Category: ಅಂಕಣ

ಅಂಕಣ

ಸ್ವಾತ್ಮಗತ

ಪಾಟೀಲ್ ಪುಟ್ಟಪ್ಪನವರಿಗೆ ನೂರರ ಸಂಭ್ರಮ ಕೆ.ಶಿವುಲಕ್ಕಣ್ಣವರ ಟಿಯೆಸ್ಸಾರ್ ಪ್ರಶಸ್ತಿ ಪುರಸ್ಕೃತ, ಪತ್ರಿಕೋದ್ಯಮ ಭೀಷ್ಮ ನಾಡೋಜ ಡಾ.ಪಾಟೀಲ ಪುಟ್ಟಪ್ಪರಿಗೆ ನೂರಾರ ಸಂಭ್ರಮ..! ಪಾಟೀಲ ಪುಟ್ಟಪ್ಪರು 1921ರಿಂದ ಪತ್ರಿಕೋದ್ಯಮವನ್ನು ಕನ್ನಡ ಪರ ಹೋರಾಟಕ್ಕೆ ದುಡಿಸಿಕೊಳ್ಳುತ್ತಿರುವ ಧೀಮಂತ. ಪಾಟೀಲ ಪುಟ್ಟಪ್ಪನವರು ಹುಟ್ಟಿದ್ದು 1921ರಲ್ಲಿ. ಈಗಿನ ಹಾವೇರಿ ಜಿಲ್ಲೆಯ ಕುರುಬಗೊಂಡದಲ್ಲಿ. ತಂದೆ ಸಿದ್ಧಲಿಂಗಪ್ಪ, ತಾಯಿ ಮಲ್ಲಮ್ಮ… ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದ ಅಪರೂಪದ ಪ್ರತಿಭಾವಂತ ಪಾಪು. ಸ್ವಾತಂತ್ರ್ಯ ಬರುವುದಕ್ಕೆ ಒಂದು ವರ್ಷ ಮೊದಲೇ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಪಾಪು, ಬರಹಗಳು ಅಂದೂ ಸಿಡಿಗುಂಡು, ಇಂದೂ ಸಿಡಿಗುಂಡು. 1946ರಲ್ಲಿ ವಿಶಾಲ ಕರ್ನಾಟಕ ಸಾಪ್ತಾಹಿಕಕ್ಕೆ ಸಂಪಾದಕರಾದ ಅವರು ಅದೇ ಪತ್ರಿಕೆಯನ್ನು 1947ರಲ್ಲಿ ಅಂದರೆ ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷವೇ ದಿನಪತ್ರಿಕೆಯನ್ನಾಗಿ ಮಾಡಿದರು. ಆದರೆ ಪುಟ್ಟಪ್ಪನವರ ಪ್ರತಿಭೆಯ ದರ್ಶನ ಸಾರ್ಥಕ ರೀತಿಯಲ್ಲಿ ಆಗಿದ್ದು 1954ರಲ್ಲಿ ಅವರು ಪ್ರಪಂಚ ಸಾಪ್ತಾಹಿಕವನ್ನು ಆರಂಭಿಸಿದ ಬಳಿಕವೇ. ಹಲವು ಅಂಕಣಗಳ ಮೂಲಕ ಅವರು ನೀಡುತ್ತಿದ್ದ ಜ್ಞಾನದಾಸೋಹ ಆ ಸಾಪ್ತಾಹಿಕವನ್ನು ಬೌದ್ಧಿಕ ವಲಯದಲ್ಲಿ ಜನಪ್ರಿಯವನ್ನಾಗಿಸಿತು. 1959ರಲ್ಲಿ ಅವರು ವಿಶ್ವವಾಣಿ ದೈನಿಕವನ್ನು ಆರಂಭಿಸಿದರು. ಬರಹ-ಭಾಷಣ ಪಾಪು ಅವರ ಎರಡು ಪ್ರಮುಖ ಅಸ್ತ್ರಗಳು. ಕನ್ನಡ ಭಾಷೆ, ಕರ್ನಾಟಕದ ಗಡಿ, ಕನ್ನಡಿಗರ ಹಿತ-ಈ ಮೂರಕ್ಕೆ ಧಕ್ಕೆ ಎದುರಾಗುತ್ತಿದೆ ಎನಿಸಿದಾಗಲೂ ಪಾಪು ಗುಡುಗಿದ್ದಾರೆ. ಅನ್ಯಾಯಕ್ಕೆ ಕಾರಣರಾದವರನ್ನು ಅವರು ಎಷ್ಟೇ ದೊಡ್ಡವರಿರಲಿ-ಪಾಪು ಗುಡಿಸಿಹಾಕಿದ್ದಾರೆ. ಹರಿತ ಬರಹ, ಚುರುಕು ನಾಲಗೆಯ ಚಾಟಿ ಏಟಿನ ಮೂಲಕ ಪಾಪು, ಕರ್ನಾಟಕದ ಎಷ್ಟೋ ರಾಜಕಾರಣಿಗಳ ನಿದ್ದೆಯನ್ನೂ ನೆಮ್ಮದಿಯನ್ನೂ ಕೆಡಿಸಿದ್ದಾರೆ… ಪಾಪು ಅವರನ್ನು ಪತ್ರಿಕೋದ್ಯಮಿ ಎಂದು ಕರೆದರೆ ಅವರನ್ನು ಪೂರ್ಣವಾಗಿ ಅರ್ಥಮಾಡಿಕೊಂಡಂತೆ ಆಗುವುದಿಲ್ಲ. ಅವರು ಮೂಲತಃ ಅವಿರತ ಹೋರಾಟಗಾರ. ಪಾಪು ಅವರಿಗೆ ಬರಹ ಎನ್ನುವುದು ಪಾದರಸ ಚಟುವಟಿಕೆ. ತಮ್ಮದೇ ಪತ್ರಿಕೆಗಳಿಗೆ ಪ್ರತಿನಿತ್ಯ. ಪ್ರತಿವಾರ ಬರೆಯುವುದು ಒಂದು.ಇತರ ನಿಯತಕಾಲಿಕಗಳಿಗೆ, ದೈನಿಕಗಳಿಗೆ ಅಂಕಣ ಬರೆಯುವುದು ಇನ್ನೊಂದು. ಆದರೆ ಬರಹದ ತಂತು ಒಂದೇ ಅದು ಕನ್ನಡಪರ ಕಾಳಜಿ. ಕರ್ನಾಟಕ ಏಕೀಕರಣ, ಆಂದೋಳನ, ಗೋಕಾಕ ಚಳವಳಿ, ಕರ್ನಾಟಕ-ಮಹಾರಾಷ್ಟ್ರ ಗಡಿ ತಂಟೆ-ಹೀಗೆ ಹತ್ತು-ಹಲವು ಯಾವುದೇ ವಿಚಾರವಿರಲಿ ಅಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗದಂತೆ ಕತ್ತಿ ಝಳಪಿಸಿದವರು ಪಾಪು. ರಾಜ್ಯಸಭೆ (1962ರಿಂದ 75ರವರೆಗೆ) ಸದಸ್ಯರಾಗಿದ್ದಾಗಲೂ ಅವರು ಅದೇ ಪಾಪು; ಅದೇ ಛಾಪು… ಕರ್ನಾಟಕಕ್ಕೆ ಆಗಿರುವ, ಆಗುತ್ತಿರುವ ಅನ್ಯಾಯಗಳತ್ತ ಕೇಂದ್ರ ಸರ್ಕಾರದ ಗಮನವನ್ನು ಸೆಳೆಯುವ ನಿರ್ಣಾಯಕ ಪಾತ್ರವನ್ನು ಅವರು ಆಗ ನಿರ್ವಹಿಸಿದರು. ಮತ್ತು ಈ 100ರ ಹೊಸ್ತಲಲ್ಲಿದರೂ ಹಾಗೇ ಕನ್ನಡ ಪರವಾಗಿ ಕನ್ನಡ ಪರ ಮತ್ತು ಕರ್ನಾಟಕ ಪರ ಅದೇ ಜವಾಬ್ದಾರಿ ಹೊತ್ತವರು… ವಿಶ್ವದ ಹತ್ತಾರು ದೇಶಗಳಿಗೆ ಭೇಟಿ ನೀಡಿ ಉಪನ್ಯಾಸ, ಭಾಷಣಗಳ ಮೂಲಕ ಭಾರತವನ್ನು ಆ ಮೂಲಕ ಕರ್ನಾಟಕವನ್ನು ದರ್ಶನ ಮಾಡಿಸಿದ ಹಿರಿಮೆ ಅವರದು. ಬೆಳಗಾವಿಯಲ್ಲಿ ನಡೆದ 70ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅವರು ಮಾಡಿದ ಭಾಷಣ ಮುಂದಿನ ಪೀಳಿಗೆಗೆ ಕನ್ನಡ, ಕರ್ನಾಟಕ ಕುರಿತಂತೆ ಅಧ್ಯಯನ ವಸ್ತು, ಆಕರ ಸಾಮಗ್ರಿ. ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಹಾಗೂ ಸೆನೆಟ್‍ಗೂ ಸದಸ್ಯರಾಗಿದ್ದ ಪಾಪು, ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಮೂರ್ನಾಲ್ಕು ದಶಕಗಳಿಗೂ ಹೆಚ್ಚು ಅವಧಿಗೆ ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ ಪಾಪು. ನನ್ನದು ಈ ನಾಡು, ನಮ್ಮದು ಈ ಭರತಭೂಮಿ, ಸೋವಿಯತ್ ದೇಶ ಕಂಡೆ, ಸಾವಿನ ಮೇಜವಾನಿ ಮತ್ತಿತರ ಸಣ್ಣ ಕಥೆಗಳು, ಬದುಕುವ ಮಾತು (2 ಸಂಪುಟ) ಪಾಪು ಪ್ರಪಂಚ (4 ಸಂಪುಟ) ಪಾಪು (ಪ್ರಕಟಿಸಿರುವ ಕೃತಿಗಳು) ಇನ್ನಿತರ ಕೃತಿಗಳನ್ನು ರಚಿಸಿದ್ದಾರೆ ಪಾಪು… ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ನಡೆಸಿದ ಪ್ರಮುಖರನೇಕರಲ್ಲಿ ಪಾಪು ಸಹ ಒಬ್ಬರು. ಕನ್ನಡದ ಪಾರಮ್ಯಕ್ಕಾಗಿ ನಡೆದ ಗೋಕಾಕ್ ಚಳವಳಿಯಲ್ಲಿ ಅವರದು ಮುಂಚೂಣಿಯ ಪಾತ್ರ. ಗೊಂದಲ, ಗೋಜಲು ಇಲ್ಲದ ಸರಳ, ನೇರ ವಾಕ್ಯ ರಚನೆ ಅವರ ಅಗ್ಗಳಿಕೆಗಳಲ್ಲಿ ಒಂದು. ಈ ಮಾತಿಗೆ ಜ್ವಲಂತ ನಿದರ್ಶನ ಪ್ರಪಂಚ ಸಾಪ್ತಾಹಿಕದಲ್ಲಿ ಅವರು ಪ್ರತಿವಾರವೂ ಬರೆಯುತ್ತಿದ್ದ ವ್ಯಕ್ತಿ ಪರಿಚಯ ಅಂಕಣ. ಒಂದು ಅವಧಿಗೆ ರಾಜ್ಯ ಸಭೆ ಸದಸ್ಯರಾಗಿ, ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಅವರು ನೀಡಿದ ಕೊಡುಗೆ ನಿಸ್ಸಂಶಯದಾಗಿ ಅನನ್ಯ. ರಾಜ್ಯೋತ್ಸವ ಪ್ರಶಸ್ತಿ (1976) ಕರ್ನಾಟಕ ವಿಶ್ವವಿದ್ಯಾನಿಲಯ ಡಿಲಿಟ್ ಪತ್ರಿಕಾ ಅಕಾಡೆಮಿ ಪ್ರಶಸ್ತಿ (1993), ಹಂಪಿ ಕನ್ನಡ ವಿಶ್ವವಿದ್ಯಾನಿಲಯ ನಾಡೋಜ ಪ್ರಶಸ್ತಿ (1996) ಪಡೆದಿರುವ ಪಾಪು ಅವರನ್ನು ನಾಡಿನ ಹೊರನಾಡಿನ ಬಹುತೇಕ ಎಲ್ಲೂ ಕನ್ನಡ ಹಾಗೂ ಕನ್ನಡಪರ ಸಂಘಟನೆಗಳೂ ಗೌರವಿಸಿವೆ. ಕನ್ನಡ ಪತ್ರಿಕೋದ್ಯಮದಲ್ಲಿ ಅಪರಿಮಿತ ಸಾಧನೆ ಮಾಡಿದ ಪರ್ತಕರ್ತರನ್ನು ಗೌರವಿಸುವ ದೃಷ್ಟಿಯಿಂದ ಆರಂಭವಾದ ಟಿಯೆಸ್ಸಾರ್ ಪ್ರಶಸ್ತಿಗೆ (1994) ಆಯ್ಕೆಯಾದವರಲ್ಲಿ ಪಾಪು ಮೊದಲಿಗರು… ಹೀಗೆಯೇ ಕನ್ನಡ, ಕರ್ನಾಟಕ ಕಂಡ ಧೀಮಂತ ಪತ್ರಕರ್ತ, ಪತ್ರಿಕೋದ್ಯಮಿ, ಬರಹಗಾರ, ಕನ್ನಡ-ಕರ್ನಾಟಕದ ಧ್ವನಿ ಡಾ.ಪಾಟೀಲ ಪುಟ್ಟಪ್ಪನವರಿಗೆ ಈಗ ನೂರರ ಸಂಭ್ರಮ… ಇದೋ ಅವರಿಗೆ ಅನಂತಾನಂತ ಹಾರೈಕೆಗಳು… ****************

ಸ್ವಾತ್ಮಗತ

ಸಂಕ್ರಾಂತಿಯ ಸಂಭ್ರಮ ಕೆ.ಶಿವು ಲಕ್ಕಣ್ಣವರ ಸೂರ್ಯನ ಉತ್ತರಾಯಣದ ಪರ್ವ ಕಾಲ..! ಸಂಕ್ರಾಂತಿಯ ಆಚರಣೆ ಏಕೆ? ಈ ದಿನ ಎಳ್ಳಿಗೆ ಮಹತ್ವವೇಕೆ.!? ಭೂಮಿ ಮೇಲೆ ನಡೆಯುವ ಎಲ್ಲಾ ಚಟುವಟಿಕೆಗಳಿಗೂ ಸೂರ್ಯನೇ ಆಧಾರ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯನು ಪ್ರವೇಶಿಸುವ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಕರೆಯಲಾಗುತ್ತದೆ… ಮಕರ ಸಂಕ್ರಾಂತಿ, ದಕ್ಷಿಣಾಯನ, ಉತ್ತರಾಯಣಗಳ ದಿನಗಳು ಸಂಕ್ರಾಂತಿಯಂದು ಆರಂಭವಾಗುವುದರಿಂದ ಈ ದಿನ ವಿಶೇಷ ಮಹತ್ವವನ್ನು ಹೊಂದಿದೆ. ಪ್ರತಿ ವರ್ಷ ಜನವರಿ 14 ಅಥವಾ 15 (ಪುಷ್ಯಮಾಸ)ದಲ್ಲಿ ಬರುವ ಮಕರ ಸಂಕ್ರಾಂತಿಯನ್ನು `ಉತ್ತರಾಯಣ ಪುಣ್ಯಕಾಲ’ ಎಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಅಷ್ಟೇ ಅಲ್ಲದೆ, ಸಾಯುವುದಕ್ಕೂ ಉತ್ತರಾಯಣ, ಪುಣ್ಯಕಾಲವನ್ನು ನೋಡುತ್ತಾರೆ. ಈ ಪುಣ್ಯಮುಹೂರ್ತದಲ್ಲಿ ಪುಣ್ಯ ಸ್ಥಳಗಳಲ್ಲಿ ಹಾಗೂ ತುಂಗಾ, ಗಂಗಾ, ಕೃಷ್ಣಾ, ಕಾವೇರಿ ಮುಂತಾದ ಪುಣ್ಯ ನದಿಗಳಲ್ಲಿ ಲಕ್ಷಾಂತರ ದೈವಭಕ್ತರು ತೀರ್ಥಸ್ನಾನ ಮಾಡುತ್ತಾರೆ. ಹಾಗೆಯೇ ಉತ್ತರಾಯಣವನ್ನು ದೇವತೆಗಳ ಕಾಲವೆಂದು ಹಲವರು ನಂಬಿದ್ದಾರೆ. ಮೊದಲು ದಕ್ಷಿಣದತ್ತ ವಾಲಿ ಚಲಿಸುತ್ತಿದ್ದ ಸೂರ್ಯ, ಸಂಕ್ರಮಣ ದಿನದಿಂದ ಉತ್ತರ ದಿಕ್ಕಿಗೆ ತಿರುಗಿ ಚಲಿಸುತ್ತಾನೆ. ಆಯನ ಎಂದರೆ ಚಲಿಸುವುದು, ಆದರಿಂದ ಉತ್ತರಾಯಣ, ದಕ್ಷಿಣಾಯನ ಎಂದು ಹೆಸರು ಸೃಷ್ಟಿಯಾಗಿದ್ದು. ಹೀಗೆ ಸೂರ್ಯ ಪಥ ಬದಲಾಗುವುದರಿಂದ ನಮ್ಮ ದೇಶದಲ್ಲಿ ಈ ಸಮಯಕ್ಕೆ ಚಳಿ ಕಡಿಮೆಯಾಗಿ ಹಗಲು ಹೆಚ್ಚು ಸಂಭವಿಸುತ್ತದೆ… ಎಲ್ಲಿ ಹೇಗೆ ಈ ಹಬ್ಬ ಆಚರಣೆ?– ಕರ್ನಾಟಕದಲ್ಲಿ ಸಂಕ್ರಾಂತಿ ಎಂದು ಆಚರಿಸಿದರೆ, ನೆರೆಯ ತಮಿಳುನಾಡು ಹಾಗೂ ಆಂಧ್ರ ಪ್ರದೇಶದಲ್ಲಿ ಭೋಗಿ, ಕನುಹಬ್ಬ ಎಂದು ಮೂರುದಿನಗಳ ಕಾಲ ಈ ಹಬ್ಬವನ್ನು ಆಚರಿಸುತ್ತಾರೆ. ಮಕರ ಸಂಕ್ರಾಂತಿಯೂ ಸುಗ್ಗಿಯನ್ನು ಸಾರುವ ಹಬ್ಬವಾಗಿದ್ದು, ದ್ರಾವಿಡ ಸಂಪ್ರದಾಯವನ್ನು ಪಾಲಿಸುವವರಿಗೆ ಇದೊಂದು ವಿಶೇಷ ಸಂಭ್ರಮದ ದಿನವಾಗಿರುತ್ತದೆ… ಸಂಕ್ರಾಂತಿ ದಿನದಂದು ವಿವಾಹಿತ ಹಾಗೂ ಅವಿವಾಹಿತ ಹೆಣ್ಣುಮಕ್ಕಳು ಎಳ್ಳು-ಬೆಲ್ಲ, ಕೊಬ್ಬರಿ, ನೆಲಗಡಲೆ, ಕಬ್ಬು ಬಾಳೆಹಣ್ಣು, ಸಕ್ಕರೆ ಅಚ್ಚು ಇತ್ಯಾದಿಗಳನ್ನು ಎಲ್ಲರಿಗೂ ಹಂಚಿ ಸಂಭ್ರಮಿಸುತ್ತಾರೆ. ಆಂಧ್ರದಲ್ಲಿ ಈ ದಿನದಂದು ಪೂಜೆ ಮಾಡಿ, ರೈತರು ಜಾನುವಾರುಗಳಿಗೆ ಮೈತೊಳೆದು, ಅದನ್ನು ಸಿಂಗರಿಸಿ ಮೆರವಣಿಗೆ ಮಾಡುತ್ತಾರೆ. ಅದರಲ್ಲೂ ಸಂಕ್ರಮಣದ ದಿನದ ಸಂಜೆ ಎತ್ತುಗಳಿಗೆ ಕಿಚ್ಚು ಹಾಯಿಸುವುದು ಈ ಹಬ್ಬದ ವಿಶೇಷ… ಎಳ್ಳಿಗೆ ಯಾಕಿಷ್ಟು ಮಹತ್ವ?– ಸಂಕ್ರಾಂತಿ ದಿನದಂದು ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ ಎಳ್ಳುದಾನ ಕೊಟ್ಟರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ಹಾಗೆಯೇ ದೇವಾಲಯಗಳಲ್ಲಿ ಎಳ್ಳೆಣ್ಣೆ ಹಾಕಿ ದೀಪ ಬೆಳಗಬೇಕು. ಈ ದಿನ ನಾವು ಮಾಡಿದ ದಾನ ಧರ್ಮಗಳ ಪುಣ್ಯವು ಜನ್ಮ ಜನ್ಮದಲ್ಲೂ ಸದಾ ನಮಗೆ ಶ್ರೇಯಸ್ಸು ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ ಎಂದು ಹಿರಿಯರು ಹೇಳುತ್ತಾರೆ. ಮತ್ತು ಮುಗ್ಧ ಜನರ ನಂಬಿಕೆ. `ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು’ ಎಂಬ ಕನ್ನಡದ ಗಾದೆಗೆ ಸಂಕ್ರಾಂತಿ ಹಬ್ಬವೇ ಮೂಲವಾಗಿರುವುದು ಎಂದು ಹಲವರು ಹೇಳುತ್ತಾರೆ… ಮಕರ ಸಂಕ್ರಾಂತಿಯ ಇನ್ನೊಂದು ಹೆಸರು ಉತ್ತರಾಯಣ ಪುಣ್ಯಕಾಲ. ಇಡೀ ಉತ್ತರಾಯಣವೇ ದೇವತೆಗಳಿಗೆ ಪ್ರಿಯವಾದದ್ದು. ದೇವಕಾರ್ಯ, ಶುಭ ಕಾರ್ಯಗಳಿಗೆ ಈ ದಿನ ಬಹಳ ಪ್ರಾಶಸ್ತ್ಯವಾಗಿದೆ. ಇಂತಹ ಉತ್ತರಾಯಣವನ್ನು ಪ್ರಾರಂಭಿಸುವ ದಿನವಾದ ಮಕರ ಸಂಕ್ರಾಂತಿಗೆ ವಿಶೇಷವಾದ ಮಾನ್ಯತೆಯಿದೆ. ಈ ದಿನ ಶ್ರದ್ಧಾಭಕ್ತಿಯಿಂದ ಮಾಡುವ ಸ್ನಾನ, ಧ್ಯಾನ, ದಾನ, ಹೋಮ, ಪೂಜೆ, ತರ್ಪಣ, ಶ್ರಾದ್ಧ ಮುಂತಾದುವುಗಳಿಗೆ ವಿಶೇಷವಾದ ಫಲ ಸಿಗುತ್ತದೆ ಎನ್ನುವ ವಿಚಾರ ಹಲವು ಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ ಮತ್ತು ಆಯಾ ಜನರ ನಂಬಿಕೆಯೂ ಕೂಡ ಆಗಿದೆ… ಸಂಕ್ರಾಂತಿಯು ಸೌರಮಾನದ ಹಬ್ಬ. ಮಕರ ಮಾಸದದಲ್ಲಿ ಮಾಡುವ ಮಕರ ಸಂಕ್ರಮಣ ಆಚರಣೆ, ಚಾಂದ್ರಮಾನದಂತೆ ಪುಷ್ಪಮಾಸದಲ್ಲಿ ಇದು ಬರುತ್ತದೆ. ಎಳ್ಳಿನ ಹಬ್ಬ ಎಂದೇ ಪ್ರಸಿದ್ಧಿಯಾಗಿರುವ ಸಂಕ್ರಮಣ ಹಬ್ಬದಲ್ಲಿ ಎಳ್ಳನ್ನು ನಾನಾ ರೂಪದಲ್ಲಿ ಬಳಸುತ್ತಾರೆ. ಕೆಲವರು ಎಳ್ಳಿನಿಂದ ಸ್ನಾನ ಮಾಡುತ್ತಾರೆ. ಎಳ್ಳಿನ ನೀರಿನಿಂದ ತರ್ಪಣ ಕೊಡುತ್ತಾರೆ, ಎಳ್ಳಿನಿಂದ ಮಾಡಿದ ಗೋವನ್ನು ದಾನ ಮಾಡುತ್ತಾರೆ. ಮಕ್ಕಳಿಗೆ ಆರತಿ ಎತ್ತಿ, ಗುರು ಹಿರಿಯರಿಗೆ ನಮಸ್ಕಾರ ಮಾಡಿ ಆರ್ಶಿವಾದ ಪಡೆಯುವುದು ಸಂಕ್ರಾತಿ ಹಬ್ಬದ ಒಂದು ಜನರ ವಿಶೇಷ ಪದ್ಧತಿ…. ಮಕರ ಸಂಕ್ರಾಂತಿಯ ದಿನದಂದು ದೇವತೆಗಳಿಗೆ ಹಗಲು ಹಾಗೂ ರಾಕ್ಷಸರಿಗೆ ರಾತ್ರಿ ಆಗುವುದೆಂದು ಪುರಾಣದಲ್ಲಿ ಹೇಳಿದ್ದಾರೆ. ಈ ಆನಂದಕ್ಕಾಗಿ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡೋಣವೆಂದು ಎಲ್ಲರೂ ಎಳ್ಳು ಬೆಲ್ಲವನ್ನು ಹಂಚುತ್ತಾರೆ. ಉತ್ತರ ಭಾರತದಲ್ಲಿಯೂ ಸಂಕ್ರಮಣ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಅಲಹಾಬಾದ್‍ನಲ್ಲಿ ಈ ವೇಳೆ ಸುಪ್ರಸಿದ್ಧವಾದ ಕುಂಭಮೇಳವೂ ಕೂಡ ನಡೆಯುತ್ತದೆ… ಹೀಗಿದೆ ಉತ್ತರಾಯಣ ಪರ್ವಕಾಲವೆಂದರೆ ಮಕರ ಸಂಕ್ರಾಂತಿಯ ವಿಶೇಷತೆ..! **********

