Category: ಇತರೆ

ಇತರೆ

ಲಾಕ್ಡೌನ್ ಬೇಡಿಕೆ

ಗಣೇಶ್ ಭಟ್ ಸಮೂಹ ಸನ್ನಿಯಾಗುತ್ತಿರುವ ಲಾಕ್ಡೌನ್ ಬೇಡಿಕೆ ಕೊರೊನಾ ವೈರಸ್ ಹಾವಳಿಯ ಕುರಿತಾದ ಭಯದಿಂದಾಗಿ ಲಾಕ್ಡೌನ್ಗಾಗಿ ಒತ್ತಾಯ ಪ್ರಾರಂಭವಾಗಿದೆ.ಲಾಕ್ಡೌನ್ನಿಂದಾಗಿ ಕೊರೊನಾ ಪಿಡುಗನ್ನು ಹೋಗಲಾಡಿಸಬಹುದೆಂಬುದಕ್ಕೆ ಯಾವುದೇ ಆಧಾರವಿಲ್ಲ. 10, 20 ಅಥವಾ ಇನ್ನೂ ಎಷ್ಟೇ ವಾರಗಳ ಸಂಪೂರ್ಣ ಲಾಕ್ಡೌನ್ನಂತರವೂ ಜನರ ಓಡಾಟ ಪ್ರಾರಂಭವಾದಾಗ ವೈರಸ್ನ ಹಬ್ಬುವಿಕೆ ಒಮ್ಮೆಲೇ ಹೆಚ್ಚುವುದು ಸಹಜವೆಂದು ಸೋಂಕು ರೋಗ ತಜ್ಞರು ಅಭಿಪ್ರಾಯ ಪಡುತ್ತಾರೆ.ಕೇಂದ್ರ ಸರ್ಕಾರ ರಚಿಸಿದ ತಜ್ಞರ ತಂಡ ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿ ಭಾರತದಲ್ಲಿ ಲಾಕ್ಡೌನ್ ವಿಧಿಸದಂತೆ ಕಳೆದ ಫೆಬ್ರುವರಿಯಲ್ಲಿ ಸಲಹೆ ನೀಡಿತ್ತು. […]

ಭಯ ಪಡುವುದೇನಿಲ್ಲ

  ಡಾ ಪ್ರತಿಭಾ  ಹಳಿಂಗಳಿ ಭಯ ಅಂದರೆ ಏನು ಎನ್ನುವವರು ಕೂಡ ಈ ಕೊರೊನಾ ಮಹಾಮಾರಿಗೆ ಹೆದರುವಂತಾಗಿದೆ.ತನ್ನ ಕಬಂಧ ಬಾಹುಗಳಿಂದ ಇಡಿಯ ವಿಶ್ವವನ್ನೇ ತಲ್ಲಣಗೊಳಿಸಿರುವ ಈ ರೋಗಕ್ಕೆ ಚಿಕಿತ್ಸೆ ಇನ್ನು ಲಭ್ಯವಿಲ್ಲ.            ಇದರ ಮುಖ್ಯ ಲಕ್ಷಣ ಸೀನು,ಕೆಮ್ಮು,ಜ್ವರ ನೋಡಿದರೆ ಸಾಮಾನ್ಯ ನೆಗಡಿ,ಕೆಮ್ಮಿನಂತೆ ಈ ರೋಗ ಯಾವುದೇ ಹೊತ್ತಿನಲ್ಲಿ ತನ್ನ ಅಸ್ತಿತ್ವ ಬದಲಾಯಿಸಿ ಭಯಂಕರ ವಾಗಿಬಿಡುತ್ತದೆ.ಉಸಿರಾಟದ ತೊಂದರೆ ಉಂಟಾಗಿ ಸರಿಯಾಗಿ ಉಸಿರಾಡಲು ಆಗದೆ ಆಕ್ಸಿಜನ್, ವೆಂಟಿಲೇಟರಗಳ ಬಳಕೆ ಅನಿವಾರ್ಯ ವಾಗುತ್ತದೆ.ಕೊರೊನಾ ಪೀಡಿತ ಎಲ್ಲಾ ರೋಗಿಗಳಿಗೂ ಆಕ್ಸಿಜನ್ ಮತ್ತು […]

