ಗಝಲ್
ಗಝಲ್ ರತ್ನರಾಯ ಮಲ್ಲ ದೇವರ ಮಂದಿರಗಳಿಗಿಂತ ಮಸಣವೇ ಲೇಸುಆಡಂಬರದ ಪ್ರದರ್ಶನಕ್ಕಿಂತ ಮೌನವೇ ಲೇಸು ಬಜಾರ ಎಂದರೆ ಎಲ್ಲರೂ ಬೆನ್ನು ಹತ್ತುವವರೆಯಾರೂ ಬರದ ಸ್ಮಶಾನದ ಪ್ರಯಾಣವೇ ಲೇಸು ಬಂಧಗಳು ನರಳುತಿವೆ ಬಾಡಿದ ಬಾಂಧವ್ಯದಲ್ಲಿತಬ್ಬಲಿಯಲ್ಲಿ ಅರಳಿದ ಈ ಒಂಟಿತನವೇ ಲೇಸು ಶ್ರೀಮಂತಿಕೆಯು ಆಟವಾಡುತಿದೆ ಜಗದೊಳಗೆಜೊತೆ ಜೊತೆಗೆ ಹೆಜ್ಜೆ ಹಾಕುವ ಬಡತನವೇ ಲೇಸು ಅನುದಿನವೂ ಸಾಯಿಸುತಿವೆ ಮೌಲ್ಯಗಳು ನನ್ನ‘ಮಲ್ಲಿ’ಯ ಹೃದಯದಲ್ಲಿರುವ ಮರಣವೇ ಲೇಸು **********************
ಮತ್ಲಾ ಗಜಲ್
ಮತ್ಲಾ ಗಜಲ್ ತೇಜಾವತಿ ಹೆಚ್.ಡಿ. ನೀನಿರದ ವಿರಾಮವು ಬೇಡವಾಗಿವೆ ಈಗಮಾಯಾ ಮನಸ್ಸು ಖಿನ್ನತೆಗೆ ಜಾರುತಿವೆ ಈಗ ನೀ ನೋಡದ ಅಲಂಕಾರವು ಮಂಕಾಗಿವೆ ಈಗತೊಟ್ಟ ಆಭರಣಗಳೇ ಭಾರವಾಗಿವೆ ಈಗ ನಿನ್ನಗಲಿದ ಇರುಳೆಲ್ಲವೂ ಘೋರವಾಗಿವೆ ಈಗದೇವಾ ಕಂಡ ಕನಸೆಲ್ಲವೂ ದುಃಸ್ವಪ್ನವಾಗಿವೆ ಈಗ ನೀನಾಡದ ಮಾತುಗಳು ಕರಗಿ ಹೋಗಿವೆ ಈಗಅಳಿದುಳಿದ ಭಾವನೆಗಳು ಹೆಪ್ಪುಗಟ್ಟಿವೆ ಈಗ ನೀನಿಲ್ಲದ ನಂದನವನ ಬರಡಾಗಿವೆ ಈಗಬೀಸುವ ತಂಗಾಳಿಯೂ ಬತ್ತಿಹೋಗಿವೆ ಈಗ ‘ತೇಜ’ ನೀ ಬಾರದ ದಿನಗಳು ಸ್ತಬ್ಧವಾಗಿವೆ ಈಗಹಗಲು ರಾತ್ರಿಯ ವ್ಯತ್ಯಾಸವೇ ತಿಳಿಯದಾಗಿವೆ ಈಗ *
ಗಝಲ್
ಗಝಲ್ ಸುಜಾತಾ ರವೀಶ್ ಅಕ್ಷರದ ಪಯಣಕ್ಕೆ ಒಂದಾಗಿ ಹೊರಡೋಣ ಬರುವೆಯಾ ಸಂಗಾತಿ ಅಕ್ಷಯದ ಒಲವಿನ ಸುಗಮ ಸಂಪ್ರೀತಿಯನು ತರುವೆಯಾ ಸಂಗಾತಿ ಶಬ್ದಗಳ ಮಾಲೆಯನ್ನು ಕಟ್ಟುತಾ ಹಾಕೋಣವೇ ಕನ್ನಡಮ್ಮನಿಗೆ ಹಾರ? ಪದಗಳ ಅಡಿಪಾಯ ನೆಡಲು ಶ್ರಮದಕಲ್ಲ ಹೊರುವೆಯಾ ಸಂಗಾತಿ ಸಾಹಿತ್ಯದ ತೇರನೆಳೆಯುತ ಮುಂದಡಿ ಇಡುತಲಿ ಸಾಗೋಣವೇ? ಸಾಂಗತ್ಯದ ಭರವಸೆ ಕೊಡುತ ಬಾಳಗಮ್ಯ ಸೇರುವೆಯಾ ಸಂಗಾತಿ ಕುಶಲ ಕರ್ಮಿಯಂತೆ ಮಾಡೋಣ ಚಿತ್ತಾರದ ಕುಸುರಿ ಕೆಲಸ ವಿಶಾಲ ಪುಸ್ತಕಗಳ ಆಗಸದಿ ನನ್ನೊಡನೆಯೇ ಹಾರುವೆಯಾ ಸಂಗಾತಿ ಅನನ್ಯವು ಕಾವ್ಯಪ್ರಪಂಚ ವಿಸ್ಮಯ ವಿನೂತನ ವಿಹಾರವಿದು ಅಮೂಲ್ಯವು ಸುಜಿಗೆ ಓದುವಿಕೆ ಕಡೆವರೆಗೂ ಇರುವೆಯಾ ಸಂಗಾತಿ *****************************
ಗಝಲ್
ಗಝಲ್ ಸ್ಮಿತಾ ಭಟ್ ಒಲವಿನ ನಿರೀಕ್ಷೆಯ ಬದುಕ ಮುಗಿಸಿದ್ದೇನೆನಲಿವಿನ ದೀಪದೆದುರು ಕಣ್ಮುಚ್ಚಿ ಕುಳಿತಿದ್ದೇನೆ/ ಯಾರಿಗೆ ಯಾರೂ ಆಸರೆಯಲ್ಲ ಇಲ್ಲಿಸೆರೆಯಾದ ಉಸಿರಿನ ಕೀಲಿ ತೆಗೆದಿದ್ದೇನೆ / ಕ್ಷಮಿಸು ಕಣ್ಣತೇವಕ್ಕೆ ನನ್ನ ಹೊಣೆ ಮಾಡದಿರುಕರವಸ್ತ್ರ ಇರಿಸಿಕೊಳ್ಳುವ ರೂಢಿ ಮರೆತಿದ್ದೇನೆ/ ಮೊಗಕೆ ಒಳಗುದಿಯ ತೋರುವ ಇರಾದೆ ಇಲ್ಲಬರಿದೇ ತರತರದ ಮಾತಾಗಿ ನಗುತ್ತಿದ್ದೇನೆ/ ಬಲಹೀನ ಮನಸು ಏನೂ ಸಾಧಿಸದು ಮಾಧವಾಭವಿತವ್ಯದ ಬಾಗಿಲಿಗೆ ತೋರಣವ ಕಟ್ಟಿದ್ದೇನೆ/ *********************************
ಗಝಲ್
ಗಝಲ್ ರತ್ನ ರಾಯಮಲ್ಲ . ಬದಲಾಗುವ ಋತುಮಾನಗಳಲ್ಲಿ ನೀನೇ ನನ್ನ ವಸಂತನಿನಗಾಗಿ ಮನೆ-ಮಠಗಳನ್ನು ತೊರೆದ ನಾನೇ ನಿನ್ನ ಸಂತ ಶಶಿಗೂ ಬೆಳದಿಂಗಳನು ನೀಡಿರುವ ಚಂದ್ರಮುಖಿ ನೀನುಹೃದಯದಿ ನಿನಗಾಗಿ ಪಾರಿಜಾತ ಹೂ ನೆಟ್ಟ ಹೃದಯವಂತ ನೀನು ಇಲ್ಲದ ಕತ್ತಲೆ ವೈರಿಯಾಗಿ ಕಾಡುತ್ತಿದೆ ಅನುದಿನವೂನಿನಗಾಗಿ ಪ್ರೇಮದ ಕಂದೀಲು ಹಿಡಿದು ಕುಳಿತಿರುವ ಗುಣವಂತ ವಿರಹವನ್ನೇ ಹಾಸಿ ಹೊದ್ದುಕೊಂಡು ಮಲಗಿರುವೆ ನೆನಪಿನಲ್ಲಿನಿನಗಾಗಿ ಸರಸದ ಪಲ್ಲಂಗ ಹಾಕಿರುವೆನು ಪ್ರೀತಿಯ ಸಿರಿವಂತ ನಿನಗೋಸ್ಕರ ಹಗಲನ್ನು ತಡೆದು ನಿಲ್ಲಿಸುತಿರುವನು ಈ ಮಲ್ಲಿಆಗಸದ ತಾರೆಗಳನ್ನು ನಿನ್ನ ಮುಡಿಗಾಗಿ ಹೆಣೆದ […]
ಗಝಲ್