ಹೊತ್ತಾರೆ

ಅಮ್ಮನೂರಿನ ನೆನಪುಗಳು. ಅಮೇರಿಕಾದಿಂದ ಅಶ್ವಥ್ ಸಾಮ್ರಾಜ್ಯ ಪ್ರೈಮರಿ ಸ್ಕೂಲಿನಲ್ಲಿ ವೀರಮಾತೆ ಜೀಜಾಬಾಯಿ ಅನ್ನುವ ಶಿವಾಜಿಯ ಒಂದು ಪಾಠ ಇತ್ತು. ಜೀಜಾಬಾಯಿ ಶಿವಾಜಿಯ ಬಾಲ್ಯದಲ್ಲಿ ಪುರಾಣಕತೆಗಳನ್ನೂ, ವೀರಪುರುಷರ ಸಾಹಸಗಳನ್ನೂ ಬಾಲಕ ಶಿವಾಜಿಗೆ ಮನಮುಟ್ಟುವ ಹಾಗೆ ಪಾಠ ಹೇಳಿಕೊಡುತ್ತಿದ್ದಳು. ಇಂತಹ ವೀರಮಾತೆಯ ಪಾಲನೆಯಲ್ಲಿಯೇ ಬೆಳೆದ ಶಿವಾಜಿ ಒಂದು ದಿನ ತನ್ನ ತಂದೆಯು ಸ್ವಾಭಿಮಾನ ಮರೆತು ಸುಲ್ತಾನರ ಮುಂದೆ ತಲೆಬಾಗಿ ನಮಸ್ಕರಿಸುವುದು ಸಹಿಸಿಕೊಳ್ಳಲಾಗದೇ ತನ್ನದೇ ಸಾಮ್ರಾಜ್ಯವನ್ನು ಸ್ಥಾಪಿಸುವ ಶಪಥ ಮಾಡಿದ್ದನು. ಇದು ಪಾಠದ ಸಾರಾಂಶವಾಗಿತ್ತು. ಮೊದಲನೇ ಸಾರ್ತಿ ಈ ಪಾಠ ಕೇಳಿಸಿಕೊಂಡಾಗ, ನನ್ನ ವೀರಮಾತೆಯೂ ಇಂತಹದ್ದೇ ಪುರಾಣಕತೆಗಳನ್ನೂ, ವೀರಪುರುಷರ ಸಾಹಸಗಳನ್ನೂ ಹೇಳಿಕೊಡಲಿದ್ದಾಳೆ. ನನ್ನ ತಂದೆಗೆ ಸುಲ್ತಾನರಾರೂ ಇಲ್ಲದಿದ್ದರೂ, ಸರಕಾರದ ಖಾಯಂ ತೆರಿಗೆದಾರರಾಗಿ ನಿತ್ಯ ಸಂಜೆಹೊತ್ತಿನಲ್ಲಿ  ರಾಜರತ್ಮಂ ರ ಅಭಿಮಾನಿಯೇನೋ ಎನ್ನುವಂತೆ ತೂರಾಡುತ್ತಾ ತಲೆಬಾಗಿ ಸ್ವಾಭಿಮಾನ ಮರೆಯುತ್ತಿದ್ದರಿಂದ, ತತ್-ಕ್ಷಣದಲ್ಲೇ ನನ್ನದೇ ಸಾಮ್ರಾಜ್ಯವನ್ನು ಸ್ಥಾಪಿಸುವ ಕನಸೊಂದು ಚಿಗುರೊಡೆದಿತ್ತು. ನಾನು ಓದಿದ ಹಿರಿಯ ಪ್ರಾಥಮಿಕ ಶಾಲೆಗೆ ಮೊದಲು, ಮೂರು ಕೊಠಡಿಗಳಿದ್ದವು.  ಅದರಲ್ಲಿ ನಾಡಹೆಂಚಿನ ಒಂದು ಕೊಠಡಿಯನ್ನು ಹಾಲು ಉತ್ಪಾದಕರ ಸಹಕಾರ ಸಂಘದವರು ದಂಡೆತ್ತಿ ಬಂದು ಆಕ್ರಮಿಸಿಕೊಂಡುಬಿಟ್ಟಿದ್ದರು. ಅದು ನಮ್ಮಪಾಲಿಗೆ ಪಾಕ್ ಆಕ್ರಮಿತ ಕಾಶ್ಮೀರದ ರೀತಿಯಾಗಿಬಿಟ್ಟಿತು!  ಇನ್ನುಳಿದಿದ್ದು ಎರಡೇ ಕೊಠಡಿಗಳು. ಒಂದರಿಂದ ನಾಲ್ಕನೇ ತರಗತಿಗೆ ಒಂದು ಕೊಠಡಿ. ಐದರಿಂದ ಏಳನೇ ತರಗತಿಗೆ ಮತ್ತೊಂದು!  ಮೊದಲ ನಾಲ್ಕೂ ವರ್ಷಗಳಲ್ಲಿ ಒಬ್ಬರೇ ಮೇಷ್ಟರು.  ನಾನು ನಾಲ್ಕನೇ ಕ್ಲಾಸಿಗೆ ಬರುವ ಹೊತ್ತಿಗೆ ಇನ್ನೊಬ್ಬರು ಮೇಷ್ಟರು ಬರುವಂತಾಯ್ತು. ಅದರ ನಂತರ ಮೂರನೇ ಮೇಷ್ಟರ ಭಾಗ್ಯವೂ ನಮ್ಮ ಪಾಲಿಗೆ ಒದಗಿಬಂದಿದ್ದರಿಂದಾಗಿ ಆ ಪಾಕ್ ಆಕ್ರಮಿತದ ಹಾಗಿದ್ದ ಹಳೆ ಶಾಲೆಯ ಕೊಠಡಿಯ ಅರ್ಧಭಾಗವನ್ನು ಮತ್ತೆ ನಮ್ಮ ಸುಪರ್ದಿಗೆ ತೆಗೆದುಕೊಂಡು ಅಲ್ಲಿ ಕಿರಿಯ ಪ್ರಾಥಮಿಕದ ನಾಲ್ಕು ತರಗತಿಗಳನ್ನು ಎರಡು ಭಾಗಗಳಾಗಿ ವಿಂಗಡಿಸಿ, ಒಟ್ಟು ಮೂರು ಶಾಲಾ ಕೊಠಡಿಗಳನ್ನಾಗಿಸುವಲ್ಲಿ ಮೂರೂ ಮೇಷ್ಟರುಗಳ/ದಂಡನಾಯಕರ ಮುಂದಾಳತ್ವದಲ್ಲಿ ನಾವು ಸಫಲರಾದೆವು. ಇಷ್ಟರಲ್ಲಿ ನಾನು ನಾಲ್ಕನೇ ತೇರ್ಗಡೆಯಾಗಿ ಐದನೇ ಕಡೆ ತೇರು ಎಳೆಯುವವನಾಗಿದ್ದೆ. ಹಾಗಾಗಿ ವೀರಮಾತೆ ಜೀಜಾಬಾಯಿಯ ಪಾಠವನ್ನು ಒಂದೇ ಕೊಠಡಿಯಲ್ಲಿ ಮೂರು ವರ್ಷ ಪುನರಾವರ್ತನೆಯಿಂದ ಕೇಳುವ ಭಾಗ್ಯ!  ಮೊದಲನೇ ವರ್ಷದಲ್ಲೇ ನನ್ನ ವೀರಮಾತೆ ಕತೆ ಹೇಳುವುದರ ಬಗ್ಗೆ ಕನಸು ಕಾಣುತ್ತಲಿದ್ದರೂ, ನಾನಿದ್ದಿದ್ದು ಮಾತೆಯ ತವರುಮನೆಯಾದ ನನ್ನ ಅಜ್ಜಿಯ ಮನೆಯಲ್ಲಿ.  ಹಾಗಾಗಿ ಮಾತೆ ಅಕ್ಕನನ್ನು ಏನಿದ್ದರೂ ನಿತ್ಯದ ಕನಸಿನಲ್ಲಿ ಕಾಣಬಹುದಾಗಿತ್ತೇ ಹೊರತು ಬೆಳಗು ಬೈಗಿನಲ್ಲಿ ಮುಖಾಮುಖಿಯಾಗುವ ಅವಕಾಶವಿರಲಿಲ್ಲ. ಆದರೂ ಏನಂತೆ, ಗೌರಿಹಬ್ಬಕ್ಕೊಂದು ಸಾರ್ತಿ ಮಹಾಲಯ ಅಮಾವಾಸ್ಯೆಗೊಂದು ಸಾರ್ತಿ, ಮತ್ತೆ ಮುಂಗಾರು ಕೆಲಸ ಮುಗಿದಾದ ಮೇಲೆ ಒಂದು ಸಾರ್ತಿ, ಸಂಕ್ರಾಂತಿಗೊಂದು ಸಾರ್ತಿ ಭೇಟಿಯಾಗುವ ಅವಕಾಶವಿತ್ತು. ಅಕ್ಕನ ಇಲ್ಲದಿರುವಿಕೆ ನನಗೆ ಎಂದೂ ಕೊರಗಾಗಿರಲಿಲ್ಲ. ಹಾಗಾಗಿಯೇ ನಾನು ಇಂದಿಗೂ ನನಗೆ ಅಮ್ಮ(ಅಜ್ಜಿ), ಅಕ್ಕ, ಚಿಕ್ಕಮ್ಮ ಈ ಮೂವರೂ ತಾಯಂದಿರು ಅಂತಲೇ ಹೇಳುವುದು. ನಾನು ಅಪ್ಪನೂರಿಗೆ ಹೋದಾಗ ಅಥವಾ ಅಕ್ಕ ನಮ್ಮೂರಿಗೆ ಬಂದಾಗ ಯಾವ ಪುರಾಣದ ಕತೆಗಳನ್ನಾಗಲೀ, ವೀರಪುರುಷರ ಕತೆಗಳನ್ನಾಗಲೀ ಹೇಳುತ್ತಿರಲಿಲ್ಲ. ಆದರೆ, ನನ್ನ ತಮ್ಮಂದ್ರು ಅಂತ ಶುರುವಾದರೆ ಆಯ್ತು! ಅಲ್ಲಿ ನಿತ್ಯವೂ ನನ್ನ ಜೊತೆಯಲ್ಲೇ ಇರುತ್ತಿದ್ದ ಸೋದರಮಾವಂದಿರ ಸಾಹಸಮಯ ದಂತಕತೆಗಳು ಸುತ್ತುವರಿಯುತ್ತಿದ್ದವು. ತನ್ನ ಅಣ್ಣಂದಿರ ಬಗ್ಗೆಯೂ ಅಷ್ಟೇ ಸಾಹಸಮಯ ಕತೆಗಳಿದ್ದರೂ, ಹಿರಿಯಣ್ಣ ವಿವಾಹಿತರೂ ಆಗಿ ಬೇರೆ ವಾಸ್ತವ ಹೂಡಿದ್ದರಿಂದಾಗಿ ನನ್ನ ಬಾಲ್ಯಕ್ಕೆ ಹೊಂದಿಸಿ, ಅವರ ಬಗ್ಗೆ ಹೇಳಬಹುದಾದ ಕತೆಗಳು ವಿರಳವಾಗಿದ್ದವು.  ತನ್ನ ಹಿರಿಯಣ್ಣ ಒಂದು ಕೆಲಸ ಹಿಡಿದರೆ ಅದು ಬರುವುದಿಲ್ಲ ಅಂದದ್ದೇ ಇರಲಿಲ್ಲ; ಮರಗೆಲಸ, ಗಾರೆ ಕೆಲಸ, ಮನೆಕಟ್ಟುವ ಕೆಲಸ ಯಾವುದನ್ನೂ ಎಂಥಾ ಕಸುಬುದಾರರಿಗೂ ಕಡಿಮೆಯಿಲ್ಲದ ಹಾಗೆ ಮಾಡುತ್ತಿದ್ದ ಅನ್ನುತ್ತಿದ್ದರು.  ಆದರೆ ತಮ್ಮಂದಿರ ದಂತಕತೆಗಳಿಗೆ ಹೋಲಿಸಿದರೆ ಇವು ಸ್ವಲ್ಪ ಪೇಲವವೇ. ಮಾತೆತ್ತಿದರೆ, ನನ್ನ ತಮ್ಮಂದಿರು, ಮೂರನೇ ಕ್ಲಾಸಿಗೇ ಕುಂಟೆ ಹೊಡೀತಿದ್ದರು, ಐದನೇ ಕ್ಲಾಸಿಗೆ ಹೊಲ ಉಳ್ತಾ ಇದ್ದರು,  ಏಳನೇ ಕ್ಲಾಸಿಗೆ ಮಂಡಿಯುದ್ದ ಊತುಹೋಗುತ್ತಿದ್ದ ಉಸುಬು ಗದ್ದೆ ಉಳ್ತಿದ್ದರು. ಅವರು ಬಿತ್ತನೆಯ ಸಾಲು ಹೊಡೆಯುವುದನ್ನು ಊರಿನ ಎಲ್ಲರೂ ಹೊಗಳುತ್ತಿದ್ದರು. ಅಚ್ಚುಕಟ್ಟಾಗಿ ಮಾಡಿದರಷ್ಟೇ ಬೇಸಾಯ! ಇಲ್ಲಾಂದ್ರೆ ಊರಿನವರೆಲ್ಲಾ ಹೊಲದ ಬದುವಿನಲ್ಲಿ ನಿಂತು, ಯಾವ ಹೆಗ್ಗಣ ಕೆರೆದಿದ್ದೋ ಈ ನೆಲವಾ… ಅನ್ನುತ್ತಿದ್ದರಂತೆ. ಹೀಗೆ ಹಿರಿಯರೂ ಸಹ ಬೇಸಾಯ ಅಂದರೆ ಅಚ್ಚುಕಟ್ಟು ಅನ್ನುವುದನ್ನು ಇವರನ್ನು ನೋಡಿ ಕಲಿಯಬೇಕು ಅನ್ನುವ ಹಾಗೆ ಕೆಲಸ ಮಾಡ್ತಿದ್ದರಂತೆ. ಅಕ್ಕನಿಗೆ ಇಬ್ಬರು ತಮ್ಮಂದಿರು ಮೂವರು ಅಣ್ಣಂದಿರು. ಬಹುಸಂಖ್ಯಾತ ಅಣ್ಣಂದಿರ ಒಂದೆರಡು ದಂತಕತೆಗಳನ್ನು ಹೊರತುಪಡಿಸಿದರೆ, ಮಿಕ್ಕವೆಲ್ಲವೂ ತಮ್ಮಂದಿರದೇ ಆಗಿರುತ್ತಿದ್ದರಿಂದ, ಕೆಲವೊಮ್ಮೆ ಅಕ್ಕನ ಈ ದಂತಕತೆಗಳಂತೂ ಗುರುರಾಜುಲು ನಾಯ್ಡು ಅವರ ಹರಿಕತೆಯ ಕ್ಯಾಸೆಟ್ಟುಗಳ ಹಾಗನಿಸಿದ್ದೂ ಉಂಟು. ಆದರೂ ನನ್ನ ಕಣ್ಣೆದುರೇ ಇರುವ ಮಾವಂದಿರ ಸಾಧನೆಗಳನ್ನು ಕೇಳುವುದೊಂದು ರೀತಿಯ ಕುತೂಹಲ, ಹಾಗೂ ಬಾಲ್ಯದ ದಿನಗಳಲ್ಲಿ ಒಂದು ರೀತಿಯ ವಿಸ್ಮಯವೂ ಆಗಿರುತ್ತಿದ್ದವು.  ಆದರೂ ಏನೋ ಕಸಿವಿಸಿ, ಈ ಸೋದರಮಾವಂದಿರ ದಂತಕತೆಗಳಿಂದ ಸ್ವಂತ ಸಾಮ್ರಾಜ್ಯ ಕಟ್ಟುವುದಾದರೂ ಹೇಗೆ? ವೀರಮಾತೆ ಜೀಜಾಬಾಯಿಗೆ ಅಕ್ಕ ಸಮನಲ್ಲವೋ ಅಥವಾ ಪುರಾಣಪುರುಷರಿಗೆ ನನ್ನ ಸೋದರ ಮಾವಂದಿರು ಸಮನಲ್ವೋ  ಎನ್ನುವುದೇ ಗೊಂದಲವಾಗಿರುತ್ತಿತ್ತು. ಆದರೆ ಮಾವಂದಿರ ಕೆಲಸ ಗಮನಿಸಿದ್ದ ನನಗೆ, ವಿಜ್ಞಾನದ ಪ್ರಾಥಮಿಕದ ವಿಜ್ಞಾನದಲ್ಲಿ ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿರುವುದರಿಂದ ಚಿರತೆಗಳಿಗೆ ಎಷ್ಟು ಓಡಿದರೂ ಆಯಾಸವಾಗುವುದಿಲ್ಲ ಅನ್ನುವ ಅಂದಿನ ಪಾಠವನ್ನು ಸೋದರಮಾವಂದಿರ ಕೆಲಸದಲ್ಲಿ ಕಾಣುತ್ತಿದ್ದೆ. ಮುಂಗಾರಿನ ಸಮಯದಲ್ಲಂತೂ ಬೆಳಗಾಗಿ ಕೆಲಸಕ್ಕೆ ನಿಂತರೆ ಊಟ ತಿಂಡಿಯ ವಿರಾಮದ ಹೊರತಾಗಿ ಕತ್ತಲಾಗುವ ತನಕ ನಿರಾಯಾಸವಾಗಿ ಕೆಲಸ ಮಾಡುತ್ತಿದ್ದರು. ಮಾಡುವ ಕೆಲಸವ್ಯಾವುದೂ ಅಚ್ಚುಕಟ್ಟಿಲ್ಲದೆ ಇರುತ್ತಿರಲಿಲ್ಲ. ಬೇಸಾಯ ಅನ್ನುವುದು ಆಗ ಯುವಕರಾಗಿದ್ದ ಅವರಿಗೆ ಒಂದು ತನ್ಮಯತೆಯಾಗಿತ್ತು.   ಯುಗಾದಿಯ ಹೊನ್ನಾರಿಗೆ ನನ್ನನ್ನು ಮೊದಲು ನೇಗಿಲು ಹಿಡಿ ಅನ್ನುತ್ತಿದ್ದು, ಆಯುಧಪೂಜೆಯಲ್ಲಿ ಫ್ಲೋರ್ ಮಿಲ್ ಆನ್ ಮಾಡಿಸುವುದು,  ಬಿತ್ತನೆಯ ದಿನ ಮೊದಲ ಆಲೂಗಡ್ಡೆ ತುಂಡು ನೆಡಿಸುವುದು, ಮೊದಲ ಭತ್ತದ ಪೈರು ನೆಡಿಸುವುದು ಗಮನಿಸುತ್ತಿದ್ದ ನನಗೆ ಅದೇ ನನ್ನ ಅಧಿಕೃತ ಬೇಸಾಯದ ತರಬೇತಿಯೇನೋ ಅನಿಸುತ್ತಿತ್ತು. ಆದರದು ಅವರ ಶುಭಶಕುನಕ್ಕೆ ಸಂಕೇತವೆನ್ನುವುದು ಆಮೇಲೆ ತಿಳಿಯಿತು. ಕಿರಿಯ ಸೋದರ ಮಾವ, ಒಂದು ದಿನದಲ್ಲಿ ಐವತ್ತು ಅರವತ್ತು ಅಡಿ ಎತ್ತರದ  ಎಂಟು ತೆಂಗಿನ ಮರಗಳನ್ನು ಐದು-ಹತ್ತು ನಿಮಿಷಗಳ ಅಂತರದಲ್ಲಿ ಹತ್ತುತ್ತಿದ್ದರು. ಸಾಮಾನ್ಯವಾಗಿ ಬೇರೆಲ್ಲರೂ ಒಂದು ಹಂತದಲ್ಲಿ ಕಾಲು ಮೇಲೇರಿಸುತ್ತಾ, ಆಮೇಲೆ ಪಾದಗಳನ್ನು ಬಿಗಿಯಾಗಿ ನೆಟ್ಟು ಕೈಗಳನ್ನು ಮೇಲೇರಿಸಿಕೊಂಡು  ಉಠ್-ಬೈಠ್ ನ ರೀತಿಯಲ್ಲಿ ಮರವನ್ನು ತಬ್ಬಿಹಿಡಿದು ಹತ್ತುವುದಾದರೆ, ನನ್ನ ಮಾವ ನಡೆಯುವ ರೀತಿಯಲ್ಲಿ ಲೆಫ್ಟ್-ರೈಟ್, ಲೆಫ್ಟ್-ರೈಟ್ ನ ಕವಾಯತಿನಂತೆ ಹತ್ತುತ್ತಿದ್ದರು. ಎಡಗೈ ಮತ್ತು ಬಲಗಾಲು ಒಮ್ಮೆ ಮೇಲಕ್ಕೆ, ನಂತರ ಬಲಗೈ ಎಡಗಾಲು.   ಹೀಗೇ ನಾನೂ ಒಮ್ಮೆ ಮರ ಏರಿಯೇಬಿಡುವ ಮನಸ್ಸಾಯಿತು.  ಎಡವಟ್ಟಾದರೆ ಅಕ್ಕನ ಎದುರು ಏನು ಹೇಳುವುದೆಂಬ ಅಳುಕು ಮನದಲ್ಲೇ ಇದ್ದರೂ, ಸೋದರಮಾವಂದಿರು ಆಗ್ಗಾಗ್ಗೆ ಗದರಿಸಿಕೊಂಡೇ ಬೇಸಾಯ ಕಲಿಯಬೇಕೆನ್ನುವುದನ್ನು ನಿಯಮಿತವಾಗಿ ಹೇಳುತ್ತಲೇ ಇರುತ್ತಿದ್ದರು.  ಸುಮಾರು ಹದಿನೈದು ಅಡಿ ಎತ್ತರವಿರುವ ಹೊಸ ತೆಂಗಿನ ಮರಕ್ಕೆ ಹತ್ತುವುದಕ್ಕೆ ಅನುಮತಿ ಸಿಕ್ಕಿತು. ಬಾಗಿಕೊಂಡಿದ್ದ ಬುಡವನ್ನು ನಾನೂ ಸಹ ಸಾಹಸಿ-ಸೋದರಳಿಯ ಅನ್ನುವುದನ್ನು ಸಾಬೀತು ಮಾಡುವವನ ಹಾಗೆ ಮೂರು ಲೆಫ್ಟ್ ರೈಟುಗಳನ್ನು ಮಾಡಿದೆ. ಅಷ್ಟಕ್ಕೆ ಬಲಕುಸಿದಂತಾಗಿ ಕೆಳಕ್ಕೆ ನೋಡತೊಡಗಿದೆ. ಮೂರೇ ಅಡಿ ಅಂತರ. ಆ ವಯಸ್ಸಿಗಾಗಲೇ ಹುಣಸೆ ಮರದಿಂದ, ನೇರಳೆ ಮರದಿಂದ ಕುಪ್ಪಳಿಸುವುದು,  ಅಲ್ಲದೇ ಮರಕೋತಿ ಆಟ ಆಡುವುದೆಲ್ಲ ಗೊತ್ತಿದ್ದ ನನಗೇ ಖುದ್ದು ನಾಚಿಕೆಯಾಗುವಷ್ಟು ಅಂತರವಾಗಿತ್ತು ಅದು.  ಏನೂ ತೊಂದರೆಯಿಲ್ಲ. ಲೆಫ್ಟ್-ರೈಟ್ ನಡಿಗೆಯಲ್ಲದಿದ್ದರೇನು, ಉಠ್-ಬೈಠ್ ಆದರೂ ಆದೀತು ಅಂತಲೇ ಮರವನ್ನು ತಬ್ಬಿ ಹತ್ತುವುದಕ್ಕೆ ಆರಂಭಿಸಿದೆ. ಒಂದು, ಎರಾಆಡು……….ಮೂಊಊಊಊಊರೂಊ……. ನಾ…. , ಮುಕ್ಕಿರಿದು ಬಿಗಿಯಾಗಿ ಮರವನ್ನು ಹಿಡಿದು ಏದುಸಿರು ಬಿಡುತ್ತಾ ಮತ್ತೆ ನೆಲದ ಅಂತರ ನೋಡಿದೆ…  ಅರ್ಧ ಮರದ ಅಂತರ ಆಕ್ರಮಿಸಿದ್ದೇನೆ…. ಓಹ್, ಇನ್ನು ನಾಲ್ಕೇ ಪಟ್ಟು….. ಮತ್ತೆ ಹಿಡಿದೆ, ಒಂಂಂಂಂಂಂಂದೂ……  ಇನ್ನು ಅಸಾಧ್ಯ!  ಮುಕ್ಕಾಲು ಕ್ರಮಿಸಿದ್ದೇನೆ.  ಇಳಿದರೆ ಅವಮಾನ, ಏರುವುದಕ್ಕೆ ತ್ರಾಣವಿಲ್ಲ. ಅಲ್ಲೇ ನಿಂತು ಮಾವನ ಸಲಹೆಗಾಗಿ ಕಾಯುತ್ತಲಿದ್ದೆ.   ‘ಥತ್, ಹತ್ತಾ ಗ್ಯಾದೆ!  ಉಸ್ರುಯ್ತಾನೆ ಹತ್ತಡಿ ಮೇಲಕ್ಕೆ ಹೋಗೋಷ್ಟ್ರಲ್ಲಿ’, ಅನ್ನಬೇಕೇ ಸೋದರಮಾವ, ಅಲ್ಲೇ ಪಕ್ಕದ ಜಮೀನಿನವರೂ ಇದ್ದವರು ಬಂದು, ‘ಮರ ಹತ್ತಾ ಟ್ರೈನಿಂಗೋ?’ ಅನ್ನುತ್ತಾ ಜೊತೆಯಲ್ಲಿ ನಿಂತರು.  ಇನ್ನು ಮಾನ ಮೂರುಕಾಸಿಗೆ ಹರಾಜು ಮಾಡಿಕೊಳ್ಳುವುದರ ಬದಲು  ಉಸಿರು ಕಟ್ಟಿಕೊಂಡಾದರೂ ಮರದ ಮೇಲೆ ಹೋಗಿ ಕುಳಿತುಬಿಡುವುದೆನ್ನುವ ನಿರ್ಧಾರದಿಂದ ಸಕಲಬಲವನ್ನೂ ಪರೀಕ್ಷೆಗಿಟ್ಟು ಬಲವಾಗಿ ನನ್ನನ್ನು ನಾನೇ ಎಳೆದುಕೊಂಡು ಹೋಗಿ ಅಂತೂ ತೆಂಗಿನ ಗರಿ ಹಿಡಿದೆ. ‘ಸ್ವಲ್ಪ ಸುಧಾರಿಸಿಕೋ’ ಅಂದವರು  ಆ ಮರದಲ್ಲಿದ್ದ ಕಾಯಿ ಬೀಳಿಸಿದ ಮೇಲೆ.  ಸುಸ್ತಾಗಿದ್ದರೆ ಇಳಿಯೋದಕ್ಕಿಂತ ಮೊದಲು ಒಂದೆಳನೀರು ಕುಡಿದು ಆರಾಮನಿಸಿದ ಮೇಲೆ ನಿಧಾನವಾಗಿ ಇಳಿ, ಹತ್ತೋದು ಸುಲಭ, ಇಳಿಯೋದು ಚೂರು ಕಷ್ಟ!” ಅಂದರು.  ಇದ್ದ ನೂರಕ್ಕೆ ನೂರು ಪಾಲು ಶಕ್ತಿಯನ್ನೂ ವಿನಿಯೋಗ ಮಾಡಿದ್ದಾದ ಮೇಲೆ  ಇನ್ನು ಇಳಿಯುವುದು ಕಷ್ಟ ಅನ್ನುವುದನ್ನು ಕೇಳಿ ಒಂದು ಎಳನೀರು ಸಾಕಾಗಲಿಕ್ಕಿಲ್ಲ ಅಂದುಕೊಂಡು ಅಲ್ಲಿದ್ದ ಒಟ್ಟು ಲೆಕ್ಕ ಮಾಡುತ್ತಾ ಕುಳಿತೆ. ಅಷ್ಟರಲ್ಲಿ  ಮಾವ ಉಳಿದ ಕೆಲವು ಮರಗಳ ಬಲಿತ ಕಾಯಿಗಳನ್ನೆಲ್ಲ ಉದುರಿಸಿ ಇಳಿದು ಗಾಡಿಗೆ ತುಂಬಿ, ಇನ್ನೂ ಇಳಿಯದ ನನ್ನನ್ನು ಏನು ನಿದ್ರೆ ಹೋದೆನೋ ಅನ್ನುವಂತೆ ‘ಆಯ್ತಾ? ಇಳಿ ಹೋಗನಾ’ ಅಂದರು.  ನಾನಿನ್ನೂ ಮೊದಲನೇ ಎಳನೀರು ಕುಕ್ಕುತ್ತಾ ಇದ್ದೆ.  ಆತುರದಿಂದ ತೂತು ಮಾಡಿದವನೇ ಒಂದೆಳನೀರು ಸ್ವಾಹಾ ಮಾಡಿ, ಇಳಿಯುವುದಕ್ಕೂ ಮೊದಲು ಆಳ ನೋಡಿಕೊಂಡೆ. ಅಕಾಸ್ಮಾತ್ ತೋಳ್ಬಲ ಕಡಿಮೆಯಾಗಿ ಕೈಬಿಟ್ಟರೆ ಏನು ಮುರಿಯಬಹುದು, ಮಂಡಿಯೋ ಸೊಂಟವೋ, ಬೆನ್ನುಮೂಳೆಯೋ ಅಂದುಕೊಂಡು ಗರಿ ಹಿಡಿದು ಮರದ ಕಡೆ ವಾಲಿದೆ.  ಅಷ್ಟರಲ್ಲಿ ಲೆಫ್ಟುರೈಟೂ ಇಲ್ಲ, ಉಠ್ ಬೈಠೂ ಇಲ್ಲ, ಪಾದಗಳು ಸಾಲದೆಂಬಂತೆ ಇಡೀ ಕಾಲನ್ನು ಮರದ ಸುತ್ತ ಆವರಿಸಿಕೊಂಡುಬಿಟ್ಟೆ. ‘ಹಂಗ್ ಕೂತ್ಕಂಡ್ರೆ ಅಲ್ಲೇ ನೇತಾಕೋಂಡಿರ್ತೀಯಾ ಸಂಜೆ ತನಕ’, ಅನ್ನುತ್ತಾ ಮಾವ ಕೈ ಹೀಗೆ, ಕಾಲು ಹೀಗೆ ಅನ್ನುತ್ತಾ ಸಲಹೆ ಕೊಡುತ್ತಾ ಹೋದರು. ನಾನು ಅದ್ಯಾವುದನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಇದ್ದ ಭಂಗಿಯನ್ನೇ ಸ್ವಲ್ಪ ಸಡಿಲಿಸಿದೆ…… ಸೊರ್‌ರ್ ರ್ ಅಂತೊಂದಿಷ್ಟು ದೂರ ಜಾರಿದೆ.  ಅಜ್ಜಿ ಹಾಕಿ ಕಳಿಸಿದ್ದ ಚಡ್ಡಿ ಚೆಲ್ಲಾಪಿಲ್ಲಿಯಾಯ್ತು, ಅಲ್ಲದೇ ನನ್ನ ಕಾಲು, ಮೊಣಕೈಯೆಲ್ಲವೂ ಮುಕ್ಕಾಲು ತರಚಿಕೊಂಡವು. ಅಬ್ಬಾ, ಅರ್ಧ ಮರ ಕ್ರಮಿಸಿದ್ದೇನೆ ಅನ್ನುವ ಸಮಾಧಾನದೊಳಗೆ ನೋವು ಕಾಣಿಸಲಿಲ್ಲ.  ಇನ್ನರ್ಧ ಮರವನ್ನು ಹಾಗೇ ಕ್ರಮಿಸಿದ್ದರೆ  ಚಡ್ಡಿಯ ಜೊತೆ ನನ್ನ ಚರ್ಮವೂ  ಚೆಲ್ಲಾಪಿಲ್ಲಿಯಾಗಿ ಮಾವ ನನ್ನನ್ನು ನೇರ ಆಸ್ಪತ್ರೆಗೇ ಒಯ್ಯಬೇಕಿತ್ತೇನೋ. ಅಷ್ಟರಲ್ಲಿ ಜಾಗೃತನಾದ ಮಾವ, ‘ಇತ್ಲಾಗ್ ನೋಡು, ಇಲ್ಲಿ, ಇಲ್ಲಿ, ಈ ಕಡೆ ಜಂಪ್ ಮಾಡು. ಹಂಗ್ ಜಾರಿಕೊಂಡು ಇಳೀಬೇಡ’ ಅನ್ನುತ್ತಾ ಧಾವಿಸಿ, ವಿಕೆಟ್ ಕೀಪರ್ ಚೆಂಡಿಗಾಗಿ ಕೈಚೆಲ್ಲುವ ಹಾಗೆ ನಿಂತರು. ಅಂತೂ ಕಡೆಗೆ ಭೂಸ್ಪರ್ಷ ಮಾಡಿದೆ. ಪಕ್ಕದ ಬೇಲಿಯಲ್ಲಿದ್ದ ಸೊಪ್ಪಿನ ರಸ ಹಿಂಡಿ ಪ್ರಥಮಚಿಕಿತ್ಸೆ ಮಾಡಿದ ಮಾವ, ‘ನಾನು ಮರ ಹತ್ತೋವಾಗ ನೋಡ್ಕೊಳ್ತಾ ಇರಲಿಲ್ವಾ?’ ಅನ್ನುವ ಪಾಪದ ನೋಟದೊಳಗೂ ಬೇಸರ ಕೋಪ ಮಿಶ್ರಿತ ಮನಸ್ಸಿನಿಂದ ಇನ್ನೊಂದು ಎಳನೀರು ತಂದುಕೊಟ್ಟು ಸಮಾಧಾನ ಮಾಡಿದ್ದರು. ಅಕ್ಕನ ದಂತಕತೆಗಳಲ್ಲಿ ಹುರುಳಿರುವುದು ನಿಜ ಅನ್ನುವುದಕ್ಕೆ ನನಗೆ ಇದೊಂದು ನಿದರ್ಶನವಾಗಿತ್ತು. ನಾನು ಆಗ ಐದನೇ ಕ್ಲಾಸು. ಅಕ್ಕನ ಪ್ರಕಾರ ನಾನೂ ಇಷ್ಟರಲ್ಲಿ ಕುಂಟೆ ಹೊಡೆಯುವವನಾಗಿದ್ದು ಹೊಲ ಉಳುಮೆ ಕರಗತಮಾಡಿಕೊಂಡಿದ್ದು ಭತ್ತದ ಗದ್ದೆಗಿಳಿಯುವುದಕ್ಕೆ ಸನ್ನದ್ಧನಾಗಿರಬೇಕಿತ್ತು. ನನಗೆ ಇನ್ನೂ ಇದ್ಯಾವುದರ ತರಬೇತಿಯೂ ಇರಲಿಲ್ಲ. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ನನ್ನ ಮೂರನೇ ಸೋದರಮಾವನ

