ಸ್ವಾತಂತ್ಯ ಪೂರ್ವದಲ್ಲಿ ಮಾಲೀಕರ ಶೋಷಣೆ ಕೆಲಸ ಮಾಡಿಸಿಕೊಳ್ಳುವ ರೀತಿಯನ್ನು ಮತ್ತು ಕಥಾನಾಯಕನ ಆದರ್ಶಗಳು ಜೊತೆಗೆ ಅಸಹಾಯಕತೆಗಳು ಜೀವನದ ಚಿಕ್ಕ ಆಸೆಗೆ ಪರಿಸ್ಥಿತಿಯೊಡನೆ ಮಣಿಯುವ ಮನಸ್ಸು ಅಂದಿನ ಇಮೇಜಿಗೆ ತಕ್ಕಹಾಗೆ ಚಿತ್ರಿಸಿರುವ ನಿರ್ದೇಶಕ ಪ್ರಿಯದರ್ಶನ ಅವರ ನಿರ್ದೇಶನ ನಮ್ಮನ್ನು ಅಂದಿನ ದಿನಗಳಿಗೆ ಕರೆದೊಯ್ಯುತ್ತದೆ.
ಸೀರೆಯಲ್ಲಿ ಬಂಧಿಯಾದ ಅಮ್ಮನ ಬದುಕು…
ಅಮ್ಮನಿಗೆ “ಸೀರೆ” ಅವಳ ಏಕೈಕ ವ್ಯಕ್ತ ವಾಗಿತ್ತು. ಸೀರೆ ಸೀರೆ ಸೀರೆ, ಎಲ್ಲಿ ಹೋದರೂ ಮನೆಯಲ್ಲಿದ್ದರೂ. ಅವಳಿಗೆ ಅದು ಎಂದೂ ವ್ಯಾಪಾರ ಆಗಿರಲಿಲ್ಲ, ಬದುಕಿನ ಶೈಲಿ ಯಾಗಿತ್ತು. ಅವಳು ಉಡದೆಯೇ ಹೋದ ಹತ್ತಾರು ಬಗೆ ಬಾಕಿ ಇದೇ ನಿಜ, ಆದರೆ ಅವಳಿಂದ ಅದ ಪಡೆಯದೆಯೇ ಉಳಿದ ಹೆಣ್ಣಿಲ್ಲ. ಸೀರೆಯೇ ಅಮ್ಮನಾಗಿದ್ದು ಈಗ ಅರಿವಿಗೆ ಬಂತು ಮಗಳಿಗೂ
ಕೋಳಿ ಕಥೆ ಕೇಳಿ
ಹಾಸ್ಯ ಲೇಖನ ಕೋಳಿ ಕಥೆ ಕೇಳಿ ಶಾಂತಿವಾಸು ನಮ್ಮ ಮನೆಯ ಪಕ್ಕದಲ್ಲಿ ಒಂದು ಸೌದೆ ಡಿಪ್ಪೋ ಇತ್ತು. ಆಗೆಲ್ಲಾ ಮಧ್ಯಾನ್ಹ 3 ಗಂಟೆಗೆ ನಾವು ಸ್ಕೂಲಿನಿಂದ ವಾಪಸ್ ಬರುವಾಗ, ಥೇಟ್ ಈಗಿನ ಲಾಕ್ಡೌನ್ ತರಹದ ನಿಶಬ್ದವೇ ಇರುತ್ತಿತ್ತು. ಅಜ್ಜ ಸೌದೆ ಹೊಡೆಯುವಾಗ ಬಿಡುವ “ಹುಶ್ಸಾ ಹುಶ್ಸಾ” ಉಸಿರಿನ ಶಬ್ದ ಮೂರ್ನಾಲ್ಕು ಮನೆಗಳ ದಾಟಿ ಕೇಳುತ್ತಿತ್ತು. ಉಸಿರಾಡುವುದೇ ಅಷ್ಟು ದೊಡ್ಡ ಶಬ್ದವೆಂದರೆ, ಇನ್ನು ಮಾತಾಡುವಾಗ ಧ್ವನಿ ಹೇಗಿರಬೇಡ? ಅದಕ್ಕಿಂತ ಜಗಳವಾಡುವಾಗ ಇನ್ನೂ ನಾಲ್ಕು ರಸ್ತೆಗೆ ಕೇಳಿಸುವುದಿಲ್ಲವೇ? ಅಜ್ಜನ ಹೆಸರು […]