ಗಝಲ್ ಎ . ಹೇಮಗಂಗಾ ಕಲ್ಲುಮುಳ್ಳುಗಳ ಹಾದಿಯಲ್ಲಿ ನಡೆಯುತ್ತಲೇ ಇದ್ದೇನೆ ನಾನೇಕೆ ಹೀಗೆಕಷ್ಟ ಕಾರ್ಪಣ್ಯಗಳಲ್ಲಿ ಮುಳುಗುತ್ತಲೇ ಇದ್ದೇನೆ ನಾನೇಕೆ ಹೀಗೆ ಮೇಲೇರಬೇಕೆಂದರೂ ಕಾಲು ಹಿಡಿದು ಜಗ್ಗುವವರೇ ಹೆಚ್ಚುನಿತ್ಯ ಬೆನ್ನಿಗೆ ಇರಿಸಿಕೊಳ್ಳುತ್ತಲೇ ಇದ್ದೇನೆ ನಾನೇಕೆ ಹೀಗೆ ಮೋಡಿ ಮಾತುಗಳಿಗೆ ಮರುಳಾದರೂ ಎಚ್ಚೆತ್ತುಕೊಳ್ಳಲಿಲ್ಲಕುಹಕಿಗಳ ನೋಟಕೆ ಗುರಿಯಾಗುತ್ತಲೇ ಇದ್ದೇನೆ ನಾನೇಕೆ ಹೀಗೆ ಬೆಳ್ಳಗಿರುವುದೆಲ್ಲಾ ಹಾಲೆಂಬ ನಂಬಿಕೆ ಹೆಜ್ಜೆಹೆಜ್ಜೆಗೂ ಹುಸಿಯಾಗಿದೆವಂಚನೆಯ ಹಾಲಾಹಲವ ಕುಡಿಯುತ್ತಲೇ ಇದ್ದೇನೆ ನಾನೇಕೆ ಹೀಗೆ ಬೇಲಿಯೇ ಎದ್ದು ಹೊಲ ಮೇಯುವ ಕಾಲ ಇದಲ್ಲವೇ ಹೇಮತಿದ್ದಲಾಗದ ನನ್ನ ನಾನು ಹಳಿಯುತ್ತಲೇ ಇದ್ದೇನೆ […]
ಗಝಲ್
ಗಝಲ್ ರೇಷ್ಮಾ ಕಂದಕೂರ ಮಾತು ಮೌನಗಳ ನಡುವಿನ ಸಮರಕೆ ಕೊನೆಯಿಲ್ಲಸಹನೆಯ ಹೆಸರಿಗೆ ಕಿಂಚಿತ್ತೂ ಬೆಲೆಯಿಲ್ಲ ರೋಗಗ್ರಸ್ತ ಮನಸಿಗೆ ಉಪಶಮನದ ಅವಶ್ಯಕತೆ ಇದೆಚಿಗುರೊಡೆದೆ ಬಾಂಧವ್ಯಕೆ ಸಹಕಾದರ ಬಳುವಳಿಯಿಲ್ಲ ಜಗದ ಜಂಜಡಕೆ ನಿತ್ಯ ರಂಗುರಂಗಿನ ಆಟಉದ್ವೇಗ ವಿಷಾದದ ನಡುವಿನ ಪ್ರಸ್ತಾವನೆಗೆ ಕೊನೆಯಿಲ್ಲ ಬಡಿವಾರದಿ ಊಹಾಪೋಹಗಳು ತುಂಬಿ ತುಳುಕಿವೆಹಮ್ಮಿನ ಕೋಟೆಯಲಿ ಮೆರೆದವರಿಗೆ ಉಳಿಗಾಲವಿಲ್ಲ ಅಂಗಲಾಚಿ ಬೇಡುತಿದೆ ಭಿನ್ನತೆಗೆ ವಿರಮಿಸೆಂದು ರೇಷಿಮೆ ಮನಒಳಗಣ್ಣು ತೆರೆಯದೆ ನಿರ್ಣಯಿಸಿದರೆ ಕೊಡಲಿ ಏಟಿಗೆ ಕೊನೆಯಿ *****************************
ಗಝಲ್
ಗಝಲ್ ರತ್ನರಾಯ ಮಲ್ಲ ಸಿದ್ಧಾಂತಗಳು ಕಚ್ಚಾಡಿದರೆ ಮತ್ತೆಂದಿಗೂ ಹತ್ತಿರವಾಗಲಾರವುವಾಸನೆಗಳು ಬಡಿದಾಡಿದರೂ ಯಾವತ್ತೂ ದೂರವಾಗಲಾರವು ಜಗಳವು ಸಾಗುತ್ತಿದೆ ಅಲ್ಲಿ ಜೋರಾಗಿ ನಿನ್ನ ಮನ ಕಲುಕುವಂತೆನ್ಯಾಯ ಹುಡುಕುವ ಮನಗಳು ನೆಮ್ಮದಿಯಿಂದ ಬಾಳಲಾರವು ಮೂರನ್ನು ತೊರೆಯುವುದೆ ಇಂದು ಸೌಹಾರ್ದದ ರೂಪ ತಾಳಿದೆಕೈ-ಕಾಲುಗಳು ಹಿಡಿಯದ ಪ್ರತಿಭೆಗಳಿಗೆ ಪ್ರಚಾರ ಮುತ್ತಿಕ್ಕಲಾರವು ಕಸ ಗುಡಿಸುವ ಹುಚ್ಚು ಭ್ರಮೆಯಲ್ಲಿ ಕಸಬರಿಗೆ ಆಗದಿರು ನೀನುಸುಂದರ-ಉತ್ತಮ ಪೊರಕೆಗಳೂ ಸಹ ಪೂಜೆಗೆ ಒಳಗಾಗಲಾರವು ವೈಯಕ್ತಿಕ ಗಟ್ಟಿ ಹೆಜ್ಜೆಯೂರಬೇಕು ನಿಸ್ವಾರ್ಥದ ನೆಲೆಯಲ್ಲಿ ಇಲ್ಲಿಚೂರಿ ಹಾಕಿದ ಹೃದಯಗಳು ‘ಮಲ್ಲಿ’ ಎದೆಯಲ್ಲಿ ಉಳಿಯಲಾರವು ************************************
ಗಝಲ್
ಗಝಲ್ ಪ್ರಭಾವತಿ ಎಸ್ ದೇಸಾಯಿ ಪ್ರೀತಿಯ ಆಳ ಹರವು ತಿಳಿದಿಲ್ಲ ಸಾವೇ ದೂರವಿರುಕಡಲು ಈಜಿ ದೇಹವು ದಣಿದಿಲ್ಲ ಸಾವೇ ದೂರವಿರು ಮಧುಶಾಲೆಯಲಿ ನೆಮ್ಮದಿ ಹುಡುಕುತಿರುವೆ ತಡೆಯ ಬೇಡಸುಖ ಪಡೆಯುವ ಸರದಿಯು ಬಂದಿಲ್ಲ ಸಾವೇ ದೂರವಿರು ಕೊರೆವ ಚಳಿ ನಡುಗುತಿದೆ ತನು ನೆನಪ ಬಾಹು ಬಂಧನದಲಿಹೊದ್ದ ಒಲವ ಕಂಬಳಿ ಹರಿದಿಲ್ಲ ಸಾವೇ ದೂರವಿರು ಮೋಹನ ಮುರಳಿ ಗಾನಕೆ ಮನ ಸೋತು ಬಂದೆ ನದಿ ತಟಕೆಹೃದಯ ತಣಿಸುವ ಮಾತು ಮುಗಿದಿಲ್ಲ ಸಾವೇ ದೂರವಿರು ತಾಮಸದ ಕರಿ ನೆರಳು ಕರಗಿ ಅರಿವಿನ”ಪ್ರಭೆ” […]
ಗಝಲ್
ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ಅದ್ಯಾವ ಗಳಿಗೆಯಲಿ ನನ್ನಿಂದ ದೂರವಾದೆ ಗೆಳತಿಮನದೊಳು ಭಾವನೆಗಳ ಬಿತ್ತಿ ಮರೆಯಾದೆ ಗೆಳತಿ ಹೃದಯದಿ ಪ್ರೀತಿ ಬಸಿದು ಮೌನ ನೀಡಿದೆಯಲ್ಲಸಾವಿನ ಮನೆ ಅಂಗಳದಿ ಹೆಜ್ಜೆ ಮೂಡಿದೆ ಗೆಳತಿ ಮೊಳ ಹೂವು ತಂದವರು ಶವಕೆ ಅರ್ಪಿಸಿದ್ದಾರೆನನ್ನ ಹೆಣದ ಮೆರವಣಿಗೆಯುದ್ದಕೂ ಧ್ಯಾನಿಸಿದೆ ಗೆಳತಿ ಹಾದಿ ಬೀದಿಯಲಿ ನಮ್ಮಿಬ್ಬರದೆ ಮಾತು ಜನರ ಬಾಯಲ್ಲಿಧರೆಯ ನಾಚಿಸುವ ಜೋಡಿ ಎಂದು ಹೊಗಳಿದೆ ಗೆಳತಿ ಲೋಕ ನಿಂದೆ ಹೊಗಳಿಕೆಯ ಕೇಳದೆ ಸುಮ್ಮನಿದ್ದೆವುಒಳಗಾದ ಗಾಯ ನೋವು ಯಾರಿಗೂ ತಿಳಿಯದೆ ಗೆಳತಿ ಮರುಳ ಸಾಕಿನ್ನೂ ಲೋಕದ […]