ಸ್ವಾತ್ಮಗತ

ಪೂರ್ಣವಾಗದ ಸ್ವಾತಂತ್ರ ಹೋರಾಟಗಾರರ ಸ್ಮಾರಕ ಕೆ.ಶಿವು ಲಕ್ಕಣ್ಣವರ ಇನ್ನೂ ಪೂರ್ಣವಾಗಿಲ್ಲ ಹಾವೇರಿಯ ‘ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ವಸ್ತುಸಂಗ್ರಹಾಲಯ’..! 1934ನೇ ಇಸವಿಯಲ್ಲಿ ಗಾಂಧೀಜಿ ಶಿರಸಿ, ಹಾನಗಲ್ ಮೂಲಕ ಹಾವೇರಿ ಪ್ರವಾಸ ಹೊರಟಿದ್ದರು. ಆಗ ನೊಂದ ದಲಿತ ಹೆಣ್ಣು ಮಗಳೊಬ್ಬಳು ಹೋಗುತ್ತಿರುವುದನ್ನು ಗಮನಿಸುತ್ತಾರೆ ಗಾಂಧೀಜಿ. ಆಕೆಯನ್ನು ವೀರನಗೌಡ ಅವರ ಮೂಲಕ ಆಶ್ರಮಕ್ಕೆ ಸೇರಿಸುತ್ತಾರೆ. ಮುಂದೆ ಗಾಂಧೀಜಿ ಸಲಹೆಯಂತೆ ಸಂಗೂರು ಕರಿಯಪ್ಪ ಅವರು ಆ ಹೆಣ್ಣು ಮಗಳನ್ನು ಮದುವೆಯಾಗುತ್ತಾರೆ. ಹೀಗೆ ಸ್ವಾತಂತ್ರ್ಯ ಸಂಗ್ರಾಮದ ಕಾಲಗಟ್ಟ, ಸಮಾನತೆ, ಸಾಮರಸ್ಯವನ್ನೂ ಸಾರುತ್ತಾರೆ… ‘ನಮ್ಮ ನೆಲದಲ್ಲೇ ನಡೆದ ಇಂತಹ ಐತಿಹಾಸಿಕ ಘಟನೆಗಳ ಬಗ್ಗೆ ಎಷ್ಟೋ ಜನರಿಗೆ ಅರಿವಿಲ್ಲ. ಅವು ದಾಖಲೀಕರಣಗೊಳ್ಳಬೇಕು. ಆ ಮಾಹಿತಿ ಕಿರಿಯರಿಗೆ ದೊರೆಯಬೇಕು. ಆಗ ದೇಶಪ್ರೇಮ ಬೆಳೆಯಲು ಸಾಧ್ಯ. ಇದರ ಪ್ರಯತ್ನವೇ ‘ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ವಸ್ತುಸಂಗ್ರಹಾಲಯ’ ಎನ್ನುತ್ತಾರೆ ಹುತಾತ್ಮ ಮಹದೇವ ಮೈಲಾರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಸದಸ್ಯ ವಿ.ಎನ್‌ ತಿಮ್ಮನಗೌಡ… ಜಿಲ್ಲಾಧಿಕಾರಿ ಎಂ. ಮಂಜುನಾಥ ನಾಯಕ್‌ ಅಧ್ಯಕ್ಷತೆಯ ಈ ಟ್ರಸ್ಟ್ ಬಜೆಟ್‌ ಪೂರ್ವದಲ್ಲೇ ರೂಪಾಯಿ 6.22 ಕೋಟಿಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ‘ಹಾವೇರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ನೆನಪಿನಲ್ಲಿ ವಸ್ತು ಸಂಗ್ರಹಾಲಯ ಸ್ಥಾಪಿಸಲು ರೂಪಾಯಿ 2.5 ಕೋಟಿ ಅನುದಾನ ನೀಡಲಾಗುವುದು’ ಎಂದು ಮಾರ್ಚ್‌ 2015ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆಯೂ ಮಾಡಿದ್ದರು. ಆದರೆ, ಈ ಘೋಷಣೆಯಾಗಿ ವರ್ಷಗಳೇ ಕಳೆದರೂ, ಬಿಡಿಗಾಸು ಬಂದಿಲ್ಲ. ಹೀಗಾಗಿ ಮಹತ್ತರ ಯೋಜನೆಯ ಕಾರ್ಯವು ಇನ್ನೂ ‘ಯೋಚನೆ’ಯಿಂದ ‘ಯೋಜನೆ’ ಹಂತಕ್ಕೆ ಬಂದಿಲ್ಲ. ಈ ವಸ್ತು ಸಂಗ್ರಹಾಲಯದ ಕಟ್ಟಡ, ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ ಸಂಗ್ರಹಿಸಬೇಕಾದ ಕಾರ್ಯ ಆರಂಭಗೊಂಡಿಲ್ಲ. ಸರ್ಕಾರ ಜಿಲ್ಲಾಡಳಿತಕ್ಕೆ ಅನುದಾನ ಬಿಡುಗಡೆ ಮಾಡಿದ ತಕ್ಷಣವೇ ಈ ಕಾರ್ಯವು ಚಿಗುರೊಡೆಯುವ ನಿರೀಕ್ಷೆ ಮೊದಲಿತ್ತು, ಈಗಿಲ್ಲ… ಸ್ವಾತಂತ್ರ್ಯದಲ್ಲಿ ‘ಹಾವೇರಿ’: ಸ್ವಾತಂತ್ರ್ಯ ಹೋರಾಟದಲ್ಲಿ ಹಾವೇರಿ ಜಿಲ್ಲೆಯು ವಿಶಿಷ್ಟ ಹೆಜ್ಜೆ ಗುರುತು ಮೂಡಿಸಿದೆ. ಜಿಲ್ಲೆಯ ಮೈಲಾರ ಮಹದೇವಪ್ಪ, ತಿರುಕಪ್ಪ ಮಡಿವಾಳರ, ವೀರಯ್ಯ ಹಿರೇಮಠ, ಕೆ.ಎಫ್‌ ಪಾಟೀಲ್‌, ಹಳ್ಳಿಕೇರಿ ಗುದ್ಲೆಪ್ಪ, ಸಂಗೂರು ಕರಿಯಪ್ಪ, ಟಿ.ಆರ್. ನಿಸ್ವಿ, ಮೆಣಸಿನಹಾಳ ತಿಮ್ಮನಗೌಡ, ಹೊಸ್ಮನಿ ಸಿದ್ದಪ್ಪ, ತಾವರೆಕೆರೆ ಫಕ್ಕೀರಪ್ಪ, ಪಂಚಾಕ್ಷರಪ್ಪ ವಳಸಂಗದ, ಚಾಂದ ಸಾಬ್, ಪರಮಣ್ಣ ಹರಕಂಗಿ ಮತ್ತಿತರ ಹಲವಾರು ಪ್ರಮುಖರು ಹೋರಾಟಕ್ಕೆ ಕೊಡುಗೆ ನೀಡಿದ್ದಾರೆ. 1943ರ ಹೊಸರಿತ್ತಿಯಲ್ಲಿ ಮೈಲಾರ ಮಹದೇವಪ್ಪ ಹಾಗೂ ಜೊತೆಗಾರರ ಬಲಿದಾನ, ಹೋರಾಟಕ್ಕೆ ಬಾಂಬ್‌ ತಯಾರಿಸಲು ಹೋಗಿ ಕೈಯನ್ನೇ ಕಳೆದುಕೊಂಡ ಸಂಗೂರ ಕರಿಯಪ್ಪ, ಮೆಣಸಿನಹಾಳ ತಿಮ್ಮನಗೌಡರ ಬಲಿದಾನ ಸೇರಿದಂತೆ ಹಲವಾರು ಘಟನಾವಳಿಗಳಿಗೆ ಹಾವೇರಿ, ಅಗಡಿ, ಹೊಸರಿತ್ತಿ, ಮೋಟೆಬೆನ್ನೂರ, ಬ್ಯಾಡಗಿ ಸೇರಿದಂತೆ ಜಿಲ್ಲೆಯ ಹಲವು ಸ್ಥಳಗಳು ‘ಪವಿತ್ರ ಸಾಕ್ಷಿ’ಯಾಗಿವೆ. ಹಲವೆಡೆ ತ್ಯಾಗದ ನೆತ್ತರೂ ಹರಿದಿದೆ… ‘ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರೂ ಎಲೆಮರೆಕಾಯಿಯಾಗಿ ಉಳಿದವರೇ ಸಹಸ್ರಾರು ಜನ. ಅಂತಹ ದೇಶಪ್ರೇಮಿಗಳ ನೆನೆಪುಗಳ ದಾಖಲೀಕರಣ ಹಾಗೂ ಯುವಜನತೆಯಲ್ಲಿ ದೇಶಪ್ರೇಮ ಜಾಗೃತಗೊಳಿಸುವ ಉದ್ದೇಶವೇ ಈ ವಸ್ತುಸಂಗ್ರಹಾಲಯ ಯೋಜನೆ ರೂಪುಗೊಳ್ಳಲು ಕಾರಣ’ ಎಂದಿದ್ದರು ಟ್ರಸ್ಟ್‌ನ ಇನ್ನೊಬ್ಬ ಸದಸ್ಯ ಸಾಹಿತಿ ಸತೀಶ ಕುಲಕರ್ಣಿ… ‘ಟ್ರಸ್ಟ್‌ ಮೂಲಕ ದೇಶಪ್ರೇಮ ಕುರಿತ ಕಾರ್ಯಕ್ರಮ ನಡೆಯುತ್ತಿತ್ತು. ಇದಕ್ಕೆ ವಸ್ತುಸಂಗ್ರಹಾಲಯವು ಇನ್ನಷ್ಟು ಇಂಬು ನೀಡಲಿದೆ’ ಎಂದಿದ್ದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ… ಈ ವಸ್ತುಸಂಗ್ರಹಾಲಯದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದ ಘಟನಾವಳಿ ಹಾಗೂ ಹೋರಾಟಗಾರರನ್ನು ಬಿಂಬಿಸುವ ಚಿತ್ರಗಳ ಗ್ಯಾಲರಿ, ಹೋರಾಟಕ್ಕೆ ಸಂಬಂಧಿಸಿದ ವಸ್ತುಗಳು ಪ್ರದರ್ಶನಗಳು ಕಾಣಲಿವೆ. ಅದರೊಂದಿಗೆ ಇತಿಹಾಸದ ಕ್ಷಣಗಳನ್ನು ಅಕ್ಷರಗಳಲ್ಲಿ ದಾಖಲಿಸಲಾಗುತ್ತದೆ. ಮತ್ತೊಂದೆಡೆ ಸಬರಮತಿ, ಇತರ ಆಶ್ರಮಗಳು, ದಂಡಿ ಸತ್ಯಾಗ್ರಹ ಮತ್ತಿತರ ಪ್ರಮುಖ ಸ್ಥಳ– ಘಟನೆಗಳ ಮಾದರಿಯನ್ನು ರೂಪಿಸಲಾಗುತ್ತದೆ. ಸ್ವಾತಂತ್ರ್ಯದ ಇತಿಹಾಸವನ್ನು ಆಧುನಿಕ ತಂತ್ರಜ್ಞಾನದ ವಿದ್ಯುನ್ಮಾನ ಸಾಧನಗಳ ಮೂಲಕ ದೃಶ್ಯ, ಶ್ರವಣ ಹಾಗೂ ಅಕ್ಷರಗಳಲ್ಲಿ ದಾಖಲಿಸಲಾಗುತ್ತದೆ… ‘ವೀಕಿಪೀಡಿಯಾ’ ಮಾದರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಘಟನಾವಳಿಗಳ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಸರಳವಾಗಿ ಈ ಮಾಹಿತಿ ಪಡೆಯಬಹುದು… ‘ದೇಶ, ರಾಜ್ಯ ಹಾಗೂ ಜಿಲ್ಲೆಯ ಪ್ರಮುಖ ಘಟನಾವಳಿಗಳನ್ನು ಹಂತ ಹಂತವಾಗಿ ದಾಖಲಿಸುವ ಉದ್ದೇಶವಿದೆ’ ಎಂದಿದ್ದರು ಟ್ರಸ್ಟ್‌ ಸದಸ್ಯ ವಿ.ಎನ್‌ ತಿಮ್ಮನಗೌಡ ಅವರು… ‘ಜಿಲ್ಲಾಧಿಕಾರಿ ಅಧ್ಯಕ್ಷತೆಯ ಹುತಾತ್ಮ ಮೈಲಾರ ಮಹದೇವಪ್ಪ ಟ್ರಸ್ಟ್ ಮೂಲಕ ರಾಜ್ಯ ಸರ್ಕಾರಕ್ಕೆ ಬಜೆಟ್ ಪೂರ್ವ ಪ್ರಸ್ತಾವನೆ ಹೋಗಿತ್ತು. ಈಗ ಕನಸು ನನಸಿಗಾಗಿ ಬಿ.ಜಿ ಬಣಕಾರ, ಸಿ.ಎಂ ಉದಾಸಿ, ಜಿಲ್ಲೆಯ ಶಾಸಕರುಗಳು, ಜಿಲ್ಲಾಧಿಕಾರಿ ಮತ್ತಿತರರು ಪ್ರಮುಖ ಕಾರ್ಯಕ್ಕೆ ಶ್ರಮಿಸುತ್ತಿದ್ದಾರೆ’ ಎಂದ್ದಿರು ಅವರು ಆಗ… ಇಷ್ಟೆಲ್ಲಾ ಪಯತ್ನಗಳಾದರೂ ವಸ್ತುಸಂಗ್ರಹಾಲಯ ಪೂರ್ಣ ಪ್ರಮಾಣದಲ್ಲಿ ಆಗಬೇಕಾದ ಕೆಲಸವಾಗಿಲ್ಲ. ಈ ಕೆಲಸ ಜರೂರಾಗಿ ಆಗಬೇಕಾಗಿದೆ..! ========

ಅವ್ಯಕ್ತಳ ಅಂಗಳದಿಂದ

ಅವ್ಯಕ್ತ ಕನಸು-ಮನಸು-ನನಸು ಮಕ್ಕಳಲ್ಲಿ ಭವಿಷ್ಯದ ಬಗ್ಗೆ ಬೇರೆ ಬೇರೆ ತರಹದ ನಿಲುವುಗಳು ಇರುತ್ತವೆ. ಕೆಲವರು ಅವರಿಗೆ, ಪ್ರತಿವರ್ಷ ಪರೀಕ್ಷೆಯಲ್ಲಿ ಬರುವ ಅಂಕಗಳನ್ನು ಮನಸ್ಸಲ್ಲಿಟ್ಟುಕೊಂಡು ಅದಕ್ಕೆ ಅನುಕೂಲಕರವಾಗಿ ಮುಂದೋಗ್ತಾರೆ ಇನ್ನು ಕೆಲವರು, ಮನೆಯಲ್ಲಿ ತಂದೆ-ತಾಯಿ ಹೇಳುವುದನ್ನು ಬಿಟ್ಟು ಬೇರೆ ಸ್ವಂತಿಕೆಯನ್ನು ಉಪಯೋಗಿಸುವುದೇ ಇಲ್ಲ. ಇನ್ನು ಮೂರನೇ ತರಹದ ಮಕ್ಕಳು ಯಾವುದೋ ಒಂದು ವಿಷಯದಲ್ಲಿ ಆಕರ್ಷಿತರಾಗಿ ಆ ವಿಷಯದ ವಿಶೇಷ ಗಳನ್ನೆಲ್ಲಾ ತಿಳಿದುಕೊಂಡು, ಅದನ್ನು ಗುರಿಯಾಗಿಟ್ಟುಕೊಂಡು ಹಂತಹಂತವಾಗಿ ಸಾಧಿಸುತ್ತ ಹೋಗೋರು.ಯಾವುದೇ ರೀತಿ ಮಕ್ಕಳಾದರೂ ಅವರಲ್ಲಿ ಆತ್ಮ ವಿಶ್ವಾಸ ಇರುವುದು ಅತಿಮುಖ್ಯ ಆಗುತ್ತದೆ. ಅದೇ ಅವರ ಸಾಧನೆಗಳಿಗೆ ಅಥವಾ ಹಂತಹಂತದ ಬೆಳವಣಿಗೆಗಳಿಗೆ ನಾಂದಿ ಹಾಡುವುದು. ಹೀಗೆ ಒಬ್ಬ ಇದ್ದ ಹಗಲು ಕನಸುಗಾರ ರಾತ್ರಿ ಕನಸುಗಾರ ಯಾವಾಗಲೂ ಒಂದೇ ಕನಸು ಅದನ್ನು ನನಸು ಮಾಡಲಿಕ್ಕೆ ಬೇಕಾದಷ್ಟು ಸರ್ಕಸ್ ಮಾಡ್ತಾನೆ. ಪಿಯುಸಿಗೆ ಸೇರಿದವನು, ಎಲ್ಲರೂ ಇರೋಹಾಗೆ ಸಹಜ ಜೀವಿ. ತೆಳ್ಳಗೆ ಪೇಪೇತ್ಲಾಂಡ ತರನೇ ಇದ್ದ ಸ್ವಲ್ಪ. ಆದರೆ ಮಕ್ಕಳಲ್ಲಿ ಇರಬೇಕಾದ ಕಳೆ ಅವನಲ್ಲಿ ಕೂಡ ಇತ್ತು. ಮೊದಲನೇ ಪಿಯುಸಿ ನಲ್ಲಿ ಒಳ್ಳೆ ಮಾರ್ಕ್ ಬರದಿದ್ದರು ತುಂಬಾ ಚೆನ್ನಾಗಿ ಟೇಬಲ್ ಟೆನ್ನಿಸ್ ಆಡುತ್ತಿದ್ದ. ಸುಮಾರು ಪ್ರಶಸ್ತಿಗಳು ಬರುತಿತ್ತು. ಹೀಗೆ ಒಂದು ದಿನ ಎಲ್ಲಾ ಮಕ್ಕಳಿಗೂ ಕೇಳೋ ಹಾಗೆ ಅವನನ್ನು ಕೇಳಿದೆ ನಿನಗೇನಾಗಬೇಕು ಮುಂದೆ ಎಂತಹ ಆಸೆ? ಮೇಡಂ ನಾನು ನೇವಿ ಸೇರ್ತೀನಿ……. ಅವನ ಮಾತು ಕೇಳಿದಾಗ ಅಲ್ಲಿದ್ದ ಕೆಲವರು ನಗಲು ಶುರು ಮಾಡಿದರು. ಸಹಜವೇ, ಮೇಲುನೋಟಕ್ಕೆ ಹುಡುಗನಲ್ಲಿ ಸೈನಿಕ ಆಗುವ ಯಾವುದೇ ಗುಣಗಳು ಕಾಣುತ್ತಿರಲಿಲ್ಲ-ತಾಳ್ಮೆ ಹಾಗೂ ಶಾಂತ ಮನೋಭಾವ‌… ಅಂಥಾ ವಿಶೇಷವಾದ ವರ್ಚಸ್ಸು ಏನೂ ಇರಲಿಲ್ಲ, ಆದ್ರೂ ನಾನು ಹೇಳ್ದೆ ಉಳಿದವರಿಗೆ “ಯಾಕೆ ನಗ್ತಾ ಇದ್ದೀರಾ?ಅವನ್  ಮನಸ್ ಮಾಡಿದ್ರೆ ಎಲ್ಲಾ ಆಗುತ್ತೆ……ಅವನು, ಆ ಅವನ ಕನಸನ್ನು ನನಸು ಮಾಡಬೇಕೆಂದರೆ ಅದರ ನಿಟ್ಟಿನಲ್ಲಿಯೇ ತನ್ನನ್ನು ತಾನು ಬದಲಾಯಿಸಿಕೊಳ್ಳುತ್ತಾ ಹೋಗ್ಬೇಕು ಆಗ ಮಾತ್ರ ಸಾಧ್ಯ” ಅವನು ತಟ್ಟನೆ ಹೇಳಿದ “ಹೌದು ಮಿಸ್, ನಾನು ಅದರ ಕಡೆ ಕೆಲಸ ಮಾಡ್ತಾ ಇದ್ದೀನಿ..” ನನಗೆ ಕೇಳಿ ಖುಷಿ ಆದರೂ ಅದನ್ನು ಹೆಚ್ಚು ತೋರಿಸಿಕೊಳ್ಳಲಿಲ್ಲ.“ಕನಸೊಂದನ್ನು ಕಟ್ಟಿದ್ದೀಯ ಅದನ್ನು ನನಸು ಮಾಡಿಕೊಳ್ಳಲು ಬೇಕಾಗುವ ಮೆಟ್ಟಿಲುಗಳನ್ನು ನೀನೇ ಕಟ್ಟಿ ಹತ್ತಬೇಕು.. ಈಗ ಕಷ್ಟಪಟ್ಟರೆ ಮಾತ್ರ ಮುಂದೆ ಸುಖ ಸಿಗುವುದು” ಎಂದೆ. ಅವನಿಗೆ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಕೆಲವು ಸ್ನೇಹಿತರು ನಗುವರು, ಕೆಲವುಸಾರಿ ಗುರುಗಳು ಅವನ ಪ್ರತಿಭೆಯನ್ನು ಅನುಮಾನದಿಂದ ನೋಡುತ್ತಿದ್ದರು.. ವಿಶೇಷ ಅಂದ್ರೆ ಅವನು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ತಾ ಇರಲಿಲ್ಲವೇನೋ. ಫಸ್ಟ್ ಪಿಯುಸಿ, ಸೆಕೆಂಡ್ ಪಿಯುಸಿ,2 ಆಯ್ತು. ಅವನ ಅಂಕಗಳು ಸಾಧಾರಣವಾಗಿ ಬಂದಿದ್ವು. ಮಧ್ಯಮಧ್ಯ ಕೆಲವು ಬಾರಿ ಬಂದು ನನ್ನ ಬಳಿ ಅವನ ಕನಸುಗಳ ಬಗ್ಗೆ ಮಾತಾಡುತ್ತಿದ್ದ. ಸಲಹೆಗಳನ್ನು ಕೇಳುತ್ತಿದ್ದ, ಓದುವುದು ಬಿಟ್ಟು ಬೇರೆ ಏನೇ ಸಾಧನೆ ಮಾಡಿದರು ನನಗೆ ಕಂಡಿತ ತಿಳಿಯುತ್ತಿತ್ತು ಅವನೇ ಹೇಳಿಕಕೊಳ್ಳುತ್ತಿದ್ದ ನನ್ನತ್ರ. ಹೀಗೆ ದಿನಗಳು ವರ್ಷಗಳು ಕಳೆದುಹೋದವು. ಮುಂದೆ ಅವನಿಲ್ಲ ಎಂಬುದೇ ನನಗೆ ತಿಳಿದಿರಲಿಲ್ಲ .  !,ಒಂದು ದಿನ ಸಡನ್ನಾಗಿ ನನ್ನೆದುರು ಬಂದುಬಿಟ್ಟ “ನನಗೆ ಡಿಫೆನ್ಸ್ ಅಲ್ಲಿ ಕೆಲಸ ಸಿಕ್ತು…109 ಜನ ಮಕ್ಕಳಲ್ಲಿ ಎಲ್ಲಾ ಹಂತಗಳಲ್ಲೂ ಮೊದಲ ಬಾರಿಯೇ ಸೆಲೆಕ್ಟ್ ಆದೆ ಮಿಸ್…..!ನಿಮ್ಮೊಬ್ಬರಿಗೆ ನನ್ನ ಮೇಲೆ ಎಷ್ಟು ನಂಬಿಕೆ ಇದ್ದಿದ್ದು” ಎಂದ. ಬಹಳ ಖುಷಿಯಾಯ್ತು ನನಗೆ. ಅದಕ್ಕಿಂತ ಹೆಚ್ಚು ಖುಷಿ  ಇದ್ದಿದ್ದು ಏನೆಂದರೆಅವನ ಮುಖದಲ್ಲಿ ವರ್ಚಸ್ಸು ಹೆಚ್ಚಾಗಿತ್ತು, ಜವಾಬ್ದಾರಿ ಇರುವುದು ಎದ್ದುಕಾಣುತ್ತಿತ್ತು “ಎಲ್ಲಾ ಒಳ್ಳೇದಾಗ್ಲಿ” ಅಂತ ಹೇಳಿ ಬಿಟ್ಟು ಬಿಟ್ಟೆ.. ಸಾವಿರಾರು ಮಕ್ಕಳು ಬರುತ್ತಾರೆ ಹೋಗುತ್ತಾರೆ ಎಲ್ಲರ ಲೆಕ್ಕ ಇಡಲು ಸಾಧ್ಯವೇ. ಅದಾದ ನಂತರ ಸಹಜವಾಗಿ ಸಿಗುತ್ತಿದ್ದ, ಮಾತಾಡುತ್ತಿದ್ದ ಕಷ್ಟ-ಸುಖವನ್ನು ಹಂಚಿಕೊಳ್ಳುತ್ತಿದ್ದ. ನನಗೂ ಅವನ ಮೇಲೆ ಅಭಿಮಾನ ಹೆಚ್ಚುತ್ತಿತ್ತು.. ಒಬ್ಬ ಸಾಮಾನ್ಯ ಹುಡುಗ ತನ್ನ ಕನಸಿನ ದಾರಿಯನ್ನು ಹಿಡಿದು, ಅದರ ಮೇಲೆ ಕೆಲಸ ಮಾಡಿ, ಈಗ ಸಬ್ ಲೆಫ್ಟನೆಂಟ್ ಆಗಿದ್ದಾನೆ, ಇನ್ನು ಸಿ ಡಿಪಿ ಡೈವಿಂಗ್ ಟ್ರೈನಿಂಗ್ ತಗೋಬೇಕು ಎಂಬ ಹೊಸ ಗುರಿ ಇದೆ. ಕಮಾಂಡೋ ಆದರೂ ಏನು ಅಚ್ಚರಿಯ ವಿಷಯವಲ್ಲ… ಕನಸು ಕಾಣುವುದಷ್ಟೇ ಅಲ್ಲ ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಸಾಧನೆಗಳನ್ನು ಮಾಡಬೇಕು… ===================================================