ದಾರಾವಾಹಿ ಆವರ್ತನ ಅದ್ಯಾಯ-16 ಈಶ್ವರಪುರ ಪೇಟೆಯ ಸಿಟಿ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ಚಿನ್ನವನ್ನು ಅಡವಿಟ್ಟು ಹಣ ಪಡೆದ ಗೋಪಾಲ ಸೀದಾ ಶಂಕರನ ಸೈಟಿಗೆ ಬಂದು ನಿಂತ. ಶಂಕರ ತನ್ನ ಮೇಸ್ತ್ರಿ ಸುಬ್ರಾಯನೊಡನೆ ಕಟ್ಟಡ ಕಾಮಗಾರಿಯ ಮಾತುಕತೆಯಲ್ಲಿದ್ದ. ಸ್ವಲ್ಪಹೊತ್ತಿನಲ್ಲಿ ಮೇಸ್ತ್ರಿಯನ್ನೂ ಕೂಲಿಯಾಳುಗಳನ್ನೂ ಕೆಲಸಕ್ಕೆ ತೊಡಗಿಸಿ ಗೋಪಾಲನತ್ತ ಬಂದ. ಗೋಪಾಲ, ಶಂಕರ ಹೇಳಿದ್ದಷ್ಟು ಹಣವನ್ನು ಕೊಟ್ಟು ಗುಜಿರಿಯನ್ನು ಕೊಂಡ. ಬಳಿಕ ತಾನು ಹೇಳಿದ ಜಾಗದ ವಿಷಯವಾಗಿ ಅವನೇನಾದರೂ ಮಾತಾಡುತ್ತಾನೋ ಎಂದು ಕಾದ. ಆದರೆ ಶಂಕರ ಬೇಕೆಂದೇ ಆ ವಿಷಯವನ್ನು ಮರೆತಂತೆ ನಟಿಸಿದ. […]
ಸೊಪ್ಪು ಹೂವೇ….
ಇತ್ತೀಚಿನ ದಿನಗಳಲ್ಲಿ ಪಕ್ಕದ ಹಳ್ಳಿಯಿಂದ ಪ್ರತಿದಿನ ಬರುವ ಸೊಪ್ಪಮ್ಮನೂ ಇಲ್ಲ. ಹೂವಮ್ಮನೂ ಇಲ್ಲ. ಅವರಿಗೆ ಬರುವ ವಾಹನ ವ್ಯವಸ್ಥೆ ಇಲ್ಲದಿರುವುದರಿಂದ ವ್ಯಾಪಾರವೂ ಇಲ್ಲ. ಮನೆ ಬಳಿ ತಲುಪಿದರೂ ಯಾರೂ ಹತ್ತಿರ ಹೋಗಲಾಗದೆ ಒಂದು ರೀತಿ ಅನುಮಾನ. ದೂರದಿಂದಲೇ ಬೇಡವೆಂದು ಕಳಿಸುವ ಅನಿವಾರ್ಯ ಪರಿಸ್ಥಿತಿ..ವ್ಯಾಪಾರವಿಲ್ಲದ ಬದುಕಿನ ಸ್ಥಿತಿಗೆ ಹೂವಮ್ಮಂದಿರು ಉತ್ತರವಿಲ್ಲದೆ ಆಕಾಶ ನೋಡುವಂತಾಗಿದೆ
ಪ್ರೀತಿಗೆ ಒಂದು ಮಿತಿ ಇದೆ ಸ್ನೇಹಕೆ ಎಲ್ಲಿದೆ??
ಅಂದ ಹಾಗೆ ನನ್ನ ಅಣ್ಣನಂತಹ ಗೆಳೆಯನ ಪೂರ್ತಿ ಹೆಸರು ಡಾ. ಶೇಕ್ ಮೊಯರಫ್ ಅಲಿ.. ಆ ಮುದ್ದಾದ ರೂಪದರ್ಶಿಯ ಹೆಸರು ಅಫ್ರಿನ್ ಹಾಗು ಅವಳ ಪುಟ್ಟ ಅಕ್ಕಂದಿರ ಹೆಸರು ಜಾಸ್ಮಿನ್ ಮತ್ತು ನಜ್ನಿನ್.. ಎಲ್ಲರಿಗೂ ರಂಜಾನಿನ ಶುಭಾಶಯಗಳು..
