎಂದಿನಂತೆ ಸಾಗಿತ್ತು, ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಯಾವುದೇ ತೊಂದರೆ ಇರಲಿಲ್ಲ;  ಬದುಕಿನ ಆರ್ಥಿಕ ಅಭದ್ರತೆ ಯಾರನ್ನೂ ಕಾಡಿರಲಿಲ್ಲ.  ಇಂದಿನ ಸ್ಥಿತಿಯ ಹೆಸರು ಲಾಕ್ ಡೌನ್, ಜನರ ಜೀವ ಉಳಿಸಲು […]

ಗಾಳೇರ್ ಬಾತ್

ಗಾಳೇರ್ ಬಾತ್-04 Clinicಲ್ಲಿ ಸಿಕ್ಕ ಕಮಲ ಆಂಟಿ ನೋಡಿ ಆಶ್ಚರ್ಯವಾಗಿತ್ತು………. ಆ ತಿಂಗಳಲ್ಲಿ ಬೆಂಗಳೂರಿನಲ್ಲಿ ವಿಪರೀತ ಮಳೆ ಬೀಳುತ್ತಿತ್ತು. ನಾನು ಕೆಲಸಕ್ಕೆ ನಡೆದುಕೊಂಡೆ ಹೋಗಬೇಕಾಗಿದ್ದರಿಂದ ಹಲವು ಬಾರಿ ಭಾರಿ ಮಳೆಗೆ ತೋಯಿಸಿಕೊಂಡಿದ್ದರ ಪರಿಣಾಮವಾಗಿ ನನಗೆ ಮೂಗಿನಲ್ಲಿ ಸಿಂಬಳ ಬರಲಿಕ್ಕೆ ಶುರುವಾಗಿತ್ತು. I mean ನೆಗಡಿ ಆಗಿತ್ತು ಅಂತ ನಿಮ್ಮ ಮಾತಿನಲ್ಲಿ ತಿಳಿಯಬಹುದು.       ನೀವು ತಿಳಿದಾಗೆ, ನಾನು ಬರಿ ನೆಗಡಿಗೆಲ್ಲಾ ತಲೆ ಕೆಡಿಸಿಕೊಳ್ಳುವ ಮನುಷ್ಯನಲ್ಲ! ಯಾವಾಗಲೂ ಅತ್ಯಂತ ಚುರುಕುತನದಿಂದ ಬೆಂಗಳೂರು ನಗರವನ್ನೇ ಸುತ್ತುತ್ತಿದ್ದ ನನ್ನ ಕಾಲುಗಳು ಯಾಕೋ […]

ಕಾವ್ಯಯಾನ

ಕರೆಯದೆ ಬರುವ ಅತಿಥಿ ಚೇತನಾ ಕುಂಬ್ಳೆ ಕರೆಯದೆ ಬರುವ ಅತಿಥಿ ನೀನು ಕರೆದರೂ ಕಿವಿ ಕೇಳಿಸದವನು ಯಾರೂ ಇಷ್ಟ ಪಡದ ಅತಿಥಿ ನೀನು ಎಲ್ಲಿ ಯಾವಾಗ ಹೇಗೆ ಯಾಕೆ ಯಾವ ನಿಮಿಷದಲ್ಲಿ ಯಾವ ರೂಪದಲ್ಲಿ ನೀನು ಬರುವೆಯೆಂದು ಗೊತ್ತಿಲ್ಲ ನನಗೆ ಮುನ್ಸೂಚನೆ ನೀಡದೆ ಬರುವೆ ನೀನು ಎಲ್ಲಿಂದ ಬರುವೆಯೋ ಎಲ್ಲಿಗೆ ಕರೆದೊಯ್ಯುವೆಯೋ ತಿಳಿದಿಲ್ಲ ನನಗೆ ಒಡೆದು ನುಚ್ಚುನೂರು ಮಾಡುವೆ ಸಣ್ಣಪುಟ್ಟ ಸಂತೋಷಗಳನ್ನು ಹೋಗುವೆ ನೀನು ಒಮ್ಮೆಯೂ ತಿರುಗಿ ನೋಡದೆ ಮನದ ತುಂಬ ವೇದನೆ ನೀಡಿ ಹಿರಿಯರೆಂದೋ ಕಿರಿಯರೆಂದೋ […]

Back To Top