ಸ್ವಾತ್ಮಗತ

ಶಾಂತವೇರಿ ಗೋಪಾಲಗೌಡರು.! ಮಾನವ ಸರಳ-ಸಮಾನತೆಯ, ನಿಮ್ನವರ್ಗದ ನಾಯಕ, ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ಶಾಂತವೇರಿ ಗೋಪಾಲಗೌಡರು.! ಕೆ.ಶಿವು ಲಕ್ಕಣ್ಣವರ ನಾನು ಒಂದಿಷ್ಟು ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಸಮಾಜವಾದಿಗಳ ಬಗೆಗೆ ಬರೆಯುತ್ತಿದಂತೆ ನಮ್ಮ ಎಲ್ಲ ಮಾನವ ಸಮಾನ ಮನಸ್ಕ ಮನುಷ್ಯರ ಬಗೆಗೂ ಒಂದಿಷ್ಟು ಲೇಖನ ಬರೆಯಿರಿ ಎಂದು ಗೆಳೆಯರು ಕಿವಿಮಾತು ಹೇಳಿದರು. ಆಗ ಆ ನಿಟ್ಟಿನಲ್ಲಿ ಯೋಚಿಸಿದಾಗ ಮೊದಲು ಶಾಂತವೇರಿ ಗೋಪಾಲಗೌಡರ ಬಗೆಗೇ ಬರೆಯುವುದೇ ಉತ್ತಮ ಎಂದು ನಮ್ಮ ಶಾಂತವೇರಿ ಗೋಪಾಲಗೌಡರ ಮಾಹಿತಿ ಹೆಕ್ಕಿದೆ. ಇಂತಹ ಸಮಾಜವಾದಿಗಳ ಬಗೆಗೆ ಸಾಕಷ್ಟು ತಿಳಿದುಕೊಂಡ ಕಾಳೆಗೌಡ ನಾಗವಾರರು ಹುಬ್ಬಳ್ಳಿಯ ಕಾರ್ಯಕ್ರಮವೊಂದಕ್ಕೆ ಬಂದಾಗ ಕೊಟ್ಟ ಅವರೇ ಸಂಪಾದಿಸಿದ ಒಂದೆರಡು ಪುಸ್ತಕಗಳನ್ನು ಮತ್ತೊಮ್ಮೆ ತಿರುವಿಹಾಕಿಕೊಂಡೆನು. ಆ ಪುಸ್ತಕಗಳಲ್ಲಿಯ ಕೆಲ ಮಾಹಿತಿ ಹೆಕ್ಕಿ ಗೌಡರ ಬಗೆಗೆ ಬರೆಯಲು ಕುಳಿತೆನು. ಈ ಲೇಖನ ಅದೇ ಈ ಸರಳ-ಸಮಾನತೆಯ, ನಿಮ್ನವರ್ಗದ ನಾಯಕ, ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು..! ಶಾಂತವೇರಿ ಪಾಲಗೌಡರದು ಎತ್ತರದ ನಿಲುವು; ದುಂಡು ಮುಖ; ಉದ್ದವಲ್ಲದ ಮುದ್ದಾದ ಮೂಗು; ಅಗಲವಾದ ಹಣೆ; ಕೂದಲು ಕಡಿಮೆಯಾದ ದೊಡ್ಡ ತಲೆ; ವಿಶಾಲವಾದ ಕೆಂಗಣ್ಣುಗಳು; ಕಂದು ಬಣ್ಣ; ಶುಭ್ರವಾದ ಬಿಳಿಯ ಖಾದಿ ಜುಬ್ಬ, ಅಚ್ಚುಕಟ್ಟಾಗಿ ಉಟ್ಟ ಕಚ್ಚೆಪಂಚೆ; ಗಂಭೀರ ಮುಖ ಮುದ್ರೆ; ಮಾತನಾಡಲು ಮೆಲ್ಲಗೆ ಎದ್ದು ನಿಂತರು; ಎಲ್ಲರ ಕಣ್ಣು,ಕಿವಿ ಅತ್ತ ತಿರುಗಿದವು! ಆನೆ ಹೆಜ್ಜೆ ಇಟ್ಟ ಹಾಗೆ ಖಚಿತವಾದ ಮಾತು; ಶ್ರೋತೃಗಳನ್ನು ಸೆರೆಹಿಡಿಯುವ ವಾದಸರಣಿ. ಅವರೇ ಶಾಂತವೇರಿ ಗೋಪಾಲಗೌಡರು. ವಿಧಾನಸಭಾಧಿವೇಶನದ ಸಂದರ್ಭಗಳಲ್ಲಿ ಕಂಡು ಬರುತ್ತಿದ್ದ ನಿತ್ಯಸ್ಮರಣೀಯ ದೃಶ್ಯವಿದು… ಅಪೂರ್ವ ವ್ಯಕ್ತಿತ್ವ ರಾಷ್ಟ್ರ, ರಾಜ್ಯ, ಸಮಾಜ, ರಾಜಕೀಯ, ಆಡಳಿತ, ಸಾಹಿತ್ಯ-ಸಂಸ್ಕೃತಿಕ, ಕಲೆ, ಉದ್ಯಮ, ಅರ್ಥವ್ಯವಸ್ಥೆ – ಅದು ಯಾವುದೇ ವಿಚಾರವಿರಲಿ ಅದರ ಬಗ್ಗೆ ಖಚಿತ, ಸದೃಢ, ಸ್ಪಷ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಶಾಂತವೇರಿ ಗೋಪಾಲಗೌಡರ ಪ್ರವೃತ್ತಿಯಾಗಿತ್ತು. ಸತ್ಯವನ್ನು ಅವರಿಗೆ ಹೇಳುವುದರಲ್ಲಿ ಅವರಿಗೆ ಸಂಕೋಚವಿರಲಿಲ್ಲ; ಮಾತಿಗೆ ಮಂತ್ರ ಶಕ್ತಿಯನ್ನು ಕೊಡುವ ವ್ಯಕ್ತಿತ್ವದ ಹಿನ್ನೆಲೆ – ಅದಕ್ಕಾಗಿ ಅವರ ಮಾತಿಗೆ ತುಂಬ ಬೆಲೆ. ಅಧಿಕಾರಸ್ಥ ಸರ್ಕಾರ ತಲ್ಲಣಗೊಳ್ಳುವಂತಹ ಗರ್ಜನೆ; ವೈರಿಯೂ ಒಪ್ಪುವಂತಹ ವಿಚಾರಧಾರೆ ಅವರದು… ಉಗ್ರವಾದಿಯಾಗಿದ್ದ ಅವರಿಗೆ ಕೆಲವೊಂದು ಸಂದರ್ಭಗಳಲ್ಲಿ ಶೀಘ್ರಕೋಪ ಉಕ್ಕಿ ಬರುತ್ತಿತ್ತಾದರೂ ಅದು ಆಧಾರರಹಿತವಾಗಿರುತ್ತಿರಲಿಲ್ಲ. ವಿಶಿಷ್ಟ ಸನ್ನಿವೇಶಗಳನ್ನು ಉಂಟು ಮಾಡುವುದರಲ್ಲಿ, ಬಹಳ ಮಟ್ಟಿಗೆ ಪ್ರಥಮ ಸ್ಥಾನ ಪಡೆದಿದ್ದ ಗೋಪಾಲಗೌಡರು, ಅಂತಹ ಸನ್ನಿವೇಶಗಳಿಗೆ ಅರ್ಥಪೂರ್ಣ ಹಿನ್ನೆಲೆ ಇದೆ ಎಂಬುದನ್ನು ತೋರಿಸಿ ಕೊಡುತ್ತಿದ್ದರು… ಕೇವಲ ಐವತ್ತು ವರ್ಷಗಳ ಅವಧಿಯಲ್ಲಿ ಪ್ರಚೋದಕ ಶಕ್ತಿಯಾಗಿ ರೂಪುಗೊಂಡ ಗೋಪಾಲಗೌಡರ ಬೆಳವಣಿಗೆಯ ಹಿನ್ನೆಲೆ ಮನಮುಟ್ಟುವಂತಹ ಘಟನೆಗಳಿಂದ ಕೂಡಿತ್ತು. ವಿದ್ಯಾಭ್ಯಾಸದ ಹಾದಿ ಅಡಚಣೆಗಳ ಆಗರವಾಗಿ ಪರಿಣಮಿಸಿತಾದರೂ ವಿಶಾಲವಾದ ಸಮಾಜ ಜೀವನ, ಸ್ವಾತಂತ್ರ್ಯ ಹೋರಾಟದ ಮೈನವಿರೇಳಿಸುವ ಸನ್ನಿವೇಶ, ರಾಜಕೀಯ ರಂಗದ ರಂಗುರಂಗಿನ ಘಟನೆಗಳು ಅವರ ವ್ಯಕ್ತಿತ್ವ ನಿರೂಪಣೆಗೆ ಪೋಷಣೆ ನೀಡಿದವು; ರಾಜಕೀಯ ಮುತ್ಸದ್ದಿಯನ್ನಾಗಿ ಕಡೆದು ನಿಲ್ಲಿಸಿದವು. ಶಾಂತವೇರಿ ಗೋಪಾಲಗೌಡರ ಬಾಲ್ಯ, ಬೆಳವಣಿಗೆ ಶಿಕ್ಷಣ– ಮೊದಲಾದ ಎಲ್ಲ ಹಂತಗಳೂ ಗಮನಿಸುವಂತಹ ಪ್ರಸಂಗಗಳು… ಬಡತನದ ಕುಟುಂಬ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿರುವ ಆರಗದ ರೈತ ಕುಟುಂಬದಲ್ಲಿ ಶಾಂತವೇರಿ ಗೋಪಾಲಗೌಡರ ಜನನ. ೧೯೨೩ನೆಯ ಮಾರ್ಚ್ ೧೪ ರಂದು ಕೊಲ್ಲೂರಯ್ಯ ಮತ್ತು ಶೇಷಮ್ಮನವರ ಮೂರನೆಯ ಮಗುವಾಗಿ ಜನಿಸಿದವರು. ಅಣ್ಣ ಧರ್ಮಯ್ಯಗೌಡ; ಅಕ್ಕ ಸಿದ್ಧಮ್ಮ. ಇವರ ತಾತ ಲೋಕಣ್ಣಗೌಡರು ಅನುಕೂಲಸ್ಥರಾಗಿದ್ದರು. ಆದರೆ, ತಂದೆ ಕೊಲ್ಲೂರಯ್ಯನವರು ಬಡತನದ ಸುಳಿಯಲ್ಲಿ ಸಿಕ್ಕವರು… ಓದು- ಬರಹಗಳನ್ನು ಬಲ್ಲ ಕೊಲ್ಲೂರಯ್ಯನವರು ಅಂಚೆಪೇದೆಯಾಗಿ ಕೆಲಸಕ್ಕೆ ಸೇರಿದವರು; ಕೇವಲ ಹನ್ನೊಂದು ರೂಪಾಯಿಯ ಸಂಬಳ. ಅಂಚೆ ವಿತರಣೆಗಾಗಿ ಅನೇಕ ಹಳ್ಳಿಗಳನ್ನು ತಿರುಗಬೇಕಾಗಿತ್ತು. ಕವಲೇದುರ್ಗ, ಕೊಳವಳ್ಳಿ, ಹೊಸಗದ್ದೆ, ನಿಲುವಾಸೆ ಮೊದಲಾದ ಹಳ್ಳಿಗಳಿಗೆ ಅವರ ಅಂಚೆ ಯಾತ್ರೆಯು ಸಾಗಿತ್ತು… ಬಡತನದ ಬದುಕು ಗೋಪಾಲಗೌಡರ ಪಾಲಿಗಿತ್ತಾದರೂ ದೈವದತ್ತವಾದ ಮಲೆನಾಡ ಪ್ರಕೃತಿ ಸಂಪತ್ತಿನ ಮಡಿಲಲ್ಲಿ ಬೆಳೆದ ಅವರ ಮೈ- ಮನಸ್ಸುಗಳ ಮೇಲೆ ಮಧುರ ಪ್ರಭಾವ ಮೂಡಿ ಬಂದಿತು… ಗೋಪಾಲಗೌಡರ ಪ್ರಾಥಮಿಕ ವಿದ್ಯಾಭ್ಯಾಸ ಆರಗದಲ್ಲಿಯೇ ನಡೆಯಿತು. ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಊರಿಗೆ ಹೋಗಲು ಸಾಧ್ಯವಾಗಲಿಲ್ಲ. ಅಂಚೆಪೇದೆ ಕೆಲಸದ ಜೊತೆಗೆ ಸಣ್ಣ ವ್ಯವಸಾಯವನ್ನೂ ಇಟ್ಟುಕೊಂಡಿದ್ದ ಕೊಲ್ಲೂರಯ್ಯನವರಿಗೆ ನೆರವು ನೀಡುವುದು; ದನ ಮೇಯಿಸುವುದು; ಕಾಡು ಮೇಡುಗಳಲ್ಲಿ ತಿರುಗಾಡಿ ಸೊಪ್ಪು ಸದೆ ಹೊತ್ತು ತರುವುದು- ಇವೇ ಮೊದಲಾದ ಕಾಯಕಷ್ಟದ ಕೆಲಸಗಳಲ್ಲಿ ತೊಡಗಿದರು… ಗೋಪಾಲಗೌಡರು ದನಕಾಯುವ ಕಾಯಕದಲ್ಲಿ ತೊಡಗಿದ್ದಾಗ ಒಂದು ದಿನ ಒಂದು ಘಟನೆ ನಡೆಯಿತೆಂದು ಪ್ರತೀತಿ. ಉತ್ತರ ಕರ್ನಾಟಕದ ಸ್ವಾಮಿಗಳೊಬ್ಬರು ದನ ಮೇಯಿಸುವ ಹುಡುಗನನ್ನು ಅಕಸ್ಮಾತ್ತಾಗಿ ನೋಡಿದರಂತೆ. ಆತನ ಕಡೆಗೆ ಆಕರ್ಷಣೆಯಾಯಿತಂತೆ! ಆತನನ್ನು ಮಾತನಾಡಿಸಿ, ಎಲ್ಲ ವಿಚಾರಗಳನ್ನೂ ತಿಳಿದುಕೊಂಡು, ಕಣ್ಣುಗಳ ಹೊಳಪನ್ನೂ ಹಸ್ತರೇಖೆಯನ್ನೂ ನೋಡಿ ‘ನೀನು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು’ ಎಂದು ತಿಳಿಸಿದರಂತೆ… ಆಗ ಆತ ಅಸಹಾಯಕತೆಯನ್ನು ತೋಡಿಕೊಂಡನಂತೆ. ಎಲ್ಲವನ್ನೂ ಕೇಳಿ ತಿಳಿದುಕೊಂಡ ಸ್ವಾಮಿಗಳು ಕೊಲ್ಲೂರಯ್ಯನವರ ಬಳಿಗೆ ಹೋಗಿ ‘ನಿಮ್ಮ ಮಗನಿಗೆ ಒಳ್ಳೆಯ ಭವಿಷ್ಯವಿದೆ. ವಿದ್ಯಾಭ್ಯಾಸವನ್ನು ನಿಲ್ಲಿಸಬೇಡಿ. ಹೇಗಾದರೂ ಮಾಡಿ ಓದಿಸಲೇಬೇಕು…’ ಎಂದು ಸಲಹೆ ಮಾಡಿ ಹೊರಟು ಹೋದರಂತೆ… ಅಷ್ಟರಲ್ಲಿ, ಗೋಪಾಲಗೌಡರ ಅಣ್ಣ ಧರ್ಮಯ್ಯ ಗೌಡರು ಶಿಕಾರಿಪುರದಲ್ಲಿ ರೆವಿನ್ಯೂ ಇನ್‌ಸ್ಪೆಕ್ಟರಾದರು. ಹೀಗಾದದ್ದರಿಂದ ಗೋಪಾಲಗೌಡರ ವಿದ್ಯಾಭ್ಯಾಸ ಮುಂದುವರಿಯಲು ಸಹಾಯಕವಾಯಿತು. ಶಿಕಾರಿ ಪುರದಲ್ಲಿ ಲೋಯರ್ ಸೆಕೆಂಡರಿ ಪರೀಕ್ಷೆ ಮುಗಿಸಿದರು… ಸ್ವಾತಂತ್ರ್ಯದ ಹೋರಾಟ, ಸೆರೆಮನೆ ಮುಂದೆ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ತೀರ್ಥಹಳ್ಳಿಗೆ ತೆರಳಿದರು. ಹೈಸ್ಕೂಲಿನಲ್ಲಿ ತರುಣ ವಿದ್ಯಾರ್ಥಿಯಾಗಿದ್ದ ಗೋಪಾಲಗೌಡರು ತಮ್ಮ ಪ್ರಭಾವವನ್ನು ತೋರಿಸತೊಡಗಿದರು. ಎಳೆಯ ವಯಸ್ಸಿನಲ್ಲೇ ನಾಯಕ ಲಕ್ಷಣದ ಸೊಗಡು ಅವರಲ್ಲಿ ಹೊರಹೊಮ್ಮುತ್ತಿತ್ತು. ನಾಯಕ ಲಕ್ಷಣಗಳಿಗೆ ನೀರೆರೆಯಲೆಂಬಂತೆ, ೧೯೪೨ರ ಸ್ವಾತಂತ್ರ್ಯ ಹೋರಾಟದ ಮಹಾ ಚಳುವಳಿ ಪ್ರಾರಂಭವಾಯಿತು. ಗಾಂಧಿ, ನೆಹರೂ ಮೊದಲಾದ ಹಿರಿಯ ನಾಯಕರೆಲ್ಲರ ಬಂಧನವಾಯಿತು. ಗಾಂಧೀಜಿಯವರು ‘ಬ್ರಿಟಿಷರೇ, ಭಾರತವನ್ನು ಬಿಟ್ಟು ತೊಲಗಿ’ ಎಂಬ ಘೋಷಣೆಯನ್ನು ಮಾಡಿದ್ದರು… ಇಡೀ ದೇಶವೇ ಈ ಘೋಷಣೆಯನ್ನು ಮಾರ್ದನಿಗೊಳಿಸಿತ್ತು. ಸ್ವಾತಂತ್ರ್ಯ ಪ್ರಿಯರಾಗಿದ್ದ ಭಾರತೀಯರು ಹೋರಾಟಕ್ಕೆ ಸಿದ್ಧರಾದರು. ಶಾಲಾ- ಕಾಲೇಜುಗಳು ಇದಕ್ಕೆ ಹೊರತಾಗಲಿಲ್ಲ. ದೇಶದ ಎಲ್ಲ ಕಡೆಯಂತೆ ತೀರ್ಥಹಳ್ಳಿಯ ಹೈಸ್ಕೂಲು ವಿದ್ಯಾರ್ಥಿಗಳು ಮೈಮುರಿದೆದ್ದರು. ಗೋಪಾಲಗೌಡರಲ್ಲಿ ಒಳಗೊಳಗೆ ಕುದಿಯುತ್ತಿದ್ದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಧಿಗ್ಗನೆ ಎದ್ದು ನಿಂತಿತು. ವಿದ್ಯಾರ್ಥಿ ನಾಯಕರಲ್ಲಿ ಪ್ರಮುಖ ವ್ಯಕ್ತಿಯಾಗಿ ಮುಂಚೂಣಿಯಲ್ಲಿ ನಿಂತರು. ಅಂದಿನ ಉಲ್ಬಣಗೊಂಡ ಸನ್ನಿವೇಶವನ್ನು, ಅಲ್ಲಿ ಕನ್ನಡ ಪಂಡಿತರಾಗಿದ್ದ ಕಮಗೋಡು ನರಸಿಂಹಶಾಸ್ತ್ರಿಗಳವರು ಚೆನ್ನಾಗಿ ವಿವರಿಸುತ್ತಿರುತ್ತಾರೆ… ಶಾಸ್ತ್ರಿಗಳವರು ಶಿಸ್ತು, ನಿಷ್ಠೆ, ಸರಳ ಭಾವ, ಮಮತೆ, ಪ್ರೀತಿ ಬೋಧನಾ ಕ್ರಮದ ವೈಶಿಷ್ಟ್ಯ, ವಿಚಾರವಂತಿಕೆ ಮೊದಲಾದ ಶ್ರೇಷ್ಠ ಗುಣಗಳಿಗೆ ಹೆಸರಾಗಿದ್ದವರು. ಎಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿದ್ದರು. ವಿದ್ಯಾರ್ಥಿಗಳು ಅವರಲ್ಲಿ ತುಂಬು ಪ್ರೀತಿ ಗೌರವಗಳನ್ನು ಇಟ್ಟುಕೊಂಡಿದ್ದರು… ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದ ವಿದ್ಯಾರ್ಥಿಗಳು, ಅದರಲ್ಲೂ ಗೋಪಾಲಗೌಡರಂತಹವರು ಉಪಾಧ್ಯಾಯರ ಬಳಿಗೆ ಹೋಗಿ, ತರಗತಿಗಳಿಂದ ಹೊರಗೆ ಬರುವಂತೆ ಉಗ್ರವಾಗಿಯೇ ಒತ್ತಾಯಪಡಿಸಿದರು; ಚಳುವಳಿಯಲ್ಲಿ ಸೇರಿಕೊಳ್ಳ ಬೇಕೆಂದು ಕೇಳಿಕೊಂಡರು. ರಾಜೀನಾಮೆ ಕೊಡಬೇಕೆಂದು ಆಗ್ರಹಪಡಿಸಿದರು. ಎಲ್ಲರ ಪ್ರೀತಿಗೂ ಪಾತ್ರರಾಗಿದ್ದ ನರಸಿಂಹಶಾಸ್ತ್ರಿಗಳವರನ್ನೂ ಇದು ಬಿಡಲಿಲ್ಲ. ಅವರು ರಾಜೀನಾಮೆ ಕೊಡುವುದಿಲ್ಲವೆಂದು ಗೊತ್ತಾದ ಮೇಲೆ ಗೋಪಾಲಗೌಡರು ಅವರ ಬಳಿಗೆ ಹೋಗಿ ‘ಸಾರ್……. ಸ್ವಲ್ಪ ಇರಿ… ನೋಡಿಕೋತೀವಿ…’ಎಂದು ಕೋಪೋದ್ರೇಕದಿಂದ ಹೇಳಿ ಸರಕ್ಕನೆ ಹೊರಟು ಹೋದರು… ಅಂದಿನ, ಆ ಉದ್ರೇಕಪೂರ್ಣ ಸನ್ನಿವೇಶ ಅಲ್ಲಿದ್ದ ಎಲ್ಲರ ಮನಸ್ಸಿನಲ್ಲಿಯೂ ಉಳಿದು ನಿಂತಿತು. ಚಳುವಳಿಯ ಬಿಸಿಯಿಂದಾಗಿ ಗೋಪಾಲಗೌಡರ ಬಂಧನವಾಯಿತು. ವಿಚಾರಣೆಗೊಳಗಾಗಿ, ಶಿವಮೊಗ್ಗ ಕಾರಾಗೃಹದಲ್ಲಿ ಆರು ತಿಂಗಳು ೧೯ ದಿನಗಳನ್ನು ಕಳೆದರು. ಆದರೆ, ಆಮೇಲೆ (ಟೆಲಿಗ್ರಾಫ್) ತಂತಿ ಕತ್ತರಿಸಿದ್ದಕ್ಕೆ ಸಂಬಂಧಿಸಿದ ಮೊಕದ್ದಮೆಯಲ್ಲಿ ಶಿಕ್ಷೆಗೊಳಗಾದರು. ಸೆಷನ್ಸ್ ನ್ಯಾಯಾಲಯಕ್ಕೆ ಅಪೀಲು ಮಾಡಿಕೊಂಡಿದ್ದರಿಂದ ಶಿಕ್ಷೆ ರದ್ದಾಯಿತು. ಈ ಹೋರಾಟದ ಮಧ್ಯೆ ೧೯೪೩-೪೪ರಲ್ಲಿ ಎಸ್.ಎಸ್. ಎಲ್.ಸಿ. ಮುಗಿಸಿದರು… ಉಪಾಧ್ಯಾಯರು ಹೈಸ್ಕೂಲ್ ಶಿಕ್ಷಣವೇನೋ ಮುಗಿಯಿತು. ಆದರೆ, ಮುಂದೆ? ಮುಂದೆ ಓದಬೇಕೇ ಬಿಡಬೇಕೆ ಎಂಬ ಪ್ರಶ್ನೆ ಅವರನ್ನೂ, ಅವರ ಹಿರಿಯರನ್ನೂ ಕಾಡತೊಡಗಿತು. ಹಾಗೂ ಹೀಗೂ ಪ್ರಯತ್ನಮಾಡಿ ಶಿವಮೊಗ್ಗದಲ್ಲಿ ಇಂಟರ್‌ಮೀಡಿಯೆಟ್ ಕಾಲೇಜಿಗೆ ಸೇರಿದರು… ಆದರೆ, ಹಣದ ಅಡಚಣೆಯಿಂದಾಗಿ ಅವರು ಶಿಕ್ಷಣವನ್ನು ನಿಲ್ಲಿಸಬೇಕಾಯಿತು. ಆ ಬಳಿಕ ೧೯೪೫-೪೬ರಲ್ಲಿ ಆರಗದ ಮಾಧ್ಯಮಿಕ ಶಾಲೆಯಲ್ಲಿ ಉಪಾಧ್ಯಾಯ ವೃತ್ತಿಯನ್ನು ಅವಲಂಬಿಸಿಕೊಂಡರು. ಅಲ್ಲಿ-ಉಪಾಧ್ಯಾಯರಾಗಿ ಸೇರಿಕೊಂಡ ಪ್ರಸಂಗ ತುಂಬಾ ಸ್ವಾರಸ್ಯಕರವಾಗಿದೆ… ಆರಗದ ಮಾಧ್ಯಮಿಕ ಶಾಲೆಯಲ್ಲಿ ‘ಶ್ರೀನಾಗಾನಂದ’ ಎಂಬ ಹೆಸರಿನಲ್ಲಿ ಸಾಹಿತ್ಯ ರಚಿಸುತ್ತಿದ್ದ ಮಹನೀಯರೊಬ್ಬರು ಉಪಾಧ್ಯಾಯರಾಗಿದ್ದರು. ಉಪಾಧ್ಯಾಯ ವೃತ್ತಿಯ ಜೊತೆಗೆ ಅವರು ವೈದ್ಯಕೀಯವನ್ನೂ ನಡೆಸುತ್ತಿದ್ದರು. ಕಾಲೇಜು ಬಿಟ್ಟು ಬಂದ ಗೋಪಾಲಗೌಡರು ಅವರ ಬಳಿಗೆ ಹೋದರು. ಆ ವೇಳೆಗಾಗಲೇ ಗೋಪಾಲಗೌಡರಿಗೆ ತಲೆ ಸರಿಯಾಗಿಲ್ಲವೆಂಬ ಸುದ್ದಿ ಹಬ್ಬಿತ್ತು! ಆದರೆ ಶ್ರೀನಾಗಾನಂದರಿಗೆ ಹಾಗೇನೂ ಅನ್ನಿಸಲಿಲ್ಲ. ಅವರ ಸಂಗಡ ಗೌಡರು ಸರಿಯಾಗಿಯೇ ಮಾತನಾಡಿದರಂತೆ. ‘ನನಗೆ ಹುಚ್ಚೇನು ಸಾರ್, ನೀವೇ ಹೇಳಿ’ ಎಂದು ಗೌಡರು ಕೇಳಿದ ಪ್ರಶ್ನೆ ಬಹು ದಿನಗಳ ವರಗೆ ಅವರ ಕಿವಿಯಲ್ಲಿ ತುಂಬಿಕೊಂಡಿದವಂತೆ. ಶ್ರೀಯುತರು ಗೋಪಾಲಗೌಡರ ಪ್ರತಿಭೆ, ಭಾಷೆಯ ಮೇಲಿನ ಹಿಡಿತ, ಸಾಹಿತ್ಯಾಭಿರುಚಿ ಮೊದಲಾದವುಗಳನ್ನು ಗುರುತಿಸಿದರು. ಅವರ ನಿಕಟ ಸಂಪರ್ಕವನ್ನು ಬೆಳೆಸಿಕೊಂಡರು. ಅವರಿಂದ ಇಂಗ್ಲಿಷ್ ಲೇಖನಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿಸುತ್ತಿದ್ದರು. ತನಿ ಲೇಖನಗಳನ್ನು ಕೂಡ ಬರೆಸುತ್ತಿದ್ದರು. ಕೆಲವು ಪತ್ರಿಕೆಗಳಲ್ಲಿ ಪ್ರಕಟಿಸಿಯೂ ಆಯಿತು. ಗಾಢ ಸ್ನೇಹಸಂಪರ್ಕವಾದ ಮೇಲೆ, ಅಲ್ಲಿನ ಮಾಧ್ಯಮಿಕ ಶಾಲೆಯಲ್ಲಿ ಉಪಾಧ್ಯಾಯವೃತ್ತಿಯನ್ನು ಕೊಡಿಸಿದರು… ಗೋಪಾಲಗೌಡರ ಮಾನಸಿಕ ಸ್ಥಿತಿಯನ್ನು ಸಮೀಪವಾಗಿ ಗಮನಿಸುತ್ತಿದ್ದ ಶ್ರೀ ನಾಗಾನಂದರು ‘ಇವರಲ್ಲಿರುವ ಗಾಬರಿಗೆ ಏನೋ ಹಿನ್ನೆಲೆಯಿರಬೇಕು. ಎಂದು ಮನಸ್ಸಿನಲ್ಲಿಯೇ ಲೆಕ್ಕಹಾಕಿ ಒಂದು ದಿನ ಸರಸ ಸಲ್ಲಾಪದಲ್ಲಿದ್ದಾಗ ಪ್ರಾಸಂಗಿಕವಾಗಿ ಪ್ರಸ್ತಾಪಿಸಿದರಂತೆ. ಆಗ ಗೌಡರು ತಮ್ಮ ಅಧೀರತೆಗೆ ಅಧಿಕ ಎದೆಬಡಿತವೇ ಕಾರಣವೆಂದು ಹೇಳಿ ಅದು ಹೇಗೆ ಪ್ರಾರಂಭವಾಯಿತೆಂಬುದನ್ನು ವಿವರಿಸಿದರಂತೆ. ಆ ಪ್ರಸಂಗ ಹೀಗಿದೆ– ಒಂದು ದಿನ ಬಸ್ಸಿನಲ್ಲಿ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೊರಟರು. ಬಸ್ಸಿನಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿಕೊಂಡಿದ್ದರು… ಗೋಪಾಲಗೌಡರು ಕಂಡಕ್ಟರ್ ಸೀಟಿನಲ್ಲಿ ಕುಳಿತುಕೊಂಡಿದ್ದರು. ಬಸ್ಸು ಇಳಿಜಾರಿನಲ್ಲಿ ವೇಗವಾಗಿ ಚಲಿಸುತ್ತಿತ್ತು. ಹಾಗೆಯೇ ಪಕ್ಕದಲ್ಲಿ ನೋಡುತ್ತಿದ್ದ ಗೌಡರಿಗೆ, ಮುಂದಿನಚಕ್ರ ಸಡಿಲವಾಗಿ ಕ್ರಮೇಣ ಹೊರಗಡೆಗೆ ಸರಿಯುತ್ತಿದ್ದುದು ಕಂಡುಬಂದಿತು… ‘ಇನ್ನೇನು ಚಕ್ರ ಕಳಚಿಹೋಗುತ್ತದೆ; ಬಸ್ಸು ಪಲ್ಟಿ ಹೊಡೆಯುತ್ತದೆ; ಅನೇಕರು ಸತ್ತು ಹೋಗುತ್ತಾರೆ; ಅವರಲ್ಲಿ ನಾನೂ ಒಬ್ಬ..!’ ಎಂದು ಗಾಬರಿಗೊಂಡ ಗೌಡರ ಎದೆ ಬಲವಾಗಿ ಬಡಿದುಕೊಳ್ಳತೊಡಗಿತು. ಕುಳಿತಿದ್ದ ಸೀಟನ್ನು ಬಲವಾಗಿ ತಬ್ಬಿಕೊಂಡರು. ಕಣ್ಣುಗಳಲ್ಲಿ ಬಿಳೀಗುಡ್ಡೆ ಮಾತ್ರ ಕಾಣಿಸುತ್ತಿತ್ತೆಂದು ಪ್ರಯಾಣಿಕರೊಬ್ಬರು ಆಮೇಲೆ ಹೇಳಿದರಂತೆ! ಕಂಡಕ್ಟರ್‌ನ ಮುಂಜಾಗ್ರತೆಯಿಂದಾಗಿ ಬಸ್ಸು ನಿಂತಿತು. ಆಮೇಲೆ ಸರಿ ಮಾಡಿಸಿಕೊಂಡು ಮುಂದೆ ಪ್ರಯಾಣ ಮಾಡಿತು. ಬಸ್ಸಿನ ಆ ಘಟನೆ ನಡೆದಮೇಲೆ, ಯಾವಾಗಲಾದರೂ ಉದ್ರೇಕದ ಪರಿಸ್ಥಿತಿ ಉಂಟಾದಾಗ ಗೌಡರ ಎದೆಯ ಬಡಿತ ಜಾಸ್ತಿಯಾಗುತ್ತಿತ್ತು. ಅಂತಹ ಸಂದರ್ಭಗಳಲ್ಲಿ ಏನೇನೋ ಮಾತನಾಡುವುದು ಕಂಡುಬರುತ್ತಿತ್ತು. ಇದಕ್ಕೆಲ್ಲ ವಿಪರೀತ ಎದೆಬಡಿತವೇ ಕಾರಣವಾಗಿತ್ತು! ಇದನ್ನು ಕಂಡವರು, ವಾಸ್ತವಾಂಶವನ್ನು ತಿಳಿಯದೇ ಬುದ್ಧಿ ಭ್ರಮಣೆ ಎಂದು ಮಾತನಾಡಿಕೊಂಡದ್ದುಂಟು. ಉದ್ರೇಕದ ಸನ್ನಿವೇಶಗಳು ಸಂಭವಿಸಿದಾಗ, ಹೇಗೆ ಹೇಗೋ ನಡೆದುಕೊಳ್ಳುವ ಸಾಧ್ಯತೆಯಿತ್ತೆಂಬುದು ಸಮೀಪವರ್ತಿಗಳಾಗಿದ್ದವರಿಗೆ ಮನವರಿಕೆಯಾದ ದ್ದುಂಟು… ಉಪಾಧ್ಯಾಯರಾಗಿದ್ದ ಗೋಪಾಲಗೌಡರಿಗೆ ಮುಂದೆ ಓದಬೇಕೆಂಬ ಆಸೆ ಬಲಗೊಳ್ಳತೊಡಗಿತು. ಆದರೆ ಅವರ ಮನೋಗತಿಯನ್ನು ಕಂಡ ಅವರ ಹಿರಿಯರಿಗೆ ಮುಂದೆ ಓದುವುದಕ್ಕೆ ಕಳುಹಿಸಲು ಅಷ್ಟಾಗಿ ಇಷ್ಟವಿರಲಿಲ್ಲ. ಹಣದ ಅಡಚಣೆಯು ಬಹಳವಾಗಿತ್ತು. ಆದರೆ, ಅವರ ನಿಕಟವರ್ತಿಗಳಾಗಿದ್ದ ‘ಶ್ರೀನಾಗಾನಂದರು’ ಸುತ್ತಮುತ್ತಲ ಗ್ರಾಮಗಳಲ್ಲಿ ಸಂಚಾರಮಾಡಿ ಅಭ್ಯಾಸಕ್ಕೆ ಅಗತ್ಯವಾದ ಹಣ ವನ್ನೊದಗಿಸಿಕೊಟ್ಟರು. ಹೀಗಾಗಿ ಶಿವಮೊಗ್ಗದಲ್ಲಿ ಮತ್ತೆ ಇಂಟರ್‌ಮೀಡಿಯೆಟ್ ತರಗತಿಗೆ ಸೇರಿ ಅಭ್ಯಾಸವನ್ನು ಮುಂದುವರಿಸಿದರು. ನೆರವು ನೀಡಿದ ಹತ್ತಾರು ಸದ್ಗೃಹಸ್ಥರನ್ನು ಸದಾ ನೆನೆಯುತ್ತಿದ್ದರು… ಆಗರದಲ್ಲಿ ಉಪಾಧ್ಯಾಯ ವೃತ್ತಿಯನ್ನು ಅವಲಂಬಿಸಿಕೊಂಡದ್ದು ಕೇವಲ ಒಂದು ವರ್ಷದಷ್ಟು ಕಾಲವಾದರೂ ಆ ಅವಧಿ, ಅವರ ಮುಂದಿನ ಸಾರ್ವಜನಿಕ ಜೀವನಕ್ಕೆ ಭದ್ರವಾದ