ಹಿಂಡು ಮೋಡದ ಗಾಳಿ ಸವಾರಿ

ಪ್ರಜ್ಞಾ ಮತ್ತಿಹಳ್ಳಿ ಹಿಂಡು ಮೋಡದ ಗಾಳಿ ಸವಾರಿ -ಆಷಾಢ     ಮದ್ದಾನೆಯ ಹಿಂಡೊಂದು ಧಾಳಿಯಿಟ್ಟಂತೆ ಅಲ್ಲೋಲಕಲ್ಲೋಲಗೊಳ್ಳುವ ಆಕಾಶದಂಗಳ. ಅದಾಗಲೇ ರಜೆ ಹಾಕಿ ವಿಳಾಸ ಕೊಡದೇ ನಾಪತ್ತೆಯಾದ ಸೂರ್ಯ. ಭರ‍್ರೋ ಎಂದು ಬೀಸುತ್ತ ಗಿಡ-ಮರಗಳನ್ನು ಮಲಗಿಸುವ ರಭಸದ ಗಾಳಿ. ಬೆಳಗೊ-ಬೈಗೊ ಒಂದೂ ತಿಳಿಯದಂತೆ ಮೋಡ ಮಡುಗಟ್ಟಿಕೊಂಡ ಬಾನಾಂಗನೆಯ ಮುಖಾರವಿಂದ.  ಹುರುಪು ಬಂದದ್ದೇ ಕುಮ್ಚಿಟ್ಟೆ ಹೊಡೆದು, ಗಿರಿಗಿರಿ ಮಂಡಿ ತಿರುಗುವ ಪುಂಡು ವೇಷದ ಹಾಗೆ ರಪರಪ ರಾಚುವ ಮಳೆ. ಹಾಂ ಇದು ಆಷಾಢ. ಇದರ ಮೂಲ ಲಕ್ಷಣವೇ ಗಾಳಿ. ಇದು […]

ಖಾಸಗಿರಣಮತ್ತು ಅಭಿವೃದ್ದಿ

ಗಣೇಶ್ ಭಟ್ ಶಿರಸಿ ಖಾಸಗೀಕರಣವೇ ಅಭಿವೃದ್ಧಿಯ ದಾರಿಯೆಂದು ತಪ್ಪಾಗಿ ನಂಬಿರುವ ಕೇಂದ್ರ ಸರ್ಕಾರವು, ಹಲವಾರು ರೇಲ್ವೇ ಮಾರ್ಗಗಳಲ್ಲಿ ಖಾಸಗಿಯವರಿಗೆ ಅವಕಾಶ ನೀಡಲು ಮುಂದಾಗಿದೆ.ಈ ನೀತಿಯ ಪ್ರಕಾರ ಖಾಸಗಿ ನಿರ್ವಹಣಾಕಾರರು ತಮ್ಮದೇ ಬಂಡವಾಳ ತೊಡಗಿಸಿ ಹೊಸ ಎಂಜಿನ್ ಮತ್ತು ಭೋಗಿಗಳನ್ನು ಖರೀಧಿಸಿ ನಿಗದಿತ ಮಾರ್ಗಗಳಲ್ಲಿ ರೈಲು ಓಡಿಸಬೇಕು. ಪ್ರಯಾಣ ದರವನ್ನು ನಿಗದಿ ಪಡಿಸುವ ಅಧಿಕಾರವನ್ನು ನಿರ್ವಹಣಕಾರರಿಗೇ ಬಿಡಲಾಗಿದೆ. ಅವರ ಒಟ್ಟೂ ಗಳಿಕೆಯಲ್ಲಿ ಶೇಖಡವಾರು ಪಾಲನ್ನು ರೇಲ್ವೆ ಇಲಾಖೆಗೆ ನೀಡಬೇಕಿದೆ.ಈ ವಿಧದ ಖಾಸಗೀಕರಣದಿಂದ ರೇಲ್ವೇ ಪ್ರಯಾಣ ದರದಲ್ಲಿ ಹೆಚ್ಚಳವಾಗುವದೆಂಬ ಜನಸಾಮಾನ್ಯರ […]

ಕೋವಿಡ್-19,ಆತ್ಮಾವಲೋಕನ

ಸುರೇಶ್ ಎನ್.ಶಿಕಾರಿಪುರ ಕೋವಿಡ್ -೧೯ ಆತ್ಮಾವಲೋಕನದ ಅದೃಶ್ಯ ದೂತ. ತೊಂಬತ್ತರ ದಶಕದಿಂದ ಇಲ್ಲಿಯ ವರೆಗೆ ಅಂದರೆ ಸುಮಾರು ಮೂವತ್ತು ವರ್ಷಗಳಿಂದ ಈ ದೇಶದಲ್ಲಿ ಮಂದಿರ – ಮಸೀದಿಗಾಗಿ ನಡೆದ ಕಲಹ ಕಿತ್ತಾಟ ಹೋರಾಟ ರಾಜಕೀಯ ಈಗ ಫಲ ನೀಡುತ್ತಿದೆ. ಬಿತ್ತಿದ್ದೇ ಬೆಳೆಯುವುದು. ಜ್ಞಾನವನ್ನು ಬಿತ್ತಿದರೆ ಜ್ಞಾನ ಅಜ್ಞಾನವನ್ನು ಬಿತ್ತಿದರೆ ಅಜ್ಞಾನ. ಈ ದೇಶದ ಬಹುದೊಡ್ಡ ಯುವ ಸಮುದಾಯವನ್ನು ಮಂದಿರ ನಿರ್ನಾಮ ಮತ್ತು ನಿರ್ಮಾಣಕ್ಕೆ ಹುರಿದುಂಬಿಸಿ ನಾನಾ ಬಗೆಯ ಧಾರ್ಮಿಕ ತಳಹದಿಯ ಸಂಘಟನೆಗಳನ್ನು ಕಟ್ಟಿ ಹಿಂದೂ ರಾಷ್ಟ್ರ ನಿರ್ಮಾಣದ […]

ಹಾಸ್ಯ

ಮದಿರಾ ಪ್ರಿಯರ ಹಳವಂಡಗಳು ಗೌರಿ.ಚಂದ್ರಕೇಸರಿ      ಸಾವಿನಂತಹ ಘೋರಾತಿ ಘೋರ ಪರಿಸ್ಥಿತಿಯಲ್ಲೂ ತಮಾಷೆಗಳನ್ನು ಹುಟ್ಟು ಹಾಕಬಲ್ಲಂತಹ ಎದೆಗಾರಿಕೆ, ಹಾಸ್ಯ ಪ್ರಜ್ಞೆ ಇರುವುದು ನಮ್ಮ ಜನರಿಗೇನೇ ಎಂಬುದು ನನ್ನ ಅಭಿಪ್ರಾಯ. ಕಳೆದ ವರ್ಷ ಬಂದು ಹೋದ ಜಲ ಪ್ರಳಯ, ಈಗಿನ ಕೊರೋನಾದ ಬಗ್ಗೆ ದಿನಕ್ಕೆ ನೂರಾರು ಟಿಕ್ ಟಾಕ್, ಟ್ರೋಲುಗಳು ಬಂದು ಬೀಳುತ್ತವೆ ಮುಖ ಪುಸ್ತಕ, ವಾಟ್ಸಾಪ್ನಲ್ಲಿ. ನೊಂದು ಬೆಂದ ಮನಸುಗಳಿಗೆ ಇವುಗಳಿಂದ ಸ್ವಲ್ಪವಾದರೂ ಉಪಶಮನ ದೊರೆಯುವುದಂತೂ ಹೌದು.      ಕೊರೋನಾದ ರುದ್ರ ತಾಂಡವಕ್ಕೆ ಕಡಿವಾಣ ಹಾಕಲು ಲಾಕ್ […]