ದಿಲ್ ಢೂಂಡ್ತಾ ಹೈ…
ಉಪವಾಸ ಒಂದು ತಪಸ್ಸು
ಲೇಖನ ಉಪವಾಸ ಒಂದು ತಪಸ್ಸು ಆಸೀಫಾ ಹಬ್ಬಗಳ ಆಚರಣೆ ತನ್ನದೇ ಆದ ಮಹತ್ವ ಹಾಗೂ ವೈಶಿಷ್ಟ್ಯತೆಯನ್ನು ಹೊಂದಿದ್ದು ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ.ಅದರಂತೆ ರಂಜಾನ್ ಮುಸ್ಲಿಮರಿಗೆ ಪವಿತ್ರ ಹಾಗೂ ಪುಣ್ಯ ಸಂಪಾದಿಸಿಕೊಳ್ಳುವ ತಿಂಗಳಾಗಿದೆ.ಮೂವತ್ತು ದಿನಗಳು ಉಪವಾಸಾಚಾರಣೆ,ಖುರಾನ್ ಪಠಣ , ದಾನಧರ್ಮ ಹಾಗೂ ಸನ್ನಡತೆ ಈ ತಿಂಗಳ ವಿಶಿಷ್ಟತೆಗಳು. ಸೂರ್ಯೋದಯದ ಮೊದಲು ಆಹಾರ ಸೇವನೆ ಅಂದರೆ ಸೆಹರಿ ಮಾಡಲಾಗುವುದು, ಸೂರ್ಯೋದಯದ ನಂತರ ಉಪವಾಸ ಬಿಡುವುದು ಅಂದರೆ ಇಫ್ತಾರ್ ಮಾಡಲಾಗುವುದು. . ದಿನವೆಲ್ಲಾ ಖುರಾನ್ ಓದುವುದು,ಜಪಮಾಡುವುದು, ನಮಾಜ್ ಮಾಡುವುದು, ಕೈಲಾದಷ್ಟು […]
ಹಾಲು ಎಲ್ಲಿ ಕೊಳ್ಳುವುದು?
ಅಪರೂಪಕ್ಕೊಮ್ಮೆ ಹಸುಕರು ಹಾಕಿದಾಗ ಗಿಣ್ಣು ಹಾಲು ಉಚಿತವಾಗಿ ವರ್ತನೆಯವರು ಕೊಡುತ್ತಿದ್ದರು.ಮನೆಯ ಕ್ಯಾಲೆಂಡರ್ ನಲ್ಲಿ ನೆಂಟರು ಬಂದಾಗ ಹೆಚ್ಚಿಗೆ ತೊಗೊಂಡ ಹಾಲಿನ ಲೆಕ್ಕ ಗುರುತಿಸುವ ಕೆಲಸ ಮಕ್ಕಳಿಗೆ.ತಿಂಗಳ ಕೊನೆಗೆ ಲೆಕ್ಕ ಹಾಕಿ ಚುಕ್ತಾ ಮಾಡಿದರಾಯಿತು.
ತನ್ನಿಂದಲೇ ಜೀವ-ಜೀವನ ಸಾಗಿಸುವವರು ತಪ್ಪು ಮಾಡಿದಾಗ ತಿದ್ದಿಕೊಳ್ಳದಿದ್ದರೆ ಅವನ ಮಾತು ಕೇಳದಿದ್ದರೆ ಮನುಷ್ಯ ಯಾವ ಕೆಳಹಂತಕ್ಕಾದರೂ ಪಿಶಾಚಿಯಾದರೂ ಸರಿ ಹಿಂಜರಿಯಲ್ಲ ಅಂತ ಸಾರಾಳ ಕಥೆಯು ಒಂದು ಪಾಠವಾಗಲಿದೆ ಎಂದರೂ ತಪ್ಪಾಗಲಾರದು.