ಸ್ವಾತ್ಮಗತ

ಹೈದರಾಬಾದ್ ಕರ್ನಾಟಕ 371ನೆ ಕಲಂ ತಿದ್ದುಪಡಿಯ ಬಗ್ಗೆ ಕೆ.ವು ಲಕ್ಕಣ್ಣವರ ಸಮಗ್ರ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ೩೭೧ ನೇ ಕಲಂ ತಿದ್ದುಪಡಿ ಮಾಡಲೇಬೇಕು..! ದಕ್ಷಿಣ ಕರ್ನಾಟಕಕ್ಕೆ ಉತ್ತರ ಕರ್ನಾಟಕವೆಂದರೆ ಮುಂಬೈ ಕರ್ನಾಟಕ ಹಿಂದುಳಿದ ಪ್ರದೇಶ. ಇನ್ನೂ ಮುಂಬೈ ಕರ್ನಾಟಕಕ್ಕೆ ಹೋಲಿಸಿದರೆ ಹೈದರಾಬಾದ್ ಕರ್ನಾಟಕ ತೀರಾ ಹಿಂದುಳಿದ ಪ್ರದೇಶವಾಗಿದೆ. ಈ ಕಾರಣಕ್ಕಾಗಿಯೇ ಈ ಹೈದರಾಬಾದ್ ಕರ್ನಾಟಕಕ್ಕೆ ೩೭೧ನೇ ಕಲಂ ಜಾರಿ ಮಾಡಿರುವುದು. ಆದರೆ ಈ ೩೭೧ನೇ ಕಲಂ ಜಾರಿಯಾದರೂ ಈ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಗಗನಕುಸುಮವಾಗಿದೆ. ಈ ಕಾರಣಕ್ಕಾಗಿಯೇ ಅಲ್ಲಿಯ ಹೈದರಾಬಾದ್ ಕರ್ನಾಟಕ ಕೆಲ ನನ್ನ ಸ್ನೇಹಿತ ಹೋರಾಟಗಾರರು ಮತ್ತು ರೇಣುಕಾ ಹೆಳವರ ಮತ್ತು ಸ್ನೇಹಿತರು ನಾನು ಸಮಗ್ರ ಉತ್ತರ ಕರ್ನಾಟಕದ ಸಮಸ್ಯೆಯ ಬಗೆಗೆ ಬರೆಯುತ್ತಿದಂತೆ ಹೈದರಾಬಾದ್ ಕರ್ನಾಟಕದ ೩೭೧ನೇ ಕಲಂ ಕೆಲ‌ ವಿಷಯಗಳಲ್ಲಿ ಅನುಷ್ಠಾನವಾದರೂ ಸಮಗ್ರವಾಗಿ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಸಾಕಾರವಾಗಿಲ್ಲ. ಇದು ಕೆಲ ರಾಜಕಾರಣಿಗಳ ಸಯಂ ಅಭಿವೃದ್ಧಿಗೆ ಮಾತ್ರ ಉಪಯೋಗವಾಗಿದೆ. ವೀರೇಂದ್ರ ಪಾಟೀಲರಾದಿಯಾಗಿ ಎಲ್ಲಾ ರಾಜಕಾರಣಿಗಳು ಈ ಬಗೆಗೆ ರಾಜಕೀಯ ಇಚ್ಛಾಶಕ್ತಿ ಪ್ರರ್ಧಶನ ಮಾಡಲಿಲ್ಲ. ಹೀಗಾಗಿ ಹೈದರಾಬಾದ್ ಕರ್ನಾಟಕ ಇನ್ನೂ ಹಿಂದುಳಿದೇ ಇದೆ. ಸಮಗ್ರ ಅಭಿವೃದ್ಧಿ ಗಗನಕುಸುಮವಾಗಿಯೇ ಇದೆ. ಹಾಗಾಗಿ ಹೈದರಾಬಾದ್ ಕರ್ನಾಟಕದ ಸಮಸ್ಯೆಗಳ ಬಗೆಗೆ ಬರೆಯಿರಿ ಎಂದು ಹೇಳಿದರು. ಆ ಕಾರಣಕ್ಕಾಗಿ ಈ ಹೈದರಾಬಾದ್ ಕರ್ನಾಟಕದ ಬಗೆಗೆ ಬರೆಯಬೇಕಾಯಿತು. ಈ ಲೇಖನ ಬರೆಯಬೇಕಾಯಿತು. ಅದು ಹೀಗಿದೆ…– ಸಮಗ್ರ ಹೈದರಾಬಾದ್ ಕರ್ನಾಟಕ ಅಭಿವೃದ್ದಿಗಾಗಿಯೇ ೩೭೧ನೇ ಕಲಂ ಜಾರಿ ಯಾಗಿದ್ದು. ಇಷ್ಟಾದರೂ ಸಮಗ್ರವಾಗಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗಾಗಿಲ್ಲವಿನ್ನೂ… -ಹೈದ್ರಾಬಾದ ಕರ್ನಾಟಕ ಮತ್ತು ಪ್ರಾದೇಶಿಕ ಅಸಮತೋಲನ– ಹೈದ್ರಾಬಾದ ಕರ್ನಾಟಕ ಭಾಗವೂ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಾಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶ ಎಂದು ಎಲ್ಲರಿಗೂ ತಿಳಿದ ವಿಷಯ. ಇದಕ್ಕೆ ಪೂರಕವಾಗಿ ಈ ಹಿಂದೆ ಸರಕಾರ ನೇಮಿಸಿದ ಹಲವಾರು ಸಮಿತಿಗಳು ವರದಿ ನೀಡಿವೆ. ೧೯೮೦ರಲ್ಲಿ ಮಾನ್ಯ ಶ್ರೀ ಗುಂಡುರಾವ್ ಅವರ ಸರಕಾರ ನೇಮಿಸಿದ ಶ್ರೀ ಎನ್.ಧರ್ಮಸಿಂಗ್ ಸಮಿತಿಯು ಹೈದ್ರಾಬಾದ ಕರ್ನಾಟಕ ಪ್ರದೇಶದ ಅಭಿವೃದ್ಧಿಯಲ್ಲಿನ ಅಸಮತೋಲನವನ್ನು ಅಧ್ಯಯನ ಮಾಡಿ ವರದಿಯನ್ನು ಸಲ್ಲಿಸಿ, ಈ ಭಾಗದ ಅಭಿವೃದ್ಧಿಗಾಗಿ ಒಂದು ವಿಷೇಶ ಅಭಿವೃದ್ಧಿ ಮಂಡಳಿ ಸ್ಥಾಪಿಸುವ ಅಗತ್ಯವಿದೆ ಎಂದು ಹೇಳಲಾಗಿತ್ತು. ಈ ಸಮಿತಿಯ ಶಿಫಾರಸ್ಸಿನಂತೆ ೧೯೯೨ ರಲ್ಲಿ ರಾಜ್ಯ ಸರಕಾರ ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ವರ್ಷಕ್ಕೆ ೧೦ ರಿಂದ ೫೦ ಕೋಟಿ ರೂಪಾಯಿವರೆಗೆ ಅನುದಾನವನ್ನು ನೀಡಿ ಕೈ ತೊಳೆದು ಕೊಂಡಿತ್ತೇ ವಿನಃ ಇದರಿಂದ ಸಾರ್ವಜನಿಕರಿಗೆ ಯಾವುದೇ ಅನುಕೂಲವಾಗುವಂತಹ ಕೆಲಸ ಆಗಿರುವುದಿಲ್ಲ ಎನ್ನಬಹುದು… ತದ ನಂತರ ೨೦೦೨ರಲ್ಲಿ ಮಾನ್ಯ ಶ್ರೀ ಎಸ್.ಎಮ್.ಕೃಷ್ಣರವರ ನೇತೃತ್ವದ ಸರಕಾರವು ನೇಮಿಸಿದ ಡಾ: ಡಿ.ಎಮ್.ನಂಜುಂಡಪ್ಪ ಉನ್ನತಾಧಿಕಾರ ಸಮಿತಿಯು ರಾಜ್ಯದ ಉದ್ದಗಲಕ್ಕೂ ಪ್ರವಾಸ ಕೈಗೊಂಡು ಪ್ರಾದೇಶಿಕ ಅಸಮತೋಲನ ಕುರಿತು ಆಳವಾಗಿ ಅಧ್ಯಯನ ಮಾಡಿ ಸಲ್ಲಿಸಿರುವ ವರದಿಯಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶವು ಅಭಿವೃದ್ದಿಯಲ್ಲಿ ಮೈಸೂರು ಕರ್ನಾಟಕ ಮತ್ತು ಮುಂಬಯಿ ಕರ್ನಾಟಕಕ್ಕೆ ಹೋಲಿಸಿದಾಗ ನೂರು ವರ್ಷದಷ್ಟು ಹಿಂದುಳಿದಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ… ಡಾ: ಡಿ.ಎಮ್.ನಂಜುಂಡಪ್ಪ ಉನ್ನತಾಧಿಕಾರ ಸಮಿತಿ ಸಲ್ಲಿಸಿರುವ ವರದಿಯು ರಾಜಕೀಯ ಪಕ್ಷಗಳಿಗೆ ಚುನಾವಣೆ ಸಮಯದಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶದ ಜನರಿಗೆ ವಂಚಿಸುವ ಒಂದು ಚುನಾವಣಾ ವಿಷಯವಾಯಿತೇ ವಿನಃ ಆ ವರದಿಯನ್ನು ಸಂಪೂರ್ಣವಾಗಿ ಜಾರಿ ತರುವ ಮನಸ್ಸು ಸುಮಾರು ೨೦೦೨ ರಿಂದ ಇಲ್ಲಿಯವರೆಗೆ ಬಂದ ಯಾವ ಸರಕಾರಗಳು ಮಾಡಲಿಲ್ಲ… ಡಾ: ಡಿ.ಎಮ್.ನಂಜುಂಡಪ್ಪ ಉನ್ನತಾಧಿಕಾರ ಸಮಿತಿ ಸಲ್ಲಿಸಿರುವ ವರದಿಯಲ್ಲಿ ರಾಜ್ಯದಲ್ಲಿರುವ ೧೭೫ ತಾಲ್ಲೂಕುಗಳನ್ನು ಅಭಿವೃದ್ಧಿ ದೃಷಿಯಿಂದ ನಾಲ್ಕೂ ವಿಧಗಳಾಗಿ ವಿಂಗಡಿಸಲಾಗಿದೆ. ೧. ಸಾಪೇಕ್ಷವಾಗಿ ಅಭಿವೃದ್ದಿ ಹೊಂದಿದ ತಾಲ್ಲೂಕುಗಳು, ೨. ಹಿಂದುಳಿದ ತಾಲ್ಲೂಕುಗಳು, ೩. ಅತೀ ಹಿಂದುಳಿದ ತಾಲ್ಲೂಕುಗಳು ಮತ್ತು ೪. ಅತ್ಯಂತ ಹಿಂದುಳಿದ ತಾಲ್ಲೂಕುಗಳು ಎಂದು ಗುರುತಿಸಲಾಗಿದೆ. ರಾಜ್ಯದಲ್ಲಿ ೬೧ ತಾಲ್ಲೂಕುಗಳು ಅಭಿವೃದ್ದಿ ಹೊಂದಿದ ತಾಲ್ಲೂಕುಗಳು ಮತ್ತು ೧೧೪ ತಾಲ್ಲೂಕುಗಳು ಹಿಂದುಳಿದ ತಾಲ್ಲೂಕುಗಳು ಎಂದೂ ಅವುಗಳಲ್ಲಿ ೩೫ ಹಿಂದುಳಿದ ತಾಲ್ಲೂಕುಗಳು, ೪೦ ಅತೀ ಹಿಂದುಳಿದ ತಾಲ್ಲೂಕುಗಳು ಹಾಗೂ ೩೯ ಅತ್ಯಂತ ಹಿಂದುಳಿದ ತಾಲ್ಲೂಕುಗಳು ಎಂದು ವಿಶ್ಲೇಶಣೆ ನೀಡಲಾಗಿದೆ. ಇದೇ ರೀತಿಯಲ್ಲಿ ನಮ್ಮ (ರಾಯಚೂರು) ಜಿಲ್ಲೆಯನ್ನು ಪರಿಗಣಿಸಿದರೆ, ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಒಂದು ಅತೀ ಹಿಂದುಳಿದ ತಾಲ್ಲೂಕು ರಾಯಚೂರು ತಾಲ್ಲೂಕಾಗಿದೆ. ಇದರಲ್ಲಿ ಅತ್ಯಂತ ಹಿಂದುಳಿದ ನಾಲ್ಕು ತಾಲ್ಲೂಕುಗಳೆಂದರೆ ಸಿಂಧನೂರು, ಲಿಂಗಸಗೂರು, ದೇವದುರ್ಗ ಹಾಗೂ ಮಾನ್ವಿ ತಾಲ್ಲೂಕುಗಳು ಇರುತ್ತವೆ… ಹೈದ್ರಾಬಾದ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ೩೪ ತಾಲ್ಲೂಕುಗಳಲ್ಲಿ ಕೇವಲ ಮೂರು ತಾಲ್ಲೂಕುಗಳು ಸಾಪೇಕ್ಷವಾಗಿ ಅಭಿವೃದ್ದಿ ಹೊಂದಿದ ತಾಲ್ಲೂಕುಗಳು ಮತ್ತು ಉಳಿದ ೩೧ ತಾಲ್ಲೂಕುಗಳು ಹಿಂದುಳಿದವು ಎಂದಿದೆ. ಹೈದ್ರಾಬಾದ ಕರ್ನಾಟಕದ ಶೇಕಡ ೯೧.೧೭ ರಷ್ಟು ತಾಲ್ಲೂಕುಗಳು ಹಿಂದುಳಿದಿವೆ ಎಂದು ಸ್ಪಷ್ಟವಾಗುತ್ತದೆ. ರಾಜ್ಯದ ೩೯ ಅತ್ಯಂತ ಹಿಂದುಳಿದ ತಾಲ್ಲೂಕುಗಳ ಪೈಕಿ ೨೧ ತಾಲ್ಲೂಕುಗಳು ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿವೆ ಎನ್ನುವದೇ ಅತೀ ಸೋಜಿಗದ ವಿಷಯವಾಗಿದೆ. ಡಾ: ಡಿ.ಎಮ್.ನಂಜುಂಡಪ್ಪನವರ ವರದಿಯು ರಾಜ್ಯದಲ್ಲಿ ವಿಭಾಗವಾರು ಒಟ್ಟಾರೆಯಾಗಿ ಅಭಿವೃದ್ದಿ ಹೊಂದಿದ (ಯಾವುದೇ ಹಿಂದುಳಿದ ತಾಲ್ಲೂಕುಗಳು ಇಲ್ಲದ) ಮೂರು ಜಿಲ್ಲೆಗಳನ್ನು ಗುರುತಿಸಿದ್ದು ಆ ಮೂರು ಜಿಲ್ಲೆಗಳು ಮೈಸೂರು ಭಾಗದಲ್ಲಿವೆ. ಅದೇ ರೀತಿ ಒಟ್ಟಾರೆಯಾಗಿ ಅಭಿವೃದ್ದಿ ಹೊಂದಿರದ (ಯಾವುದೇ ಅಭಿವೃದ್ದಿ ಹೊಂದಿದ ತಾಲ್ಲೂಕುಗಳು ಇಲ್ಲದ) ಮೂರು ಜಿಲ್ಲೆಗಳನ್ನು ಗುರುತಿಸಿದ್ದು ಆ ಮೂರು ಜಿಲ್ಲೆಗಳು (ಅವಿಭಜಿತ ಗುಲ್ಬರ್ಗಾ, ರಾಯಚೂರು ಮತ್ತು ಕೊಪ್ಪಳ) ಹೈದ್ರಾಬಾದ-ಕರ್ನಾಟಕದಲ್ಲಿವೆ ಎಂಬುದು ಈ ಭಾಗದ ಜನರಿಗೆ ಚಿಂತೆಗೀಡು ಮಾಡಿದೆ… ಐತಿಹಾಸಿಕ ಹಿನ್ನಲೆ:- ಹೈದ್ರಾಬಾದ-ಕರ್ನಾಟಕ ಪ್ರದೇಶವು ಅಭಿವೃದ್ದಿ ಕಾಣದೇ ಹಿಂದುಳಿಯಲು ಈ ಕೆಳಗಿನ ಕಾರಣಗಳನ್ನು ಕೊಡಬಹುದು. ಹೈದ್ರಾಬಾದ-ಕರ್ನಾಟಕವು ಅತ್ಯಂತ ಸಂಪದ್ಭರಿತ ನಾಡಾಗಿದ್ದು, ನೈಸರ್ಗಿಕ ಸಂಪನ್ಮೂಲಗಳಿಂದ ಕೂಡಿರುವ ಪ್ರದೇಶವಾಗಿದೆ. ಇಂತಹ ಸಂಪದ್ಭರಿತ ನಾಡಿನ ಮೇಲೆ ತಮ್ಮ ಹಿಡಿತ ಸಾದಿಸಲು ಇಲ್ಲ ಯಾವಾಗಲೂ ಯುದ್ದ ನಡಿತಾ ಇದ್ದದ್ದು ಇತಿಹಾಸದಿಂದ ತಿಳಿದು ಬರುತ್ತದೆ. ಈ ಪ್ರದೇಶವನ್ನು ತೆಲುಗು ಭಾಷಿಗನಾದ ಶ್ರೀ ಕೃಷ್ಣದೇವರಾಯನ ವಂಷಸ್ಥರಿಂದ, ಉರ್ದು/ಪಾರ್ಸಿ ಭಾಷೆಯನ್ನು ಮಾತನಾಡುವ ಬಿಜಾಪುರದ ಸುಲ್ತಾನರು ಮತ್ತು ಹೈದ್ರಾಬಾದ ಸಂಸ್ಥಾನದ ನಿಜಾಮನ ವಂಶಸ್ಥರು ಸುಮಾರು ೭೦೦ ವರ್ಷಗಳ ಕಾಲ ಆಳ್ವಿಕೆ ನಡೆಸಿರುತ್ತಾರೆ. ಹೀಗಾಗಿ ಈ ಭಾಗದ ಜನರು ಬೇರೆಯವರ ಆಳ್ವ್ವಿಕೆಯ ದಾಸ್ಯಕ್ಕೊಳಗಾಗಿ ಅಭಿವೃದ್ದಿಯಿಂದ ವಂಚಿತರಾಗಿದ್ದಾರೆ ಎಂದು ಹೇಳಬಹುದು. ಇಲ್ಲಿ ಲಬ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಜನರ ಜೀವನ ಉತ್ತಮಗೊಳಿಸುವ ಕೆಲಸ ನಮ್ಮನ್ನಾಳಿದ ಯಾವ ರಾಜ ಮಹಾರಾಜರು ಮತ್ತು ಪ್ರಜಾಪ್ರಭುತ್ವ ಸರಕಾರಗಳು ಮಾಡಲಿಲ್ಲ… ಶೈಕ್ಷಣಿಕ ಸಮಸ್ಯೆಗಳು:- ಸ್ವಾತಂತ್ರ್ಯಪೂರ್ವದಲ್ಲಿ ಆಳುವ ವರ್ಗದ ಆಡಳಿತ ಭಾಷೆ ಒಂದಾದರೆ, ಇಲ್ಲಿಯ ಜನರ ಆಡುವ ಭಾಷೆ ಮತ್ತೊಂದು ಆಗಿತ್ತು. ಹೀಗಾಗಿ ನೂರಾರು ವರ್ಷಗಳ ಕಾಲ ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ೧೯೪೮ ರವರೆಗೂ ಇಡೀ ಹೈದ್ರಾಬಾದ-ಕರ್ನಾಟಕದಲ್ಲಿ ಕೇವಲ ಮೂರೇ ಮೂರು ಹೈಸ್ಕೂಲಗಳಿದ್ದವು ಮತ್ತು ಶಿಕ್ಷಣವು ಖಡ್ಡಾಯವಾಗಿ ಉರ್ದು ಮಾದ್ಯಮದಲ್ಲೇ ಪಡೆಯಬೇಕಾಗಿತ್ತು ಎಂದರೆ ಸಮಸ್ಯೆಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬಹುದು. ತೀರ ಇತ್ತೀಚಿನವರೆಗೆ ಅಂದರೆ ೧೯೯೦ ರ ವರೆಗೆ ತಾಲ್ಲೂಕಿಗೆ ಎರಡು-ಮೂರು ಪ್ರೌಡಶಾಲೆಗಳಿದ್ದವು ಮತ್ತು ಇಂದಿನವರೆಗೂ ಕೂಡ ಎಷ್ಟೋ ಶಾಲೆಗಳು ಏಕೋಪಾದ್ಯಯ ಶಾಲೆಗಳಾಗಿವೆ. ಇಂದಿಗೂ ನಮ್ಮ ಭಾಗದ ಬಹಳಷ್ಟು ಶಾಲಾ/ಕಾಲೇಜುಗಳು, ಶಿಕ್ಷಕರ/ಉಪನ್ಯಾಸಕರ ಕೊರತೆಯನ್ನು ಎದುರಿಸುತ್ತಿವೆ. ಉದಾಹರಣೆಗೆ ರಾಯಚೂರು ಜಿಲ್ಲೆಯಲ್ಲಿರುವ ೩೯ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಮಂಜೂರಾದ ಸುಮಾರು ೪೦೦ ಉಪನ್ಯಾಸಕರ ಹುದ್ದೆಗಳಲ್ಲಿ ೧೯೨ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಅದೇ ರೀತಿ ರಾಜ್ಯದಲ್ಲಿ ೨೦೦೯-೧೦ ನೇ ಸಾಲಿನಲ್ಲಿ ೪೦೦೦ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳನ್ನು ತುಂಬಲಾಗಿದ್ದು ಅವುಗಳಲ್ಲಿ ೨೫೦೦ ಹುದ್ದೆಗಳು ಹೈದ್ರಾಬಾದ-ಕರ್ನಾಟಕ ವಿಭಾಗದಲ್ಲಿ ಖಾಲಿ ಇದ್ದವು. ಇಡೀ ಕೊಪ್ಪಳ ಜಿಲ್ಲೆಗೆ ಇವತ್ತು ಕೂಡ ಒಂದೇ ಒಂದು ವೃತ್ತಿಪರ ಕಾಲೇಜುಗಳಿಲ್ಲದಿರುವದು ವಿಪರ್ಯಾಸವೇ ಸರಿ. ಈ ರೀತಿ ಶೈಕ್ಷಣಿಕ ಕೇಂದ್ರಗಳ ಹಾಗೂ ಮೂಲಭೂತ ಸೌಲಬ್ಯಗಳ ಕೊರತೆಯಿಂದ ಇಲ್ಲಿ ಅನಕ್ಷರತೆ ಮಡುಗಟ್ಟಿದೆ… ನೀರಾವರಿ ಸಮಸ್ಯೆ:- ಹೈದ್ರಾಬಾದ-ಕರ್ನಾಟಕವು ನದಿಗಳ ಬೀಡು ಎಂದರೆ ಅತೀಶಯೋಕ್ತಿಯಾಗಲಾರದು. ಈ ಭಾಗದಲ್ಲಿ ತುಂಗೆ-ಭದ್ರೆ, ಕೃಷ್ಣೆ, ಭೀಮಾ, ಕಾರಂಜಾ ಇವೆಲ್ಲ ನದಿಗಳು ಹರಿಯುತ್ತವೆ. ಇಲ್ಲಿನ ಜನರ ದುರ್ದೈವವೆಂದರೆ, ಈ ನದಿಗಳಲ್ಲಿ ಹರಿಯುವ ನೀರು ರೈತರ ಹೊಲಗಳಿಗೆ ತಲುಪದೇ ಇರುವದು ನಮ್ಮ ಸರಕಾರಗಳ ನಿರ್ಲಕ್ಷ್ಯ ಎನ್ನಬಹುದು. ನೀರಾವರಿ ಯೋಜನೆಯಡಿಯಲ್ಲಿ ತುಂಗಾ-ಭದ್ರಾ ಎಡದಂಡೆ ಕಾಲುವೇ ನಿರ್ಮಿಸಿದ್ದು, ಅದು ರೈತರ ಹೊಲಗಳಿಗೆ ಉಪಯೋಗವಾದದ್ದಕ್ಕಿಂತ ಬೇಳೆಗಳನ್ನು ಹಾಳು ಮಾಡಿದ್ದೆ ಹೆಚ್ಚು, ಯಾಕೆಂದರೆ ವರ್ಷದಲ್ಲಿ ಎರಡು-ಮೂರು ಸಲ ಅದು ಖಂಡಿತವಾಗಿ ಒಡೆದು ಹೋಗುತ್ತದೆ. ಅದೇ ಪರಸ್ಥಿತಿ ನಾರಾಯಣಪುರ ಕೃಷ್ಣ ಬಲದಂಡೆ ಕಾಲುವೆಯದ್ದು ಆಗಿದೆ. ಇನ್ನೂ ಬಾಕಿ ಉಳಿದಿರುವ ನೀರಾವರಿ ಯೋಜನೆಗಳು ಹಲವಾರು, ಅವುಗಳಲ್ಲಿ ಮುಖ್ಯವಾದವುಗಳೆಂದರೆ ಭೀಮಾ ಬ್ಯಾರೇಜ ನಿರ್ಮಾಣ, ಕಾರಂಜಾ ಏತ ನೀರಾವರಿ ಯೋಜನೆ, ರಾಂಪುರ ಏತನೀರಾವರಿ ಯೋಜನೆ, ನಂದವಾಡಗಿ ಏತ ನೀರಾವರಿ ಯೋಜನೆ, ಹೀರೆ ಹಳ್ಳ ಯೋಜನೆ ಮುಂತಾದವು ಹಾಗೆ ನೆನೆಗುದಿಗೆ ಬಿದ್ದಿವೆ. ರಾಜ್ಯ ಸರಕಾರಗಳು ಮನಸ್ಸು ಮಾಡಿದರೆ ಈ ಭಾಗದ ಇಂಚಿಂಚು ಭೂಮಿಯನ್ನು ನೀರಾವರಿಗೊಳಪಡಿಸಬಹುದಾದಷ್ಟು ನೀರು ಇಲ್ಲಿ ಲಬ್ಯವಿದೆ… ನಿರುದ್ಯೋಗ ಸಮಸ್ಯೆ:- ಈ ಭಾಗದ ರೈತರು, ಕೂಲಿಕಾರ್ಮಿಕರು ಹೊಟ್ಟೆಪಾಡಿಗಾಗಿ ತಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಸಹಕುಟುಂಬ ಪರಿವಾರ ಸಮೇತ ಮಹಾನಗರಗಳಿಗೆ ಉದ್ಯೋಗವನ್ನರಸಿ ಗೂಳೆ ಹೋಗುವದು ಸರ್ವೇ ಸಾಮಾನ್ಯವಾಗಿದೆ. ಅದೇ ರೀತಿ ಶೈಕ್ಷಣಿಕ ಕೇಂದ್ರಗಳ ಹಾಗೂ ಮೂಲಭೂತ ಸೌಲಬ್ಯಗಳ ಕೊರತೆಯಿಂದ ಇಲ್ಲಿನ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ನಡೆಯುವ ಸ್ಪರ್ದಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾದ್ಯವಾಗದೇ ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಸಂಖ್ಯೆಯಲ್ಲಿ ವಂಚಿತರಾಗಿ ಸೋತಿರುವದು ಸ್ಪಷ್ಟ. ಇದರಿಂದಾಗಿ ಈ ಭಾಗದ ಸರಕಾರಿ ಶಾಲಾ-ಕಾಲೇಜುಗಳಲ್ಲಿ, ಸರಕಾರಿ ಕಛೇರಿಗಳಲ್ಲಿ ಜವಾನರಿಂದ ಹಿಡಿದು ಅಧಿಕಾರಿಗಳವರೆಗೂ ಸರಕಾರಿ ನೌಕರರೆಲ್ಲರೂ ರಾಜ್ಯದ ಬೇರೆ ಭಾಗದವರೇ ಆಗಿರುತ್ತಾರೆ. ರಾಜ್ಯ ಸರಕಾರ ಜಿಲ್ಲಾವಾರು ನೇಮಕಾತಿ ಮಾಡಿಕೊಳ್ಳುವ ಸರಕಾರಿ ಹುದ್ದೆಗಳ ಅಂಕಿ ಅಂಶಗಳನ್ನು ನೋಡಿದಾಗ ಆಶ್ಚರ್ಯವಾಗುವ ಸಂಗತಿ ಗೋಚರಿಸುತ್ತದೆ. ಉದಾಹರಣೆಗೆ ಇತ್ತೀಚಿನ ವರ್ಷಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರ ವಿವರಗಳನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ. ವರ್ಷ ಖಾಲಿ ಹುದ್ದೆಗಳ ವಿವರ ನೇಮಕಾತಿ ಮಾಡಿದ ಹುದ್ದೆಗಳ ವಿವರ ರಾಯಚೂರು ಜಿಲ್ಲೆಯವರೇ ನೇಮಕವಾದವರ ಸಂಖ್ಯೆ ಶೇಕಡಾವಾರು (%) ೨೦೦೬-೦೭ ೬೯೬ ೬೯೬ ೧೫೧ ೨೧.೬ ೨೦೦೭-೦೮ ೧೪೬೩ ೧೪೬೩ ೧೦೪ ೭.೧ ೨೦೦೮-೦೯ ೧೧೫೪ ೧೧೫೪ ೭೫ ೬.೨ ಇದರಿಂದ ಈ ಭಾಗದಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವದು ಕಳವಳಕಾರಿ ವಿಷಯವಾಗಿದೆ… ಈ ಭಾಗದ ನಿರುದ್ಯೋಗ ಸಮಸ್ಯೆ ನಿವಾರಿಸಲು ಒಂದೇ ಒಂದು ಪರಿಹಾರ ಎಂದರೆ ಸಂವಿಧಾನದ ೩೭೧ ನೇ ಕಲಂ ತದ್ದುಪಡಿ ಮಾಡುವ ಮೂಲಕ ಮುಲ್ಕಿ ಕಾನೂನು ಜಾರಿಮಾಡಿ ಸ್ಥಳೀಯ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಮತ್ತು ಉನ್ನತ ಶಿಕ್ಷಣದಲ್ಲಿ ವಿಶೇಷ ಮೀಸಲಾತಿ ನೀಡುವ ಅವಶ್ಯಕತೆ ಇರುತ್ತದೆ. ಮುಲ್ಕಿ ಕಾನೂನು:- ಇಲ್ಲಿ ಶೈಕ್ಷಣಿಕ ಸೌಲಭ್ಯಗಳ ಕೊರತೆಯಿಂದ ಸರಿಯಾದ ಶಿಕ್ಷಣ ಸಿಗುತ್ತಿರಲಿಲ್ಲ. ಅಂದು ಹೈದ್ರಾಬಾದ ರಾಜ್ಯದ ಆಡಳಿತ ಭಾಷೆ ಉರ್ದುವಾಗಿತ್ತು ಮತ್ತು ಬಹು ಸಂಖ್ಯಾತ ಜನರ ಭಾಷೆ ತೆಲುಗು, ಮರಾಠಿ ಮತ್ತು ಕನ್ನಡವಾಗಿತ್ತು, ಇದರಿಂದಾಗಿ ಎಲ್ಲರಿಗೂ ಶಿಕ್ಷಣ ದಕ್ಕುವದು ಕಷ್ಟವಾಗುತಿತ್ತು. ಆ ಸಂದರ್ಭದಲ್ಲಿ ಸರಕಾರಿ ಹುದ್ದೆಗಳಿಗೆ ನೇಮಕವಾಗುತ್ತಿದ್ದವರು ಹೆಚ್ಚಿನ ಸಂಖ್ಯೆಯಲಿ ಉತ್ತರ ಭಾರತದ ಅಲಿಗರ್ ಮುಸ್ಲಿಂ ವಿಶ್ವವಿದ್ಯಾಲಯದ ಅಭ್ಯರ್ಥಿಗಳಾಗಿದ್ದರು. ಇದನ್ನು ಮನಗೊಂಡು ಹೈದ್ರಾಬಾದ