ಕಾವ್ಯ ಕುರಿತು

ಕಬ್ಬಿಗರ ಅಬ್ಬಿ-೧ ಮಹಾದೇವ ಕಾನತ್ತಿಲ ಹ್ಞಾ, ಹೀಗೆ ಬನ್ನಿ!, ತೋಟದ ಮಧ್ಯೆ ನಡೆಯೋಣ, ನೋಡಿದಿರಾ, ಎಷ್ಟೊಂದು ಹೂವು ಹಣ್ಣುಗಳು,ಈ ತೋಟದಲ್ಲಿ!. ಅಲ್ನೋಡಿ, ಗುಡ್ಡದಿಂದ ಹರಿದು ಬರುವ ನೀರ ಧಾರೆ! ತೋಟದ ಬದಿಯಲ್ಲಿ ಎತ್ತರದ ಕಲ್ಲು ಬಂಡೆಯ ತುದಿಯಿಂದ ಜಾರಿ ಧಾರೆ ಧಾರೆಯಾಗಿ ಬೀಳುತ್ತಿದೆಯಲ್ಲ, ಅದೇ ಅಬ್ಬಿ! ಇದೇನು ಸಾಧಾರಣ ಅಬ್ಬಿ ಅಂದುಕೊಂಡಿರಾ! ಇದು ಕಬ್ಬಿಗರ ಅಬ್ಬಿ..ಈ ಅಬ್ಬಿಯ ಧಾರೆಗೆ ತಲೆ ಕೊಟ್ಟು, ಎದೆ ಬಿಚ್ಚಿ ನಿಂತು ನೋಡಿ!. ನೀವೂ ಕಾವ್ಯವಾಗುತ್ತೀರಿ, ಕಾವ್ಯ ನಿಮ್ಮಿಂದ ಹರಿಯುತ್ತೆ. ‌ನೀವು ಯಾವುದು, […]

ಪ್ರಸ್ತುತ

ಗುರು-ಶಿಷ್ಯ ಸಂಬಂದ ಪ್ರಜ್ಞಾ ಮತ್ತಿಹಳ್ಳಿ ಕೇವಲ ತರಗತಿಯ ನಾಕು ಗೋಡೆಗಳ ನಡುವೆ ವೇಳಾಪಟ್ಟಿಯ ಚೌಕಗಳ ಮಧ್ಯದಲ್ಲಿ ಸಿಲೆಬಸ್ ಎಂಬ ಅಕ್ಷರದ ಅಂಗಡಿ ಇಟ್ಟುಕೊಂಡ ಇವತ್ತಿನ ಗುರು, ಅಕ್ವೇರಿಯಂನ ಮೀನಿನಂತೆ ಅಸಹಾಯಕನಾಗಿದ್ದಾನೆ. ಅವನಿಗೆ ಸಮಯಮಿತಿ ಹಾಗೂ ವಿಷಯಮಿತಿ. ದಿನಕ್ಕೊಂದೊಂದೇ ಗುಳಿಗೆ ಆಹಾರ ನುಂಗಿ ಗಾಜಿನ ಗೋಡೆಗೆ ಮೂತಿ ಗುದ್ದುತ್ತ ಬುಳುಕ್ ಬುಳುಕ್ ಮುಳುಗುತ್ತಿದ್ದಾನೆ.  ಗುರು-ಶಿಷ್ಯರು ಈ ಚರಾಚರದ ಎಲ್ಲ ಎಲ್ಲೆಗಳನ್ನು ಮೀರಿ ಬೆಳೆಯಬಲ್ಲ ಸಂಬಂಧವನ್ನು ಹೊಂದಿರುತ್ತಾರೆ. ತರಗತಿಯ ಕರಿಹಲಗೆಯ ಮೇಲೆ ಬಿಳಿ ಸೀಮೆ ಸುಣ್ಣಕ್ಕೆ ನೋವಾಗದಂತೆ ಭೂಮಿಯ ಚಿತ್ರ […]