ಅವ್ಯಕ್ತಳ ಅಂಗಳದಿಂದ

ಅವ್ಯಕ್ತ ಸಿಟ್ಟು ಸಿಟ್ಟು ಒಬ್ಬ ಮನುಷ್ಯ ಅಂದಮೇಲೆ ಅವನಿಗೆ ಎಲ್ಲಾತರದ ಭಾವನೆಗಳು ಇರುವುದು ಸಹಜ. ಭಾವನೆಗಳ ಸರಮಾಲೆಯಲ್ಲಿ ಅವನು ತನ್ನನ್ನು ತಾನು ವೈಯಕ್ತಿಕವಾಗಿ, ಮಾನಸಿಕವಾಗಿ ಬೆಳೆಸುತ್ತಾನೆ.ಶಾಲೆಗಳಲ್ಲಿ ಈ ನಿಟ್ಟಿನಲ್ಲಿ ಮಕ್ಕಳ ಮೇಲೆ ಪ್ರಭಾವಗಳು ಕಡಿಮೆಯೇ. ಸಮಯದ ಅಭಾವವೊ, ಹೊಸ ಹೊಸ ಕಾನೂನುಗಳ ಮಧ್ಯಸ್ತಿಕೆಯೊ, ಅಂಕಪಟ್ಟಿ ಹಾಗೂ ಅಂಕಗಳ ನಡುವಿನ ಹೋರಾಟವೋ, ತಿಳಿಯದು. ಹೀಗೆ ಒಬ್ಬ ಭಾವನಾ ಲೋಕದ ತಿರುವುಗಳಲ್ಲಿ ಸಿಲುಕಿಕೊಂಡು ಒದ್ದಾಡುತ್ತಾನೆ.  ಇವನೊಬ್ಬ ಅತಿ ತೆಳು ಮೈಕಟ್ಟಿನ ಸರಳ ಜೀವಿ. ‘ಮಿಸ್’ ‘ಮಿಸ್’ ಎಂದು ಹೇಳಿಕೊಂಡು ಇರುವುದೇ ಒಂದು ಕಾಯಕ. ಸಿಟ್ಟು ಬಂದರೆ ಮಾತ್ರ ಅವನ ಹುಚ್ಚಾಟ ತಡೆಯಲಾಗದು…. ತನ್ನನ್ನು ತಾನು ನಿಯಂತ್ರಿಸಿಕೊಳ್ಳುವುದರಲ್ಲಿ ಅತಿ ಶೂನ್ಯ. ಸಿಟ್ಟು ಏನಕ್ಕೆ ಬೇಕಾದರೂ ಬರಬಹುದು! ಯಾಕೆ ಬಂತು? ಎಲ್ಲಿಗೆ ಹೋಯ್ತು? ಏನು ಮಾಡಿದ? ಯಾವುದಕ್ಕೂ ಲೆಕ್ಕ ಚುಕ್ತಾ ಇಲ್ಲ.. ಒಂದಿಷ್ಟು ಕಾರಣಗಳ ಕಂತೆಯಷ್ಟೇ.. ಹತ್ತನೇ ತರಗತಿಯಲ್ಲಿ ಓದುತ್ತಿದ್ದ. ಅವನ ಜೊತೆ ಇನ್ನಷ್ಟು ಮಕ್ಕಳು…ನನ್ನ ವಿಚಾರಧಾರೆಗಳು, ರೀತಿ-ನೀತಿಗಳು, ಇವರಿಗೆ ತಿಳಿದಿರಲಿಲ್ಲ.. ಓದುತ್ತಿದ್ದ ಶಾಲೆಯಲ್ಲಿ ಅವನದೇ ದರ್ಬಾರು.. ಬರಿಯ ಆಟ ಆಟ ಆ…ಟ. ಯಾವುದೊಂದರ ಜವಾಬ್ದಾರಿಯೂ ಇದೆ ಎನಿಸುತ್ತಿರಲಿಲ್ಲ…ಈ ಹುಡುಗನಲ್ಲಿ ಮೊದಲಿನಿಂದಲೂ ಸಭ್ಯವಾದ ಅಸಭ್ಯತೆ…ತಾಳ್ಮೆ-ಸಿಟ್ಟು ಎರಡರ ವಿಚಿತ್ರ ಮಿಶ್ರಣ. ಇವನದೊಂದು ಹೊಸ ತತ್ವ-ಸಿಟ್ಟು ಬಂದರೆ ಹೊಡ್ದು ಬಿಡೋದು.. ಯಾರು? ಏನು? ಎತ್ತ? ಎಷ್ಟು ಪೆಟ್ಟು? ಯಾವುದರ ಲೆಕ್ಕ  ಗೊತ್ತಿಲ್ಲದವ. ವಿಚಿತ್ರ ಏನು ಅಂದ್ರೆ ತಾಯಿಗೆ ಬೇಜಾರ್ ಮಾಡುವುದಿಲ್ಲ. ತಾಯಿಗೆ ಬೇಜಾರಾದರೆ, ಅವಳನ್ನು ಖುಷಿಪಡಿಸಲು ಏನು ಬೇಕಾದ್ರೂ  ಮಾಡುತ್ತಾನೆ. ತಾಯಿ “ಹೊಡಿಬೇಡ!” ಅಂದ್ರೆ ಮಾತ್ರ ಕೇಳಕ್ಕಾಗಲ್ಲ..ಇದು ಇವನ ನಿತ್ಯದ ಕಾರ್ಯ…ಒಂದಿನ ಕ್ಲಾಸಿನೊಳಗೆ ಬಂದ… “ಮಿಸ್, ಇವತ್ತು ಅವನಿಗೆ ಹೊಡೆದು ಬಂದೆ, ಬಹಳ ದಿಮಾಕ್ ತೋರಿಸುತ್ತಿದ್ದ!”  ನಾನು“ಯಾಕೋ? ನಿನಗದೇ ಕೆಲಸನಾ?  ಎಷ್ಟು ಸಂಬಳ ಕೊಡುತ್ತಾರೆ ಎಲ್ಲರಿಗೆ ಹೊಡೆಯೋಕೆ? ಹೊಡೆಯೋದು ಗಂಡಸ್ತನ ಅಲ್ಲಾ ,ನಿಜವಾದ ಗಂಡಸು ಸುಮ್ ಸುಮ್ನೆ ಕೈ ಎತ್ತಲ್ವೋ..” ಸಮಾಧಾನವಾಗಿ ಹೇಳೋದು-ಪ್ರತೀ ಸಲ…ಸುಮ್ಮನೆ ಇವನಿಗೊಂದು ಕಾರಣ ಬೇಕು ಹೊಡೆಯಕ್ಕೆ ಕೈ ಕಾಲು ತುರಿಸ್ತಾ ಇರುತ್ತೇನೋ?..ಇವನ ಹೊಡೆತಕ್ಕೆ ಇವನ ತಾಯಿ ಸ್ಕೂಲಿಗೆ ಹೋಗಿ ತಲೆ ತಗ್ಗಿಸಬೇಕು…ಮನೆಗೆ ಬಂದು ಬೊಬ್ಬೆ. ಹೀಗಾದರೆ ಸಮಸ್ಯೆ ಬಗೆಹರಿಯುತ್ತಾ….ತಾಯಿ- ಗುರುಗಳ ಬಗ್ಗೆ ಗೌರವ ಇರುವವನು, ಮಾತು ಕೇಳದೆ ಇರ್ತಾನಾ? ಅವನ ಹಳೆಯ ಅನುಭವಗಳು, ಹೊಸ  ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ನೋಡಲು ಬಿಡುತ್ತಿರಲಿಲ್ಲ…. ಇದು ತಿಳಿದು ಬಂತು ನನಗೆ.ಈಸಾರಿ ಮನಸ್ಸು ಮಾಡಿ ಹೇಳಿಬಿಟ್ಟೆ… “ನೀನು ಹೊಡೆದಾಡಿಕೊಂಡು ಬಂದರೆ ನನ್ನ ಹತ್ತಿರ ಪಾಠ ಕಲಿಯಲು ಬರಲೇಬೇಡ…”ಗುಂಪನ್ನು ಸೇರಿ ಹೊಡೆದಾಡೋದು, ಕೀಟಲೆ ಮಾಡೋದು, ಎಲ್ಲ ಬಿಡಲು ಪ್ರಯತ್ನ ಮಾಡಲು ಪ್ರಾರಂಭಿಸಿದ. “ಯಾವತ್ತಾದರೂ ನಿನ್ನೆದುರಿಗೆ ನಿನಗಿಷ್ಟವಾಗದವರು ಬಂದರೆ ಅವರನ್ನ ಬಿಟ್ಟುಬಿಡು……. ಸಿಟ್ಟು ಬಂದರೆ ಸುಮ್ಮನೆ ಜಾಗ ಖಾಲಿ ಮಾಡು. ನಾಯಿ ಎದುರು ಹೋಗಿ ಸುಮ್ಮನೆ ಅಲ್ಲಾಡಿದರೆ ಸಾಕು, ಅದು  ಬೊಗಳಲು ಶುರು ಮಾಡುತ್ತೆ. ಅದೇ ಹುಲಿ ಎದುರು ಹೋಗಿ ನೀನೇನೇ ಮಾಡಿದರೂ, ಅದಕ್ಕೆ ಹಸಿವಿದ್ದಾಗ ಮಾತ್ರ ನಿನ್ನ ತಿನ್ನುತ್ತೆ! ಇಲ್ಲ, ಅದರ ಪಾಡಿಗೆ ಅದು ಇರುತ್ತೆ…ಅರ್ಥ ಮಾಡ್ಕೊಳೋ….” ಅಂದೆ.. ಹುಟ್ಟಿದಾಗಿನಿಂದ ಬಂದ ಸಿಟ್ಟನ್ನು ಸುಲಭವಾಗಿ ತೆಗೆಯಲಾಗದು.. ಅವನಿಗೆ ಸಿಟ್ಟು ಬಂದಾಗಲೆಲ್ಲಾ, ಬೆವರು ಇಳಿಯುವ ಹಾಗೆ ಎಕ್ಸಸೈಜ್ ಮಾಡಿಸ್ತಿದ್ದೆ.“ಸಾರಿ ಮಿಸ್, ನಾ ಇನ್ಮೇಲೆ ಸಿಟ್ಟು ಮಾಡಿಕೊಳ್ಳಲ್ಲ” ಅಂತ ಹೇಳಿ ಎರಡು ದಿನಕ್ಕೆ ಮತ್ತೊಬ್ಬರಿಗೆ ಹೊಡೆದು ಬಂದಿದ್ದ…ಇವನ ಸಿಟ್ಟನ್ನು   ಹೇಗಾದರೂ ಸರಿ ಮಾಡಬೇಕು, ಇವನ ಸಿಟ್ಟನ್ನು ನಿಯಂತ್ರಿಸೋದು ಅಥವಾ ಸರಿ ಹಾದಿಯಲ್ಲಿ ಹೊರ ಹಾಕುವುದು ಅತ್ಯಗತ್ಯ. ಕಲಿಸಲೇಬೇಕು ಅಂತ ನಾನು ಪಣತೊಟ್ಟು….. ದಿನವೂ ಒಂದು ಹತ್ತು ನಿಮಿಷನಾದ್ರೂ ಅವನನ್ನು ಉರ್ಸೋದು, ಸಿಟ್ಟು ಬರೋಹಾಗೆ ಮಾಡೋದು, ಆಮೇಲೆ, “ಊಟ ಮಾಡು, ನೀರು ಕುಡಿ, ಹೊಡಿತೀಯಾ ಹೊಡಿ ಬಾ” ಅಂತ ರೇಗ್ಸೋದು… ಸಿಟ್ಟಾಗುವುದಕ್ಕೆ , ಆಗದೆ ಇರುವುದಕ್ಕೆ, ಇರುವ ಹಲವು ಕಾರಣಗಳನ್ನು ತಿಳಿಸಿ, ಅದನ್ನು ನಿಯಂತ್ರಿಸುವ ಬಗ್ಗೆ ಎಲ್ಲ ವಿಷಯ ಪ್ರಾಕ್ಟಿಕಲ್ ಆಗಿ ಮಾಡಿಸಿಲಿಕ್ಕೆ ಶುರುಮಾಡಿದೆ…. ಅವನ ಸಿಟ್ಟಿನಿಂದ ಆಗುವ ತೊಂದರೆಗಳನ್ನು ಅವನೇ ಅನುಭವಿಸುವ ಹಾಗೆ ಮಾಡಿದೆ.. ಅವನ ತಾಯಿ ನನ್ನ ಮಾತಿಗೆ ಬೆಲೆ ಕೊಟ್ಟು, ನಾನು ಹೇಳೋ ಹಾಗೆ ಮಾಡುತ್ತಿದ್ದರು…ದಿನ ಕಳೆದಂತೆ ಅವನ ಸಿಟ್ಟು ಸ್ವಲ್ಪ ಸ್ವಲ್ಪ ಹತೋಟಿಗೆ ಬರತೊಡಗಿತ್ತು…ಹತ್ತನೇ ಕ್ಲಾಸಿನ ಪರೀಕ್ಷೆಗೆ ಒಂದು ವಾರ ಇದೆ ಎನ್ನುವಾಗ,  ಮತ್ತೊಬ್ಬ ಹುಡುಗನಿಗೆ ಹೊಡೆದು ಬಂದ…. ನಾನು ‘ಯಾಕೆ? ಏನು?’ ಎಂದು ಕೇಳಲಿಲ್ಲ. “ಪೆಟ್ಟು ತಿಂದವನಿಗೆ ಆದ ಗಾಯ ಮಾಸುವರೆಗೂ ನಿನ್ನಲ್ಲಿ ಸಲಿಗೆಯಿಂದ ಇರುವುದಿಲ್ಲ” ಎಂದು ಹೇಳಿಬಿಟ್ಟೆ.. ತಾಯಿಯ ಅನುರಾಗದ ಮಾತು, ನನ್ನ ತಿಳುವಳಿಕೆಯ ಚಾಟಿ ಮಾತುಗಳು, ಆಪ್ತ ಸ್ನೇಹಿತರ ಬುದ್ಧಿವಾದ, ಎಲ್ಲಾ ಸೇರಿ ಮೋಡಿಯಂತು ಮಾಡಿತು.. ಇದಾದ ನಂತರ ಬಹಳ ಬದಲಾವಣೆ ಕಾಣತೊಡಗಿತ್ತು…ಸಣ್ಣ ಸಣ್ಣ ವಿಷಯಕ್ಕೆ ಸಿಟ್ಟು ಮಾಡೋದು, ಕಾರಣವಿಲ್ಲದೆ ಸಿಟ್ಟು ಮಾಡಿಕೊಳ್ಳುವುದು, ಎಲ್ಲಾ ಕಡಿಮೆಯಾಯಿತು…ಆದರೆ ಈ ಪಯಣದಲ್ಲಿ ಅವನು ಕಲಿತದ್ದು ಬಹಳ.. “ಜರ್ನಿ ಫ್ರಮ್ ಮ್ಯಾನ್ ಟು ಜಂಟಲ್ಮ್ಯಾನ್”  ಅಂದರೂ ತಪ್ಪೇನಿಲ್ಲ…. ಜೊತೆಜೊತೆಗೆ ಓದುವುದರಲ್ಲೂ ಗಮನ ಹೆಚ್ಚಿತು ಜವಾಬ್ದಾರಿ ಹೆಚ್ಚಿತು, ತರಗತಿಯಲ್ಲಿ ಒಳ್ಳೆ ಅಂಕಗಳನ್ನು ತೆಗೆದ.ಪ್ರತಿ ಸಾರಿ ಅವನನ್ನು ಒಂದೇ ಮಾತಲ್ಲಿ ರೇಗಿಸೋದು …”ಸಿಟ್ಟು ಕಾಲಲ್ಲಿ ಇದೆಯೋ ತಲೆಯಲ್ಲಿ ಇದೆಯೋ ಹೇಳು, ನಾನು ಸರಿ ಮಾಡ್ತೀನಿ. ಮರದ್ ಬನ್ರೇ ಮರದ್…!ಜನ್ ತೊ ಬಹುತ್ ಮಿಲೇಂಗೆ! ಸಜ್ಜನ್ ಬನ್ ಮೇರೆ ಬಚ್ಚೆ! “ಹೇಗೆ ಕಾಲಚಕ್ರ ಉರುಳಿತೊ ಗೊತ್ತಾಗದು.. ಈಗಲೂ ಅದೇ ಹುಡುಗ ನನ್ನೊಂದಿಗೆ ತಿಳಿಸಾರು ತಿನ್ನಲು ಆಶಿಸುತ್ತಾ ಬರುತ್ತಾನೆ.ನಾನು ಮಾಡುವ ಕೆಲಸಗಳಿಗೆ ಕರೆದಾಗಲೆಲ್ಲಾ ಬಲಗೈ ಬಂಟನಾಗಿ ನಿಲ್ಲುತ್ತಾನೆ.ಆದರೆ ತಾಳ್ಮೆ ಇದೆ ಈಗ. ಬೇರೆ ಬೇರೆಯವರೊಂದಿಗೆ ಹೇಗೆ ಸಂಭಾಷಣೆ ಮಾಡೋದು ಎನ್ನುವುದು ಗೊತ್ತಿದೆ.. ಸ್ವಲ್ಪ ಸ್ನೇಹಿತರ ಪ್ರಭಾವವಿದ್ದರೂ ತನ್ನನ್ನು ತಾನಾಗಿಯೇ ಉಳಿಸಿಕೊಂಡಿದ್ದಾನೆ.. ಅದೇ ಸಂತೋಷ ತರುವುದು. ಸಿಟ್ಟು ಸಹಜ. ಅಭ್ಯಾಸದಿಂದ ನಿಯಂತ್ರಿಸು.ಇಲ್ಲ ಸರಿದಿಕ್ಕಿನಲ್ಲಿ ಹಾರಿಬಿಡು. ಆಗ ಮಾತ್ರ ಗೆಲುವು ನಿನ್ನದು. ========= ReplyForward

ಸ್ವಾತ್ಮಗತ

“ಕರ್ನಾಟಕ ಗಾಂಧಿ” ಹಾಗೂ ವಿಭೂತಿ ಪುರುಷ ಹರ್ಡೇಕರ ಮಂಜಪ್ಪ ..! ಕೆ.ಶಿವು ಲಕ್ಕಣ್ಣವರ್ ದೇಶದ ಸ್ವಾತಂತ್ರಕ್ಕಾಗಿನ ಹೋರಾಟದಲ್ಲಿ ತಮ್ಮ ನಿಸ್ವಾರ್ಥ ಸೇವೆಯಿಂದ ಶಿಕ್ಷಣ, ಸಮಾಜ ಸೇವೆ, ವೈದ್ಯಕೀಯ ಮತ್ತು ಕರಕುಶಲ ಕಲೆಗಳಲ್ಲಿ ನುರಿತವರಾದ ಹಲವಾರು ಮಂದಿ ಹೆಸರಾಗಿದ್ದಾರೆ… ಮಹಾತ್ಮ ಗಾಂಧೀಜಿಯವರ ನೇರ ಪ್ರಭಾವಕ್ಕೆ ಒಳಗಾದ ಕರ್ನಾಟಕದ ಹಲವಾರು ಮಹಾಪುರುಷರು ಮತ್ತು ಮಹಿಳೆಯರು ಕೂಡಾ ಇಂತಹ ಮಹನೀಯರ ಸಾಲಿನಲ್ಲಿ ಪ್ರಮುಖರಾಗಿದ್ದು ಈ ನಿಟ್ಟಿನಲ್ಲಿ, ಉಮಾಬಾಯಿ ಕುಂದಾಪುರ್, ಕಮಲಾದೇವಿ ಚಟ್ಟೋಪಾದ್ಯಾಯ, ಎನ್. ಎಸ್. ಹರ್ಡೇಕರ್ ಅವರುಗಳು ಸಮಾಜ ಸೇವೆಯಲ್ಲಿ ಮಹತ್ವವಾದ ಸೇವೆ ಸಲ್ಲಿಸಿದವರಾಗಿದ್ದಾರೆ… ಹರ್ಡೇಕರ್ ಮಂಜಪ್ಪನವರು ಈ ಪೈಕಿ ಒಂದು ಹೆಜ್ಜೆ ಮುಂದು. ಅವರು ಗಾಂಧಿಜಿಯಂತೆ ಬದುಕಿ, ಭುಜಿಸಿ, ಬೋಧಿಸಿ, ಬರೆದು, ಸಂಪೂರ್ಣ ಬ್ರಹ್ಮಚರ್ಯೆ ಮತ್ತು ತಪಸ್ವೀ ಜೀವನ ನಡೆಸಿದವರು. ತಮ್ಮ ಜೀವನದಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿದ ಬಹಳಷ್ಟು ಮಂದಿ ಇದ್ದಾಗ್ಯೂ ಹರ್ಡೇಕರ್ ಮಂಜಪ್ಪನವರಂತೆ ಅತ್ಯಂತ ಕಟ್ಟುನಿಟ್ಟಿನ ಸ್ವಯಂ ನಿಯಂತ್ರಣದಲ್ಲಿ ಬದುಕನ್ನು ಸಾಧಿಸಿದವರು ಮತ್ತು ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿ ಬಡತನದ ಬವಣೆ ಅನುಭವಿಸುತ್ತಿರುವವರಿಗಾಗಿ ಬದುಕಿದವರು ಅತ್ಯಂತ ವಿರಳವೆನ್ನಬೇಕು…. ಹರ್ಡೇಕರ್ ಮಂಜಪ್ಪನವರು ಪಂಪನ ಕಾವ್ಯಬಣ್ಣಿತವಾದ ಬನವಾಸಿಯಲ್ಲಿನ ಬಡ ಕುಟುಂಬವೊಂದರಲ್ಲಿ ಫೆಬ್ರವರಿ 18, 1889ರಲ್ಲಿ ಜನಿಸಿದರು. ಅವರು 1903ರ ವರ್ಷದಲ್ಲಿ ಹತ್ತಿರದ ಸಿರಸಿಯಲ್ಲಿ ಮುಲ್ಕಿ (ಪ್ರಾಥಮಿಕ ಶಿಕ್ಷಣ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಶಿರಸಿಯಲ್ಲಿ ಶಾಲಾ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಸಿದವರು. ಸಂಬಳ ೭ ರೂಪಾಯಿ ಮಾತ್ರ ಪ್ರತಿ ತಿಂಗಳಿಗೆ… ಬರಹ ಪ್ರವೀಣರಾದ ಹರ್ಡೇಕರ್ ಮಂಜಪ್ಪನವರು ಮಕ್ಕಳಿಗೆ ಅರ್ಥವಾಗುವ ಹಾಗೆ ಪದ್ಯಗಳ ರಚನೆ ಮಾಡಿದ್ದಲ್ಲದೆ ಅವನ್ನು ಮಕ್ಕಳ ಮನೋಧರ್ಮಕ್ಕೆ ರುಚಿಸುವ ಹಾಗೆ ಹಾವಭಾವ ಪೂರಕವಾಗಿ ಬೋಧಿಸಿದರು. ಅವರಿಗೆ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳನ್ನು ಕಲಿಯಬೇಕೆಂಬ ಆಸೆ ಇದ್ದಿತಾದರೂ, ಆ ನಿಟ್ಟಿನಲ್ಲಿ ಗುರುಗಳನ್ನು ಪಡೆಯುವ ಸೌಲಭ್ಯ ಇಲ್ಲದಿದ್ದ ಕಾರಣಗಳಿಂದ ತಾವೇ ಸ್ವಯಂ ಆಚಾರ್ಯರಾಗಿ ಕಲಿಯಲಾರಂಭಿಸಿದರು… ಸ್ವದೇಶೀ ಆಂದೋಲನ ಪ್ರಬಲವಾಗಿ ಮುಂಚೂಣಿಯಲ್ಲಿದ್ದ ದಿನಗಳವು. ೧೯೦೬ರಲ್ಲಿ ತಿಲಕರ ಸ್ವದೇಶಿ ಚಳುವಳಿಯಿಂದ ಪ್ರಭಾವಿತರಾಗಿ ಅಧ್ಯಾಪಕ ವೃತ್ತಿ ಬಿಟ್ಟು ದಾವಣಗೆರೆಗೆ ಬಂದು ೧೯೦೬ರ ಸೆಪ್ಟೆಂಬರ್ ೨ರಂದು ’ಧನುರ್ಧಾರಿ’ ವಾರ ಪತ್ರಿಕೆ ಪ್ರಕಟನೆಯ ಆರಂಭಿಸಿದರು. ಹರ್ಡೇಕರ್ ಮಂಜಪ್ಪ ಮತ್ತು ಅವರ ಹಿರಿಯ ಸಹೋದರರು ತಿಲಕರ ಕೇಸರಿ ಪತ್ರಿಕೆಯಿಂದ ತೀವ್ರ ಪ್ರಭಾವಿತರಾಗಿ, ಅದರಲ್ಲಿನ ಲೇಖನಗಳನ್ನು ಕನ್ನಡದಲ್ಲಿ ಪ್ರಕಟಿಸಲು ಅನುಮತಿ ಪಡೆದುಕೊಂಡರು. ಮರಾಠಿ ಭಾಷೆಯನ್ನು ಚೆನ್ನಾಗಿ ಅರಿತಿದ್ದ ಹರ್ಡೇಕರ್ ಸಹೋದರರು ತಮ್ಮ ಸಾಪ್ತಾಹಿಕದಲ್ಲಿ ಪ್ರಕಟಿಸಿದಾಗ ಅದು ಕೆಲವೇ ದಿನಗಳಲ್ಲಿಯೇ ಹತ್ತು ಸಾವಿರ ಗ್ರಾಹಕರನ್ನು ಪಡೆದುಕೊಂಡಿತು. ’ಧನುರ್ಧಾರಿ’ಯ ಕೆಲವೊಂದು ಪ್ರತಿಗಳು ಹಳೆಯ ಮೈಸೂರು ರಾಜ್ಯದಲ್ಲೂ ಅಲ್ಲಲ್ಲಿ ಭಿತ್ತರಗೊಂಡಾಗ ಆಗಿನ ಮೈಸೂರು ರಾಜ್ಯದ ದಿವಾನರಾಗಿದ್ದ ಮಾಧವರಾಯರು ಈ ಪತ್ರಿಕೆಯಲ್ಲಿನ ಪ್ರಕಟಣೆಗಳು ಪ್ರಚೋದನಕಾರಿಯಾಗಿದ್ದೆಂಬ ಕಾರಣದಿಂದ ಪತ್ರಿಕೆಗೆ ನಿಷೇಧ ಹಾಕಿ ಭೀಕರ ಪರಿಣಾಮಗಳನ್ನೆದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು. ಹೀಗಾಗಿ ’ಧನುರ್ಧಾರಿ’ ಪತ್ರಿಕಾಲಯ ತನ್ನ ಬಾಗಿಲನ್ನು ಮುಚ್ಚಬೇಕಾಯಿತು… ಮಂಜಪ್ಪನವರು ಮದುವೆಯಾದರೆ ಸಮಾಜ ಸೇವೆಗೆ ತೊಡಕಾಗುವುದೆಂದು ೧೯೧೦ರಲ್ಲಿ ಮದುವೆ ಆಗಬಾರದೆಂಬ (೨೨ನೆ ವಯಸ್ಸಿನಲ್ಲಿ) ನಿರ್ಧಾರಿಸಿದರು. ಬ್ರಹ್ಮಚರ್ಯೆಯಿಂದ ಕೂಡಿದ ಸಾತ್ವಿಕ ತಪಶ್ಚರ್ಯೆಯ ಜೀವನವನ್ನು ಅಳವಡಿಸಿಕೊಂಡು ಅದಕ್ಕಾಗಿ ತಮ್ಮ ಬಡ ಅಕ್ಕಿ – ಬೇಳೆಯ ಆಹಾರದಲ್ಲಿಯು ಸಹಾ ಉಪ್ಪು ಸಕ್ಕರೆಯಂತಹ ರುಚಿಗಳನ್ನು ನಿಷೆಧಿಸಿಕೊಂಡು ಬಿಟ್ಟರು ಹಾಗೂ ಬ್ರಹ್ಮ ಚರ್ಯಕ್ಕೆ ಪೋಷಕವಾಗುವ ರೀತಿಯ ಆಹಾರ ಸೇವನೆಯ ಆರಂಭಿಸಿ, ಉಪ್ಪು, ಹುಳಿ, ಖಾರ ಹಾಗು ಸಿಹಿ ಪದಾರ್ಥಗಳ ಸೇವನೆ ನಿಲ್ಲಿಸಿದರು. ಆಹಾರದಲ್ಲಿನ ಸ್ವಯಂ ನಿರ್ಬಂಧಗಳು ಶುದ್ಧ ಮತ್ತು ಶಿಸ್ತಿನ ಜೀವನವನ್ನು ಸಾಗಿಸಲು ಸಹಾಯಕ ಎಂದು ಮಂಜಪ್ಪನವರ ನಂಬಿಕೆಯಾಗಿತ್ತು… “ಕರ್ನಾಟಕ ಗಾಂಧಿ” ಹರ್ಡೇಕರ ಮಂಜಪ್ಪ ಬಹುಷಃ ಸ್ವತಃ ಗಾಂಧೀಜಿಯವರು ತಮ್ಮ ಮೇಲೆ ವಿಧಿಸಿಕೊಂಡಿದ್ದಕ್ಕಿಂತ ಹೆಚ್ಚಿನ ಶಿಸ್ತನ್ನು ಮಂಜಪ್ಪನವರು ತಮ್ಮ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಚರಕದಿಂದ ನೂಲುವುದು ಮತ್ತು ಖಾದಿ ಬಟ್ಟೆಯ ನೇಯ್ಗೆಯನ್ನು ಸಹಾ ತಮ್ಮ ದಿನಚರಿಯಾಗಿಸಿಕೊಂಡ ಮಂಜಪ್ಪನವರು ತಮ್ಮ ‘ಖಾದಿ ವಿಜಯ’ ಮಾಸ ಪತ್ರಿಕೆಯ ಮೂಲಕ ಖಾದಿ ಪ್ರಚಾರವನ್ನು ಕೈಗೊಂಡರು. ‘ಖಾದಿಯ ವಿಜ್ಞಾನ’ ಎಂಬ ಗ್ರಂಥವನ್ನು ಸಹಾ ಮಂಜಪ್ಪನವರು ರಚಿಸಿದರು. ಆದ್ದರಿಂದಲೇ ಜನ ಇವರನ್ನು “ಕರ್ನಾಟಕ ಗಾಂಧಿ” ಎಂದು ಕರೆದರು… ಕಾಲಕ್ರಮೇಣದಲ್ಲಿ ಹರ್ಡೇಕರ್ ಅವರು ಬಸವೇಶ್ವರರ ತತ್ವಗಳಲ್ಲಿ ಆಕರ್ಷಿತರಾದರು. ತಮ್ಮ ಪರಿಸರದಲ್ಲಿದ್ದ ಲಿಂಗಾಯತದಲ್ಲಿ ಅಷ್ಟೊಂದು ಪಂಗಡಗಳಿರುವುದು ಅವರನ್ನು ಆಶ್ಚರ್ಯಚಕಿತರನ್ನಾಗಿಸಿತು. ಲಿಂಗಾಯತ ಚಿಂತನೆಗಳು ಮತಧರ್ಮಗಳ ಗೋಡೆಗಳನ್ನು ಉರುಳಿಸಿ ಆ ಮೂಲಕ ಆಚರಣೆಗಳಲ್ಲಿದ್ದ ದುಷ್ಟಪದ್ಧತಿಗಳನ್ನು ಮತ್ತು ಮೂಢ ನಂಬಿಕೆಗಳನ್ನು ಹೋಗಲಾಡಿಸುವ ಮೂಲೋದ್ದೇಶವನ್ನು ಹೊಂದಿದ್ದ ಹಿನ್ನಲೆಯಲ್ಲಿ ಆ ಜನಾಂಗದಲ್ಲೂ ಪಂಗಡ, ಉಪಪಂಗಡಗಳು ಹುಟ್ಟಿಕೊಂಡಿದ್ದುದು ಅವರಿಗೆ ನುಂಗಲಾರದ ತುತ್ತಾಗಿತ್ತು. ಹೀಗಾಗಿ ಬಸವೇಶ್ವರರ ತತ್ವಗಳನ್ನು ಪ್ರಸ್ತುತ ಪಡಿಸುವ ಹಲವಾರು ಪುಸ್ತಿಕೆಗಳನ್ನು ಹೊರತಂದು ಅವನ್ನು ಉಚಿತವಾಗಿ ಹಂಚಿ ಆ ಜನಾಂಗವನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡಿದರು. ಈ ಕಾರ್ಯದಲ್ಲಿ ಲಿಂಗಾಯತ ಧರ್ಮ ಸಹೃದಯಿಗಳಾದ ಧಾರವಾಡದ ಮುರುಘಾಮಠದ ಮೃತ್ಯುಂಜಯ ಸ್ವಾಮೀಜಿಯವರು ಹರ್ಡೇಕರ್ ಮಂಜಪ್ಪನವರಿಗೆ ಅಪಾರ ಬೆಂಬಲವಿತ್ತರು. ಹರ್ಡೇಕರ್ ಮಂಜಪ್ಪನವರ ಈ ಚಿಂತನೆಗಳಿಗೆ ಅನೇಕರು ಅನುಯಾಯಿಗಳಾಗಿ ಹೊರಹೊಮ್ಮಿದರು… ೧೯೧೧ ರಲ್ಲಿ ದಾವಣಗೆರೆಯಲ್ಲಿ ಮೃತ್ಯುಂಜಯ ಮಹಾಸ್ವಾಮಿಗಳವರ ಸಹಕಾರದೋಂದಿಗೆ ಶ್ರಾವಣ ಉಪನ್ಯಾಸಮಾಲೆ (ಸಾಮೂಹಿಕ ಭಜನೆ ಮತ್ತು ವ್ಯಾಖ್ಯಾನ ಕಾರ್ಯಕ್ರಮ) ಪ್ರಾರಂಭ. ಬಿಡುವಿನ ವೇಳೆಯಲ್ಲಿ ಧಾರ್ಮಿಕ ಪುಸ್ತಕಗಳ ಓದು, ಜ್ಞಾನಾರ್ಜನೆ, ಸಮಾಜಸೇವೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡ ಮಂಜಪ್ಪನವರು ನೈಷ್ಠಿಕ ಬ್ರಹ್ಮಚಾರಿಯಾಗಿಯೇ ಉಳಿದರು… ಸಾರ್ವಜನಿಕ ’ಬಸವ ಜಯಂತಿ’ ಆಚರಣೆ ಆರಂಭಿಸಿದ ಮೊದಲಿಗ ಹರ್ಡೇಕರ ಮಂಜಪ್ಪ ೧೯೧೩ರಲ್ಲಿ ಆಧುನಿಕ ರೀತಿಯಲ್ಲಿ ಸಾರ್ವಜನಿಕ ’ಬಸವ ಜಯಂತಿ’ ಆಚರಣೆಯನ್ನು ಪ್ರಾರಂಭಿಸಿ ಜನರೆಲೆರಿಗೆ ಬಸವ ತತ್ವ ತಿಳಿಪಡಿಸಿದರು. ೧೯೧೫ರಲ್ಲಿ ’ಸ್ವಕರ್ತವ್ಯ ಸಿದ್ಧಾಂತ’ ಪ್ರಥಮ ಗ್ರಂಥ ಪ್ರಕಟನೆ ಮಾಡಿದರು. ೧೯೧೯ರಲ್ಲಿ ಗಾಂಧೀಜಿಯವರ ಕಾರ್ಯ ಚಟುವಟಿಕೆಯಿಂದ ಪ್ರಭಾವಿತರಾದರು. ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ’ಮಹಾತ್ಮಾ ಗಾಂಧೀಜೀ ಚರಿತ್ರೆ’ ಪ್ರಕಟಣೆಯನ್ನು ಮಾಡಿದರು… ೧೯೨೨ರಲ್ಲಿ ’ಸತ್ಯಾಗ್ರಹ ಧರ್ಮ’ ಗ್ರಂಥ ಪ್ರಕಟನೆ ಹಾಗೂ ಹುಬ್ಬಳ್ಳಿಯಲ್ಲಿ ’ಸತ್ಯಾಗ್ರಹ ಸಮಾಜ’ ಸ್ಥಾಪನೆ ನೆರವೇರಿಸಿದರು. ೧೯೨೩ ಹರಿಹರದ ಬಳಿ ತುಂಗಭದ್ರಾ ನದಿ ತೀರದಲ್ಲಿ ’ಸತ್ಯಾಗ್ರಹ ಆಶ್ರಮ’ ಸ್ಥಾಪನೆ ಮಾಡಿದರು… ೧೯೨೪ ’ಬಸವ ಚರಿತ್ರೆ’ ಸಂಶೋಧನಾತ್ಮಕ ಗ್ರಂಥ ಪ್ರಕಟನೆ. ಮಾರ್ಚ ತಿಂಗಳಲ್ಲಿ ಗಾಂಧೀಜಿಯವರ ಸಾಬರಮತಿ ಆಶ್ರಮದಲ್ಲಿ ವಾಸ್ತವ್ಯ. ಗಾಂಧೀಜಿಯವರ ನೇತೃತ್ವದಲ್ಲಿ ೧೯೨೪ರ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಅವರು ಹಿರಿಯ ಪಾತ್ರವನ್ನು ನಿರ್ವಹಿಸಿದ್ದರು. ಗಾಂಧೀಜಿಯವರಿಗೆ ಬಸವೇಶ್ವರರ ಬಗ್ಗೆ ಅವರ ವಚನಗಳ ಬಗ್ಗೆ ತಿಳಿಸಿಕೊಟ್ಟರು. ’ಬಸವೇಶ್ವರ ಸೇವಾದಳ’ದೊಂದಿಗೆ ಪ್ರಯಾಣ ಹಾಗೂ ’ಸತ್ಯಾಗ್ರಹಿ ಬಸವೇಶ್ವರ’ ಗ್ರಂಥವನ್ನು ಗಾಂಧೀಜಿಯವರಿಗೆ ಕೊಟ್ಟರು… ೧೯೨೫ ಬಂಥನಾಳ ಮಹಾಸ್ವಾಮಿಗಳೊಂದಿಗೆ ವಿಜಾಪುರ ಜಿಲ್ಲೆಯ ಹಳ್ಳಿಗಳ ಸಂಚಾರ ಹಾಗೂ ಜನರಲ್ಲಿ ಬೇರು ಬಿಟ್ಟ ದುಶ್ಚಟಗಳ ನಿರ್ಮೂಲನಕ್ಕಾಗಿ ದೇಶೀ ಚಳವಳಿಯ ಆರಂಭಿಸಿದರು. ೧೯೨೬ ’ಬಸವ ಭೋಧಾಮೃತ’ ಗ್ರಂಥ ಪ್ರಕಟನೆ ಕೈಗೊಂಡರು… ಹರ್ಡೇಕರ್ ಮಂಜಪ್ಪನವರು, ೧೯೨೭ ಮಾರ್ಚ್ ೨೭ರಂದು ಕಲಬುರ್ಗಿಯಲ್ಲಿ ಗಾಂಧೀಜಿಯವರನ್ನು ಕಂಡು ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮಾರ್ಗ ದರ್ಶನ ಕೋರಿದರು. ಆಲಮಟ್ಟಿಯಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಸಿ ಆಶ್ರಮ ಶಾಲೆಯನ್ನು ಪ್ರಾರಂಭಿಸಿದರು. ಇದಕ್ಕೆ ಮೊದಲು ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ ಸಂಚರಿಸಿದ ಹರ್ಡೇಕರ್ ಅವರು ಗಾಂಧೀಜಿಯವರ ಕಾರ್ಯಕ್ರಮಗಳು ಮತ್ತು ಚಿಂತನೆಗಳ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿ ಮಹತ್ತರವಾದ ಕಾರ್ಯ ನಡೆಸಿದರು. ಬಸವೇಶ್ವರರು ಮತ್ತು ಗಾಂಧೀಜಿಯವರ ಬೋಧನೆಗಳಲ್ಲಿ ತಾದ್ಯಾತ್ಮವನ್ನು ಕಂಡ ಮಂಜಪ್ಪನವರಿಗೆ, ಬಸವೇಶ್ವರರ ಬಗ್ಗೆ ಅರಿವಿದ್ದ ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಗಾಂಧೀಜಿಯವರ ತತ್ವಗಳನ್ನು ತಲುಪಿಸುವ ಸಾಮರ್ಥ್ಯ ರೂಢಿಗೊಂಡಿತ್ತು. ಸತ್ಯಾಗ್ರಹ, ರಾಷ್ಟ್ರ ಪ್ರೇಮ, ರಾಷ್ಟ್ರೀಯತೆ, ಸ್ತ್ರೀಪುರುಷರಲ್ಲಿ ಸಮಾನತೆ ಮುಂತಾದ ಮಹತ್ವದ ವಿಚಾರಗಳಲ್ಲಿ ಮಂಜಪ್ಪನವರು ಸಹಸ್ರಾರು ಉಪನ್ಯಾಸಗಳನ್ನು ನೀಡಿದರು. ಸಬರಮತಿ ಆಶ್ರಮದಲ್ಲಿ ಮೂರು ವಾರಗಳ ಕಾಲ ತಂಗಿದ್ದು ಸತ್ಯಾಗ್ರಹಿಗಿರಬೇಕಾದ ಮೂಲಭೂತಗುಣಗಳ ಅನುಭವವನ್ನು ನೇರವಾಗಿ ಪಡೆದುಕೊಂಡರು. ಸ್ವತಃ ಕಾಂಗ್ರೆಸ್ ಪಕ್ಷದ ಭಾಗವಾಗದಿದ್ದರೂ ಸಹಾ ಮಂಜಪ್ಪನವರು ಕಾಂಗ್ರೆಸ್ ಪಕ್ಷಕ್ಕಾಗಿ ಹಲವಾರು ಸಮಾಜ ಸೇವಾ ಶಿಬಿರಗಳನ್ನು ಆಯೋಜಿಸಿಕೊಟ್ಟರು… ತಮ್ಮ ಆತ್ಮಚರಿತ್ರೆಯನ್ನೂ ಒಳಗೊಂಡಂತೆ ಹರ್ಡೇಕರ್ ಮಂಜಪ್ಪನವರು ಇಪ್ಪತ್ತು ಕೃತಿಗಳನ್ನು ರಚಿಸಿದ್ದಾರೆ. ೧೯೩೧ ’ಶರಣ ಸಂದೇಶ’ ವಾರಪತ್ರಿಕೆ ಪ್ರಕಟನೆಯ ಆರಂಭವಾಯಿತು… ೧೯೩೫ ಸ್ತ್ರೀ ಜಾಗೃತಿಗಾಗಿ ಅಕ್ಕ ಮಹಾದೇವಿಯ ಜಯಂತಿ ಆಚರಣೆ ಆರಂಭಸಿದರು… ೧೯೩೮ ’ಶುದ್ಧಿ ಮತ್ತು ಸಂಘಟನೆ’ ಹಾಗೂ ’ವಚನಕಾರರ ಸಮಾಜ ರಚನೆ’ ಗ್ರಂಥಗಳ ಪ್ರಕಟನೆ ಕೈಗೊಂಡರು… ೧೯೪೨ ಯುದ್ಧ ಸಮಯದಲ್ಲಿ ಕಾಗದದ ಅಭಾವ, ಕೈ ಕಾಗದ ತಯಾರಿಸಿ ’ಶರಣ ಸಂದೇಶ’ ಪ್ರಕಟನೆಯ ಮುಂದುವರಿಸಕದರು… ತಮ್ಮ ಜೀವನಪರ್ಯಂತವಾಗಿ ನಮ್ಮ ದೇಶ ಸ್ವಾತಂತ್ರಗೊಳ್ಳಲು ಹಲವಾರು ಶಕ್ತಿಯುತ ಹೋರಾಟಗಳನ್ನು ನಡೆಸಿದ ಹರ್ಡೇಕರ್ ಮಂಜಪ್ಪನವರು ದೇಶ ಸ್ವಾತಂತ್ರ ಪಡೆಯಲು ಕೆಲವೇ ತಿಂಗಳುಗಳ ಮುಂಚೆ, 3ನೆ ಜನವರಿ 1947ರಂದು ಲಿಂಗೈಕ್ಯರಾದರು… ಹೀಗೆ ಪೂಜ್ಯ ಹರ್ಡೇಕರ ಮಂಜಪ್ಪನವರು ಒಬ್ಬ ಹಿರಿಯ ವಿಭೂತಿ ಪುರುಷರಾಗಿದ್ದರು… ‌‌ ‌‌‌‌=============

ಸ್ವಾತ್ಮಗತ

ಡಾ.ಕಾಳೇಗೌಡ ನಾಗವಾರ ಅಕ್ಷರಲೋಕದ ಮಹಾತಪಸ್ವಿ ಕೆ.ಶಿವು ಲಕ್ಕಣ್ಣವರ ಅಕ್ಷರಲೋಕದ ಮಹಾತಪಸ್ವಿ ಡಾ.ಕಾಳೇಗೌಡ ನಾಗವಾರರು..! ಮೊನ್ನೆ ನನ್ನ ಪುಸ್ತಕದ ಸಂದೂಕದಲ್ಲಿ ಏನೋ ಒಂದು ಪುಸ್ತಕ ಹುಡುಕುತ್ತಿದ್ದೆ. ಆಗ ಅಕಸ್ಮಾತ್ತಾಗಿ ನನ್ನ ನೆಚ್ಚಿನ ಬರಹಗಾರ ಕಾಳೇಗೌಡ ನಾಗವಾರರ ‘ಬೆಟ್ಟಸಾಲು ಮಳೆ’ ಕತಾ ಸಂಕಲನ ಕೈಗೆಟುಕಿತು. ಆ ಕತಾ ಸಂಕಲನವನ್ನು ಸಮಾಜವಾದಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾಗಿದ್ದ ಎನ್. ಎನ್. ಕಲ್ಲಣ್ಣನವರ ಮಗ, ನನ್ನ ಆತ್ಮೀಯ ಗೆಳೆಯನಾದ ಚಿತ್ತರಂಜನ ಕಲ್ಲಣ್ಣನವರ (ಈ ಚಿತ್ತರಂಜನ ಕಲ್ಲಣ್ಣನವರ ಈಗಿಲ್ಲ) ಕೊಟ್ಟಿದ್ದನು. ಅದನ್ನು ಹಾಗೇ ಜೋಪಾನವಾಗಿ ತೆಗೆದಿಟ್ಟುಕೊಂಡಿದ್ದೆನು. ಒಮ್ಮೆ ಓದಿದ್ದೆ. ಅದಕೋ ಮತ್ತೆ ನನ್ನ ಕೈಗೆಟುಕಿ ಮತ್ತೇ ಮತ್ತೆ ಓದಬೇಕಿನಿಸಿ ಇಂದು ರಾತ್ರಿ ಓದಲಾರಂಭಿಸಿದೆ. ಈ ಕತಾ ಸಂಕಲನದಲ್ಲಿ ನನಗೆ ತೀರಾ ಕಾಡಿದ ಕತೆ ಎಂದರೆ ‘ಬೆಟ್ಟಸಾಲು ಮಳೆ’ ಕತೆ. (‘ಬೆಟ್ಟಸಾಲು ಮಳೆ’ ಕತಾ ಸಂಕಲನದ ಬಗೆಗೆ ಒಮ್ಮೆ ಬರೆಯುತ್ತೇನೆ.) ಹಾಗೆಯೇ ಕಾಳೇಗೌಡ ನಾಗವಾರರೂ ನೆನಪಾದರು… ಈ ಕಾಳೇಗೌಡ ನಾಗವಾರರ ಬಗೆಗೆ ಈಗ ಏಕೆ ‌ಬರೆಬಾರದು ಎನ್ನಿಸಿ ಹೀಗೆಯೇ ನಾಲ್ಕು ಸಾಲು ಗೀಚಿದೆ… ಅವರು ಮೊನ್ನೆ ಹಾವೇರಿಗೆ ಬಂದಾಗ ಅವರು ಕೊಟ್ಟ ಕೃತಿ ‘ಮಂಗಳಕರ ಚಿಂತನೆ’ಯನ್ನು ಓದಿದೆ. ಆ ಕುರಿತು ನಂತರ ಬರೆಯುತ್ತೇನೆ. ಈಗಿವರ ಬಗೆಗೆ ನನಗೆ ಏಕೋ ಬರೆಯಬೇಕಿನಿಸಿತು, ಹೀಗೇ ಬರೆದೆ… ಕಾಳೇಗೌಡ ನಾಗವಾರ ಇವರು ೧೯೪೮ರಲ್ಲಿ ಬೆಳಗಾವಿಯಲ್ಲಿ ಜನಿಸಿದರು. ಬೆಂಗಳೂರು ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದವರು… ಅವರ ಇತರ ಕೃತಿಗಳು ಹೀಗಿವೆ– ೧) ಅಲೆಗಳು. ೨) ಕರಾವಳಿಯಲ್ಲಿ ಗಂಗಾಲಗ್ನ. ೩) ಬಯಲು ಸೀಮೆಯ ಲಾವಣಿಗಳು. ೪) ತ್ರಿಪದಿ ರಗಳೆ. ೫) ಬೀದಿ ಮಕ್ಕಳು ಬೆಳೆದೊ. ೬) ಬೆಟ್ಟಸಾಲು ಮಳೆ. ೭) ಬೇಕಾದ ಸಂಗಾತಿ. ಹೀಗೆಯೇ ಹತ್ತು ಹಲವು ವೈಚಾರಿಕ ಬರಹಗಳ ಕೃತಿಗಳು… ೧೯೭೯ರಲ್ಲಿ ‘ಬೆಟ್ಟ ಸಾಲು ಮಳೆ’ ಕಥಾ ಸಂಕಲನಕ್ಕೆ ಹಾಗೂ ೧೯೮೫ರಲ್ಲಿ ‘ಅಲೆಗಳು’ ಕಥಾ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ… ಡಾ.ಕಳೇಗೌಡ ನಾಗವಾರರು ಕನ್ನಡ ಸಾಂಸ್ಕೃತಿಕ ಲೋಕದ ಮಾನವೀಯ ಅಪಾರ ಕಾಳಜಿವುಳ್ಳ ಲೇಖಕ.‌ ಕಥೆಗಾರ, ಕವಿ ಹಾಗೂ ವಿಚಾರವಾದಿ. ಕಾಳೇಗೌಡ ನಾಗವಾರರು ಪ್ರಗತಿಪರತೆಗೆ ಸದಾ ಮಿಡಿಯುವ ಅಲ್ಲದೇ ಸದಾ ತಮ್ಮ ಅರವನ್ನು ಎಚ್ಚರದಿಂದ ಕಾಯ್ದುಕೊಂಡು ಬರಹ ಮಾಡುವ ಮಹಾನ್‌ ಚಿಂತಕ… ಡಾ.ಕಾಳೇಗೌಡ ನಾಗವಾರರು ಸಾಂಸ್ಕೃತಿಕ ಲೋಕದ ಮಾನವೀಯಕತೆಗಾರರು. ಅಪಾರ ಅಂತಃಕರಣ ಕವಿ, ‘ಮಂಗಳಕರ ಚಿಂತನೆ’ಗೆ ಹಾತೊರೆಯುವ ವಿಚಾರವಾದಿ… ದೇಶಿಸಂಕೃತಿಗಳ ಬಗೆಗೆ ತುಂಬು ಹೆಂಗರುಳುಳ್ಳ ಅಕ್ಕರೆಯ ಜಾನಪದ ತಜ್ಞ. ಇದನ್ನು ನಾನಷ್ಟೇಯಲ್ಲ ಇವರನ್ನು ಬಲ್ಲವರೆಲ್ಲ ಹೇಳುವ ಮನೆಮಾತು. ಹಾಗೆಂದೇ ಸಮಾಜವಾದಿ ಚಿಂತಕ ಹಾಗೂ ಡಿ.ದೇವರಾಜ್ ಅರಸರ ಕಾಲದಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಕಡುಬಡವ ಎನ್. ಎನ್. ಕಲ್ಲಣ್ಣನವರ ಬಗೆಗಿನ ಒಂದು ‘ಅಭಿನಂದನ ಗ್ರಂಥ’ವಿರಲಿ ಎಂದು ನನ್ನ ಎನ್. ಎನ್. ಕಲ್ಲಣ್ಣನವರ ಮಗ ಚಿತ್ತರಂಜನ ಕಲ್ಲಣ್ಣನವರ ಕಾರ್ಯದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾಗಿದ್ದ ಬಿ.ಜಿ.ಬಣಕಾರ, ಕಲ್ಲೇಶಿವೋತ್ತಮರಾವ್ ಹಾಗೂ ಇತರೆ ಲೇಖಕರಿಂದ ಸತಪ್ರಯತ್ನ ಮಾಡಿಸಿ ಲೇಖನ ಬರೆಯಿಸಿ, ಕೊನೆಗೂ ಸಮಾಜವಾದಿ ಎನ್. ಎನ್. ಕಲ್ಲಣ್ಣನವರ ಬಗೆಗೆ ಒಂದು ಅಭಿನಂದನ ಗ್ರಂಥವನ್ನು ತಂದರು. ಹೀಗೆಯೇ ಬೆಸಗರಹಳ್ಳಿ ರಾಮಣ್ಣನವರ ಬಗೆಗೆ ಅಪಾರ ಕಕ್ಕುಲತೆವುಳ್ಳವರಾಗಿದ್ದರು… ಹೀಗೆ ಹೆಂಗರುಳುಳ್ಳ ಡಾ.ಕಾಳೇಗೌಡ ನಾಗವಾರರು ಜಾನಪದ ತಜ್ಞರಾಗಿ ಪ್ರಖ್ಯಾತಿ ಪಡೆದವರು. ಕರ್ನಾಟಕದ ಉದ್ದಗಲಕ್ಕೂ ಅವಿರತವಾಗಿ ಅಲೆದಾಡುತ್ತ ಅಪಾರವಾದ ಲೋಕಾನುಭವ ಪಡೆದವರು. ತಮ್ಮೋಳಗಿನ ಜನಪರ ಆಲೋಚನೆಯ ಸೂಕ್ಷ್ಮ, ಸೃಜನಶೀಲ ಮನಸ್ಸನ್ನು ಎಚ್ಚರಿಕೆಯಿಂದ ಕಾಯ್ದುಕೊಂಡು ಬಂದಿರುವ ಪ್ರತಿಭಾವಂತ ಲೇಖಕಕರಿವರು… ಅಪ್ಪಟ ಕನ್ನಡದ ಗ್ರಾಮೀಣ ಸತ್ವದಿಂದ ರೂಪಗೊಂಡವರು ಡಾ.ಕಾಳೇಗೌಡ ನಾಗವಾರರು. ಇಪ್ಪತ್ತನೇ ಶತಮಾನದಿಂದ ಎಪ್ಪತ್ತರ ದಶಕದಿಂದೀಚೆಗಿನ ಕನ್ನಡ ಸೃಜನಶೀಲ ಪ್ರಜ್ಞೆಯ ಅವಿಭಾಜ್ಯ ಅಂಗವಾಗಿದ್ದಾರೆ ಡಾ.ಕಾಳೇಗೌಡ ನಾಗವಾರರು… ಕ್ರಿಯಾಶೀಲ ಸಂಘಕರಾದ ಇವರು ಉದ್ದಕ್ಕೂ ‌ಕನ್ನಡದ ಪ್ರಗತಿಪರ ಚಳುವಳಿಗಳೊಂದಿಗೇ ಬೆಳೆದು ಬಂದವರು. ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳಲ್ಲಿ ಒಟ್ಟು ನಾಲ್ಕು ದಶಕಗಳ ಕಾಲ ದುಡಿದು ಈಗ ವಿಶ್ರಾಂತ ಕನ್ನಡ ಪ್ರಧ್ಯಾಪಕರಾಗಿರುವ ಇವರು ಎಲ್ಲಾ ಬರೆವಣಿಗೆಗಳು ಸಮಾಜವಾದಿ ಆಶಯಗಳ ನೆಲಗಟ್ಟಿನ ಮೇಲೆ ನಿಂತಿವೆ… ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ನಾಗವಾರ ಗ್ರಾಮದವರಾದ ಇವರು ಕನ್ನಡ ಸಾಂಸ್ಕೃತಿಕ ಇತಿಹಾಸದಲ್ಲಿ ಪ್ರಮುಖ ಘಟ್ಟವಾದ ಬಂಡಾಯ ಸಾಹಿತ್ಯ ಚಳುವಳಿಯ ಸ್ಥಾಪಕ ಸಂಚಾಲಕರೊಬ್ಬರಾಗಿದ್ದಾರೆ… ಭಾರತೀಯ ಭಾಷೆಗಳಲ್ಲೇ ಮೊದಲ ಬಾರಿಗೆ ಲೋಹಿಯಾ ಅವರ ಸಮಾಜವಾದಿ ವಿಚಾರಗಳನ್ನು ಸಮಗ್ರವಾಗಿ ಕನ್ನಡಕ್ಕೆ ತರುವ ಮಹತ್ವದ ಯೋಜನೆಯ ಸಾಂಸ್ಕೃತಿಕ ಹೊಣೆಗಾರಿಕೆಯನ್ನು ಕಾಳೇಗೌಡ ನಾಗವಾರರು ಅತಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ… ಜನಸಮುದಾಯದ ಅನುಭವ ಲೋಕದ ಸಕಲ ಸೂಕ್ಷ್ಮಗಳನ್ನೂ ತೆರದ ಮನಸ್ಸಿನಿಂದ ಗ್ರಹಿಸುವ ಹಂಬಲವುಳ್ಳ ಆಶಾವಾದಿ ಲೇಖಕರಾಗಿರುವ ಡಾ.ಕಾಳೇಗೌಡ ನಾಗವಾರರು ವೈಶಿಷ್ಟ್ಯಪೂರ್ಣ ಚೇತನವಾಗಿದ್ದಾರೆ… ಸ್ವಾತಂತ್ರ್ಯ, ಸಮಾನತೆ ಮತ್ತು ಜನತಂತ್ರ ನಿಲುವುಗಳ ನಿತ್ಯಧ್ಯಾನದ ಚಿಂತಕರಾಗಿರುವ ಇವರು ತಮ್ಮ ವೈಚಾರಿಕ ಬರಹಗಳು, ವಿಮರ್ಶೆ ಮತ್ತು ಜಾನಪದ ಅಧ್ಯಯನಕ್ಕೆ ಸೃಜನಶೀಲತೆಯ ಪ್ರಾಣಶಕ್ತಿಯನ್ನು ತುಂಬಿರುವವರಾಗಿದ್ದಾರೆ. ವಿವಿಧ ಬಗೆಯ ಜಾನಪದ ಅಭಿವ್ಯಕ್ತಿಗಳು ಮತ್ತು ದೇಶೀ ಸಂಕೇತಗಳ ಸೂಕ್ಷ್ಮ ಹರಿಕಾರರಾಗಿರುವ ಡಾ.ಕಾಳೇಗೌಡ ನಾಗವಾರರು ಕಲಾವಿದರ ಬಗೆಗೆ ಸದಾ ಕಟ್ಟಕ್ಕರೆಯಿಂದಿರುವ ಇವರು ಕರ್ನಾಟಕ ಜಾನಪದ ಕಲಾವಿದರ ಬಗೆಗೆ ಅಪಾರ ಸಕ್ಕರೆಯನ್ನೂವುಳ್ಳವರಾಗಿದ್ದಾರೆ… ಕಾಳೇಗೌಡ ನಾಗವಾರರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಕ್ರಿಯಾಶೀಲ ಅಧ್ಯಕ್ಷರಾಗಿದ್ದು ೧೯೯೮ ರಿಂದ ೨೦೦೧ ರ ಅವಧಿಯಲ್ಲಿ ಅಪಾರವಾಗಿ ದುಡಿದವರಾಗಿದ್ದಾರೆ. ಅಕ್ಕರೆ, ಸಂತನ ಧ್ಯಾನ, ಜೀವಪ್ರೇಮದ ಅಚ್ಚರಿ, ಇಂಥ ಪ್ರೀತಿಯ ನಾವೆ-ಇವು ಡಾ.ಕಾಳೇಗೌಡ ನಾಗವಾರರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಕುರಿತ ಗ್ರಂಥಗಳಾಗಿವೆ. ಹೀಗೆಯೇ ಡಾ.ಕಾಳೇಗೌಡ ನಾಗವಾರರು ಅಕ್ಷರಲೋಕದ ಮಹಾತಪಸ್ವಿಯೂ ಹೌದು ಎಂದರೆ ಅತಿಶಯೋಕ್ತಿಯಲ್ಲವೆಂದುಕೊಂಡಿದ್ದೇನೆ..! ===========================

Back To Top