ಕಾವ್ಯ ವಿಶ್ಲೇಷಣೆ

ಟಿ . ಎಸ್. ಏಲಿಯಟ್ ನ ಕವನ “ಜೆ.ಆಲ್ಫ್ರೆಡ್  ಪ್ರುಫ಼್ರಾಕ್ ನ ಪ್ರೇಮ ಗೀತೆ “ ಆಂಗ್ಲ ಸಾಹಿತ್ಯದಲ್ಲಿ ಸ೦ತೃಪ್ತಿಯ ( ಸ್ಯಾಚುರೇಶನ್ ಪಾಯಿ೦ಟ್ ) ಎಲ್ಲೆಯನ್ನು ಮೀರಿ ಏಕತಾನವಾಗುತ್ತಿದ್ದ ರೊಮ್ಯಾಂಟಿಕ್ ಕಾವ್ಯ ಪ್ರಕಾರವನ್ನು ಸ೦ಪೂರ್ಣವಾಗಿ ನಿರಾಕರಿಸಿ ಮಾಡರ್ನಿಸಂನ ಹಾದಿಯಲ್ಲಿ ಸಾಗುತ್ತಾ ಜಗತ್ತಿನ ಸಾಹಿತ್ಯಕ್ಕೇ ಒಂದು ಹೊಸ ತಿರುವನ್ನು ತಂದುಕೊಟ್ಟದ್ದು ಟಿ.ಏಸ್.ಏಲಿಯಟ್. ಅವನಿಗೆ ಬೆಂಬಲವಾಗಿ ನಿ೦ತವನು ಎಜ಼್ರಾಪೌ೦ಡ್. ಏಲಿಯಟ್ ನ ಪ್ರಾರಂಭಿಕ ಕವನಗಳಲ್ಲಿ ಪ್ರಸಿದ್ಧವಾದ ಒಂದು ಕವನ “ಜೆ.ಆಲ್ಫ್ರೆಡ್ ಪ್ರುಫ್ರಾಕ್ ನ ಪ್ರೇಮ ಗೀತೆ ( ಲವ್ […]

ಲಹರಿ

ಹಾಡುಗಳು ಹೀಗೆ…. ಜಿ.ಲೋಕೇಶ್ ಈ ಬದುಕಿನ ಒತ್ತಡಗಳನ್ನು ನಿಭಾಯಿಸುವವರು ತಾವು ಅದರಿಂದ ಮುಕ್ತರಾಗಲು ತಾವು ತಾವಾಗಿಯೇ ಇರಲು ಹಲವು ದಾರಿಗಳನ್ನು ಕಂಡುಕೊಳ್ಳುತ್ತಾರೆ.ಅದರಲ್ಲಿ ಸಂಗೀತವಂತು ಮನಸ್ಸಿಗೆ ಹಬ್ಬ ನೀಡುವ ಬೆಳಕು.ಹಾಡುಗಳನ್ನು ಗುನುಗುತ್ತಾ ಅವುಗಳೊಡನೆ ದಿನ ದೂಡುವ ಎಷ್ಟೋ ಮನಸ್ಸುಗಳಿವೆ. ಕೆಲವು ಹಾಡುಗಳಂತು ಎಷ್ಟು ಕಾಡುತ್ತವೆ ಅಂದರೆ ಬಹುಶಃ ಅವು ನಮ್ಮ ಬದುಕಿನುದ್ದಕ್ಕೂ ಜೊತೆಗೆ ಇದ್ದು ಬಿಡುತ್ತವೆ.ನಮ್ಮೊಂದಿಗೆ, ನಮ್ಮೊಡನೆ,ನಮ್ಮ ಜೀವನದ ಘಟನೆಗಳೊಡನೆ ತಳಕು ಹಾಕಿಕೊಂಡಿರುತ್ತವೆ.ಅದರಲ್ಲಿ ಪ್ರೇಮಿಗಳಿಗಂತು ಹಾಡುಗಳು ವರದಾನ. ಅಂತಹ ಪ್ರೇಮಿ ಹೀಗೆ ತನ್ನ ಜೀವನವನ್ನು ತನ್ನ ಪ್ರಿಯತಮೆಗಾಗಿ ಮೀಸಲಿಡಬಹುದು. […]

Back To Top